ಸಮಂತಾ ಹೊಸ ಪ್ರಿಯಕರನ ಪತ್ನಿಯ ಮಧ್ಯ ಪ್ರವೇಶ; ವೈರಲ್ ಫೋಟೋಗೆ ಕುಹಕ

ನಿರ್ದೇಶಕ ರಾಜ್​ ನಿಧಿಮೋರು ಮತ್ತು ನಟಿ ಸಮಂತಾ ರುತ್ ಪ್ರಭು ಅವರು ಒಟ್ಟಿಗೆ ಸುತ್ತಾಡುತ್ತಿದ್ದಾರೆ. ಇಬ್ಬರ ಫೋಟೋ ವೈರಲ್ ಆದ ಬೆನ್ನಲ್ಲೇ ರಾಜ್ ಪತ್ನಿ ಶ್ಯಾಮಲಿ ಸೂಚ್ಯವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಯಾರ ಹೆಸರನ್ನೂ ಅವರು ಪ್ರಸ್ತಾಪಿಸಿಲ್ಲವಾದರೂ ಇದೇ ವಿಷಯಕ್ಕೆ ಸಂಬಂಧಿಸಿದಂತೆ ಅವರು ಪೋಸ್ಟ್ ಮಾಡಿದ್ದಾರೆ ಎಂಬ ಗುಮಾನಿ ಮೂಡಿದೆ.

ಸಮಂತಾ ಹೊಸ ಪ್ರಿಯಕರನ ಪತ್ನಿಯ ಮಧ್ಯ ಪ್ರವೇಶ; ವೈರಲ್ ಫೋಟೋಗೆ ಕುಹಕ
Shhyamali De, Raj Nidimoru, Samantha

Updated on: May 15, 2025 | 7:37 PM

ನಟಿ ಸಮಂತಾ ರುತ್ ಪ್ರಭು (Samantha Ruth Prabhu) ಅವರ ಜೀವನದಲ್ಲಿ ಮತ್ತೆ ಪ್ರೀತಿ ಚಿಗುರಿದೆ. ಆ ಬಗ್ಗೆ ಅವರು ಬಹಿರಂಗವಾಗಿ ಹೇಳಿಕೆ ನೀಡಿಲ್ಲ. ಹಾಗಿದ್ದರೂ ಕೂಡ ಕೆಲವು ಫೋಟೋಗಳು ಸಾಕ್ಷಿ ಒದಗಿಸುತ್ತಿವೆ. ‘ಫ್ಯಾಮಿಲಿ ಮ್ಯಾನ್’ ವೆಬ್ ಸಿರೀಸ್ ನಿರ್ದೇಶಕ ರಾಜ್ ನಿಧಿಮೋರು (Raj Nidimoru) ಜೊತೆ ಸಮಂತಾ ಅವರು ಸುತ್ತಾಡುತ್ತಿದ್ದಾರೆ. ಇಬ್ಬರೂ ಆಪ್ತವಾಗಿ ಇರುವ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಟ್ವಿಸ್ಟ್ ಏನೆಂದರೆ, ರಾಜ್ ನಿಧಿಮೋರು ಅವರಿಗೆ ಈಗಾಗಲೇ ಮದುವೆ ಆಗಿದೆ. ಈಗ ಅವರ ಪತ್ನಿ ಶ್ಯಾಮಲಿ (Shhyamali De) ಕೂಡ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

ಶ್ಯಾಮಲಿ ಅವರು ಇನ್​ಸ್ಟಾಗ್ರಾಮ್ ಸ್ಟೋರಿಯಲ್ಲಿ ಕೆಲವು ಸಾಲುಗಳನ್ನು ಹಂಚಿಕೊಂಡಿದ್ದಾರೆ. ಆದರೆ ಇದರಲ್ಲಿ ಅವರು ಯಾರದ್ದೇ ಹೆಸರನ್ನು ನೇರವಾಗಿ ಪ್ರಸ್ತಾಪಿಸಿಲ್ಲ. ಎಲ್ಲವನ್ನೂ ಸೂಚ್ಯವಾಗಿ ಬರೆದುಕೊಂಡಿದ್ದಾರೆ. ಅವರು ನೇರವಾಗಿ ಹೇಳಿಲ್ಲದಿದ್ದರೂ ಕೂಡ ಸಮಂತಾ ಮತ್ತು ರಾಜ್ ನಿಧಿಮೋರು ಫೋಟೋ ವೈರಲ್ ಆದ ಸಂದರ್ಭದಲ್ಲಿಯೇ ಇಂಥ ಸ್ಟೋರಿ ಪೋಸ್ಟ್ ಮಾಡಿದ್ದರಿಂದ ನೆಟ್ಟಿಗರಿಗೆ ಅನುಮಾನ ಬಂದಿದೆ.

‘ನನ್ನ ಬಗ್ಗೆ ಯೋಚಿಸುವ ಎಲ್ಲರಿಗೂ ನಾನು ಪ್ರೀತಿ ಮತ್ತು ಹಾರೈಕೆ ಕಳಿಸುತ್ತೇನೆ’ ಎಂದು ಶ್ಯಾಮಲಿ ಅವರು ಬರೆದುಕೊಂಡಿದ್ದಾರೆ. ಅಂದರೆ, ತಮಗೆ ಯಾರು ಆದ್ಯತೆ ನೀಡುತ್ತಾರೋ ಅವರೇ ತಮಗೆ ಮುಖ್ಯ ಎಂಬ ಅರ್ಥ ಈ ಮಾತುಗಳಲ್ಲಿ ಇದೆ. ಶ್ಯಾಮಲಿ ಮತ್ತು ರಾಜ್ ನಡುವೆ ಬಿರುಕು ಮೂಡಿದೆ ಎಂಬುದಕ್ಕೆ ಅವರ ಇನ್​ಸ್ಟಾಗ್ರಾಮ್ ಖಾತೆಯೇ ಸಾಕ್ಷಿ ನೀಡುತ್ತಿದೆ. ಇತ್ತೀಚಿನ ದಿನಗಳಲ್ಲಿ ಅವರಿಬ್ಬರು ಜೊತೆಗಿರುವ ಯಾವುದೇ ಫೋಟೋಗಳನ್ನು ಹಂಚಿಕೊಂಡಿಲ್ಲ.

ಇದನ್ನೂ ಓದಿ
ಪೀರಿಯಡ್ಸ್ ಬಗ್ಗೆ ಓಪನ್​ ಆಗಿ ಮಾತನಾಡೋದು ನಮಗೆ ಈಗಲೂ ನಾಚಿಕೆಯ ವಿಷಯ; ಸಮಂತಾ
ಬಿಡುಗಡೆಗೆ ರೆಡಿಯಾಗಿದೆ ಸಮಂತಾ ನಿರ್ಮಾಣದ ಮೊದಲ ಸಿನಿಮಾ
ಕದ್ದುಮುಚ್ಚಿ ಡೇಟಿಂಗ್ ಮಾಡೋದು ನಿಲ್ಲಿಸಿದ ಸಮಂತಾ? ಓಪನ್ ಆಗಿ ಸುತ್ತಾಟ
2025ರಲ್ಲಿ ಸಮಂತಾ 2ನೇ ಮದುವೆ, ತಾಯಿ ಆಗುವ ಸೂಚನೆ ನೀಡಿದ ನಟಿ

ದಿನದಿಂದ ದಿನಕ್ಕೆ ಸಮಂತಾ ರುತ್ ಪ್ರಭು ಮತ್ತು ರಾಜ್ ನಿಧಿಮೋರು ಅವರ ನಡುವಿನ ಬಾಂಧವ್ಯ ಹೆಚ್ಚಾಗುತ್ತಿದೆ. ಇಬ್ಬರು ಜೊತೆಯಾಗಿ ತಿರುಪತಿ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಸಮಂತಾ ನಿರ್ಮಾಣ ಮಾಡಿದ ‘ಶುಭಂ’ ಚಿತ್ರಕ್ಕೂ ರಾಜ್ ಅವರು ಬೆಂಬಲವಾಗಿ ನಿಂತಿದ್ದಾರೆ. ಶೀಘ್ರದಲ್ಲೇ ಅವರಿಬ್ಬರು ತಮ್ಮ ರಿಲೇಷನ್​ಶಿಪ್​ ಬಗ್ಗೆ ಅಧಿಕೃತವಾಗಿ ಹೇಳಿಕೆ ನೀಡುವ ನಿರೀಕ್ಷೆ ಇದೆ.

ಇದನ್ನೂ ಓದಿ: 500 ಜನರ ಎದುರು ನಡುಗುತ್ತಾ ನಿಂತಿದ್ದ ಸಮಂತಾ ರುತ್ ಪ್ರಭು; ಕಾರಣ ಏನು?

ರಾಜ್ ನಿಧಿಮೋರು ಮತ್ತು ಶ್ಯಾಮಲಿ ಅವರು 2015ರಲ್ಲಿ ಮದುವೆ ಆಗಿದ್ದರು. ಈ ದಂಪತಿಗೆ ಒಬ್ಬಳು ಮಗಳು ಕೂಡ ಇದ್ದಾಳೆ. ಕೆಲವು ಸಿನಿಮಾಗಳ ನಿರ್ದೇಶನ ವಿಭಾಗದಲ್ಲಿ ಶ್ಯಾಮಲಿ ಅವರು ಕೆಲಸ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 6:52 pm, Thu, 15 May 25