Coolie: ರಜನಿಕಾಂತ್​ ನಟನೆಯ 171ನೇ ಚಿತ್ರದ ಹೆಸರು ‘ಕೂಲಿ’; ಬಂತು ಭರ್ಜರಿ ಟೀಸರ್​

ನಿರ್ದೇಶಕ ಲೋಕೇಶ್​ ಕನಗರಾಜ್​ ಹಾಗೂ ನಟ ರಜನಿಕಾಂತ್​ ಅವರು ಇದೇ ಮೊದಲ ಬಾರಿಗೆ ಜೊತೆಯಾಗಿದ್ದಾರೆ. ಹಾಗಾಗಿ ‘ಕೂಲಿ’ ಸಿನಿಮಾದ ಬಗ್ಗೆ ಅಭಿಮಾನಿಗಳಿಗೆ ನಿರೀಕ್ಷೆ ಜಾಸ್ತಿ ಇದೆ. ಸನ್​ ಪಿಕ್ಚರ್ಸ್​ ಸಂಸ್ಥೆಯು ಈ ಸಿನಿಮಾಗೆ ಬಂಡವಾಳ ಹೂಡುತ್ತಿದೆ. ಟೀಸರ್​ನಲ್ಲಿ ರಜನಿಕಾಂತ್​ ಅವರು ಅಬ್ಬರಿಸಿದ್ದಾರೆ. ಸೋಶಿಯಲ್​ ಮೀಡಿಯಾದಲ್ಲಿ ‘ಕೂಲಿ’ ಟೈಟಲ್​ ಟ್ರೆಂಡ್​ ಆಗಿದೆ.

Coolie: ರಜನಿಕಾಂತ್​ ನಟನೆಯ 171ನೇ ಚಿತ್ರದ ಹೆಸರು ‘ಕೂಲಿ’; ಬಂತು ಭರ್ಜರಿ ಟೀಸರ್​
ರಜನಿಕಾಂತ್​

Updated on: Apr 22, 2024 | 7:43 PM

ನಟ ರಜನಿಕಾಂತ್​ (Rajinikanth) ಅವರು 73ನೇ ವಯಸ್ಸಿನಲ್ಲೂ ದಣಿವರಿಯದ ಯುವಕನಂತೆ ಸಿನಿಮಾಗಳನ್ನು ಮಾಡುತ್ತಿದ್ದಾರೆ. ಅವರು ನಟಿಸಲಿರುವ 171ನೇ (Thalaivar 171) ಸಿನಿಮಾದ ಮೇಲೆ ಬಹಳ ನಿರೀಕ್ಷೆ ಇದೆ. ಈ ಸಿನಿಮಾದ ಟೈಟಲ್​ ಈಗ ಅನಾವರಣ ಆಗಿದೆ. ಈ ಚಿತ್ರಕ್ಕೆ ಖ್ಯಾತ ನಿರ್ದೇಶಕ ಲೋಕೇಶ್​ ಕನಗರಾಜ್​ ಅವರು ನಿರ್ದೇಶನ ಮಾಡುತ್ತಿದ್ದಾರೆ. ಶೀಘ್ರದಲ್ಲೇ ಇದರ ಶೂಟಿಂಗ್​ ಆರಂಭ ಆಗಲಿದೆ. ಸದ್ಯಕ್ಕೆ ಟೈಟಲ್​ ಟೀಸರ್​ ಬಿಡುಗಡೆ ಮಾಡಲಾಗಿದೆ. ಈ ಸಿನಿಮಾಗೆ ‘ಕೂಲಿ’ (Coolie) ಎಂದು ಶೀರ್ಷಿಕೆ ಇಡಲಾಗಿದೆ. ಟೈಟಲ್​ ಟೀಸರ್​ ನೋಡಿ ಅಭಿಮಾನಿಗಳಿಗೆ ಖುಷಿ ಆಗಿದೆ.

ತೋಳಿನಲ್ಲಿ ಕೂಲಿ ಎಂಬ ಹೆಸರು ಇರುವ ಬ್ಯಾಡ್ಜ್​ ಧರಿಸಿ ರಜನಿಕಾಂತ್ ಎಂಟ್ರಿ ನೀಡಿದ್ದಾರೆ. ಬ್ಲ್ಯಾಕ್​ ಆ್ಯಂಡ್​ ವೈಟ್​ ಥೀಮ್​ನಲ್ಲಿ ಇಡೀ ಟೀಸರ್​ ಮೂಡಿಬಂದಿದೆ. ಆದರೆ ಇದರಲ್ಲಿ ಇರುವ ಬಂಗಾರದ ವಸ್ತುಗಳನ್ನು ಮಾತ್ರ ಬಣ್ಣದಲ್ಲಿ ತೋರಿಸಲಾಗಿದೆ. ಆ ಮೂಲಕ ಕಥೆಯ ಬಗ್ಗೆ ಹಿಂಟ್​ ಬಿಟ್ಟುಕೊಡಲಾಗಿದೆ. ಇದು ಗೋಲ್ಡ್​ ಸ್ಮಗ್ಲಿಂಗ್​ ಕುರಿತ ಸಿನಿಮಾ ಎಂಬುದು ಅಭಿಮಾನಿಗಳಿಗೆ ಗೊತ್ತಾಗಿದೆ.

ಗೋಲ್ಡ್​ ಬಿಸ್ಟೆಟ್​, ಗೋಲ್ಡ್​ ವಾಚ್​ ಜೊತೆಗೆ ಚಿನ್ನದ ರಾಶಿಯೇ ಇರುವ ಜಾಗಕ್ಕೆ ರಜನಿಕಾಂತ್​ ಎಂಟ್ರಿ ನೀಡುತ್ತಾರೆ. ಅಲ್ಲಿರುವ ಖದೀಮರಿಗೆ ಗೋಲ್ಡ್​ ವಾಚ್​ಗಳಿಂದ ಮಾಡಿದ ಚೈನ್​ನಿಂದಲೇ ಚಳಿ ಬಿಡಿಸುತ್ತಾರೆ. ಈ ರೀತಿಯ ಆ್ಯಕ್ಷನ್​ ದೃಶ್ಯದ ಮೂಲಕ ಅವರ ಪಾತ್ರದ ಪರಿಚಯ ಮಾಡಿಕೊಡಲಾಗಿದೆ. ಟೀಸರ್​ ಮೂಲಕ ನಿರ್ದೇಶಕ ಲೋಕೇಶ್​ ಕನಗರಾಜ್​ ಅವರು ಅಭಿಮಾನಿಗಳ ಕೌತುಕ ಕೆರಳಿಸುವಲ್ಲಿ ಯಶಸ್ವಿ ಆಗಿದೆ.

ಇದನ್ನೂ ಓದಿ: ನಿವೃತ್ತಿ ಪಡೆಯುವ ಬಗ್ಗೆ ಶಾಕಿಂಗ್​ ಹೇಳಿಕೆ ನೀಡಿದ ‘ಕೈದಿ’, ‘ವಿಕ್ರಮ್​’, ‘ಲಿಯೋ’ ಚಿತ್ರಗಳ ನಿರ್ದೇಶಕ ಲೋಕೇಶ್​ ಕನಗರಾಜ್​

ಸೋಶಿಯಲ್​ ಮೀಡಿಯಾದಲ್ಲಿ ಲೋಕೇಶ್​ ಕನಗರಾಜ್​ ಅವರು ‘ಕೂಲಿ’ ಸಿನಿಮಾದ ಟೈಟಲ್​ ಟೀಸರ್​ ಹಂಚಿಕೊಂಡಿದ್ದಾರೆ. ಸನ್​ ಪಿಕ್ಚರ್ಸ್​ ಸಂಸ್ಥೆಯ ಮೂಲಕ ಈ ಸಿನಿಮಾ ನಿರ್ಮಾಣ ಆಗುತ್ತಿದೆ. ಇದೇ ಮೊದಲ ಬಾರಿಗೆ ಲೋಕೇಶ್​ ಕಗನರಾಜ್​ ಮತ್ತು ರಜನಿಕಾಂತ್​ ಅವರು ಜೊತೆಯಾಗಿ ಸಿನಿಮಾ ಮಾಡುತ್ತಿರುವುದರಿಂದ ಸಹಜವಾಗಿಯೇ ಹೈಪ್​​ ಹೆಚ್ಚಾಗಿದೆ. ಅನಿರುದ್ಧ್ ರವಿಚಂದರ್​ ಅವರು ಈ ಸಿನಿಮಾಗೆ ಸಂಗೀತ ನೀಡುತ್ತಿದ್ದಾರೆ. ಟೀಸರ್​ನಲ್ಲಿ ಹಿನ್ನೆಲೆ ಸಂಗೀತ ಗಮನ ಸೆಳೆದಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us