AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ವೀರ ಸಿಂಹ ರೆಡ್ಡಿ’ ಚಿತ್ರ ನೋಡಿ ವಿಮರ್ಶೆ ತಿಳಿಸಿದ ರಜನಿಕಾಂತ್​; ಬಾಲಯ್ಯನ ಚಿತ್ರ ಇಷ್ಟ ಆಯ್ತಾ?

ರಜನಿಕಾಂತ್ ಅವರು ಸೂಪರ್​ಸ್ಟಾರ್. ಅವರಿಂದ ಮೆಚ್ಚುಗೆ ಪಡೆದುಕೊಳ್ಳಬೇಕು ಎಂಬುದು ಅನೇಕ ನಿರ್ದೇಶಕರ ಕನಸಾಗಿರುತ್ತದೆ. ಈಗ ಅಂತಹ ಅವಕಾಶವನ್ನು ಗೋಪಿಚಂದ್ ಅವರು ಪಡೆದುಕೊಂಡಿದ್ದಾರೆ.

‘ವೀರ ಸಿಂಹ ರೆಡ್ಡಿ’ ಚಿತ್ರ ನೋಡಿ ವಿಮರ್ಶೆ ತಿಳಿಸಿದ ರಜನಿಕಾಂತ್​; ಬಾಲಯ್ಯನ ಚಿತ್ರ ಇಷ್ಟ ಆಯ್ತಾ?
ರಜನಿಕಾಂತ್​-ನಂದಮೂರಿ ಬಾಲಕೃಷ್ಣ
Follow us
ರಾಜೇಶ್ ದುಗ್ಗುಮನೆ
|

Updated on:Jan 30, 2023 | 9:28 AM

ಈ ವರ್ಷ ಸಂಕ್ರಾಂತಿ ಪ್ರಯುಕ್ತ ನಂದಮೂರಿ ಬಾಲಕೃಷ್ಣ (Nandamuri Balakrishna) ನಟನೆಯ ‘ವೀರ ಸಿಂಹ ರೆಡ್ಡಿ’ ಸಿನಿಮಾ ಸೂಪರ್ ಹಿಟ್ ಆಯಿತು. ಈ ಚಿತ್ರದಿಂದ ಬಾಲಯ್ಯ ಅವರು ಮತ್ತೊಂದು ಗೆಲುವು ಕಂಡಿದ್ದಾರೆ. ಈ ಚಿತ್ರ ಸಖತ್ ಮಾಸ್ ಆಗಿದೆ. ಇದರಿಂದ ಅವರು ದೊಡ್ಡ ಮಟ್ಟದ ಯಶಸ್ಸು ಕಂಡಿದ್ದಾರೆ. ಈಗ ಈ ಚಿತ್ರವನ್ನು ಸೂಪರ್ ಸ್ಟಾರ್ ರಜನಿಕಾಂತ್ (Rajinikanth) ಅವರು ವೀಕ್ಷಣೆ ಮಾಡಿದ್ದಾರೆ. ಅವರು ಚಿತ್ರವನ್ನು ಮೆಚ್ಚಿಕೊಂಡಿದ್ದಾರೆ. ಈ ಬಗ್ಗೆ ನಿರ್ದೇಶಕ ಗೋಪಿಚಂದ್​ ಮಲಿನೇನಿ ಅವರು ಟ್ವೀಟ್ ಮಾಡಿದ್ದಾರೆ.

ರಜನಿಕಾಂತ್ ಅವರು ಸೂಪರ್​ಸ್ಟಾರ್. ಅವರ ಸಿನಿಮಾ ನೋಡೋಕೆ ಅಭಿಮಾನಿಗಳು ಕಾದು ಕೂತಿರುತ್ತಾರೆ. ಅವರಿಂದ ಮೆಚ್ಚುಗೆ ಪಡೆದುಕೊಳ್ಳಬೇಕು ಎಂಬುದು ಅನೇಕ ನಿರ್ದೇಶಕರ ಕನಸಾಗಿರುತ್ತದೆ. ಈಗ ಅಂತಹ ಅವಕಾಶವನ್ನು ಗೋಪಿಚಂದ್ ಅವರು ಪಡೆದುಕೊಂಡಿದ್ದಾರೆ. ರಜನಿಕಾಂತ್ ಅವರು ಕರೆ ಮಾಡಿರುವ ವಿಚಾರವನ್ನು ಅವರು ಹಂಚಿಕೊಂಡಿದ್ದಾರೆ.

‘ರಜನಿಕಾಂತ್ ಅವರು ಕಾಲ್ ಮಾಡಿದ್ದರು. ಅವರು ವೀರ ಸಿಂಹ ರೆಡ್ಡಿ ಚಿತ್ರವನ್ನು ವೀಕ್ಷಿಸಿದ್ದಾರೆ ಮತ್ತು ಇಷ್ಟವಾಗಿದೆ. ನನ್ನ ಚಿತ್ರದ ಬಗ್ಗೆ ಅವರ ಮೆಚ್ಚುಗೆಯ ಮಾತುಗಳು ನನಗೆ ಈ ಜಗತ್ತಿನಲ್ಲಿ ಎಲ್ಲಕ್ಕಿಂತ ಹೆಚ್ಚು. ಧನ್ಯವಾದಗಳು ರಜನಿ ಸರ್’ ಎಂದು ಬರೆದುಕೊಂಡಿದ್ದಾರೆ. ರಜನಿಕಾಂತ್ ಅವರಿಂದ ಈ ಚಿತ್ರಕ್ಕೆ ಮೆಚ್ಚುಗೆ ಸಿಕ್ಕಿದ್ದಕ್ಕೆ ಅನೇಕರು ಖುಷಿ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ರಜನಿಕಾಂತ್ ಭೇಟಿ ವೇಳೆ ಪಂಚೆ ಬದಲು ಪ್ಯಾಂಟ್​ ಧರಿಸಿದ್ದಕ್ಕೆ ಕಾರಣ ನೀಡಿದ ನಟ ರಿಷಬ್ ಶೆಟ್ಟಿ

ರಜನಿಕಾಂತ್ ಅವರು ರಿಷಬ್ ಶೆಟ್ಟಿ ನಟನೆಯ ‘ಕಾಂತಾರ’ ಚಿತ್ರವನ್ನು ವೀಕ್ಷಣೆ ಮಾಡಿದ್ದರು. ಈ ಸಿನಿಮಾ ಅವರಿಗೆ ಇಷ್ಟವಾಗಿತ್ತು. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದರು. ಅಲ್ಲದೆ ರಿಷಬ್ ಶೆಟ್ಟಿಯನ್ನು ಸ್ವತಃ ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಇದು ರಿಷಬ್​ ಶೆಟ್ಟಿಗೆ ಖುಷಿ ತಂದಿತ್ತು. ಆ ಬಗ್ಗೆ ರಿಷಬ್ ಅವರು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡು ರಜನಿಕಾಂತ್​ಗೆ ಧನ್ಯವಾದ ಹೇಳಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 9:28 am, Mon, 30 January 23