ಬೆಂಗಳೂರಲ್ಲಿ ಕಂಡಕ್ಟರ್ ಆಗಿದ್ದಾಗ ರಜನಿಕಾಂತ್​​ಗೆ ಹುಡುಗಿ ಮೇಲೆ ಮೂಡಿತ್ತು ಪ್ರೀತಿ; ಆಮೇಲೆ ಏನಾಯ್ತು?

| Updated By: ರಾಜೇಶ್ ದುಗ್ಗುಮನೆ

Updated on: Dec 12, 2024 | 7:39 AM

ರಜನಿಕಾಂತ್ ಅವರು ಬೆಂಗಳೂರಿನಲ್ಲಿ ಬಸ್ ಕಂಡಕ್ಟರ್ ಆಗಿದ್ದಾಗ 10ಜೆ ಬಸ್ ನಂಬರ್​ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು ಎನ್ನಲಾಗುದೆ. ಅವರು ಬಸ್​ನಲ್ಲಿ ಪ್ರಯಾಣ ಮಾಡುತ್ತಿದ್ದಾಹ ಹುಡಗಿ ಒಬ್ಬಳನ್ನು ನೋಡಿದ್ದರು. ಅವರ ಬಳಿ  ಹೋಗಿ ರಜನಿಕಾಂತ್ ಅವರು ಮದುವೆ ಪ್ರಪೋಸ್ ಮಾಡಿದ್ದರು. ಮುಂದೇನಾಯ್ತು? ಈ ಸ್ಟೋರಿಯಲ್ಲಿದೆ ಉತ್ತರ.

ಬೆಂಗಳೂರಲ್ಲಿ ಕಂಡಕ್ಟರ್ ಆಗಿದ್ದಾಗ ರಜನಿಕಾಂತ್​​ಗೆ ಹುಡುಗಿ ಮೇಲೆ ಮೂಡಿತ್ತು ಪ್ರೀತಿ; ಆಮೇಲೆ ಏನಾಯ್ತು?
ರಜಿನಿ-ಲತಾ
Follow us on

ರಜನಿಕಾಂತ್ ಅವರು ಕರ್ನಾಟಕದವರು. ಬೆಂಗಳೂರಿನಲ್ಲಿ ಬಸ್ ಕಂಡಕ್ಟರ್ ಆಗಿದ್ದ ಅವರು ನಟನೆಯ ಬಗ್ಗೆ ಆಸಕ್ತಿ ಬೆಳೆಸಿಕೊಂಡು ಚೆನ್ನೈ ತೆರಳಿದರು. ಈಗ ಅವರು ಕಾಲಿವುಡ್​ನ ಬಹುಬೇಡಿಕೆಯ ಹೀರೋ ಎನಿಸಿಕೊಂಡಿದ್ದಾರೆ. ರಜನಿಕಾಂತ್ ಅವರು ಫ್ಯಾಮಿಲಿ ಮ್ಯಾನ್ ಕೂಡ ಹೌದು. ಲತಾ ರಂಗಾಚಾರಿ ಅವರನ್ನು ಮದುವೆ ಆಗಿ ಹಾಯಾಗಿ ಸಂಸಾರ ನಡೆಸುತ್ತಾ ಇದ್ದಾರೆ. ಅವರಿಗೆ ಜೀವನದಲ್ಲಿ ಈ ಮೊದಲು ಲವ್ ಫೇಲ್ಯೂವರ್ ಆಗಿತ್ತು. ಅವರು ತಮ್ಮ ಬಯೋಗ್ರಾಫಿಯಲ್ಲಿ ಈ ಬಗ್ಗೆ ಹೇಳಿಕೊಂಡಿದ್ದರು.

ರಜನಿಕಾಂತ್ ಅವರು ಬೆಂಗಳೂರಿನಲ್ಲಿ ಬಸ್ ಕಂಡಕ್ಟರ್ ಆಗಿದ್ದಾಗ 10ಜೆ ಬಸ್ ನಂಬರ್​ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು ಎನ್ನಲಾಗುದೆ. ಅವರು ಬಸ್​ನಲ್ಲಿ ಪ್ರಯಾಣ ಮಾಡುತ್ತಿದ್ದಾಹ ಹುಡಗಿ ಒಬ್ಬಳನ್ನು ನೋಡಿದ್ದರು. ಅವರ ಬಳಿ  ಹೋಗಿ ರಜನಿಕಾಂತ್ ಅವರು ಮದುವೆ ಪ್ರಪೋಸ್ ಮಾಡಿದ್ದರು. ಆದರೆ, ಆ ಹುಡುಗಿ ಇದನ್ನು ರಿಜೆಕ್ಟ್ ಮಾಡಿದ್ದಳು.

ಇದನ್ನೂ ಓದಿ: ಈ ವಿಶೇಷ ದಿನಕ್ಕೆ ರಿಲೀಸ್ ಆಗಲಿದೆ ರಜನಿಕಾಂತ್ ನಟನೆಯ ‘ಕೂಲಿ’ ಸಿನಿಮಾ

‘ನೀವು ನೋಡೋಕೆ ಕಪ್ಪಿದ್ದೀರಾ, ಕಳ್ಳನ ರೀತಿ ಕಾಣುತ್ತೀರಾ’ ಎಂದು ರಜನಿಕಾಂತ್ ಅವರಿಗೆ ಆ ಹುಡುಗಿ ಹೇಳಿದ್ದಳು. ಈ ಮೂಲಕ ಅವರ ಪ್ರೀತಿ ರಿಜೆಕ್ಟ್ ಆಯಿತು. ಇದು ರಜನಿಕಾಂತ್ ಅವರಿಗೆ ಸಾಕಷ್ಟು ಬೇಸರ ಮೂಡಿಸಿತ್ತು. ಈ ಕಾರಣದಿಂದಲೇ ರಜನಿಕಾಂತ್ ಅವರಿಗೆ ಸುಂದರ ಹುಡುಗಿಯನ್ನು ಮದುವೆ ಆಗಬೇಕು ಎನ್ನುವ ಆಸೆ ಇತ್ತು. ಕೊನೆಗೂ ಅದು ಈಡೇರಿದೆ. ರಜನಿಕಾಂತ್ ಅವರು ಲತಾ ಅವರನ್ನು ಮದುವೆ ಆದರು. ಅವರು ಬೆಳ್ಳಗೆ ಇದ್ದಾರೆ.

1980ರಲ್ಲಿ ಲತಾ ಅವರ ಭೇಟಿ ರಜನಿಕಾಂತ್​ಗೆ ಆಯಿತು. ಕಾಲೇಜ್​ ಒಂದರ ಮ್ಯಾಗಜಿನ್​ಗೆ ಸಂದರ್ಶನ ಮಾಡಲು ಲತಾ ಆಗಮಿಸಿದ್ದರು. ಈ ವೇಳೆ ಇಬ್ಬರ ಮಧ್ಯೆ ಪ್ರೀತಿ ಮೂಡಿತ್ತು. ಸಂದರ್ಶನದ ಕೊನೆ ಆಗುವುದರೊಳಗೆ ರಜನಿಕಾಂತ್ ಲತಾಗೆ ಪ್ರಪೋಸ್ ಮಾಡಿದ್ದರು. ವಿಶೇಷ ಎಂದರೆ ಮುಂದಿನ ವರ್ಷ ಅಂದರೆ 1981ರಲ್ಲಿ ಇಬ್ಬರೂ ವಿವಾಹ ಆದರು. ಈ ದಂಪತಿಗೆ ಐಶ್ವರ್ಯಾ ಹಾಗೂ ಸೌಂದರ್ಯಾ ಹೆಸರಿನ ಇಬ್ಬರು ಮಕ್ಕಳಿದ್ದಾರೆ. ರಜನಿ ಸದ್ಯ ಹಲವು ಸಿನಿಮಾಗಳನ್ನು ಒಪ್ಪಿಕೊಂಡು ನಟಿಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.