ಈ ವಿಶೇಷ ದಿನಕ್ಕೆ ರಿಲೀಸ್ ಆಗಲಿದೆ ರಜನಿಕಾಂತ್ ನಟನೆಯ ‘ಕೂಲಿ’ ಸಿನಿಮಾ

Rajinikanth: ರಜನೀಕಾಂತ್, ಉಪೇಂದ್ರ, ನಾಗಾರ್ಜುನ ಒಟ್ಟಿಗೆ ನಟಿಸುತ್ತಿರುವ ‘ಕೂಲಿ’ ಸಿನಿಮಾದ ಬಿಡುಗಡೆ ದಿನಾಂಕ ಘೋಷಣೆ ಆಗಿದೆ. ಸಿನಿಮಾವನ್ನು ವಿಶೇಷ ದಿನದಂದು ತೆರೆಗೆ ತರಲು ಚಿತ್ರತಂಡ ಸಜ್ಜಾಗಿದೆ.

ಈ ವಿಶೇಷ ದಿನಕ್ಕೆ ರಿಲೀಸ್ ಆಗಲಿದೆ ರಜನಿಕಾಂತ್ ನಟನೆಯ ‘ಕೂಲಿ’ ಸಿನಿಮಾ
Follow us
 ಶ್ರೀಲಕ್ಷ್ಮೀ ಎಚ್
| Updated By: ಮಂಜುನಾಥ ಸಿ.

Updated on: Nov 14, 2024 | 6:29 PM

ರಜನಿಕಾಂತ್ ಅವರು ‘ಕೂಲಿ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ಲೋಕೇಶ್ ಕನಗರಾಜ್ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾಗೆ ಈಗಲೇ ಹೈಪ್ ಸೃಷ್ಟಿ ಆಗಿದೆ. ರಜನಿಕಾ ಹಾಗೂ ಲೋಕೇಶ್ ಒಟ್ಟಾಗಿ ನಟಿಸುತ್ತಿರುವ ಕಾರಣದಿಂದಲೂ ಸಿನಿಮಾ ಸಾಕಷ್ಟು ಹೈಪ್ ಪಡೆದಿದೆ. ಈ ಸಿನಿಮಾ ರಿಲೀಸ್ ಯಾವಾಗ ಎನ್ನುವ ಪ್ರಶ್ನೆಗೆ ಒಂದಷ್ಟು ವಿಚಾರಗಳು ಹರಿದಾಡುತ್ತಿವೆ. ಆ ಬಗ್ಗೆ ಇಲ್ಲಿದೆ ವಿವರ.

‘ಕೂಲಿ’ ಸಿನಿಮಾ ಹೆಸರೇ ಹೇಳುವಂತೆ ಕಾರ್ಮಿಕರಿಗೆ ಸಂಬಂಧಿಸಿದೆ. ಈ ಕಾರಣದಿಂದ ಕಾರ್ಮಿಕ ದಿನಾಚರಣೆ ಪ್ರಯುಕ್ತ ಮುಂದಿನ ಮೇ 1ರಂದು ಸಿನಿಮಾ ರಿಲೀಸ್ ಆಗುವ ಸಾಧ್ಯತೆ ಇದೆ. ಈ ಚಿತ್ರವನ್ನು ರಿಲೀಸ್ ಮಾಡಲು ಇದಕ್ಕಿಂತ ಒಳ್ಳೆಯ ದಿನ ಯಾವುದಿದೆ ಎಂದು ಅನೇಕರು ಪ್ರಶ್ನೆ ಮಾಡುತ್ತಿದ್ದಾರೆ. ಉತ್ತಮವಾದ ಮತ್ತೊಂದು ವಿಚಾರ ಎಂದರೆ ಮೇ 1 ಗುರುವಾರವೇ ಬಂದಿದೆ.

ಈ ಸಿನಿಮಾ ಮೇ 1ರಂದು ರಿಲೀಸ್ ಆದರೆ ಬಿಸ್ನೆಸ್ ರೀತಿಯಲ್ಲೂ ಚಿತ್ರಕ್ಕೆ ಸಹಕಾರಿ ಆಗಲಿದೆ. ಮೇ 1 ಸರ್ಕಾರಿ ರಜೆ ಇರುತ್ತದೆ. ಮೇ 2 ಶುಕ್ರವಾರ. ಸೆಂಟಿಮೆಂಟ್ ಮೇಲೆ ಜನರು ಸಿನಿಮಾ ನೋಡುತ್ತಾರೆ. ಇನ್ನು, ಮೇ 3 ಹಾಗೂ 4 ವೀಕೆಂಡ್ ಇರುವುದರಿಂದ ಜನರು ಸಹಜವಾಗಿಯೇ ಚಿತ್ರ ನೋಡಲು ಬರುತ್ತಾರೆ. ಇದು ಸಿನಿಮಾಗೆ ಸಹಕಾರಿ ಆಗುವ ಸಾಧ್ಯತೆ ಇದೆ.

ಇದನ್ನೂ ಓದಿ:ಪ್ರಭಾಸ್, ರಜನೀಕಾಂತ್, ಶಾರುಖ್ ಖಾನ್ ಅನ್ನೂ ಹಿಂದಿಕ್ಕಿದ ಅಲ್ಲು ಅರ್ಜುನ್

‘ಕೂಲಿ’ ಸಿನಿಮಾದಲ್ಲಿ ದೊಡ್ಡ ಪಾತ್ರವರ್ಗ ಇದೆ. ರಜನಿಕಾಂತ್ ಜೊತೆ ಕನ್ನಡದ ಉಪೇಂದ್ರ, ತೆಲುಗಿನ ನಾಗಾರ್ಜುನ ಕೂಡ ಸಿನಿಮಾದಲ್ಲಿ ಇದ್ದಾರೆ. ಶ್ರುತಿ ಹಾಸನ್ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಕಾರಣಕ್ಕೆ ಸಿನಿಮಾಗೆ ಬೇಡಿಕೆ ಹೆಚ್ಚಿದೆ.

ಲೋಕೇಶ್ ಕನಗರಾಜ್ ಅವರು ‘ಲೋಕೇಶ್ ಸಿನಿಮಾ ಯೂನಿವರ್ಸ್’ ಮಾಡಿದ್ದಾರೆ. ಆದರೆ, ಕೂಲಿಗೂ ಈ ಚಿತ್ರಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ತಂಡ ಸ್ಪಷ್ಟಪಡಿಸಿದೆ. ಈ ಸಿನಿಮಾದಲ್ಲಿ ಆಮಿರ್ ಖಾನ್ ಕೂಡ ನಟಿಸುತ್ತಿದ್ದಾರೆ ಎನ್ನಲಾಗಿದೆ. ಈ ಕಾರಣಕ್ಕೆ ಕನ್ನಡ, ತೆಲುಗು ಹಾಗೂ ಹಿಂದಿಯಲ್ಲೂ ಸಿನಿಮಾ ರಿಲೀಸ್ ಆಗಲಿದೆ. ಈ ಚಿತ್ರಕ್ಕೆ ದೊಡ್ಡ ಬಜೆಟ್ ಹಾಕಲಾಗುತ್ತಿದೆ. ಸನ್ ಪಿಕ್ಚರ್ಸ್ ಇದನ್ನು ನಿರ್ಮಾಣ ಮಾಡುತ್ತಿದ್ದು, ಅನಿರುದ್ಧ್ ಅವರು ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ