Soundarya Rajinikanth: ಗಂಡು ಮಗುವಿಗೆ ಜನ್ಮ ನೀಡಿದ ರಜನಿಕಾಂತ್​ 2ನೇ ಪುತ್ರಿ ಸೌಂದರ್ಯಾ; ಸೂಪರ್​ ಸ್ಟಾರ್​ ಮನೆಯಲ್ಲಿ ಸಂತಸ

| Updated By: ಮದನ್​ ಕುಮಾರ್​

Updated on: Sep 12, 2022 | 11:39 AM

Veer Rajinikanth Vanangamudi: 2ನೇ ಪುತ್ರನ ಆಗಮನದಿಂದ ಸೌಂದರ್ಯಾ ರಜನಿಕಾಂತ್​ ಖುಷಿ ಆಗಿದ್ದಾರೆ. ಸೆ.11ರಂದು ಜನಿಸಿರುವ ಗಂಡು ಮಗುವಿಗೆ ವೀರ್​ ಎಂದು ಹೆಸರು ಇಡಲಾಗಿದೆ.

Soundarya Rajinikanth: ಗಂಡು ಮಗುವಿಗೆ ಜನ್ಮ ನೀಡಿದ ರಜನಿಕಾಂತ್​ 2ನೇ ಪುತ್ರಿ ಸೌಂದರ್ಯಾ; ಸೂಪರ್​ ಸ್ಟಾರ್​ ಮನೆಯಲ್ಲಿ ಸಂತಸ
ರಜನಿಕಾಂತ್ ಪುತ್ರಿ ಸೌಂದರ್ಯಾ ಕುಟುಂಬ
Follow us on

‘ಸೂಪರ್​ ಸ್ಟಾರ್​’ ರಜನಿಕಾಂತ್​ (Rajinikanth) ಅವರ ಎರಡನೇ ಪುತ್ರಿ ಸೌಂದರ್ಯಾ ರಜನಿಕಾಂತ್​ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಸೆಪ್ಟೆಂಬರ್​ 11ರ ರಾತ್ರಿ ಸೋಶಿಯಲ್​ ಮೀಡಿಯಾ ಮೂಲಕ ಈ ಸುದ್ದಿಯನ್ನು ಅವರು ಹಂಚಿಕೊಂಡಿದ್ದಾರೆ. ಈ ಮೂಲಕ ರಜನಿಕಾಂತ್​ ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದೆ. ತಾಯಿಯಾದ ಸೌಂದರ್ಯ (Soundarya Rajinikanth) ಅವರಿಗೆ ಎಲ್ಲರೂ ಅಭಿನಂದನೆ ತಿಳಿಸುತ್ತಿದ್ದಾರೆ. ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ಮಗುವಿನ ಜನ್ಮ ನೀಡಿರುವ ಅವರು ಮಗುವಿನ ಕೈ ಫೋಟೋ ಶೇರ್​ ಮಾಡಿಕೊಂಡಿದ್ದಾರೆ. ಸೌಂದರ್ಯಾ ಅವರಿಗೆ ವೇದ್​ ಎಂಬ ಪುತ್ರನಿದ್ದಾನೆ. ಈಗ ಅವರು ಎರಡನೇ ಮಗನ ಆಗಮನದಿಂದ ಖುಷಿ ಆಗಿದ್ದಾರೆ. ಈ ಮಗನಿಗೆ ವೀರ್ ರಜನಿಕಾಂತ್​ ವನಂಗಮುಡಿ​ (Veer Rajinikanth Vanangamudi) ಎಂದು ಹೆಸರು ಇಡಲಾಗಿದೆ.

‘ದೇವರ ಅಗಾಧವಾದ ಕೃಪೆ ಮತ್ತು ತಂದೆ-ತಾಯಿ ಆಶೀರ್ವಾದದಿಂದ ಸೆಪ್ಟೆಂಬರ್​ 11ರಂದು ವೀರ್​ ರಜನಿಕಾಂತ್​ ವನಂಗಮುಡಿಗೆ ನಾನು, ವಿಶಾಗನ್​ ಮತ್ತು ವೇದ್​ ಸ್ವಾಗತ ಕೋರಿದ್ದೇವೆ’ ಎಂದು ಸೌಂದರ್ಯಾ ರಜನಿಕಾಂತ್​ ಟ್ವೀಟ್​ ಮಾಡಿದ್ದಾರೆ. ಈ ಸಂದರ್ಭದಲ್ಲಿ ಜೊತೆಗಿದ್ದ ವೈದ್ಯರಿಗೆ ಅವರು ಧನವಾದ ಅರ್ಪಿಸಿದ್ದಾರೆ. ಅಭಿಮಾನಿಗಳು ಕಮೆಂಟ್​ ಮೂಲಕ ಶುಭ ಕೋರಿದ್ದಾರೆ.

ಇದನ್ನೂ ಓದಿ
Jailer: ಶಿವಣ್ಣ-ರಜನಿಕಾಂತ್​ ಸಿನಿಮಾಗೆ ‘ಜೈಲರ್​’ ಶೀರ್ಷಿಕೆ: ಅಭಿಮಾನಿಗಳಲ್ಲಿ ಕ್ರೇಜ್​ ಹೆಚ್ಚಿಸಿದ ಪೋಸ್ಟರ್​
ರಜನಿಕಾಂತ್​ಗೆ ನಾಯಕಿ ಆದ ಐಶ್ವರ್ಯಾ ರೈ; ಹೊಸ ಸಿನಿಮಾ ಬಗ್ಗೆ ಇಲ್ಲಿದೆ ಮಾಹಿತಿ
ಡಿವೋರ್ಸ್​ ಬಳಿಕ ರಜನಿ ಪುತ್ರಿಗೆ ಮತ್ತೆ ಕಂಟಕ; ಆಸ್ಪತ್ರೆಗೆ ದಾಖಲಾದ ಐಶ್ವರ್ಯಾ ರಜನಿಕಾಂತ್​
ಕೋಟ್ಯಂತರ ರೂ. ಸಂಭಾವನೆ ಪಡೆಯುವ ರಜನಿಕಾಂತ್​ ಎಷ್ಟು ಆಸ್ತಿ ಹೊಂದಿದ್ದಾರೆ? ಇಲ್ಲಿದೆ ವಿವರ..

ಸೌಂದರ್ಯಾ ಅವರು ಅಶ್ವಿನ್ ರಾಮ್​ಕುಮಾರ್​ ಜೊತೆ 2010ರಲ್ಲಿ ಮದುವೆ ಆಗಿದ್ದರು. ಈ ಜೋಡಿಗೆ 2015ರಲ್ಲಿ ಮೊದಲ ಮಗು ಜನಿಸಿತು. 2017ರಲ್ಲಿ ಸೌಂದರ್ಯಾ ಮತ್ತು ಅಶ್ವಿನ್ ವಿಚ್ಛೇದನ ಪಡೆದುಕೊಂಡರು. 2019ರಲ್ಲಿ ವಿಶಾಗನ್​ ವನಂಗಮುಡಿ ಜೊತೆ ಸೌಂದರ್ಯಾ ಎರಡನೇ ಮದುವೆ ಮಾಡಿಕೊಂಡರು. ಈಗ ಈ ದಂಪತಿಗೆ ಮಗು ಜನಿಸಿದ್ದು, ಮನೆಯಲ್ಲಿ ಸಂಭ್ರಮದ ವಾತಾವರಣ ನಿರ್ಮಾಣ ಆಗಿದೆ.

ತಮಿಳು ಚಿತ್ರರಂಗದಲ್ಲಿ ಗ್ರಾಫಿಕ್ಸ್​ ಡಿಸೈನರ್​ ಆಗಿ ಸೌಂದರ್ಯಾ ರಜನಿಕಾಂತ್​ ಗುರುತಿಸಿಕೊಂಡಿದ್ದಾರೆ. ತಂದೆಯ ಹಲವು ಸಿನಿಮಾಗಳಿಗೆ ಅವರು ಕೆಲಸ ಮಾಡಿದ್ದಾರೆ. ‘ಕೊಚಾಡಿಯನ್​’, ‘ವಿಐಪಿ 2’ ಸಿನಿಮಾಗೆ ಅವರು ನಿರ್ದೇಶನ ಮಾಡಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಕುಟುಂಬದ ಕಡೆಗೆ ಹೆಚ್ಚು ಗಮನ ಹರಿಸಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 11:30 am, Mon, 12 September 22