Baba Movie: ಮರು ಬಿಡುಗಡೆ ಆಗ್ತಿದೆ ರಜನಿಕಾಂತ್​ ನಟನೆಯ ‘ಬಾಬಾ’; ಇದಕ್ಕೆ ‘ಕಾಂತಾರ’ ಯಶಸ್ಸು ಕಾರಣವೇ?

| Updated By: ಮದನ್​ ಕುಮಾರ್​

Updated on: Dec 05, 2022 | 3:59 PM

Rajinikanth | Baba: 20 ವರ್ಷಗಳ ಹಿಂದೆ ಸೋತ ‘ಬಾಬಾ’ ಸಿನಿಮಾವನ್ನು ಈಗ ಮತ್ತೆ ರಿಲೀಸ್​ ಮಾಡುತ್ತಿರುವುದು ಅಚ್ಚರಿ ಮೂಡಿಸಿದೆ. ಈ ಚಿತ್ರಕ್ಕಾಗಿ ರಜನಿಕಾಂತ್​ ಅವರು ಹೊಸದಾಗಿ ಡಬ್ಬಿಂಗ್​ ಮಾಡಿದ್ದಾರೆ.

Baba Movie: ಮರು ಬಿಡುಗಡೆ ಆಗ್ತಿದೆ ರಜನಿಕಾಂತ್​ ನಟನೆಯ ‘ಬಾಬಾ’; ಇದಕ್ಕೆ ‘ಕಾಂತಾರ’ ಯಶಸ್ಸು ಕಾರಣವೇ?
ರಜನಿಕಾಂತ್
Follow us on

ಸೂಪರ್​ ಸ್ಟಾರ್​ ರಜನಿಕಾಂತ್​ (Rajinikanth) ಅವರಿಗೆ ಈಗ 71 ವರ್ಷ ವಯಸ್ಸು. ಇದೇ ಡಿಸೆಂಬರ್​ 12ರಂದು ಅವರು 72ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳಲಿದ್ದಾರೆ. ಈ ಸಂದರ್ಭವನ್ನು ಇನ್ನಷ್ಟು ಸ್ಪೆಷಲ್​ ಆಗಿಸಲು ‘ಬಾಬಾ’ (Baba Movie) ಚಿತ್ರವನ್ನು ಮರು ಬಿಡುಗಡೆ ಮಾಡಲಾಗುತ್ತಿದೆ. ರಜನಿಕಾಂತ್​ ನಟನೆಯ ಈ ಸಿನಿಮಾ 2002ರಲ್ಲಿ ತೆರೆಕಂಡಿತ್ತು. ಈಗ ಅದಕ್ಕೆ ಹೊಸ ತಂತ್ರಜ್ಞಾನ ಅಳವಡಿಸಲಾಗಿದೆ. ಹೊಸ ರೂಪದಲ್ಲಿ ಪ್ರೇಕ್ಷಕರ ಮುಂದೆ ಬರಲು ‘ಬಾಬಾ’ ಸಿನಿಮಾ ಸಜ್ಜಾಗಿದೆ. ಅಷ್ಟಕ್ಕೂ ಬರೋಬ್ಬರಿ 20 ವರ್ಷಗಳ ಬಳಿಕ ಈ ಸಿನಿಮಾವನ್ನು ರೀ-ರಿಲೀಸ್​ ಮಾಡಲು ಚಿತ್ರತಂಡದವರು ಯಾಕೆ ಮುಂದಾಗಿದ್ದಾರೆ ಎಂಬ ಪ್ರಶ್ನೆ ಮೂಡುತ್ತಿದೆ. ಇದು ‘ಕಾಂತಾರ’ (Kantara Movie) ಚಿತ್ರದ ಗೆಲುವಿನ ಎಫೆಕ್ಟ್​ ಎಂದು ಊಹಿಸಲಾಗುತ್ತಿದೆ.

2002ರಲ್ಲಿ ತೆರೆಕಂಡಿದ್ದ ‘ಬಾಬಾ’ ಸಿನಿಮಾ ಹೀನಾಯವಾಗಿ ಸೋತಿತ್ತು. ವಿಶೇಷ ಏನೆಂದರೆ ಆ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದಿದ್ದು ಸ್ವತಃ ರಜನಿಕಾಂತ್​! ನಿರ್ಮಾಣದ ಜವಾಬ್ದಾರಿ ಕೂಡ ಅವರದ್ದೇ. ಹಾಗಿದ್ದರೂ ಕೂಡ ಗಲ್ಲಾಪೆಟ್ಟಿಗೆಯಲ್ಲಿ ‘ಬಾಬಾ’ ಗೆಲ್ಲಲಿಲ್ಲ. ವಿತರಕರಿಗೆ ನಷ್ಟ ಆಗಿದೆ ಎಂದು ರಜನಿಕಾಂತ್​ ಅವರು ತಮ್ಮ ಸ್ವಂತ ಹಣ ನೀಡಿ ನಷ್ಟ ಭರಿಸುವ ಕೆಲಸ ಮಾಡಿದ್ದರು.

ಇದನ್ನೂ ಓದಿ
Rishab Shetty: ಪಂಚೆ ಧರಿಸಿದ ರಿಷಬ್​ ಶೆಟ್ಟಿ ಗತ್ತು ಹೇಗಿದೆ ನೋಡಿ; ಇಲ್ಲಿದೆ ‘ಕಾಂತಾರ’ ಹೀರೋ ಫೋಟೋ ಗ್ಯಾಲರಿ
Kantara: ಕರ್ನಾಟಕದಲ್ಲಿ ‘ಕಾಂತಾರ’ ಚಿತ್ರದ 1 ಕೋಟಿ ಟಿಕೆಟ್ಸ್​ ಮಾರಾಟ; ದಾಖಲೆಗೆ ಹಿಗ್ಗಿದ ‘ಹೊಂಬಾಳೆ ಫಿಲ್ಮ್ಸ್​’
Kantara: ಬೆಂಗಳೂರಿಗೆ ಕಾಲಿಡುತ್ತಲೇ ‘ಕಾಂತಾರ’ ಬಗ್ಗೆ ಮಾತಾಡಿದ ಎಬಿ ಡಿವಿಲಿಯರ್ಸ್; ರಿಷಬ್​ ಶೆಟ್ಟಿ ಹೇಳಿದ್ದೇನು?
Kantara: ‘ಕಾಂತಾರ’ ಸೂಪರ್​ ಹಿಟ್​ ಆದ್ಮೇಲೆ ರಿಷಬ್​ ಶೆಟ್ಟಿ ಏನು ಮಾಡ್ತಿದ್ದಾರೆ? ಪ್ರೈವೇಟ್​ ಜೆಟ್​ ಏರಿದ ಶಿವ

ಇದನ್ನೂ ಓದಿ: Puneeth Rajkumar: ರಜನಿಕಾಂತ್​ ಮೊದಲ ಸಲ ಪುನೀತ್​ ಅವರನ್ನು ನೋಡಿದ್ದು ಎಲ್ಲಿ? ದೇವರ ಸನ್ನಿಧಿಯ ಆ ಘಟನೆಯೇ ರೋಮಾಂಚಕ

20 ವರ್ಷಗಳ ಹಿಂದೆ ಸೋತ ಸಿನಿಮಾವನ್ನು ಈಗ ಮತ್ತೆ ರಿಲೀಸ್​ ಮಾಡುತ್ತಿರುವುದು ಅಚ್ಚರಿ ಮೂಡಿಸಿದೆ. ಈ ಚಿತ್ರಕ್ಕಾಗಿ ಹೊಸದಾಗಿ ಡಬ್ಬಿಂಗ್​ ಮಾಡಲಾಗಿದೆ. ಅಲ್ಲದೆ, ಹೊಸ ರೂಪದಲ್ಲಿ ಟ್ರೇಲರ್​ ಕೂಡ ರಿಲೀಸ್​ ಆಗಿದೆ. 20 ಲಕ್ಷಕ್ಕೂ ಅಧಿಕ ಬಾರಿ ಈ ಟ್ರೇಲರ್​ ವೀಕ್ಷಣೆ ಕಂಡಿದೆ. ಈ ಸಿನಿಮಾಗೆ ಶೇಖರ್​ ಕೃಷ್ಣ ನಿರ್ದೇಶನ ಮಾಡಿದ್ದಾರೆ.

ಇದನ್ನೂ ಓದಿ: Rajinikanth: ‘ಅಪ್ಪು ದೇವರ ಮಗು’ ಎಂದು ಕನ್ನಡದಲ್ಲೇ ಮಾತಾಡಿದ ರಜನಿಕಾಂತ್​; ಮಳೆ ಸುರಿದರೂ ಕದಲಲಿಲ್ಲ ತಲೈವಾ

ರೀ-ರಿಲೀಸ್​ ಮಾಡುತ್ತಿರುವುದು ಏಕೆ ಎಂಬ ಪ್ರಶ್ನೆಗೆ ನಿರ್ದೇಶಕರು ಉತ್ತರ ನೀಡಿದ್ದಾರೆ. ಇತ್ತೀಚೆಗಿನ ಸಂದರ್ಶನದಲ್ಲಿ ಅವರು ಈ ಕುರಿತು ಮಾತನಾಡಿದ್ದಾರೆ. ‘ಫ್ಯಾಂಟಸಿ ಕಥಾಹಂದರದ ಬಗ್ಗೆ ಜನರಿಗೆ ಇತ್ತೀಚಿನ ದಿನಗಳಲ್ಲಿ ಆಸಕ್ತಿ ಹೆಚ್ಚಿದೆ. ‘ಬಾಬಾ’ ಚಿತ್ರ ಅಂದಿನ ಕಾಲಕ್ಕಿಂತಲೂ ಮುಂದಿತ್ತು’ ಎಂದು ಶೇಖರ್​ ಕೃಷ್ಣ ಹೇಳಿದ್ದಾರೆ. ‘ಕಾಂತಾರ’ ಚಿತ್ರವನ್ನು ಗಮನದಲ್ಲಿ ಇಟ್ಟುಕೊಂಡೇ ಈ ರೀತಿ ಹೇಳಿರಬಹುದು ಎಂದು ಸಿನಿಪ್ರಿಯರು ಊಹಿಸಿದ್ದಾರೆ.

‘ಬಾಬಾ’ ಕಥೆ ಏನು?

ಈ ಚಿತ್ರದ ಆರಂಭದಲ್ಲಿ ಹೀರೋಗೆ ದೇವರ ಮೇಲೆ ನಂಬಿಕೆ ಇರುವುದಿಲ್ಲ. ಆದರೆ ಯೋಗಿಯೊಬ್ಬರನ್ನು ಭೇಟಿ ಆದ ಬಳಿಕ ಅವನಿಗೆ ದೇವರ ಮೇಲೆ ನಂಬಿಕೆ ಮೂಡುತ್ತದೆ. ಯೋಗಿ ನೀಡಿದ ವರದಿಂದ ಹೀರೋಗೆ ಸೂಪರ್​ ಪವರ್​ ಬರುತ್ತದೆ. ಅದರಿಂದ ಏನೆಲ್ಲ ಆಗುತ್ತದೆ ಎಂಬುದು ಈ ಸಿನಿಮಾದ ಕಥೆ. ಈ ಬಾರಿಯಾದರೂ ‘ಬಾಬಾ’ ಚಿತ್ರ ಗೆಲ್ಲುತ್ತಾ ಎಂಬುದನ್ನು ಕಾದು ನೋಡಬೇಕು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 3:17 pm, Mon, 5 December 22