ವಿಶ್ವಾದ್ಯಂತ 550 ಕೋಟಿ ರೂಪಾಯಿ ಗಳಿಸಿದ ‘ಜೈಲರ್​’; ರಜನಿಕಾಂತ್​ ಚಿತ್ರಕ್ಕೆ ಭಾರತದಲ್ಲಿ 295 ಕೋಟಿ ರೂ. ಕಲೆಕ್ಷನ್​

|

Updated on: Aug 24, 2023 | 11:41 AM

ರಜನಿಕಾಂತ್ ಅವರಿಗೆ ವಿದೇಶದಲ್ಲೂ ಅಭಿಮಾನಿಗಳು ಇದ್ದಾರೆ. ಹಾಗಾಗಿ ಬೇರೆ ಬೇರೆ ದೇಶಗಳಲ್ಲಿ ‘ಜೈಲರ್​’ ಸಿನಿಮಾ ಅತ್ಯುತ್ತಮವಾಗಿ ಪ್ರದರ್ಶನ ಕಂಡಿದೆ. ಮೂರನೇ ವಾರದಲ್ಲಿ ಈ ಸಿನಿಮಾದ ಹವಾ ಕೊಂಚ ಕಡಿಮೆ ಆಗಿದೆ. ಭಾರತದಲ್ಲಿ 295 ಕೋಟಿ ರೂಪಾಯಿ ಕಲೆಕ್ಷನ್​ ಆಗಿದ್ದು, ಶೀಘ್ರದಲ್ಲೇ 300 ಕೋಟಿ ರೂಪಾಯಿ ಗಡಿ ಮುಟ್ಟಲಿದೆ.

ವಿಶ್ವಾದ್ಯಂತ 550 ಕೋಟಿ ರೂಪಾಯಿ ಗಳಿಸಿದ ‘ಜೈಲರ್​’; ರಜನಿಕಾಂತ್​ ಚಿತ್ರಕ್ಕೆ ಭಾರತದಲ್ಲಿ 295 ಕೋಟಿ ರೂ. ಕಲೆಕ್ಷನ್​
ತಮನ್ನಾ ಭಾಟಿಯಾ, ರಜನಿಕಾಂತ್​
Follow us on

ನಟ ರಜನಿಕಾಂತ್​ (Rajinikanth) ಅವರಿಗೆ ಈಗ 72 ವರ್ಷ ವಯಸ್ಸು. ಈ ಪ್ರಾಯದಲ್ಲೂ ಅವರು ಆ್ಯಕ್ಷನ್​ ಹೀರೋ ಆಗಿ ಮಿಂಚುತ್ತಿದ್ದಾರೆ. ಅದಕ್ಕೆ ಸಾಕ್ಷಿಯೇ ‘ಜೈಲರ್​’ (Jailer Movie) ಸಿನಿಮಾದ ಗಳಿಕೆ. ಆಗಸ್ಟ್​ 10ರಂದು ಬಿಡುಗಡೆ ಆದ ಈ ಸಿನಿಮಾ ಭರ್ಜರಿ ಕಮಾಯಿ ಮಾಡಿದೆ. ವಿಶ್ವಾದ್ಯಂತ ಈ ಚಿತ್ರಕ್ಕೆ 550 ಕೋಟಿ ರೂಪಾಯಿ (Jailer Movie Collection) ಕಮಾಯಿ ಆಗಿದೆ. ಭಾರತದಲ್ಲಿ 300 ಕೋಟಿ ರೂಪಾಯಿ ಬಾಚಿಕೊಳ್ಳುವತ್ತ ಈ ಸಿನಿಮಾ ಮುನ್ನುಗ್ಗುತ್ತಿದೆ. ಬೇರೆ ಸಿನಿಮಾಗಳ ಪೈಪೋಟಿ ನಡುವೆಯೂ ‘ಜೈಲರ್​’ ಸಿನಿಮಾ ಅಬ್ಬರಿಸಿದೆ. ಈ ಚಿತ್ರದ ಗೆಲುವಿಗೆ ಅನೇಕ ಕಾರಣಗಳು ಇವೆ. ರಜನಿಕಾಂತ್​ ಅವರ ವೃತ್ತಿಜೀವನದಲ್ಲಿ ಈ ಸಿನಿಮಾದ ಗೆಲುವು ಗಮನಾರ್ಹವಾಗಿದೆ. ‘ಜೈಲರ್​’ ಗೆದ್ದ ಬಳಿಕ ರಜನಿಕಾಂತ್ ಅವರ ಡಿಮ್ಯಾಂಡ್​ ಹೆಚ್ಚಾಗಿದೆ. ಇನ್ನೂ ಅನೇಕ ಚಿತ್ರಮಂದಿರಗಳಲ್ಲಿ ಈ ಸಿನಿಮಾ ಉತ್ತಮವಾಗಿ ಪ್ರದರ್ಶನ ಕಾಣುತ್ತಿದೆ.

‘ಜೈಲರ್​’ ಸಿನಿಮಾದಲ್ಲಿ ಒಂದು ಕೌಟುಂಬಿಕ ಕಥಾಹಂದರ ಇದೆ. ಮಗನಿಗಾಗಿ ಹೋರಾಡುವ ನಿವೃತ್ತ ಪೊಲೀಸ್​ ಅಧಿಕಾರಿಯ ಪಾತ್ರದಲ್ಲಿ ರಜನಿಕಾಂತ್ ಕಾಣಿಸಿಕೊಂಡಿದ್ದಾರೆ. ರಮ್ಯಾ ಕೃಷ್ಣನ್​, ಶಿವರಾಜ್​ಕುಮಾರ್​, ಮೋಹನ್​ಲಾಲ್​, ಜಾಕಿ ಶ್ರಾಫ್​ ಮುಂತಾದ ಘಟಾನುಘಟಿ ಕಲಾವಿದರು ಈ ಸಿನಿಮಾದಲ್ಲಿ ಅತ್ಯುತ್ತಮವಾಗಿ ಅಭಿನಯಯಿಸಿದ್ದಾರೆ. ಎಲ್ಲರ ಸಂಗಮದಿಂದ ‘ಜೈಲರ್​’ ಸಿನಿಮಾ ಸಖತ್​ ಮಾಸ್​ ಆಗಿ ಮೂಡಿಬಂದಿದೆ. ಅದು ಅಭಿಮಾನಿಗಳಿಗೆ ಸಖತ್​ ಇಷ್ಟ ಆಗಿದೆ. ವಿಲನ್​ ಪಾತ್ರದಲ್ಲಿ ಕಾಣಿಸಿಕೊಂಡಿರುವ ವಿನಾಯಕನ್​ ಅವರು ಹೆಚ್ಚು ಹೈಲೈಟ್​ ಆಗಿದ್ದಾರೆ.

ಇದನ್ನೂ ಓದಿ: ‘ಜೈಲರ್’ ಗೆಲುವಿನ ಬೆನ್ನಲ್ಲೇ ‘ಲಾಲ್ ಸಲಾಮ್’ ಚಿತ್ರದ ಬಗ್ಗೆ ಹೆಚ್ಚಿದ ನಿರೀಕ್ಷೆ; ಐಶ್ವರ್ಯಾ ಮೇಲೆ ಬೀಳುತ್ತಿದೆ ಒತ್ತಡ?

ತಮಿಳನ ಖ್ಯಾತ ನಿರ್ದೇಶಕ ನೆಲ್ಸನ್​ ದಿಲೀಪ್​ ಕುಮಾರ್​ ಅವರು ‘ಜೈಲರ್​’ ಸಿನಿಮಾಗೆ ಆ್ಯಕ್ಷನ್​-ಕಟ್​ ಹೇಳಿದ್ದಾರೆ. ಇದು ಅವರ ನಾಲ್ಕನೇ ಸಿನಿಮಾ. ಈ ಹಿಂದೆ ದಳಪತಿ ವಿಜಯ್​ ನಟನೆಯ ‘ಬೀಸ್ಟ್​’ ಸಿನಿಮಾಗೆ ನೆಲ್ಸನ್​ ಅವರು ನಿರ್ದೇಶನ ಮಾಡಿದ್ದರು. ಆ ಸಿನಿಮಾ ‘ಕೆಜಿಎಫ್​: ಚಾಪ್ಟರ್​ 2’ ಸಿನಿಮಾದ ಎದುರು ಬಿಡುಗಡೆ ಆಗಿ ಸಮಾಧಾನಕರ ಗಳಿಕೆ ಮಾಡಿತ್ತು. ಈಗ ‘ಜೈಲರ್​’ ಸಿನಿಮಾ ಮೂಲಕ ನೆಲ್ಸನ್​ ಅವರು ಭರ್ಜರಿ ಹಿಟ್​ ನೀಡಿದ್ದಾರೆ. ಇದರಿಂದ ಅವರಿಗೆ ಇದ್ದ ಡಿಮ್ಯಾಂಡ್​ ಡಬಲ್ ಆಗಿದೆ. ಅವರ ಮುಂಬರುವ ಸಿನಿಮಾಗಳ ಮೇಲೆ ಅಭಿಮಾನಿಗಳ ನಿರೀಕ್ಷೆ ಹೆಚ್ಚಿದೆ.

ಇದನ್ನೂ ಓದಿ: ‘ಜೈಲರ್’ ಸಿನಿಮಾದ ಕಲಾವಿದರು ಪಡೆದ ಸಂಭಾವನೆ ಇಷ್ಟೊಂದಾ? ಶಿವಣ್ಣನಿಗೆ ಸಿಕ್ಕ ಹಣ ಎಷ್ಟು?

ರಜನಿಕಾಂತ್ ಅವರಿಗೆ ವಿದೇಶದಲ್ಲೂ ಅಭಿಮಾನಿಗಳು ಇದ್ದಾರೆ. ಹಾಗಾಗಿ ಬೇರೆ ಬೇರೆ ದೇಶಗಳಲ್ಲಿ ‘ಜೈಲರ್​’ ಸಿನಿಮಾ ಅತ್ಯುತ್ತಮವಾಗಿ ಪ್ರದರ್ಶನ ಕಂಡಿದೆ. ಮೂರನೇ ವಾರದಲ್ಲಿ ಈ ಸಿನಿಮಾದ ಹವಾ ಕೊಂಚ ಕಡಿಮೆ ಆಗಿದೆ. ಭಾರತದಲ್ಲಿ 295 ಕೋಟಿ ರೂಪಾಯಿ ಕಲೆಕ್ಷನ್​ ಆಗಿದ್ದು, ಶೀಘ್ರದಲ್ಲೇ 300 ಕೋಟಿ ರೂಪಾಯಿ ಗಡಿ ಮುಟ್ಟಲಿದೆ. ಅಂತಿಮವಾಗಿ ಈ ಸಿನಿಮಾದ ಕಲೆಕ್ಷನ್​ ಎಷ್ಟಾಗಲಿದೆ ಎಂಬುದನ್ನು ತಿಳಿಯುವ ಕೌತುಕ ಮೂಡಿದೆ. ಅನಿರುದ್ಧ್​ ರವಿಚಂದರ್​ ಸಂಗೀತ ನೀಡಿರುವ ಈ ಸಿನಿಮಾದ ಹಾಡುಗಳು ಸೂಪರ್​ ಹಿಟ್​ ಆಗಿವೆ. ‘ಕಾವಾಲಾ..’ ಹಾಡಿನಲ್ಲಿ ತಮನ್ನಾ ಭಾಟಿಯಾ ಅವರು ಭರ್ಜರಿಯಾಗಿ ಕುಣಿದಿದ್ದಾರೆ. ಸಿನಿಮಾದ ಗೆಲುವಿನಲ್ಲಿ ಈ ಹಾಡಿನ ಕೊಡುಗೆ ಕೂಡ ಇದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.