AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಟೋಬಿ’ ಮಾತ್ರವಲ್ಲ, ಈ ವಾರ ಬಿಡುಗಡೆ ಆಗುತ್ತಿವೆ ಇನ್ನೂ ಹಲವು ಸಿನಿಮಾಗಳು

ಕನ್ನಡದ ‘ಟೋಬಿ’ ಸಿನಿಮಾ ಮೇಲೆ ಸಿನಿಪ್ರಿಯರಿಗೆ ದೊಡ್ಡ ಮಟ್ಟದ ನಿರೀಕ್ಷೆ ಇದೆ. ಅದೇ ರೀತಿ ಹಾಲಿವುಡ್​ ಮತ್ತು ಬಾಲಿವುಡ್​ನಲ್ಲೂ ಕೆಲವು ಸಿನಿಮಾಗಳು ಈ ವಾರ (ಆಗಸ್ಟ್​ 25) ತೆರೆ ಕಾಣುತ್ತಿದ್ದು ಕೌತುಕ ಮೂಡಿಸಿವೆ. ಬಾಕ್ಸ್​ ಆಫೀಸ್​ನಲ್ಲಿ ಆಗಸ್ಟ್​ ಕೊನೇ ವಾರ ಭರ್ಜರಿ ಪೈಪೋಟಿ ಇರಲಿದೆ. ಸ್ಟಾರ್​ ನಟರ ಸಿನಿಮಾಗಳು ಈ ವಾರ ಬಿಡುಗಡೆ ಆಗುತ್ತಿವೆ.

‘ಟೋಬಿ’ ಮಾತ್ರವಲ್ಲ, ಈ ವಾರ ಬಿಡುಗಡೆ ಆಗುತ್ತಿವೆ ಇನ್ನೂ ಹಲವು ಸಿನಿಮಾಗಳು
ಟೋಬಿ, ಡ್ರೀಮ್​ ಗರ್ಲ್​ 2, ಅಕೇಲಿ, ಕಿಂಗ್​ ಆಫ್​ ಕೋತ್ತಾ
ಮದನ್​ ಕುಮಾರ್​
|

Updated on: Aug 24, 2023 | 12:50 PM

Share

ಸಿನಿಪ್ರಿಯರ ಪಾಲಿಗೆ ಈ ವರ್ಷದ ಆಗಸ್ಟ್​ ತಿಂಗಳು ತುಂಬ ಸ್ಪೆಷಲ್​ ಆಗಿತ್ತು. ಈ ತಿಂಗಳಲ್ಲಿ ಬಿಡುಗಡೆಯಾದ (New Movies) ಒಂದಷ್ಟು ಸಿನಿಮಾಗಳು ಸೂಪರ್​ ಹಿಟ್​ ಆಗಿವೆ. ಆಗಸ್ಟ್​ ಆಟ ಇನ್ನೂ ಮುಗಿದಿಲ್ಲ. ಈ ತಿಂಗಳ ಕೊನೇ ವಾರ ಕೂಡ ಅದ್ದೂರಿಯಾಗಿಯೇ ಇರಲಿದೆ. ಈ ವಾರ (ಆಗಸ್ಟ್​ 25) ಕೆಲವು ಬಹುನಿರೀಕ್ಷಿತ ಸಿನಿಮಾಗಳು ಬಿಡುಗಡೆ ಆಗುತ್ತಿವೆ. ಕನ್ನಡದ ‘ಟೋಬಿ’ (Toby Kannada Movie) ಬಗ್ಗೆ ಬಹಳ ನಿರೀಕ್ಷೆ ಇದೆ. ಅತ್ತ, ಹಿಂದಿಯಲ್ಲಿ ‘ಡ್ರೀಮ್​ ಗರ್ಲ್​ 2’ (Dream Girl 2) ಸಿನಿಮಾ ಪೈಪೋಟಿ ನೀಡಲು ಬರುತ್ತಿದೆ. ಮಲಯಾಳಂನಲ್ಲಿ ದುಲ್ಕರ್​ ಸಲ್ಮಾನ್​ ನಟನೆಯ ‘ಕಿಂಗ್​ ಆಫ್​ ಕೋತ್ತಾ’ ಸಿನಿಮಾ ಕೂಡ ಬಿಡುಗಡೆ ಆಗಿದೆ. ಆ.26ರಂದು ತೆಲುಗಿನಲ್ಲಿ ‘ಬಾಯ್ಸ್​ ಹಾಸ್ಟೆಲ್​’ ತೆರೆಕಾಣಲಿದೆ. ಈ ಎಲ್ಲ ಸಿನಿಮಾಗಳ ಜೊತೆ ಹಾಲಿವುಡ್​ ಚಿತ್ರಗಳು ಕೂಡ ಸ್ಪರ್ಧೆಗೆ ಇಳಿಯುತ್ತಿವೆ. ಹಾಗಾಗಿ ಈ ವಾರ ಸಹ ಸಿನಿಪ್ರಿಯರಿಗೆ ಅನೇಕ ಸಿನಿಮಾಗಳನ್ನು ನೋಡುವ ಅವಕಾಶ ಸಿಗುತ್ತಿದೆ. ಆ ಬಗ್ಗೆ ಇಲ್ಲಿದೆ ಒಂದಷ್ಟು ಮಾಹಿತಿ..

‘ಟೋಬಿ’ ಅವತಾದಲ್ಲಿ ರಾಜ್​ ಬಿ. ಶೆಟ್ಟಿ:

ನಟ ರಾಜ್​ ಬಿ. ಶೆಟ್ಟಿ ಅವರು ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ಈಗಾಗಲೇ ಅವರು ಬೇರೆ ಬೇರೆ ಪಾತ್ರಗಳ ಮೂಲಕ ಜನರನ್ನು ರಂಜಿಸಿದ್ದಾರೆ. ಈಗ ಅವರ ‘ಟೋಬಿ’ ಸಿನಿಮಾ ಬಿಡುಗಡೆ ಆಗುತ್ತಿದೆ. ಈ ಸಿನಿಮಾದಲ್ಲಿ ಅವರ ಗೆಟಪ್​ ತುಂಬ ಭಿನ್ನವಾಗಿದೆ. ರಿಯಲ್​ ಲೈಫ್​ ಘಟನೆಯನ್ನು ಆಧರಿಸಿ ಈ ಸಿನಿಮಾ ಸಿದ್ಧವಾಗಿದೆ. ಬಾಸಿಲ್​ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಸಂಯುಕ್ತಾ ಹೊರನಾಡು, ಚೈತ್ರಾ ಆಚಾರ್​, ರಾಜ್​ ದೀಪಕ್​ ಶೆಟ್ಟಿ, ಗೋಪಾಲಕೃಷ್ಣ ದೇಶಪಾಂಡೆ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಮಿಧುನ್​ ಮುಕುಂದನ್​ ಸಂಗೀತ ನೀಡಿದ್ದಾರೆ.

ಇದನ್ನೂ ಓದಿ: Toby: ಟೋಬಿಯ ಅಷ್ಟ ಅವತಾರಗಳು, ಚಿತ್ರಗಳಲ್ಲಿ ನೋಡಿ

ಬರುತ್ತಿದೆ ‘ಬಯಲುಸೀಮೆ’:

ವರುಣ್​ ಕಟ್ಟಿಮನಿ ನಿರ್ದೇಶನದ ‘ಬಯಲುಸೀಮೆ’ ಸಿನಿಮಾ ಕೂಡ ಈ ವಾರ ಬಿಡುಗಡೆ ಆಗುತ್ತಿದೆ. ಈ ಸಿನಿಮಾದಲ್ಲಿ ವರುಣ್​ ಕಟ್ಟಿಮನಿ ಅವರು ಪ್ರಮುಖ ಪಾತ್ರ ಮಾಡಿದ್ದಾರೆ. ಇನ್ನುಳಿದ ಪಾತ್ರವರ್ಗದಲ್ಲಿ ಅನುಭವಿ ಕಲಾವಿದರಾದ ರವಿಶಂಕರ್​, ಟಿ.ಎಸ್​. ನಾಗಾಭರಣ, ಯಶ್ ಶೆಟ್ಟಿ, ಸಂಯುಕ್ತಾ ಹೊರನಾಡು ಮುಂತಾದವರು ನಟಿಸಿದ್ದಾರೆ. ಅರ್ಚನಾ ಕೊಟ್ಟಿಗೆ ಕೂಡ ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ.

ಆಯುಷ್ಮಾನ್​ ಖುರಾನಾ ಅಭಿಮಾನಿಗಳಿಗೆ ‘ಡ್ರೀಲ್​ ಗರ್ಲ್​ 2’:

2019ರಲ್ಲಿ ‘ಡ್ರೀಮ್​ ಗರ್ಲ್​’ ಸಿನಿಮಾ ಬಿಡುಗಡೆಯಾಗಿ ಯಶಸ್ಸು ಕಂಡಿತ್ತು. ಈಗ ಆ ಸಿನಿಮಾಗೆ ಸೀಕ್ವೆಲ್​ ಸಿದ್ಧವಾಗಿದೆ. ‘ಡ್ರೀಮ್​ ಗರ್ಲ್​ 2’ ಸಿನಿಮಾ ಆಗಸ್ಟ್​ 25ರಂದು ಬಿಡುಗಡೆ ಆಗುತ್ತಿದೆ. ಈಗಾಗಲೇ ಈ ಚಿತ್ರದ ಟ್ರೇಲರ್ ಗಮನ ಸೆಳೆದಿದೆ. ಹುಡುಗಿ ವೇಷ ಹಾಕಿಕೊಂಡು ಭರ್ಜರಿ ಎಂಟರ್​ಟೇನ್ಮೆಂಟ್​ ನೀಡಲು ಆಯುಷ್ಮಾನ್​ ಖುರಾನಾ ಸಜ್ಜಾಗಿದ್ದಾರೆ. ಅವರ ಅಭಿಮಾನಿಗಳು ಈ ಸಿನಿಮಾ ಮೇಲೆ ಸಖತ್​ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ಇದನ್ನೂ ಓದಿ: ವಿಶ್ವಾದ್ಯಂತ 550 ಕೋಟಿ ರೂಪಾಯಿ ಗಳಿಸಿದ ‘ಜೈಲರ್​’; ರಜನಿಕಾಂತ್​ ಚಿತ್ರಕ್ಕೆ ಭಾರತದಲ್ಲಿ 295 ಕೋಟಿ ರೂ. ಕಲೆಕ್ಷನ್​

ನುಸ್ರತ್​ ಬರೂಚಾ ನಟನೆಯ ‘ಅಕೇಲಿ’:

ನಟಿ ನುಸ್ರತ್​ ಬರೂಚಾ ಅವರು ಬಾಲಿವುಡ್​ನಲ್ಲಿ ಫೇಮಸ್​ ಆಗಿದ್ದಾರೆ. ಅವರು ನಟಿಸಿರುವ ‘ಅಕೇಲಿ’ ಸಿನಿಮಾ ಕೂಡ ಆಗಸ್ಟ್​ 25ರಂದು ಬಿಡುಗಡೆ ಆಗುತ್ತಿದೆ. ಐಸಿಎಸ್​ ಆಕ್ರಮಿತ ಪ್ರದೇಶದಲ್ಲಿ ಪಂಜಾಬ್​ನ ಹುಡುಗಿಯೊಬ್ಬಳು ಸಿಕ್ಕಿಹಾಕಿಕೊಳ್ಳುತ್ತಾಳೆ. ಉದ್ಯೋಗ ಹುಡುಗಿ ಹೋದ ಅವಳ ಬದುಕು ಕಷ್ಟದ ಕೂಪಕ್ಕೆ ತಳ್ಳಲ್ಪಡುತ್ತದೆ. ಅಂಥ ಗಂಭೀರವಾದ ಕಥೆ ಇರುವ ‘ಅಕೇಲಿ’ ಸಿನಿಮಾದಲ್ಲಿ ನುಸ್ರತ್​ ಬರೂಚಾ ಮುಖ್ಯಭೂಮಿಕೆ ನಿಭಾಯಿಸಿದ್ದಾರೆ.

ಮಾಸ್​ ಪ್ರೇಕ್ಷಕರಿಗೆ ‘ಕಿಂಗ್​ ಆಫ್​ ಕೋತ್ತಾ’:

ಮಲಯಾಳಂ ನಟ ದುಲ್ಕರ್​ ಸಲ್ಮಾನ್​ ಅವರು ಎಲ್ಲ ಬಗೆಯ ಪಾತ್ರಗಳನ್ನು ಮಾಡಿ ಸೈ ಎನಿಸಿಕೊಂಡಿದ್ದಾರೆ. ಈಗ ಅವರು ‘ಕಿಂಗ್​ ಆಫ್​ ಕೋತ್ತಾ’ ಸಿನಿಮಾದಲ್ಲಿ ಗ್ಯಾಂಗ್​​ಸ್ಟರ್​ ಪಾತ್ರ ಮಾಡಿದ್ದಾರೆ. ಸಖತ್​ ಮಾಸ್​ ಆಗಿ ಈ ಸಿನಿಮಾ ಮೂಡಿಬಂದಿದೆ. ಆಗಸ್ಟ್ 24ರಂದು ಈ ಚಿತ್ರ ಬಿಡುಗಡೆ ಆಗಿದೆ. ಮಲಯಾಳಂನ ಈ ಸಿನಿಮಾ ತೆಲುಗು ಮತ್ತು ತಮಿಳಿಗೂ ಡಬ್​ ಆಗಿ ತೆರೆಕಂಡಿದೆ.

ಇದನ್ನೂ ಓದಿ: ‘500 ಕೋಟಿ ರೂಪಾಯಿ ಕಲೆಕ್ಷನ್​ ಮಾಡಲಿದೆ ಗದರ್​ 2’: ಭವಿಷ್ಯ ನುಡಿದ ಬಾಕ್ಸ್​ ಆಫೀಸ್​ ತಜ್ಞರು

ಹಾಲಿವುಡ್​ನಲ್ಲಿ ‘ಆ್ಯಸ್ಟ್ರಾಯ್ಡ್​ ಸಿಟಿ’ ಮತ್ತು ‘ರೆಟ್ರಿಬ್ಯೂಷನ್​’:

ಹಾಲಿವುಡ್​ ಸಿನಿಮಾಗಳಿಗೆ ಭಾರತದಲ್ಲಿ ದೊಡ್ಡ ಪ್ರೇಕ್ಷಕರ ವರ್ಗ ಇದೆ. ಈ ವಾರ ‘ಆ್ಯಸ್ಟ್ರಾಯ್ಡ್​ ಸಿಟಿ’ ಸಿನಿಮಾ ಬಿಡುಗಡೆ ಆಗುತ್ತಿದೆ. ಈ ಚಿತ್ರಕ್ಕೆ ವೆಸ್​ ಆ್ಯಂಡರ್​ಸನ್​ ನಿರ್ದೇಶನ ಮಾಡಿದ್ದಾರೆ. ಹಾಲಿವುಡ್​ನ ಖ್ಯಾತ ನಟ ಲಿಯಾಂ ನೀಸನ್​ ನಟನೆಯ ‘ರೆಟ್ರಿಬ್ಯೂಷನ್​’ ಸಿನಿಮಾ ಕೂಡ ಈ ವಾರ ತೆರೆಕಾಣುತ್ತಿದೆ. ಈ ಚಿತ್ರದಲ್ಲಿ ಸಸ್ಪೆನ್ಸ್​ ಥ್ರಿಲ್ಲರ್​ ಕಥಾಹಂದರ ಇದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Follow Us
ಮದನ್​ ಕುಮಾರ್​
ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ
ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ
ಯೋಗೇಶ್​​ ಗೌಡ ಕೊಲೆ ಕೇಸ್​​: ವಿನಯ್​​ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?
ಯೋಗೇಶ್​​ ಗೌಡ ಕೊಲೆ ಕೇಸ್​​: ವಿನಯ್​​ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?
ಬೋಗಸ್ ಫಾರ್ಮ್ ನೀಡಿ ಮತದಾರರ ಹೆಸರು ಡಿಲೀಟ್ ಆರೋಪ:  25 ಜನರ ವಿರುದ್ಧ FIR
ಬೋಗಸ್ ಫಾರ್ಮ್ ನೀಡಿ ಮತದಾರರ ಹೆಸರು ಡಿಲೀಟ್ ಆರೋಪ:  25 ಜನರ ವಿರುದ್ಧ FIR
ಉತ್ತರಾಖಂಡದಲ್ಲಿ ಭಾರೀ ಭೂಕುಸಿತ; ಗುಡ್ಡ ಕುಸಿಯುವ ಭಯಾನಕ ವಿಡಿಯೋ ವೈರಲ್
ಉತ್ತರಾಖಂಡದಲ್ಲಿ ಭಾರೀ ಭೂಕುಸಿತ; ಗುಡ್ಡ ಕುಸಿಯುವ ಭಯಾನಕ ವಿಡಿಯೋ ವೈರಲ್
ಸೌಜನ್ಯ ಕೇಸ್​ ತನಿಖೆಗೆ ಮಂಗಳೂರಲ್ಲಿ ಎಸ್​ಐಟಿ ಕಚೇರಿ ಓಪನ್: ಮೊದಲ ಸಭೆ
ಸೌಜನ್ಯ ಕೇಸ್​ ತನಿಖೆಗೆ ಮಂಗಳೂರಲ್ಲಿ ಎಸ್​ಐಟಿ ಕಚೇರಿ ಓಪನ್: ಮೊದಲ ಸಭೆ
ಕುರುಡುಮಲೆ ವಿನಾಯಕ ದೇಗುಲದಲ್ಲಿ ಮೋದಿ ಹೆಸರಲ್ಲಿ ಬಿ.ವೈ.ವಿಜಯೇಂದ್ರ ಪೂಜೆ
ಕುರುಡುಮಲೆ ವಿನಾಯಕ ದೇಗುಲದಲ್ಲಿ ಮೋದಿ ಹೆಸರಲ್ಲಿ ಬಿ.ವೈ.ವಿಜಯೇಂದ್ರ ಪೂಜೆ
ಗಾನವಿಯ ಟಾರ್ಗೆಟ್ ಮಾಡಿದರೇ ಮನೆ ಮಂದಿ: ವಿಡಿಯೋ ನೋಡಿ
ಗಾನವಿಯ ಟಾರ್ಗೆಟ್ ಮಾಡಿದರೇ ಮನೆ ಮಂದಿ: ವಿಡಿಯೋ ನೋಡಿ
Live Video: ಸಿಎಂ ಡಿಕೆ ಶಿವಕುಮಾರ್ ಮಹತ್ವದ ಸುದ್ದಿಗೋಷ್ಠಿ
Live Video: ಸಿಎಂ ಡಿಕೆ ಶಿವಕುಮಾರ್ ಮಹತ್ವದ ಸುದ್ದಿಗೋಷ್ಠಿ
‘ಇಷ್ಟು ಗಲೀಜು ಆಟ ಆಡಬೇಡಿ’; ಕಾವ್ಯಾಗೆ ನೇರವಾಗಿ ಹೇಳಿದ ಗಾನವಿ
‘ಇಷ್ಟು ಗಲೀಜು ಆಟ ಆಡಬೇಡಿ’; ಕಾವ್ಯಾಗೆ ನೇರವಾಗಿ ಹೇಳಿದ ಗಾನವಿ
ಎಸ್​ಐಆರ್​ನಲ್ಲಿ 1.7 ಕೋಟಿ ಹೆಸರು ತೆಗೆದಿದ್ದಾರೆ: ಸಚಿವ ರಿಜ್ವಾನ್ ಆರೋಪ
ಎಸ್​ಐಆರ್​ನಲ್ಲಿ 1.7 ಕೋಟಿ ಹೆಸರು ತೆಗೆದಿದ್ದಾರೆ: ಸಚಿವ ರಿಜ್ವಾನ್ ಆರೋಪ