Thalaivar 170: ‘ತಲೈವರ್​ 170’ ಚಿತ್ರತಂಡದಿಂದ ರಜನಿಕಾಂತ್​ ಫಸ್ಟ್​ ಲುಕ್​ ಬಿಡುಗಡೆ

Thalaivar 170 First Look: ‘ತಲೈವರ್​ 170’ ಸಿನಿಮಾದ ಕಥೆಯ ಬಗ್ಗೆ ಈಗಾಗಲೇ ಕೆಲವು ಅಂತೆ-ಕಂತೆಗಳು ಹರಿದಾಡುತ್ತಿವೆ. ಇತ್ತೀಚೆಗೆ ಲೈಕಾ ಪ್ರೊಡಕ್ಷನ್ಸ್​ ಕಡೆಯಿಂದ ಎಲ್ಲ ಕಲಾವಿದರ ಪೋಸ್ಟರ್​ಗಳನ್ನು ಬಿಡುಗಡೆ ಮಾಡಲಾಯಿತು. ಕೊನೆಯದಾಗಿ ರಜನಿಕಾಂತ್​ ಅವರ ಲುಕ್​ ಬಹಿರಂಗ ಆಗಿದೆ. ಬ್ಲಾಕ್​ ಆ್ಯಂಡ್​ ವೈಟ್​ ಥೀಮ್​ನಲ್ಲಿ ಈ ಪೋಸ್ಟರ್​ ವಿನ್ಯಾಸಗೊಂಡಿದೆ.

Thalaivar 170: ‘ತಲೈವರ್​ 170’ ಚಿತ್ರತಂಡದಿಂದ ರಜನಿಕಾಂತ್​ ಫಸ್ಟ್​ ಲುಕ್​ ಬಿಡುಗಡೆ
ರಜನಿಕಾಂತ್​
Follow us
ಮದನ್​ ಕುಮಾರ್​
|

Updated on: Oct 04, 2023 | 3:14 PM

ನಟ ರಜನಿಕಾಂತ್​ (Rajinikanth) ಅವರು ಬ್ಯಾಕ್​ ಟು ಬ್ಯಾಕ್​ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಈ ವರ್ಷ ಬಿಡುಗಡೆ ಆದ ಅವರ ‘ಜೈಲರ್’ ಸಿನಿಮಾ ಬ್ಲಾಕ್​ ಬಸ್ಟರ್​ ಹಿಟ್​ ಆಯಿತು. ಅಭಿಮಾನಿಗಳು ಆ ಚಿತ್ರವನ್ನು ಸಖತ್​ ಇಷ್ಟಪಟ್ಟರು. ಚಿತ್ರಮಂದಿರದಲ್ಲಿ ಧೂಳೆಬ್ಬಿಸಿದ ಬಳಿಕ ಒಟಿಟಿಯಲ್ಲೂ ‘ಜೈಲರ್​’ ಅಬ್ಬರಿಸಿತು. ಅದರ ಬೆನ್ನಲ್ಲೇ ರಜನಿಕಾಂತ್ ನಟನೆಯ ಮುಂದಿನ ಸಿನಿಮಾದ ಬಗ್ಗೆ ಹೊಸ ಹೊಸ ಅಪ್​ಡೇಟ್​ ಸಿಗುತ್ತಿದೆ. ರಜನಿ ಅಭಿನಯಿಸಲಿರುವ 170ನೇ ಸಿನಿಮಾದಿಂದ ಫಸ್ಟ್​ ಲುಕ್​ ಪೋಸ್ಟರ್​ (Thalaivar 170 First Look) ಬಿಡುಗಡೆ ಮಾಡಲಾಗಿದೆ. ಇದನ್ನು ಕಂಡು ಅಭಿಮಾನಿಗಳು ಖುಷಿಪಟ್ಟಿದ್ದಾರೆ. ಇನ್ನೂ ಹೆಸರಿಡದ ಈ ಚಿತ್ರವನ್ನು ಸದ್ಯಕ್ಕೆ ‘ತಲೈವರ್​ 170’ (Thalaivar 170) ಎಂದು ಕರೆಯಲಾಗುತ್ತಿದೆ. ಅಮಿತಾಭ್​ ಬಚ್ಚನ್​ ಕೂಡ ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಎಂಬುದು ವಿಶೇಷ.

ಪ್ರತಿಷ್ಠಿತ ಲೈಕಾ ಪ್ರೊಡಕ್ಷನ್ಸ್​ ಸಂಸ್ಥೆ ಮೂಲಕ ‘ತಲೈವರ್​ 170’ ಸಿನಿಮಾ ಮೂಡಿಬರುತ್ತಿದೆ. ‘ಜೈ ಭೀಮ್​’ ಸಿನಿಮಾ ಖ್ಯಾತಿಯ ಟಿಜೆ ಜ್ಞಾನವೇಲ್​ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ಪಾತ್ರವರ್ಗದ ಕಾರಣದಿಂದ ಈ ಸಿನಿಮಾ ಗಮನ ಸೆಳೆಯುತ್ತಿದೆ. ರಜನಿಕಾಂತ್​ ಮತ್ತು ಅಮಿತಾಭ್​ ಬಚ್ಚನ್​ ಮಾತ್ರವಲ್ಲದೇ ರಾಣಾ ದಗ್ಗುಬಾಟಿ, ಫಹಾದ್ ಪಾಸಿಲ್​, ಮಂಜು ವಾರಿಯರ್​ ಮುಂತಾದವರು ಈ ಚಿತ್ರದಲ್ಲಿ ಬಣ್ಣ ಹಚ್ಚುತ್ತಿದ್ದಾರೆ. ಅದ್ದೂರಿ ಬಜೆಟ್​ನಲ್ಲಿ ಈ ಸಿನಿಮಾ ನಿರ್ಮಾಣ ಆಗಲಿದೆ. ಈಗ ಎಲ್ಲ ಕಲಾವಿದರ ಪೋಸ್ಟರ್​ಗಳು ರಾರಾಜಿಸುತ್ತಿವೆ.

ಇತ್ತೀಚೆಗೆ ಲೈಕಾ ಪ್ರೊಡಕ್ಷನ್ಸ್​ ಕಡೆಯಿಂದ ಎಲ್ಲ ಕಲಾವಿದರ ಪೋಸ್ಟರ್​ಗಳನ್ನು ಬಿಡುಗಡೆ ಮಾಡಲಾಯಿತು. ಕೊನೆಯದಾಗಿ ರಜನಿಕಾಂತ್​ ಅವರ ಲುಕ್​ ಬಹಿರಂಗ ಆಗಿದೆ. ಬ್ಲಾಕ್​ ಆ್ಯಂಡ್​ ವೈಟ್​ ಥೀಮ್​ನಲ್ಲಿ ಈ ಪೋಸ್ಟರ್​ ವಿನ್ಯಾಸಗೊಂಡಿದೆ. ‘ಲೈಟ್ಸ್​, ಕ್ಯಾಮರಾ, ಕ್ಲ್ಯಾಪ್​ ಆ್ಯಂಡ್​ ಆ್ಯಕ್ಷನ್​. ರಜನಿಕಾಂತ್​ ಜೊತೆ ಇಡೀ ತಂಡ ಸಿದ್ಧವಾಗಿದೆ. ಇದು ಆ್ಯಕ್ಷನ್​ ಮೆರೆಯುವ ಸಮಯ. ಶೂಟಿಂಗ್​ ಶುರುವಾದ ಬಳಿಕ ಹೆಚ್ಚು ಅಪ್​ಡೇಟ್​ ನೀಡುತ್ತೇವೆ’ ಎಂದು ಸೋಶಿಯಲ್​ ಮೀಡಿಯಾದಲ್ಲಿ ಪೋಸ್ಟ್​ ಮಾಡಲಾಗಿದೆ.

ಒಂದೇ ಸಿನಿಮಾದಲ್ಲಿ ರಜನಿಕಾಂತ್​-ಅಮಿತಾಭ್​ ಬಚ್ಚನ್​; 32 ವರ್ಷಗಳ ಬಳಿಕ ದಿಗ್ಗಜರ ಸಂಗಮ

‘ತಲೈವರ್​ 170’ ಸಿನಿಮಾದ ಕಥೆಯ ಬಗ್ಗೆ ಈಗಾಗಲೇ ಕೆಲವು ಅಂತೆ-ಕಂತೆಗಳು ಹರಿದಾಡುತ್ತಿವೆ. ಈ ಸಿನಿಮಾದಲ್ಲಿ ರಜನಿಕಾಂತ್​ ಅವರು ನಿವೃತ್ತ ಪೊಲೀಸ್​ ಅಧಿಕಾರಿಯ ಪಾತ್ರ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ. ನಕಲಿ ಎನ್​ಕೌಂಟರ್​ ಘಟನೆಯ ಕುರಿತು ಈ ಚಿತ್ರ ಸಿದ್ಧವಾಗಲಿದೆ ಎಂಬ ಗಾಸಿಪ್​ ಇದೆ. ಈ ಬಗ್ಗೆ ಚಿತ್ರತಂಡದಿಂದ ಅಧಿಕೃತ ಹೇಳಿಕೆ ಹೊರಬಿದ್ದಿಲ್ಲ. 72ನೇ ವಯಸ್ಸಿನಲ್ಲಿ ರಜನಿಕಾಂತ್​ ಅವರು ಈ ರೀತಿಯ ಆ್ಯಕ್ಷನ್​ ಸಿನಿಮಾ ಮಾಡುತ್ತಿರುವುದು ವಿಶೇಷ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್