ಯೋಗಿ ಆದಿತ್ಯನಾಥ್ ಕಾಲಿಗೆ ಬಿದ್ದ ರಜನಿಕಾಂತ್​; ಇಬ್ಬರ ನಡುವೆ ವಯಸ್ಸಿನ ಅಂತರ ಎಷ್ಟು?

ರಜನಿಕಾಂತ್​ ಅವರು ಯೋಗಿ ಆದಿತ್ಯನಾಥ್​ ಅವರನ್ನು ಭೇಟಿ ಆಗುತ್ತಾರೆ ಎಂದು ಒಂದು ದಿನ ಮೊದಲೇ ಸುದ್ದಿ ಹೊರಬಿದ್ದಿತ್ತು. ಇಬ್ಬರೂ ಜೊತೆಯಾಗಿ ‘ಜೈಲರ್​’ ಸಿನಿಮಾ ವೀಕ್ಷಿಸುತ್ತಾರೆ ಎಂದು ಹೇಳಲಾಗಿತ್ತು. ಆದರೆ ಭೇಟಿಯ ಸಂದರ್ಭದಲ್ಲಿ ರಜನಿಕಾಂತ್​ ಅವರು ಈ ರೀತಿ ಕಾಲಿಗೆ ನಮಸ್ಕರಿಸುತ್ತಾರೆ ಎಂದು ಯಾರೂ ಊಹಿಸಿರಲಿಲ್ಲ.

ಯೋಗಿ ಆದಿತ್ಯನಾಥ್ ಕಾಲಿಗೆ ಬಿದ್ದ ರಜನಿಕಾಂತ್​; ಇಬ್ಬರ ನಡುವೆ ವಯಸ್ಸಿನ ಅಂತರ ಎಷ್ಟು?
ಯೋಗಿ ಆದಿತ್ಯನಾಥ್ ಕಾಲಿಗೆ ಬಿದ್ದ ರಜನಿಕಾಂತ್​

Updated on: Aug 20, 2023 | 7:20 AM

ನಟ ರಜನಿಕಾಂತ್ (Rajinikanth) ಅವರು ‘ಜೈಲರ್​’ ಸಿನಿಮಾದ ಯಶಸ್ಸಿನ ಖುಷಿಯಲ್ಲಿ ಇದ್ದಾರೆ. ಅದರ ಜೊತೆಗೆ ಒಂದು ವಿವಾದ ಕೂಡ ಹುಟ್ಟಿಕೊಂಡಿದೆ. ಶನಿವಾರ (ಆಗಸ್ಟ್​ 19) ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath)​ ಅವರನ್ನು ರಜನಿಕಾಂತ್​ ಭೇಟಿ ಆಗಿದ್ದಾರೆ. ಈ ವೇಳೆ ಅವರು ನಡೆದುಕೊಂಡ ರೀತಿಯ ಬಗ್ಗೆ ಚರ್ಚೆ ಶುರುವಾಗಿದೆ. ಯೋಗಿ ಆದಿತ್ಯನಾಥ್​ ಅವರ ಕಾಲಿಗೆ ರಜನಿಕಾಂತ್​ ನಮಸ್ಕರಿಸಿದ್ದಾರೆ. ಇದು ಒಂದು ವರ್ಗದ ಜನರಿಗೆ ಸರಿ ಎನಿಸಿಲ್ಲ. ಹಾಗಾಗಿ ರಜನಿಕಾಂತ್​ ಅವರ ನಡೆಯನ್ನು ಅನೇಕರು ಖಂಡಿಸುತ್ತಿದ್ದಾರೆ. ಇಬ್ಬರ ನಡುವೆ ವಯಸ್ಸಿನ ಅಂತ ತುಂಬ ದೊಡ್ಡದಿದೆ. ಯೋಗಿ ಆದಿತ್ಯನಾಥ್​ ಅವರಿಗಿಂತ ರಜನಿಕಾಂತ್​ ಅವರು 21 ವರ್ಷ ಹಿರಿಯರು. ಹಾಗಾಗಿ ಕಿರಿಯ ವ್ಯಕ್ತಿಯ ಕಾಲಿಗೆ ಬಿದ್ದು ನಮಸ್ಕರಿಸಿದ್ದನ್ನು ಕೆಲವರು ವಿರೋಧಿಸುತ್ತಿದ್ದಾರೆ.

ರಜನಿಕಾಂತ್​ ಅವರಿಗೆ ಈಗ 72 ವರ್ಷ ವಯಸ್ಸು. ಆದರೆ ಯೋಗಿ ಆದಿತ್ಯನಾಥ್ ಅವರ ವಯಸ್ಸು ಈಗಿನ್ನೂ 51 ವರ್ಷ. ರಜನಿಕಾಂತ್​ ಅವರು ಯೋಗಿ ಆದಿತ್ಯನಾಥ್​ ಅವರನ್ನು ಭೇಟಿಯಾಗುತ್ತಾರೆ ಎಂದು ಒಂದು ದಿನ ಮೊದಲೇ ಸುದ್ದಿ ಹೊರಬಿದ್ದಿತ್ತು. ಇಬ್ಬರೂ ಜೊತೆಯಾಗಿ ‘ಜೈಲರ್​’ ಸಿನಿಮಾ ವೀಕ್ಷಿಸುತ್ತಾರೆ ಎಂದು ಹೇಳಲಾಗಿತ್ತು. ಆದರೆ ಭೇಟಿಯ ಸಂದರ್ಭದಲ್ಲಿ ರಜನಿಕಾಂತ್​ ಅವರು ಈ ರೀತಿ ಕಾಲಿಗೆ ನಮಸ್ಕರಿಸುತ್ತಾರೆ ಎಂದು ಯಾರೂ ಊಹಿಸಿರಲಿಲ್ಲ. ಹಾಗಾಗಿ ಈ ಘಟನೆ ಎಲ್ಲರಿಗೂ ಅಚ್ಚರಿ ಮೂಡಿಸಿದೆ.

ಇದನ್ನೂ ಓದಿ: ‘ಚಂದ್ರಮುಖಿ 2’ ಫಸ್ಟ್​ ಲುಕ್ ಬಿಡುಗಡೆ ಮಾಡಿದ ರಜನಿಕಾಂತ್​; ಗಣೇಶ ಚತುರ್ಥಿಗೆ ಬರಲಿದೆ ಬಹುನಿರೀಕ್ಷಿತ ಸಿನಿಮಾ

ರಜನಿಕಾಂತ್​ ಅವರನ್ನು ಆರಾಧಿಸುವ ಅಪಾರ ಸಂಖ್ಯೆಯ ಅಭಿಮಾನಿಗಳು ಇದ್ದಾರೆ. ತಮ್ಮ ನೆಚ್ಚಿನ ಹೀರೋ ಹೀಗೆ ನಡೆದುಕೊಂಡಿರುವುದು ಕೆಲವರಿಗೆ ಇಷ್ಟ ಆಗಿಲ್ಲ. ಸಿನಿಮಾದ ಕಾರಣಕ್ಕಾಗಿ ರಜನಿಕಾಂತ್​ ಅವರನ್ನು ಇಷ್ಟಪಡುವ ದೊಡ್ಡ ವರ್ಗವಿದೆ. ಆದರೆ ಆ ಪೈಕಿ ಅನೇಕರಿಗೆ ಯೋಗಿ ಆದಿತ್ಯನಾಥ್​ ಅವರ ರಾಜಕೀಯದ ನಿಲುವುಗಳು ಸೂಕ್ತ ಎನಿಸದೇ ಇರಬಹುದು. ಈ ಎಲ್ಲ ಕಾರಣಗಳಿಂದಾಗಿ ಯೋಗಿ ಆದಿತ್ಯನಾಥ್​ ಕಾಲಿಗೆ ರಜನಿಕಾಂತ್​ ನಮಸ್ಕರಿಸಿದ್ದನ್ನು ಒಂದಷ್ಟು ಮಂದಿ ಖಂಡಿಸುತ್ತಿದ್ದಾರೆ. ಈ ಘಟನೆ ಬಗ್ಗೆ ರಜನಿಕಾಂತ್​ ಯಾವ ರೀತಿ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ಕಾದುನೋಡಬೇಕು.

ಯೋಗಿ ಆದಿತ್ಯನಾಥ್​ ಕಾಲಿಗೆ ರಜನಿಕಾಂತ್​ ನಮಸ್ಕರಿಸಿದ ವಿಡಿಯೋ:

‘ಜೈಲರ್​’ ಬಿಡುಗಡೆಗೂ ಮುನ್ನವೇ ರಜನಿಕಾಂತ್​ ಅವರು ಪ್ರವಾಸಕ್ಕೆ ತೆರಳಿದರು. ಹಿಮಾಲಯದಲ್ಲಿ ತಮ್ಮ ಅಧ್ಯಾತ್ಮದ ಗುರುಗಳನ್ನು ಅವರು ಭೇಟಿ ಮಾಡಿದ್ದಾರೆ. ಅಲ್ಲದೇ ಒಂದಷ್ಟು ದೇವಾಲಯಗಳಿಗೂ ತೆರಳಿ ದರ್ಶನ ಪಡೆದಿದ್ದಾರೆ. ಅಲ್ಲಿಂದ ಹಿಂದಿರುಗುವಾಗ ಉತ್ತರ ಪ್ರದೇಶಕ್ಕೆ ತೆರಳಿ ಯೋಗಿ ಆದಿತ್ಯನಾಥ್​ ಅವರನ್ನು ಭೇಟಿಯಾಗಿದ್ದಾರೆ. ಈ ಸಂದರ್ಭದ ವಿಡಿಯೋ ಮತ್ತು ಫೋಟೋಗಳು ವೈರಲ್​ ಆಗಿವೆ. ಈ ಭೇಟಿಯ ಬಗ್ಗೆ ಸೋಶಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಚರ್ಚೆ ಆಗುತ್ತಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us