ರಜನಿಕಾಂತ್ ಎಷ್ಟು ಮಾನವೀಯತೆ ಮೆರೆಯುತ್ತಾರೆ ನೋಡಿ; ಈ ವಿಡಿಯೋನೇ ಸಾಕ್ಷಿ

ರಜನಿಕಾಂತ್ ಅವರ 'ಜೈಲರ್' ಚಿತ್ರೀಕರಣದ ಸಮಯದ ವೀಡಿಯೋ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಅವರು ಸಹ ಕಲಾವಿದರಿಗೆ ತಪ್ಪು ಮಾಡಿದ ಬಳಿಕ ಕ್ಷಮೆ ಕೇಳುವುದು ತೋರಿಸಲಾಗಿದೆ. ಇದು ಅವರ ಮಾನವೀಯತೆಯನ್ನು ಎತ್ತಿ ತೋರಿಸುತ್ತದೆ. 'ಕೂಲಿ' ಚಿತ್ರ ಬಿಡುಗಡೆಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ .

ರಜನಿಕಾಂತ್ ಎಷ್ಟು ಮಾನವೀಯತೆ ಮೆರೆಯುತ್ತಾರೆ ನೋಡಿ; ಈ ವಿಡಿಯೋನೇ ಸಾಕ್ಷಿ
ರಜಿನಿಕಾಂತ್
Edited By:

Updated on: Apr 21, 2025 | 8:06 AM

ರಜನಿಕಾಂತ್ (Rajinikanth) ಅವರು ದೊಡ್ಡ ಮಟ್ಟದಲ್ಲಿ ಖ್ಯಾತಿ ಪಡೆದ ಹೀರೋ. ಅವರು ಪ್ರತಿ ಚಿತ್ರಕ್ಕೆ ನೂರಾರು ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ. ಹಾಗಂತ ಅವರ ಎಂದಿಗೂ ಸುಮ್ಮನೆ ಕುಳಿತವರು ಅಲ್ಲವೇ ಅಲ್ಲ. ರಜನಿಕಾಂತ್ ಅವರು ಪ್ರತಿ ಚಿತ್ರಕ್ಕೆ ಹೊಸ ರೀತಿಯ ಪಾತ್ರವನ್ನು ಮಾಡಲು ಬಯಸುತ್ತಾರೆ. ಈ ವಿಚಾರದಲ್ಲಿ ಅವರು ಅನೇಕರಿಗೆ ಇಷ್ಟ ಆಗುತ್ತಾರೆ. ಈಗ ಅವರ ಮಾನವೀಯತೆ ಮೆರೆಯುವಂತ ವಿಡಿಯೋ ಒಂದು ವೈರಲ್ ಆಗಿದೆ. ಆ ಬಗ್ಗೆ ಇಲ್ಲಿದೆ ವಿವರ.

ರಜನಿಕಾಂತ್ ಅವರು ಶೂಟಿಂಗ್ ಮಾಡುವಾಗ ಯಾವ ರೀತಿಯಲ್ಲಿ ಇರುತ್ತಾರೆ ಎಂಬುದನ್ನು ತಿಳಿಸುವಂತಹ ವಿಡಿಯೋ ಇದಾಗಿದೆ. ಈ ವಿಡಿಯೋದಲ್ಲಿ ರಜನಿಕಾಂತ್ ಅವರು ಸಹ ಕಲಾವಿದನಿಗೆ ಹೊಡೆದ ಬಳಿಕ ಯಾವ ರೀತಿ ನಡೆದುಕೊಂಡರು ಎಂಬುದು ಇದೆ. ಇದು ‘ಜೈಲರ್’ ಸಿನಿಮಾ ಶೂಟ್ ಸಂದರ್ಭದ ವಿಡಿಯೋ.

ಇದನ್ನೂ ಓದಿ
ಶಿವರಾಜ್​ಕುಮಾರ್-ಗೀತಾ ಪ್ರೇಮ ನೋಡಿ ಆ ವ್ಯಕ್ತಿಗೆ ನಿಜಕ್ಕೂ ಶಾಕ್ ಆಗಿತ್ತು..
ರಾವಣನಾಗಿ ‘ರಾಮಾಯಣ’ ಆರಂಭಿಸುವುದಕ್ಕೂ ಮೊದಲು ಮಹತ್ವದ ಕೆಲಸ ಮಾಡಿದ ಯಶ್  
ಫ್ಯಾನ್ಸಿ ಹೆಸರಲ್ಲ.. ಮಗನಿಗೆ ಪೌರಾಣಿಕ ಪಾತ್ರದ ಹೆಸರಿಟ್ಟ ಪ್ರಣಿತಾ ಸುಭಾಷ್
ಪ್ರಿಯಾಂಕಾ ಪತಿ ನಿಕ್ ಜೋನಸ್​ನ ಭೇಟಿ ಮಾಡಿದ ಸಿತಾರಾ ಕುಟುಂಬ

ಈ ವಿಡಿಯೋದಲ್ಲಿ ರಜನಿಕಾಂತ್ ಅವರು ಸಹ ಕಲಾವಿದ ವಿನಾಯಕನ್ ಅವರ ಮೇಲೆ ಕಾಲಿನಿಂದ ಒದೆಯೋದು ಇದೆ. ಈ ರೀತಿ ಒದ್ದ ಬಳಿಕ ರಜನಿಕಾಂತ್ ಅವರು ತಪ್ಪಾಯಿತು ಎಂದು ನಮಸ್ಕರಿಸೋದು ಇದೆ. ಇದನ್ನು ಅವರು ಮಾಡುವ ಯಾವುದೇ ಅವಶ್ಯಕತೆ ಇರಲಿಲ್ಲ. ಆದಾಗ್ಯೂ ಇದನ್ನು ಮಾಡಿದ್ದಾರೆ ರಜನಿಕಾಂತ್. ಈ ವಿಡಿಯೋನ ಅನೇಕರು ವೈರಲ್ ಮಾಡಿದ್ದಾರೆ.

ಇನ್ನು ರಜನಿಕಾಂತ್ ಅವರು ಶೂಟ್​ನಲ್ಲಿ ಭಾಗಿ ಆಗುತ್ತಾರೆ ಎಂದರೆ ಅನೇಕರು ಭಾಗಿ ಆಗುತ್ತಾರೆ. ಅವರನ್ನು ನೋಡಲು ಫ್ಯಾನ್ಸ್ ಕಾಯುತ್ತಾರೆ. ಆದರೆ, ಅವರಿಗೆ ರಜನಿಕಾಂತ್ ಎಂದಿಗೂ ಬೇಸರ ಮಾಡಿದವರಲ್ಲ. ಅವರು ಶೂಟಿಂಗ್ ಪೂರ್ಣಗೊಳಿಸಿ ಹೋಗುವಾಗ ಎಲ್ಲರಿಗೂ ಕೈ ಮಾಡಿ ತೆರಳಿದ್ದಾರೆ. ಈ ಕಾರಣಕ್ಕೂ ಅವರು ಇಷ್ಟ ಆಗುತ್ತಾರೆ.

ಇದನ್ನೂ ಓದಿ: ಕೇರಳಕ್ಕೆ ಬಂದ ರಜನಿಕಾಂತ್: ಅಭಿಮಾನಿಗಳ ಸಂಭ್ರಮ ಹೇಗಿತ್ತು ನೋಡಿ 

ರಜನಿಕಾಂತ್ ಅವರು ‘ಜೈಲರ್’ ಬಳಿಕ ದೊಡ್ಡ ಮಟ್ಟದಲ್ಲಿ ಗೆಲುವು ಕಂಡಿಲ್ಲ. ಈಗ ಅವರ ನಟನೆಯ ‘ಕೂಲಿ’ ಸಿನಿಮಾ ರಿಲೀಸ್​ಗೆ ರೆಡಿ ಇದೆ. ಆಗಸ್ಟ್ 15ರ ಪ್ರಯುಕ್ತ ಚಿತ್ರ ರಿಲೀಸ್ ಆಗುತ್ತಿದೆ. ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಕಾರ್ಮಿಕರ ದಿನಾಚರಣೆ ಪ್ರಯುಕ್ರವೇ ಸಿನಿಮಾ ರಿಲೀಸ್ ಆಗಬೇಕಿತ್ತು. ಆದರೆ, ಕಾರಣಾಂತರಗಳಿಂದ ಸಿನಿಮಾ ರಿಲೀಸ್ ದಿನಾಂಕ ಮುಂದಕ್ಕೆ ಹೋಗಿದೆ. ಈ ಚಿತ್ರದ ಬಗ್ಗೆ ಅವರ ಅಭಿಮಾನಿಗಳು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ಚಿತ್ರದಲ್ಲಿ ಅವರ ಪಾತ್ರ ಏನು ಎಂಬ ಬಗ್ಗೆ ಅಭಿಮಾನಿಗಳಿಗೆ ಕುತೂಹಲ ಮೂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.