
ನಟ ರಜನಿಕಾಂತ್ (Rajinikanth) ಅವರು ಸೂಪರ್ ಸ್ಟಾರ್. ನೂರಾರು ಕೋಟಿ ರೂಪಾಯಿ ಆಸ್ತಿಯನ್ನು ಅವರು ಹೊಂದಿದ್ದಾರೆ. ಆದಾಗ್ಯೂ ಸರಳ ಜೀವನ ನಡೆಸಲು ಅವರು ಆದ್ಯತೆ ನೀಡುತ್ತಾರೆ. ಅವರ ತಲೆಯ ಮೇಲೆ ಕೂದಲು ಉದುರಿದೆ. ಆದರೆ, ಇತರ ಹೀರೋಗಳಂತೆ ತೆರೆ ಹಿಂದೆ ಅವರು ಟೋಪನ್ ಹಾಕುವುದಿಲ್ಲ. ಹೇಗಿದ್ದಾರೋ ಹಾಗೆಯೇ ಕಾಣಿಸಿಕೊಳ್ಳಲು ಇಷ್ಟಪಡುತ್ತಾರೆ. ಈಗ ಅವರ ಹೊಸ ಫೋಟೋ ಒಂದು ವೈರಲ್ ಆಗಿದೆ. ರಿಷಿಕೇಶಕ್ಕೆ ತೆರಳಿರೋ ಅವರು ಅಲ್ಲಿ, ಸರಳವಾಗಿ ರಸ್ತೆ ಬದಿಯಲ್ಲಿ ನಿಂತು ಎಲೆಯ ಪ್ಲೇಟ್ನಲ್ಲಿ ಊಟ ಸವಿಯುತ್ತಿದ್ದಾರೆ.
ರಜನಿಕಾಂತ್ ಅವರು ಪ್ರತಿ ಸಿನಿಮಾ ರಿಲೀಸ್ ಬಳಿಕ ಒಂದು ಆಧ್ಯಾತ್ಮಿಕ ಬ್ರೇಕ್ ಪಡೆಯುತ್ತಾರೆ. ರಿಷಿಕೇಶ ಹಾಗೂ ಇತರ ಪವಿತ್ರ ಸ್ಥಳಗಳಿಗೆ ತೆರಳಿ ಕೆಲ ದಿನ ಇದ್ದು ಬರುತ್ತಾರೆ. ಅವರ ನಟನೆಯ ‘ಕೂಲಿ’ ಸಿನಿಮಾ ಸೂಪರ್ ಹಿಟ್ ಆದ ಬಳಿಕ ರಜನಿಕಾಂತ್ ಅವರು ರಿಷಿಕೇಶಕ್ಕೆ ತೆರಳಿದ್ದಾರೆ. ಅಲ್ಲಿ ಅವರು ಸರಳ ಜೀವನ ನಡೆಸುತ್ತಿದ್ದಾರೆ.
இமயமலையில் தலைவர் @rajinikanth pic.twitter.com/AdiWqwS39C
— Sholinghur N Ravi (@SholinghurRavi) October 5, 2025
Superstar #Rajinikanth’s Himalayan Spiritual Trip !! pic.twitter.com/gs7B0vYvCS
— TrackTollywood (@TrackTwood) October 5, 2025
ಉತ್ತರಾಖಾಂಡದ ರಿಷಿಕೇಷದಲ್ಲಿರುವ ಸ್ವಾಮಿ ದಯಾನಂದ ಆಶ್ರಮಕ್ಕೆ ರಜನಿಕಾಂತ್ ಭೇಟಿ ನಿಡಿದ್ದರು. ಈ ವೇಳೆ ಅವರು ತಮ್ಮ ಆಧ್ಯತ್ಮ ಗುರುವಿಗೆ ನಮನ ಸಲ್ಲಿಸಿದರು. ಗಂಗಾ ನದಿಯ ಪಕ್ಕದಲ್ಲಿ ಕುಳಿತು ಧ್ಯಾನ ಮಾಡಿದ್ದಾರೆ. ಗಂಗಾ ಆರತಿಯನ್ನು ನೋಡಿ ಕಣ್ತುಂಬಿಕೊಂಡಿದ್ದಾರೆ. ರಿಷಿಕೇಶದ ಬಳಿಕ ರಜನಿಕಾಂತ್ ಅವರು ದ್ವಾರಹಾತ್ಗೆ ತೆರಳಿದ್ದಾರೆ. ದಾರಿ ಮಧ್ಯೆ ನಿಂತು ಅವರು ಊಟ ಸವಿದಿದ್ದಾರೆ. ಬಿಳಿ ಬಣ್ಣದ ಪಂಚೆ, ಬಿಳಿ ಬಣ್ಣದ ಶರ್ಟ್ ಹಾಕಿದ್ದಾರೆ. ಹೆಗಲ ಮೇಲೆ ಬಿಳಿ ಬಣ್ಣದ ಶಾಲಿದೆ.
ಇದನ್ನೂ ಓದಿ: ನಟ ರಜನಿಕಾಂತ್ ಮೂರ್ತಿಗೆ ಪೂಜೆ ಮಾಡಿ ನವರಾತ್ರಿ ಆಚರಿಸುತ್ತಿರುವ ಅಭಿಮಾನಿ
ರಜನಿಕಾಂತ್ ಅವರು ರಿಷಿಕೇಶಕ್ಕೆ ತೆರಳುತ್ತಿರುವುದು ಇದೇ ಮೊದಲೇನು ಅಲ್ಲ. ‘ಜೈಲರ್’ ಸಿನಿಮಾ ರಿಲೀಸ್ ಸಂದರ್ಭದಲ್ಲಿ ಅವರು ಈ ಭಾಗಕ್ಕೆ ತೆರಳಿ ಧ್ಯಾನ ಮಾಡಿ ಬಂದಿದ್ದರು. ಆ ಸಮಯದ ಫೋಟೋಗಳು ಹಾಗೂ ವಿಡಿಯೋಗಳು ವೈರಲ್ ಆಗಿ ಗಮನ ಸೆಳೆದಿದ್ದವು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 9:58 am, Mon, 6 October 25