Rakhi Sawant: ತನಗಿಂತ 6 ವರ್ಷ ಕಿರಿಯ ಹುಡುಗನ ಜತೆ ಪ್ರೀತಿಯಲ್ಲಿ ಬಿದ್ದ ರಾಖಿ; ಮೈಸೂರು ಮೂಲದ ಹುಡುಗನ ಬಗ್ಗೆ ನಟಿ ಹೇಳಿದ್ದೇನು?

ಬಾಲಿವುಡ್ ನಟಿ, ಡಾನ್ಸರ್ ರಾಖಿ ಸಾವಂತ್ ಮತ್ತೆ ಪ್ರೀತಿಯಲ್ಲಿ ಬಿದ್ದಿದ್ದಾರೆ. ಹುಡುಗ ಕರ್ನಾಟಕದ ಮೈಸೂರು ಮೂಲದವರು ಎನ್ನುವುದು ವಿಶೇಷ. ತಮ್ಮ ಗೆಳೆಯನನ್ನು ರಾಖಿಯೇ ಪರಿಚಯ ಮಾಡಿಸಿದ್ದು, ಫೋಟೋಗಳಿಗೆ ಪೋಸ್ ನೀಡಿದ್ದಾರೆ. ಇತ್ತೀಚೆಗೆ ರಾಖಿ ಮಾತನಾಡುತ್ತಾ, ಹುಡುಗನ ಮನೆಯವರಿಗೆ ತಮ್ಮ ದಿರಿಸಿನ ಶೈಲಿ ಇಷ್ಟವಾಗುವುದಿಲ್ಲ ಬೇಸರ ವ್ಯಕ್ತಪಡಿಸಿದ್ದಾರೆ.

Rakhi Sawant: ತನಗಿಂತ 6 ವರ್ಷ ಕಿರಿಯ ಹುಡುಗನ ಜತೆ ಪ್ರೀತಿಯಲ್ಲಿ ಬಿದ್ದ ರಾಖಿ; ಮೈಸೂರು ಮೂಲದ ಹುಡುಗನ ಬಗ್ಗೆ ನಟಿ ಹೇಳಿದ್ದೇನು?
ಆದಿಲ್ ದುರ್ರನಿ- ರಾಖಿ ಸಾವಂತ್
Updated By: shivaprasad.hs

Updated on: May 18, 2022 | 1:51 PM

ಬಾಲಿವುಡ್ ನಟಿ, ಡಾನ್ಸರ್ ರಾಖಿ ಸಾವಂತ್ (Rakhi Sawant) ಮತ್ತೆ ಪ್ರೀತಿಯಲ್ಲಿ ಬಿದ್ದಿದ್ದಾರೆ. ಹುಡುಗ ಕರ್ನಾಟಕದ ಮೈಸೂರು ಮೂಲದವರು ಎನ್ನುವುದು ವಿಶೇಷ. ತಮ್ಮ ಗೆಳೆಯನನ್ನು ರಾಖಿಯೇ ಪರಿಚಯ ಮಾಡಿಸಿದ್ದು, ಫೋಟೋಗಳಿಗೆ ಪೋಸ್ ನೀಡಿದ್ದಾರೆ. ಬಿಗ್​ಬಾಸ್ ಮಾಜಿ ಸ್ಪರ್ಧಿಯಾಗಿರುವ ರಾಖಿ ಸಾವಂತ್, ಆ ಸ್ಪರ್ಧೆಗೆ ತಮ್ಮ ಮಾಜಿ ಪತಿ ರಿತೇಶ್ ಜತೆ ತೆರಳಿದ್ದರು. ಆದರೆ ಆ ಸಂಬಂಧ ದೀರ್ಘ ಕಾಲ ಬಾಳಲಿಲ್ಲ. ಇದೀಗ ರಿತೇಶ್​ ಮತ್ತು ರಾಖಿ ದೂರವಾಗಿದ್ದಾರೆ. ಪ್ರತಿಯೊಬ್ಬರಿಗೂ ಪ್ರೀತಿಸಲ್ಪಡುವ ಅರ್ಹತೆಯಿದೆ ಎಂದಿರುವ ರಾಖಿ ಇದೀಗ ಆದಿಲ್ ಖಾನ್ ದುರ್ರನಿ (Adil Khan Durrani) ಜತೆ ಸುತ್ತಾಡುತ್ತಿದ್ದಾರೆ. ರಾಖಿ ಪಾಪರಾಜಿಗಳಿಗೆ ನೀಡಿದ ವಿಡಿಯೋ ಸಂದರ್ಶನದಲ್ಲಿ ಗೆಳೆಯ ಆದಿಲ್ ಅವರು ಕಾರುಗಳ ಕ್ಷೇತ್ರದ ಉದ್ಯಮಿ ಎಂದು ಪರಿಚಯ ಮಾಡಿಸಿದ್ದರು. ಆದಿಲ್ ಮೈಸೂರಿನ ‘ಯೂಸ್ಡ್​​ ಕಾರ್ಸ್​​’ ಎಂಬ ಸಂಸ್ಥೆಯ ಮ್ಯಾನೇಜಿಂಗ್ ಡೈರೆಕ್ಟರ್​ ಆಗಿದ್ದಾರೆ ಎಂದು ಹೇಳಲಾಗಿದೆ.

ರಾಖಿ ಆದಿಲ್ ಜತೆ ಕಾಣಿಸಿಕೊಂಡ ವಿಡಿಯೋದಲ್ಲಿ ಮುಂದಿನ ಬಿಗ್​ಬಾಸ್ ಸೀಸನ್​ನಲ್ಲಿ ತಾವೀರ್ವರೂ ಜತೆಯಾಗಿ ಸ್ಪರ್ಧೆಗೆ ತೆರಳುವುದಾಗಿ ಹೇಳಿಕೊಂಡಿದ್ದಾರೆ. ಆ ವಿಡಿಯೋದಲ್ಲಿ ಗೆಳೆಯನಿಗೆ ಪ್ರೀತಿಯ ಚುಂಬನ ನೀಡುವುದು ಕೂಡ ಸೆರೆಯಾಗಿದೆ. ಗೆಳೆಯ ಕಾರು ನೀಡಿದ್ದನ್ನು ಕೂಡ ರಾಖಿ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ
ಶ್ವೇತವರ್ಣದ ಉಡುಗೆ ಧರಿಸಿ ಅಭಿಮಾನಿಗಳನ್ನು ಸೆಳೆದುಕೊಂಡ ‘ಕೆಜಿಎಫ್​ 2’ ನಟಿ ರವೀನಾ ಟಂಡನ್​
ಕಾನ್ ಚಿತ್ರೋತ್ಸವದಲ್ಲಿ ಮಿಂಚಿದ ತಮನ್ನಾ, ಊರ್ವಶಿ ರೌಟೇಲಾ; ಇಲ್ಲಿವೆ ಕಲರ್​ಫುಲ್​ ಫೋಟೋಗಳು
‘ಗಂಡ ನನ್ನನ್ನು ಉಪಯೋಗಿಸಿಕೊಂಡ’; ಕಣ್ಣೀರು ಹಾಕಿ ಎಲ್ಲರ ಎದುರು ದುಃಖ ತೋಡಿಕೊಂಡ ರಾಖಿ ಸಾವಂತ್​
Rakhi Sawant: ರಾಖಿ ಸಾವಂತ್ ನಿಗೂಢ ದಾಂಪತ್ಯಕ್ಕೆ ತೆರೆ?; ಬಿಗ್ ಬಾಸ್​ನಲ್ಲಿ ಅಚ್ಚರಿಯ ಬೆಳವಣಿಗೆ

ರಾಖಿ- ಆದಿಲ್ ವಿಡಿಯೋ ಇಲ್ಲಿದೆ:

ಆದಿಲ್ 6 ವರ್ಷ ಚಿಕ್ಕವರು, ಅವರ ಮನೆಯವರು ತನ್ನ ದಿರಿಸನ್ನು ಇಷ್ಟಪಡುವುದಿಲ್ಲ ಎಂದ ರಾಖಿ:

ಇದೀಗ ತಮ್ಮ ಹೊಸ ಸಂಬಂಧದ ಬಗ್ಗೆ ರಾಖಿ ಸಾವಂತ್ ಮಾತನಾಡಿದ್ದಾರೆ. ತಮಗಿಂತ 6 ವರ್ಷ ಚಿಕ್ಕವರಾದ ಆದಿಲ್ ಬಗ್ಗೆ ಅವರು ಮಾತನಾಡುತ್ತಾ, ನಿಕ್ ಜೋನಾಸ್- ಪ್ರಿಯಾಂಕಾ ಚೋಪ್ರಾ, ಮಲೈಕಾ ಅರೋರಾ- ಅರ್ಜುನ್ ಕಪೂರ್ ಅವರ ಸಂಬಂಧಗಳನ್ನು ಆದಿಲ್ ಉದಾಹರಿಸಿದ್ದನ್ನು ಹೇಳಿಕೊಂಡಿದ್ದಾರೆ. ಇಟೈಮ್ಸ್​​ನೊಂದಿಗೆ ಮಾತನಾಡಿರುವ ನಟಿ, ‘‘ರಿತೇಶ್ ಜತೆಗೆ ಬ್ರೇಕಪ್ ಆದ ನಂತರ ಬಹಳ ದುಃಖದಲ್ಲಿದ್ದೆ. ಆಗ ಆದಿಲ್ ಪರಿಚಯವಾಯಿತು. ಪರಿಚಯವಾದ ತಿಂಗಳೊಳಗೆ ಆತ ಪ್ರಪೋಸ್ ಮಾಡಿದ. ಅವರಿಗಿಂತ ನಾನು 6 ವರ್ಷ ದೊಡ್ಡವಳು. ಮಲೈಕಾ-ಅರ್ಜುನ್, ನಿಕ್- ಪ್ರಿಯಾಂಕಾರ ಉದಾಹರಣೆಗಳನ್ನು ಹೇಳಿ ಆತ ನನ್ನನ್ನು ಕನ್ವಿನ್ಸ್ ಮಾಡಿದ’’ ಎಂದಿದ್ದಾರೆ.

ಇದನ್ನೂ ಓದಿ: ನೀರಜ್ ಚೋಪ್ರಾರಂತೆ ಜಾವೆಲಿನ್ ಎಸೆಯಲು ಪ್ರಯತ್ನಿಸಿ ಸುದ್ದಿಯಲ್ಲಿದ್ದಾರೆ ರಾಖಿ ಸಾವಂತ್; ವಿಡಿಯೊ ನೋಡಿ

ಆದಿಲ್ ಅವರ ಕುಟುಂಬ ತನ್ನ ಡ್ರೆಸ್ಸಿಂಗ್ ಸ್ಟೈಲ್ ಇಷ್ಟಪಡುತ್ತಿಲ್ಲ ಎಂದು ಬೇಸರ ಹೊರಹಾಕಿರುವ ರಾಖಿ ಸಾವಂತ್, ‘‘ನಾನು ಟಿವಿ, ಸಿನಿಮಾಗಳಲ್ಲಿ ಕಾಣಿಸಿಕೊಳ್ಳುವ ಗ್ಲಾಮರಸ್ ಪರ್ಸನ್. ಆದರೆ ಅವರ ಮನೆಯಲ್ಲಿ ನನ್ನನ್ನು ಇಷ್ಟಪಡುತ್ತಿಲ್ಲ. ನನ್ನ ದಿರಿಸಿನ ಶೈಲಿಯನ್ನು ಬೇಕಾದರೆ ಆದಿಲ್ ಕುಟುಂಬಕ್ಕಾಗಿ ಬದಲಾಯಿಸಿಕೊಳ್ಳಬಲ್ಲೆ. ಯಾರೂ ನನಗೆ ಬಲವಂತ ಮಾಡುತ್ತಿಲ್ಲ. ಎಲ್ಲಾ ಸರಿಯಾಗಬಹುದೆಂಬ ನಂಬಿಕೆ ಇದೆ’’ ಎಂದಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ