ಪಟಾಕಿ ಕಿಚನ್ ಆರಂಭಿಸಿದ ರಕ್ಷಿತಾ ಶೆಟ್ಟಿ; ಏನಿದರ ವಿಶೇಷ?

ರಕ್ಷಿತಾ ಶೆಟ್ಟಿ ಅವರು 'ಪಟಾಕಿ ಕಿಚನ್' ಪ್ರಾರಂಭಿಸಿದ್ದಾರೆ. ಬಿಗ್ ಬಾಸ್ ಖ್ಯಾತಿಯ ರಕ್ಷಿತಾ, ಯೂಟ್ಯೂಬರ್ ಆಗಿ ಜನಪ್ರಿಯರಾಗಿದ್ದರು. ಹಳ್ಳಿಯಲ್ಲಿ ಆರಂಭವಾಗಿರುವ ಈ ಕಿಚನ್‌ಗೆ ಬಿಗ್ ಬಾಸ್ ಗೆಳೆಯ ರಘು ಚಾಲನೆ ನೀಡಿದ್ದಾರೆ. ಮೊದಲ ದಿನ ರಘು ಏಡಿ ಘೀ ರೋಸ್ಟ್ ತಯಾರಿಸಿದ್ದಾರೆ. ಇದು ರಕ್ಷಿತಾ ಅವರ ಅಡುಗೆ ಕಾಯಕಕ್ಕೆ ಹೊಸ ಆಯಾಮ ನೀಡಿದೆ.

ಪಟಾಕಿ ಕಿಚನ್ ಆರಂಭಿಸಿದ ರಕ್ಷಿತಾ ಶೆಟ್ಟಿ; ಏನಿದರ ವಿಶೇಷ?
ರಘು-ರಕ್ಷಿತಾ

Updated on: Apr 14, 2026 | 3:02 PM

ರಕ್ಷಿತಾ ಶೆಟ್ಟಿ (Rakshitha Shetty) ಅವರು ಬಿಗ್ ಬಾಸ್ ಮೂಲಕ ಸಾಕಷ್ಟು ಜನಪ್ರಿಯತೆ ಗಳಿಸಿದರು. ಬಿಗ್ ಬಾಸ್ ಮನೆಯಲ್ಲಿ ಅವರಿಗೆ ರಘು ಜೊತೆ ಒಳ್ಳೆಯ ಬಾಂಧವ್ಯ ಬೆಳೆಯಿತು. ಈ ಬಾಂಧವ್ಯ ಬಿಗ್ ಬಾಸ್ ಮುಗಿದ ಬಳಿಕವೂ ಮುಂದುವರಿದಿದೆ. ಈಗ ರಕ್ಷಿತಾ ಶೆಟ್ಟಿ ಅವರು ಹೊಸ ಹೆಜ್ಜೆ ಇಟ್ಟಿದ್ದಾರೆ. ಅವರು ‘ಪಟಾಕಿ ಕಿಚನ್’ ಆರಂಭಿಸಿದ್ದಾರೆ. ಹಳ್ಳಿಯಲ್ಲಿ ಈ ಕಿಚನ್ ನಿರ್ಮಿಸಲಾಗಿದ್ದು, ಇದರಲ್ಲಿ ರಕ್ಷಿತಾ ಶೆಟ್ಟಿ ಅವರು ಅಡುಗೆ ಮಾಡಲಿದ್ದಾರೆ.

ರಕ್ಷಿತಾ ಶೆಟ್ಟಿ ಅವರು ಮೂಲತಃ ಯೂಟ್ಯೂಬರ್. ಅಡುಗೆ ವಿಡಿಯೋ ಮಾಡುತ್ತಿದ್ದ ಅವರು, ಭಿನ್ನ ಮಾತಿನ ಶೈಲಿಯಲ್ಲಿ ಗಮನ ಸೆಳೆದರು. ಅವರು ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಹೆಸರು ಮಾಡಿದರು. ಈ ಕಾರಣಕ್ಕೆ ಅವರಿಗೆ ಬಿಗ್ ಬಾಸ್​​ನಲ್ಲಿ ಅವಕಾಶ ಸಿಕ್ಕಿತು. ಅವರು ಈ ವೇದಿಕೆಯನ್ನು ಸರಿಯಾದ ರೀತಿಯಲ್ಲಿ ಬಳಕೆ ಮಾಡಿಕೊಂಡರು. ರಕ್ಷಿತಾ ಶೆಟ್ಟಿ ಅವರು ಬಿಗ್ ಬಾಸ್ ರನ್ನರ್ ಅಪ್ ಕೂಡ ಆದರು. ಈಗ ತಮ್ಮ ಯೂಟ್ಯೂಬ್ ಕಾಯಕ ಮುಂದುವರಿಸಿದ್ದಾರೆ.

ಇದನ್ನೂ ಓದಿ: ‘ದೊಡ್ಮನೆ ಹಬ್ಬ’ದಲ್ಲಿ ರಕ್ಷಿತಾ ಶೆಟ್ಟಿ ಕಣ್ಣೀರು; ತಬ್ಬಿ ಸಂತೈಸಿದ ರಘು-ಗಿಲ್ಲಿ

ಬಿಗ್ ಬಾಸ್ ಮನೆಯಲ್ಲಿದ್ದಾಗ ಪಟಾಕಿ ರಕ್ಷಿತಾ ಎಂಬ ಬಿರುದು ಅವರಿಗೆ ಸಿಕ್ಕಿತ್ತು. ಇದನ್ನು ಮುಂದುವರಿಸಿಕೊಂಡು ಹೋಗಲು ಅವರು ನಿರ್ಧರಿಸಿದ್ದಾರೆ. ಈ ಕಾರಣಕ್ಕೆ ಅವರು ತಮ್ಮ ಕಿಚನ್​​ಗೆ ‘ಪಟಾಕಿ ಕಿಚನ್’ ಎಂದು ನಾಮಕರಣ ಮಾಡಿದ್ದರು. ಇದನ್ನು ಉದ್ಘಾಟಿಸಲು ರಘು ಅವರು ಬೆಂಗಳೂರಿನಿಂದ ಮಂಗಳೂರಿಗೆ ತೆರಳಿದ್ದರು. ರಿಬ್ಬನ್ ಕಟ್ ಮಾಡಿ ಕಿಚನ್ ಉದ್ಘಾಟನೆ ಮಾಡಲಾಗಿದೆ.
YouTube video player

ಮಣ್ಣಿನ ಹೂಜಿಯಲ್ಲಿ ನೀರನ್ನು ಇಡಲಾಗಿದೆ. ಅಲ್ಲಿನ ಗೋಡೆಯ ಮೇಲೆ ರಕ್ಷಿತಾ ಫೋಟೋ ಇದ್ದು, ಅದಕ್ಕೆ ಹಲವು ಕೈಗಳಿವೆ. ಪಟಾಕಿ ಕಿಚನ್ ಅಲ್ಲಿ ಮೊದಲ ದಿನ ಏಡಿ ಘೀ ರೋಸ್ಟ್​​ನ ರಘು ಮಾಡಿದ್ದಾರೆ. ರಘು ಅವರು ಅಡುಗೆ ಮಾಡುವುದನ್ನು ತುಂಬಾನೇ ಇಷ್ಟಪಡುತ್ತಾರೆ. ಈ ಕಾರಣಕ್ಕೆ ‘ಪಟಾಕಿ ಕಿಚನ್’ ಅಲ್ಲಿ ಮೊದಲ ದಿನ ರಘು ಅಡುಗೆ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us