AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕರಿಬಸೊಪ್ಪು ಬಳಿಕ ವರ್ತೂರ್ ಸಂತೋಷ್​​ಗೆ ಹೊಸ ಹೆಸರಿಟ್ಟ ರಕ್ಷಿತಾ ಶೆಟ್ಟಿ

ರಕ್ಷಿತಾ ಶೆಟ್ಟಿ ಅವರು ಬಿಗ್ ಬಾಸ್ ಮನೆಯ ಸ್ಪರ್ಧಿಗಳ ಹೆಸರುಗಳನ್ನು ತಪ್ಪಾಗಿ ಹೇಳುವ ಮೂಲಕ ಗಮನ ಸೆಳೆದಿದ್ದಾರೆ. ಕರಿಬಸಯ್ಯ ಅವರನ್ನು 'ಕರಿಬಸೊಪ್ಪು' ಎಂದು ಕರೆದ ನಂತರ, ಈಗ ವರ್ತೂರ್ ಸಂತೋಷ್ ಅವರನ್ನು 'ವಂತೂರು ಸಂತೂರು' ಎಂದು ಕರೆದಿದ್ದಾರೆ. ಈ ವಿಡಿಯೋಗಳು ವೈರಲ್ ಆಗಿದ್ದು, ದೊಡ್ಮನೆ ಹಬ್ಬ ಕಾರ್ಯಕ್ರಮದಲ್ಲಿ ರಕ್ಷಿತಾ ಶೆಟ್ಟಿ ಭಾವುಕರಾದ ಘಟನೆಯೂ ಸದ್ದು ಮಾಡಿದೆ.

ಕರಿಬಸೊಪ್ಪು ಬಳಿಕ ವರ್ತೂರ್ ಸಂತೋಷ್​​ಗೆ ಹೊಸ ಹೆಸರಿಟ್ಟ ರಕ್ಷಿತಾ ಶೆಟ್ಟಿ
ರಕ್ಷಿತಾ-ಸಂತೋಷ್
ರಾಜೇಶ್ ದುಗ್ಗುಮನೆ
|

Updated on: Feb 16, 2026 | 8:55 AM

Share

ರಕ್ಷಿತಾ ಶೆಟ್ಟಿ ಅವರು ಮೂಲತಃ ಮಂಗಳೂರಿನವರಾದರೂ ಅವರು ಹುಟ್ಟಿ ಬೆಳೆದಿದ್ದು ಮುಂಬೈನಲ್ಲಿ. ಈ ಕಾರಣದಿಂದ ಅವರಿಗೆ ಕನ್ನಡ ಸ್ಪಷ್ಟವಾಗಿ ಮಾತನಾಡೋಕೆ ಬರೋದಿಲ್ಲ. ಅವರು ಎಗ್ಸೈಟ್ ಆದಾಗ, ನರ್ವಸ್ ಆದಾಗ ಯಾರ ಹೆಸರನ್ನು ಇನ್ನು ಹೇಗೋ ಹೇಳುತ್ತಾರೆ. ಇದಕ್ಕೆ ಹೊಸ ಉದಾಹರಣೆ ಸಿಕ್ಕಿದೆ. ಈ ಮೊದಲು ಕರಿಬಸಯ್ಯ ಹೆಸರನ್ನು ಅವರು ಬದಲಾಯಿಸಿದ್ದರು. ಈಗ ವರ್ತೂರು ಸಂತೋಷ್ (Varthur Santosh) ಸರದಿ.

ಬಿಗ್ ಬಾಸ್ ಮನೆಯಲ್ಲಿರುವಾಗ ರಕ್ಷಿತಾ ಶೆಟ್ಟಿ ಅವರ ನಿಜವಾದ ವ್ಯಕ್ತಿತ್ವ ಜನರಿಗೆ ಗೊತ್ತಾಯಿತು. ಅವರು ಮೊದಲು ಸಾಕಷ್ಟು ಟ್ರೋಲ್ ಆದ ಉದಾಹರಣೆ ಇದೆ. ಆದರೆ, ಬಿಗ್ ಬಾಸ್​​ಗೆ ತೆರಳಿದ ಬಳಿಕ ಅನೇಕರು ಅವರನ್ನು ಇಷ್ಟಪಟ್ಟರು. ಅವರು ಬಿಗ್ ಬಾಸ್​​ನಿಂದ ಹೊರ ಬಂದ ಬಳಿಕ ಸಂದರ್ಶನ ಒಂದರಲ್ಲಿ ಮಾತನಾಡುವಾಗ, ‘ಕರಿಬಸಯ್ಯ’ ಎನ್ನಲು ‘ಕರಿಬಸೊಪ್ಪು’ ಎಂದು ಕರೆದಿದ್ದರು.

ಕರಿಬಸಯ್ಯ ಅವರು ಕರಿಬಸೊಪ್ಪು ಎಂದೇ ಫೇಮಸ್ ಆದರು. ‘ನಾನು ಮೊದಲು ಇಷ್ಟು ಜನಪ್ರಿಯತೆ ಪಡೆದಿದ್ದೆನೋ ಇಲ್ಲವೋ. ಆದರೆ, ನೀನು ಕರಿಬಸೊಪ್ಪು ಎಂದ ಬಳಿಕ ನನಗೆ ಜನಪ್ರಿಯತೆ ಸಿಕ್ಕಿದೆ’ ಎಂದು ಕರಿಬಸಯ್ಯ ಅವರು ರಕ್ಷಿತಾ ಶೆಟ್ಟಿ ಬಳಿ ಹೇಳಿದ್ದರು. ಈಗ ಸಂದರ್ಶನದಲ್ಲಿ ಮತ್ತೊಬ್ಬರ ಹೆಸರನ್ನು ರಕ್ಷಿತಾ ಶೆಟ್ಟಿ ತಪ್ಪಾಗಿ ಹೇಳಿದ್ದಾರೆ.

ಇದನ್ನೂ ಓದಿ: ತನಿಷಾ ನಿರ್ಮಾಣದ ‘ಕೋಣ’ ಚಿತ್ರದಲ್ಲಿ ವರ್ತೂರು ಸಂತೋಷ್ ನಟಿಸಿಲ್ಲ: ಇಲ್ಲಿದೆ ಅಸಲಿ ಕಾರಣ

‘ಬಿಗ್ ಬಾಸ್’ಗೆ ಕಾಲಿಟ್ಟಿದ್ದ ವರ್ತೂರು ಸಂತೋಷ್ ಸಾಕಷ್ಟು ಜನಪ್ರಿಯತೆ ಪಡೆದರು. ಅವರ ಹೆಸರನ್ನು ‘ವಂತೂರು ಸಂತೂರು’ ಎಂದು ರಕ್ಷಿತಾ ಶೆಟ್ಟಿ ಕರೆದಿದ್ದಾರೆ. ಈ ವಿಡಿಯೋನ ಟ್ರೋಲ್ ಮಾಡಲಾಗುತ್ತಾ ಇದೆ. ಬಿಗ್ ಬಾಸ್ ಮನೆಯ ಸ್ಪರ್ಧಿಗಳನ್ನು ಇಟ್ಟುಕೊಂಡು ‘ದೊಡ್ಮನೆ ಹಬ್ಬ’ ಕಾರ್ಯಕ್ರಮ ಮಾಡಲಾಯಿತು. ಈ ಕಾರ್ಯಕ್ರದಲ್ಲಿ ರಕ್ಷಿತಾ ಶೆಟ್ಟಿ ಕೂಡ ಇದ್ದರು. ಅವರು ಬಿಗ್ ಬಾಸ್ ಮನೆಯಲ್ಲಿರುವ ದಿನಗಳನ್ನು ನೆನೆದು ಭಾವುಕರಾದರು. ಈ ವಿಡಿಯೋ ವೈರಲ್ ಆಗಿ ಗಮನ ಸೆಳೆಯಿತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.