ಟೀಕೆ ಮಾಡಿದವರಿಂದಲೇ ಮೆಚ್ಚುಗೆ ಪಡೆದ ರಾಮ್ ಚರಣ್; ಇಲ್ಲಿದೆ ಅವರ ಜರ್ನಿ
ನಟನಾಗಿ ಮಾತ್ರವಲ್ಲದೆ ಅತ್ಯುತ್ತಮ ಡ್ಯಾನ್ಸರ್ ಆಗಿ ಅವರು ಗುರುತಿಸಿಕೊಂಡಿದ್ದಾರೆ. ಆಸ್ಕರ್ ಗೆದ್ದ ‘ನಾಟು ನಾಟು..’ ಹಾಡು ಇದಕ್ಕೆ ಸಾಕ್ಷಿ. ಕಂಟೆಂಟ್ ಸ್ಟ್ರಾಂಗ್ ಇದ್ದರೆ ಎಂತಹ ಪಾತ್ರವನ್ನೂ ಮಾಡಬಲ್ಲೆ ಎಂಬುದನ್ನು ‘ರಂಗಸ್ಥಲಂ’ ಮೂಲಕ ಅವರು ಸಾಬೀತು ಮಾಡಿದ್ದಾರೆ.
ಮೆಗಾಸ್ಟಾರ್ ಚಿರಂಜೀವಿ (Chiranjeevi) ಅವರ ಮಗನಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಹೀರೋ ರಾಮ್ ಚರಣ್ ಈಗ ಗ್ಲೋಬಲ್ ಸ್ಟಾರ್ ಆಗಿದ್ದಾರೆ. ವಿಶಿಷ್ಟ ಕಥೆಗಳನ್ನು ಆಯ್ಕೆ ಮಾಡಿಕೊಳ್ಳುತ್ತಲೇ ತಮ್ಮ ಉತ್ತಮ ನಟನೆಯಿಂದ ಜಗತ್ತಿನಾದ್ಯಂತ ಸಿನಿಪ್ರಿಯರ ಮಂತ್ರಮುಗ್ಧಗೊಳಿಸಿದ್ದಾರೆ. ಸ್ಟಾರ್ ಕಿಡ್ ಎನ್ನುವ ಹಣೆಪಟ್ಟಿ ಹೊತ್ತು ಚಿತ್ರರಂಗಕ್ಕೆ ಕಾಲಿಟ್ಟರೂ ತಮ್ಮ ಅಭಿನಯದಿಂದ ಎಲ್ಲರ ಮೆಚ್ಚುಗೆ ಪಡೆದರು. ಸ್ಟಾರ್ ಕಿಡ್ ಎಂದು ಅವರು ಅನೇಕರಿಂದ ಟೀಕೆ ಎದುರಿಸಿದ್ದೂ ಇದೆ. ಆ ಬಳಿಕ ತಮ್ಮ ನಟನೆಯಿಂದ ಟೀಕೆ ಮಾಡುವವರ ಬಾಯಿ ಮುಚ್ಚಿಸಿದ್ದಾರೆ.
2007ರ ‘ಚಿರುತಾ’ ಚಿತ್ರದ ಮೂಲಕ ಹೀರೋ ಆಗಿ ಚಿತ್ರರಂಗಕ್ಕೆ ಕಾಲಿಟ್ಟ ರಾಮ್ ಚರಣ್ ನಂತರ ಹಂತ ಹಂತವಾಗಿ ಬೆಳೆದು ಮೆಗಾ ಪವರ್ ಸ್ಟಾರ್ ಆದರು. ಚಿತ್ರರಂಗದ ಪಯಣದಲ್ಲಿ ಅವರು ಎದುರಿಸಿದ ಟೀಕೆಗಳು ಹಲವು. ಇವನ್ನು ಅವರು ಮೆಟ್ಟಿ ನಿಂತರು. ಇನ್ನೊಂದೆಡೆ ಆಸ್ಕರ್ ವೇದಿಕೆಯ ಮೇಲೆ ಕಾಲಿಟ್ಟು ಸೋಲುಗಳ ನಡುವೆಯೂ ಹಿಂದೆ ಸರಿಯದೆ ನಟಿಸಬಲ್ಲೆ ಎಂಬುದನ್ನು ಅವರು ಸಾಬೀತುಪಡಿಸಿದರು. ಚಿರಂಜೀವಿ, ಪವನ್ ಕಲ್ಯಾಣ್ ಬಳಿಕ ಇಂದಿನ ಪೀಳಿಗೆಗೆ ರಾಮ್ ಚರಣ್ ಮೇಲೆ ಕ್ರೇಜ್ ಹೆಚ್ಚಿದೆ. ಚರಣ್ ಸಿನಿಮಾಗಳಿಗಾಗಿ ಕಾತರದಿಂದ ಕಾಯುವ ಅಭಿಮಾನಿಗಳಿದ್ದಾರೆ.
ನಟನಾಗಿ ಮಾತ್ರವಲ್ಲದೆ ಅತ್ಯುತ್ತಮ ಡ್ಯಾನ್ಸರ್ ಆಗಿ ಅವರು ಗುರುತಿಸಿಕೊಂಡಿದ್ದಾರೆ. ಆಸ್ಕರ್ ಗೆದ್ದ ‘ನಾಟು ನಾಟು..’ ಹಾಡು ಇದಕ್ಕೆ ಸಾಕ್ಷಿ. ಕಂಟೆಂಟ್ ಸ್ಟ್ರಾಂಗ್ ಇದ್ದರೆ ಎಂತಹ ಪಾತ್ರವನ್ನೂ ಮಾಡಬಲ್ಲೆ ಎಂಬುದನ್ನು ‘ರಂಗಸ್ಥಲಂ’ ಮೂಲಕ ಅವರು ಸಾಬೀತು ಮಾಡಿದ್ದಾರೆ. ಹಲವು ಸೂಪರ್ ಹಿಟ್ ಚಿತ್ರಗಳನ್ನು ಅವರು ನೀಡಿದ್ದಾರೆ. ಚರಣ್ ಈಗಾಗಲೇ ಹಲವು ವಿಭಿನ್ನ ಪಾತ್ರಗಳಲ್ಲಿ ನಟಿಸಿ ಭೇಷ್ ಎನಿಸಿಕೊಂಡಿದ್ದಾರೆ. ನಟನಾಗಿ ಚಿರಂಜೀವಿಯ ಪರಂಪರೆಯನ್ನು ರಾಮ್ ಚರಣ್ ಮುಂದುವರೆಸುತ್ತಿದ್ದಾರೆ.
‘ಆರ್‌ಆರ್‌ಆರ್’ ಚಿತ್ರದ ಮೂಲಕ ವಿಶ್ವದಾದ್ಯಂತ ಗುರುತಿಸಿಕೊಂಡಿದ್ದ ರಾಮ್ ಚರಣ್. ಈಗ ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಅವರು ನಟಿಸುತ್ತಿರುವ ಗೇಮ್ ಚೇಂಜರ್ ಚಿತ್ರಕ್ಕಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಶಂಕರ್ ನಿರ್ದೇಶನದ, ಚರಣ್ ಅಭಿನಯದ ಈ ಚಿತ್ರ ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಈ ಚಿತ್ರದ ಹಾಡು ಗಮನ ಸೆಳೆದಿದೆ.
ಇದನ್ನೂ ಓದಿ: ರಾಮ್ ಚರಣ್ ಬರ್ತ್ಡೇಗೆ ‘ಗೇಮ್ ಚೇಂಜರ್’ ಸಾಂಗ್ ರಿಲೀಸ್; ಗಮನ ಸೆಳೆದ ಕಾಂಬಿನೇಷನ್
‘ಉಪ್ಪೇನ’ ಖ್ಯಾತಿಯ ನಿರ್ದೇಶಕ ಬುಚ್ಚಿಬಾಬು ಅವರ ನಿರ್ದೇಶನದಲ್ಲಿ ‘ಆರ್‌ಸಿ 16’ ಸಿನಿಮಾ ಬರಲಿದೆ. ಇತ್ತೀಚೆಗೆ ಈ ಚಿತ್ರದ ಪೂಜೆ ನಡೆದಿದೆ. ಇದರಲ್ಲಿ ಜಾನ್ವಿ ಕಪೂರ್ ನಟಿಸುತ್ತಿದ್ದಾರೆ. ನಿರ್ದೇಶಕ ಸುಕುಮಾರ್ ನಿರ್ದೇಶನದಲ್ಲಿ ಚರಣ್ ಮತ್ತೊಂದು ಸಿನಿಮಾ ಮಾಡಲಿದ್ದಾರೆ. ಈ ಚಿತ್ರದ ವಿವರಗಳನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು. ಇಂದು ಜಾಗತಿಕ ಸ್ಟಾರ್ ರಾಮ್ ಚರಣ್ ಹುಟ್ಟುಹಬ್ಬ. ಈ ಸಂದರ್ಭದಲ್ಲಿ ಅವರ ಅಭಿಮಾನಿಗಳು ಹಾಗೂ ಚಿತ್ರರಂಗದ ಗಣ್ಯರಿಂದ ಹುಟ್ಟುಹಬ್ಬದ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ರಾಮ್ ಚರಣ್ ಸಾಮಾಜಿಕ ಜಾಲತಾಣಗಳಲ್ಲಿ ಅಪರೂಪದ ಫೋಟೋಗಳು ಮತ್ತು ವಿಡಿಯೋಗಳನ್ನು ಹಂಚಿಕೊಂಡು ಹುಟ್ಟುಹಬ್ಬದ ಶುಭಾಶಯ ಮಾಡುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ