RRR: ‘ಎತ್ತುವ ಜಂಡಾ’ ಹಾಡಿನ ಮೂಲಕ ಮತ್ತೆ ಅಬ್ಬರಿಸಲು ಸಜ್ಜಾದ ‘ಆರ್​ಆರ್​ಆರ್’​ ಸಿನಿಮಾ

| Updated By: ಮದನ್​ ಕುಮಾರ್​

Updated on: Mar 11, 2022 | 9:11 AM

‘ಆರ್​ಆರ್​ಆರ್​’ ಚಿತ್ರದಿಂದ ಹೊಸ ಹಾಡು ಬಿಡುಗಡೆ ಆಗುತ್ತಿದೆ. ‘ಎತ್ತುವ ಜಂಡಾ..’ ಎಂಬ ಈ ಸಾಂಗ್​ ಹೇಗಿರಲಿದೆ ಎಂಬುದನ್ನು ತಿಳಿದುಕೊಳ್ಳುವ ಕೌತುಕ ಅಭಿಮಾನಿಗಳಲ್ಲಿ ಮೂಡಿದೆ.

RRR: ‘ಎತ್ತುವ ಜಂಡಾ’ ಹಾಡಿನ ಮೂಲಕ ಮತ್ತೆ ಅಬ್ಬರಿಸಲು ಸಜ್ಜಾದ ‘ಆರ್​ಆರ್​ಆರ್’​ ಸಿನಿಮಾ
ಜ್ಯೂ. ಎನ್​ಟಿಆರ್​, ಆಲಿಯಾ ಭಟ್​, ರಾಮ್​ ಚರಣ್
Follow us on

ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ‘ಆರ್​ಆರ್​ಆರ್​’ ಸಿನಿಮಾ (RRR Movie) ಈಗಾಗಲೇ ಬಿಡುಗಡೆ ಆಗಿರಬೇಕಿತ್ತು. ಆದರೆ ಕಾರಣಾಂತರಗಳಿಂದ ರಿಲೀಸ್​ ವಿಳಂಬ ಆಯಿತು. ಲೇಟ್​ ಆದ್ರೂ ಲೇಟೆಸ್ಟ್​ ಆಗಿ ಬರ್ತೀವಿ ಎಂಬ ಭರವಸೆಯನ್ನು ರಾಜಮೌಳಿ (Rajamouli) ಆ್ಯಂಡ್​ ಟೀಮ್​ ನೀಡಿದೆ. ರಾಮ್​ ಚರಣ್​, ಜ್ಯೂ. ಎನ್​ಟಿಆರ್​, ಆಲಿಯಾ ಭಟ್​ (Alia Bhatt) ಮುಖ್ಯಭೂಮಿಕೆಯಲ್ಲಿ ಅಭಿನಯಿಸಿರುವ ಈ ಚಿತ್ರಕ್ಕೆ ಎಂ.ಎಂ. ಕೀರವಾಣಿ ಸಂಗೀತ ನಿರ್ದೇಶನ ಮಾಡಿದ್ದಾರೆ. ಈಗಾಗಲೇ ಹಾಡುಗಳು ಜನರಿಗೆ ಇಷ್ಟ ಆಗಿವೆ. ರಿಲೀಸ್​ ದಿನಾಂಕ ಮುಂದೂಡಿದ ಬಳಿಕ ಸಿನಿಮಾದ ಪ್ರಚಾರ ಕಾರ್ಯಗಳಿಗೆ ಸಣ್ಣ ಗ್ಯಾಪ್​ ನೀಡಲಾಗಿತ್ತು. ಈಗ ಮತ್ತೆ ಅಬ್ಬರಿಸಲು ಚಿತ್ರತಂಡ ಸಿದ್ಧವಾಗಿದೆ. ರಾಜಮೌಳಿ ನಿರ್ದೇಶನದ ಈ ಸಿನಿಮಾದಿಂದ ಹೊಸದೊಂದು ಹಾಡು ರಿಲೀಸ್​ ಆಗುತ್ತಿದೆ. ‘ಎತ್ತುವ ಜಂಡಾ..’ ಗೀತೆಯನ್ನು ಮಾರ್ಚ್​ 14ರಂದು ಬಿಡುಗಡೆ ಮಾಡಲು ಸಿದ್ಧತೆ ನಡೆದಿದೆ. ಈ ಬಗ್ಗೆ ಈಗಾಗಲೇ ‘ಆರ್​ಆರ್​ಆರ್​’ ಚಿತ್ರತಂಡದ ಕಡೆಯಿಂದ ಅಧಿಕೃತವಾಗಿ ಘೋಷಣೆ ಆಗಿದೆ. ಈ ಹಾಡಿನಲ್ಲಿ ಮುಖ್ಯ ಪಾತ್ರಧಾರಿಗಳಾದ ರಾಮ್​ ಚರಣ್​, ಜ್ಯೂ. ಎನ್​ಟಿಆರ್​, ಆಲಿಯಾ ಭಟ್​ ಕಾಣಿಸಿಕೊಳ್ಳಲಿದ್ದಾರೆ ಎಂಬುದಕ್ಕೆ ಈ ಪೋಸ್ಟರ್​ನಲ್ಲಿ ಝಲಕ್​ ತೋರಿಸಲಾಗಿದೆ. ಇದೊಂದು ಸೆಲೆಬ್ರೇಷನ್​ ಸಾಂಗ್​ ಆಗಿರಲಿದೆ.

ತೆಲುಗಿನ ಖ್ಯಾತ ನಿರ್ಮಾಣ ಸಂಸ್ಥೆಯಾದ ಡಿವಿವಿ ಎಂಟರ್​ಟೇನ್ಮೆಂಟ್​ ಬ್ಯಾನರ್‌ನಲ್ಲಿ ‘ಆರ್​ಆರ್​ಆರ್​’ ಸಿನಿಮಾ ನಿರ್ಮಾಣ ಆಗಿದೆ. ಈ ಚಿತ್ರಕ್ಕೆ ವಿಜಯೇಂದ್ರ ಪ್ರಸಾದ್ ಕಥೆ ಬರೆದಿದ್ದಾರೆ. ಶ್ರೀಕರ್ ಪ್ರಸಾದ್ ಸಂಕಲನದ ಜವಾಬ್ದಾರಿ ನಿಭಾಯಿಸಿದ್ದಾರೆ. ಕನ್ನಡ, ತೆಲುಗು, ಮಲಯಾಳಂ, ತಮಿಳು ಹಾಗೂ ಹಿಂದಿಯಲ್ಲಿ ರಿಲೀಸ್ ಆಗಲಿರುವ ಈ ಚಿತ್ರ ಇಂಗ್ಲಿಷ್, ಪೋರ್ಚುಗೀಸ್, ಕೊರಿಯನ್, ಟರ್ಕಿಷ್, ಸ್ಪ್ಯಾನಿಶ್‌ ಭಾಷೆಗಳಿಗೆ ಡಬ್ ಆಗಲಿದೆ ಎಂಬುದು ವಿಶೇಷ. ಮಾರ್ಚ್ 25ರಂದು ವಿಶ್ವದಾದ್ಯಂತ ‘ಆರ್‌ಆರ್‌ಆರ್‌’ ತೆರೆಕಾಣಲಿದೆ. ಕನ್ನಡದಲ್ಲಿ ಈ ಸಿನಿಮಾದ ವಿತರಣೆಯನ್ನು ಕೆವಿಎನ್ ಪ್ರೊಡಕ್ಷನ್ ಸಂಸ್ಥೆ ವಹಿಸಿಕೊಂಡಿದೆ.

‘ಆರ್​ಆರ್​ಆರ್​’ ಸಿನಿಮಾದ ಟ್ರೇಲರ್​ ಕಂಡು ಅಭಿಮಾನಿಗಳು ಈಗಾಗಲೇ ವಾವ್​ ಎಂದಿದ್ದಾರೆ. ‘ದೋಸ್ತಿ’, ‘ಹಳ್ಳಿ ನಾಟು’, ‘ಜನನಿ’ ಮುಂತಾದ ಹಾಡುಗಳು ಕೇಳುಗರ ಮೆಚ್ಚುಗೆ ಗಳಿಸಿವೆ. ಅದರಲ್ಲೂ ‘ಹಳ್ಳಿ ನಾಟು..’ ಹಾಡಿಗೆ ಲಕ್ಷಾಂತರ ಅಭಿಮಾನಿಗಳು ರೀಲ್ಸ್​ ಮಾಡಿದ್ದಾರೆ. ಈಗ ಇನ್ನೊಂದು ಹಾಡು ಬಿಡುಗಡೆ ಆಗುತ್ತಿದೆ. ಆ ಸಾಂಗ್​ ಹೇಗಿರಲಿದೆ ಎಂಬುದನ್ನು ತಿಳಿದುಕೊಳ್ಳುವ ಕೌತುಕ ಅಭಿಮಾನಿಗಳಲ್ಲಿ ಮೂಡಿದೆ. ಅದಕ್ಕಾಗಿ ಮಾ.14ರ ದಿನಾಂಕಕ್ಕಾಗಿ ಕಾಯುತ್ತಿದ್ದಾರೆ.

ವಿದೇಶದಲ್ಲಿ ‘ಆರ್​ಆರ್​​ಆರ್​’ ಟಿಕೆಟ್​ಗಳು ಸೋಲ್ಡ್​ ಔಟ್​:

ಜ್ಯೂ. ಎನ್​ಟಿಆರ್​ ಅವರಿಗೆ ವಿದೇಶದಲ್ಲೂ ಅಭಿಮಾನಿಗಳಿದ್ದಾರೆ. ಅಮೆರಿಕದಲ್ಲಿ ಇರುವ ಅಭಿಮಾನಿಯೊಬ್ಬರು ಬರೋಬ್ಬರಿ 75 ಟಿಕೆಟ್​ಗಳನ್ನು ಏಕಕಾಲಕ್ಕೆ ಖದೀರಿಸಿದ್ದಾರೆ. ಅದರ ಫೋಟೋವನ್ನು ಅವರು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅದು ಎಲ್ಲೆಡೆ ವೈರಲ್​ ಆಗುತ್ತಿದೆ. ‘ಆರ್​ಆರ್​ಆರ್​’ ಚಿತ್ರದ ಬಗ್ಗೆ ವಿದೇಶದಲ್ಲಿ ಎಷ್ಟರಮಟ್ಟಿಗೆ ಕ್ರೇಜ್​ ಇದೆ ಎಂಬುದಕ್ಕೆ ಈ ಘಟನೆ ಸಾಕ್ಷಿ ಆಗಿದೆ. ಇಂಗ್ಲೆಂಡ್​, ಆಸ್ಟ್ರೇಲಿಯಾ ಮುಂತಾದ ಕಡೆಗಳಲ್ಲೂ ಬುಕಿಂಗ್​ ಶುರುವಾಗಿದೆ. ಎಲ್ಲೆಡೆ ಟಿಕೆಟ್​ ಸೋಲ್ಡ್​ ಔಟ್​ ಆಗುತ್ತಿರುವುದು ಚಿತ್ರತಂಡಕ್ಕೆ ಖುಷಿ ನೀಡಿದೆ. ಈ ಎಲ್ಲ ಬೆಳವಣಿಗೆ ಗಮನಿಸಿದರೆ ‘ಆರ್​ಆರ್​ಆರ್​’ ಚಿತ್ರವು ಥಿಯೇಟರ್​ನಲ್ಲಿ ದೊಡ್ಡ ಮಟ್ಟದ ಯಶಸ್ಸು ಕಾಣಲಿದೆ ಎಂಬುದರ ಮುನ್ಸೂಚನೆ ಸಿಕ್ಕಿದೆ. ಚಿತ್ರದ ಬಿಡುಗಡೆಗೆ ಇನ್ನು ಕೆಲವೇ ದಿನಗಳು ಬಾಕಿ ಇವೆ.

ಇದನ್ನೂ ಓದಿ:

‘ಆರ್​ಆರ್​ಆರ್​’ ನಿರ್ಮಾಪಕನ ಖಾತೆಯಿಂದ ಪ್ರಭಾಸ್​ಗೆ ವರ್ಗಾವಣೆ ಆಯ್ತು 50 ಕೋಟಿ ರೂಪಾಯಿ?  

100 ಕೋಟಿ ರೂ. ಗಳಿಸಿದ ‘ಗಂಗೂಬಾಯಿ ಕಾಠಿಯಾವಾಡಿ’; ಪಾರ್ಟಿ ಮೂಡ್​ನಲ್ಲಿ ಆಲಿಯಾ ಭಟ್​-ರಣಬೀರ್​