Updated on:Mar 11, 2022 | 8:22 AM
‘ರಾಧೆ ಶ್ಯಾಮ್’ ಸಿನಿಮಾ ಇಂದು (ಮಾರ್ಚ್ 11) ವಿಶ್ವಾದ್ಯಂತ ರಿಲೀಸ್ ಆಗಿದೆ. ಈ ಸಿನಿಮಾದಲ್ಲಿ ಪ್ರಭಾಸ್ಗೆ ಜತೆಯಾಗಿ ಪೂಜಾ ಹೆಗ್ಡೆ ಕಾಣಿಸಿಕೊಂಡಿದ್ದಾರೆ. ಈ ಚಿತ್ರದ ಪ್ರಚಾರ ಕಾರ್ಯದಲ್ಲಿ ಬ್ಯುಸಿ ಇದ್ದ ಅವರು, ಸಾಕಷ್ಟು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಟ್ರೇಲರ್ ಮೂಲಕ ಅವರು ಈಗಾಗಲೇ ನಿರೀಕ್ಷೆ ಮೂಡಿಸಿದ್ದು, ಇನ್ಸ್ಟಾಗ್ರಾಮ್ನಲ್ಲೂ ಮಿಂಚುತ್ತಿದ್ದಾರೆ.
ಪೂಜಾ ಹೆಗ್ಡೆ ವೃತ್ತಿ ಜೀವನದ ದೃಷ್ಟಿಯಿಂದ ‘ರಾಧೆ ಶ್ಯಾಮ್’ ಸಿನಿಮಾ ತುಂಬಾನೇ ಪ್ರಾಮುಖ್ಯತೆ ಪಡೆದುಕೊಂಡಿದೆ. ಏಕಕಾಲಕ್ಕೆ ಐದು ಭಾಷೆಗಳಲ್ಲಿ ಸಿನಿಮಾ ರಿಲೀಸ್ ಆಗುತ್ತಿದೆ. ಈ ಸಿನಿಮಾ ಯಶಸ್ಸು ಕಂಡರೆ ಟಾಲಿವುಡ್, ಕಾಲಿವುಡ್ ಹಾಗೂ ಬಾಲಿವುಡ್ನಲ್ಲಿ ಅವರಿಗೆ ಬೇಡಿಕೆ ಹೆಚ್ಚಲಿದೆ.
ಪೂಜಾ ಹೆಗ್ಡೆ ಅವರು ಈ ಸಿನಿಮಾ ಬಗ್ಗೆ ಹೆಚ್ಚು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ಕಾರಣಕ್ಕೆ ಅವರು ಹೆಚ್ಚೆಚ್ಚು ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಸಿನಿಮಾದ ಮೇಕಿಂಗ್ ಕೂಡ ರಿಚ್ ಆಗಿದೆ ಎಂಬುದಕ್ಕೆ ಟ್ರೇಲರ್ನಲ್ಲಿ ಸಾಕ್ಷ್ಯ ಸಿಕ್ಕಿದೆ.
ಪೂಜಾ ಹೆಗ್ಡೆ ಮೂರೇ ತಿಂಗಳಲ್ಲಿ ಹ್ಯಾಟ್ರಿಕ್ ಬಾರಿಸೋ ಸೂಚನೆ ನೀಡಿದ್ದಾರೆ. ‘ರಾಧೆ ಶ್ಯಾಮ್’ ಹಿಟ್ ಆದರೆ, ಪೂಜಾ ಹೆಗ್ಡೆ ವೃತ್ತಿ ಜೀವನಕ್ಕೆ ಮೈಲೇಜ್ ಸಿಗಲಿದೆ. ಮುಂದಿನ ತಿಂಗಳು ಅವರ ನಟನೆಯ ‘ಬೀಸ್ಟ್’ ಸಿನಿಮಾ ತೆರೆಗೆ ಬರುತ್ತಿದೆ. ಇದೂ ಕೂಡ ದೊಡ್ಡ ಮಟ್ಟದ ಯಶಸ್ಸು ಕಾಣುವ ಸಾಧ್ಯತೆ ಇದೆ.
ಆ ಬಳಿಕ ಹೆಚ್ಚು ನಿರೀಕ್ಷೆ ಇಟ್ಟುಕೊಂಡಿರುವ‘ಆಚಾರ್ಯ’ ಸಿನಿಮಾ ಕೂಡ ತೆರೆಗೆ ಬರಲಿದೆ. ಹೀಗಾಗಿ, ಪೂಜಾ ಮೂರೇ ತಿಂಗಳಲ್ಲಿ ಹ್ಯಾಟ್ರಿಕ್ ಬಾರಿಸುತ್ತಾರಾ ಅನ್ನೋದನ್ನು ಕಾದು ನೋಡಬೇಕಿದೆ.
Published On - 6:00 am, Fri, 11 March 22