ನೀವು ಕೂರ್ಗ್ಗೆ ಭೇಟಿ ನೀಡಿದ್ದೀರಿ ಎಂದರೆ ಅಬ್ಬೆ ಜಲಪಾತವನ್ನು ಮಿಸ್ ಮಾಡುವಂತೆಯೇ ಇಲ್ಲ. ಹಸಿರು ಕಾನನದ ನಡುವೆ 70 ಅಡಿಗಳಷ್ಟು ಎತ್ತರದಿಂದ ಧುಮುಕಿ ಕಣ್ಮನ ಸೆಳೆಯುವ ಈ ಜಲಪಾತ ಅಬ್ಬೆ ಜಲಪಾತ.
ಮಡಿಕೇರಿ ಕೋಟೆ: ಮುದ್ದುರಾಜ ಅವರ ಕೋಟೆ ಮಡಿಕೇರಿಯಲ್ಲಿ ನೋಡಬಹುದಾದ ಇನ್ನೊಂದು ಉತ್ತಮ ಸ್ಥಳವಾಗಿದೆ. ಆಮೆ ಶಿಲ್ಪ, ವಸ್ತುಸಂಗ್ರಹಾಲಯ ಮತ್ತು ಅದರ ಆವರಣದಲ್ಲಿ ಚರ್ಚ್ ಅನ್ನು ಕಾಣಬಹುದಾಗಿದೆ.
ಸಮುದ್ರ ಮಟ್ಟದಿಂದ 126 ಕಿಮೀ ಎತ್ತರದಲ್ಲಿರುವ ಕಾವೇರಿ ಉಗಮಸ್ಥಾನ ತಲಕಾವೇರಿ. ಪೌರಾಣಿಕ ಹಿನ್ನೆಲೆ ಹೊಂದಿರುವ ಈ ಸ್ಥಳ ಭೇಟಿ ನೀಡಲು ಉತ್ತಮ ಸ್ಥಳವಾಗಿದೆ.
ರಾಜಾಸೀಟ್, ಮಡಿಕೇರಿಯಲ್ಲಿ ಹೆಚ್ಚು ಪ್ರಸಿದ್ಧಿ ಪಡೆದಿರುವ ಸ್ಥಳ ರಾಜಾಸೀಟ್. ಕಣ್ಣು ಕುಕ್ಕುವ ನಿಸರ್ಗ, ವಿವಿಧ ಬಗೆಯ ಹೂವುಗಳು ಹೀಗೆ ಮನಸಿಗೆ ಆಹ್ಲಾದತೆಯನ್ನು ನೀಡುವ ರಾಜಾಸೀಟ್ 2 ದಿನದ ಕೂರ್ಗ್ ಪ್ರವಾಸದಲ್ಲಿ ಭೇಟಿ ನೀಡಲು ಉತ್ತ,ಮ ಜಾಗವಾಗಿದೆ.
ದುಬಾರೆ ಆನೆ ಕ್ಯಾಂಪ್:
ಆನೆಗಳನ್ನು ನೀವು ಪ್ರೀತಿಸುವವರಾಗಿದ್ದರೆ ಕೂರ್ಗ್ನ ದುಬಾರೆ ಆನೆ ಕ್ಯಾಂಪ್ಗೆ ಭೇಟಿ ನೀಡಬಹುದು. ನೂರಾರು ಆನೆಗಳ ಚಟುವಟಿಕೆ, ಅವುಗಳ ಆಹಾರ ಪದ್ಧತಿ ಎಲ್ಲವನ್ನೂ ನೋಡಿಕೊಂಡು ಬರಬಹುದು.
ಮಡಿಕೇರಿಯಲ್ಲಿ 1820ರಲ್ಲಿ ನಿರ್ಮಾಣವಾದ ದೇವಾಲಯ ಓಂಕಾರೇಶ್ವರ ದೇವಸ್ಥಾನ. ಮಹಮ್ಮದೀಯ ವಾಸ್ತುಶಿಲ್ಪದಲ್ಲಿ ನಿರ್ಮಾಣವಾದ ಈ ದೇವಾಲಯ ಕೂರ್ಗ್ ಭೇಟಿಯ ಸಂದರ್ಭದಲ್ಲಿ ವಿಸಿಟ್ ಮಾಡಬಹುದಾದ ಉತ್ತಮ ಜಾಗ.
ನಾಗರಹೊಳೆ ರಾಷ್ಟ್ರೀಯ ಉದ್ಯಾನವನ: ಭಾರತದ ರಾಷ್ಟ್ರೀಯ ಉದ್ಯಾನವನಗಳಲ್ಲಿ ಭೇಟಿ ನೀಡಬಹುದಾದ ಉತ್ತಮ ಸ್ಥಳಗಳಲ್ಲಿ ಒಂದು ನಾಗರಹೊಳೆ ರಾಷ್ಟ್ರೀಯ ಉದ್ಯಾನವನ. 250ಕ್ಕೂ ಹೆಚ್ಚು ಬಗೆಯ ಪಕ್ಷಿಗಳು, ವಿವಿಧ ರೀತಿಯ ಅಪರೂಪದ ಪ್ರಾಣಿಗಳನ್ನು ಹೊಂದಿರುವ ಈ ಅಭಯಾರಣ್ಯಕ್ಕೆ ಭೇಟಿ ನೀಡಿದರೆ ನಿಮ್ಮ ಕೂರ್ಗ್ ಪ್ರವಾಸ ಮತ್ತಷ್ಟು ಉತ್ತಮವಾಗಲಿದೆ.
ಬ್ರಹ್ಮಗಿರಿ ಬೆಟ್ಟ: ಹಸಿರು ಪರಿಸರವನ್ನು ಆನಂದಿಸಲು ಈ ಸ್ಥಳ ಉತ್ತಮವಾಗಿದೆ. ಸಮುದ್ರ ಮಟ್ಟದಿಂದ 1608 ಮೀ ಎತ್ತರದಲ್ಲಿರುವ ಈ ಸ್ಥಳ ತಣ್ಣನೆಯ ಗಾಳಿ ಸೋಕಿಸಿ ಪ್ರವಾಸಿಗರನ್ನು ಆಕರ್ಷಿಸುತ್ತದೆ.
ಚಿಕ್ಲಿ ಹೊಳೆ ಡ್ಯಾಮ್: ನೀರಿನ ರಭಸವನ್ನು ಕಣ್ತುಂಬ ನೋಡಬೇಕೆಂದರೆ ಅದಕ್ಕೆ ಚಿಕ್ಲಿ ಹೊಳೆ ಡ್ಯಾಮ್ ಉತ್ತಮ ಸ್ಥಳವಾಗಿದೆ. ಮಳೆಗಾಲದ ವೇಳೆ ಭೇಟಿ ನೀಡಿದರೆ ಫೋಟೋಶೂಟ್ ಮಾಡಿಸಲು ಒಳ್ಳೆಯ ಸ್ಥಳವಾಗಿದೆ.
ತ್ರಿವೇಣಿ ಸಂಗಮ: ಭಾಗಮಂಡಲದ ತ್ರಿವೇಣಿ ಸಂಗಮ ಮೂರು ನದಿಗಳು ಸಂಗಮವಾಗುವ ಜಾಗವಾಗಿದೆ. ಮಡಿಕೇರಿಯಿಂದ 40 ಕಿಮೀ ದೂರದಲ್ಲಿರುವ ಈ ಸ್ಥಳ ಪ್ರಿಸರ ಪ್ರಿಯರ ಸ್ಥಳವಾಗಿದೆ.
Published On - 11:49 am, Fri, 11 March 22