ಮತ್ತೆ ಬೋಲ್ಡ್ ಅವತಾರದಲ್ಲಿ ಫ್ಯಾನ್ಸ್ ಮನ ಗೆದ್ದ ಸಮಂತಾ; ಇಲ್ಲಿವೆ ಅಂದಗಾತಿಯ ಹೊಸ ಫೋಟೋಗಳು
ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಸಮಂತಾ ಹಾಜರಿ ಹಾಕಿದ್ದಾರೆ. ಹಸಿರು ಬಣ್ಣದ ಗೌನ್ ಧರಿಸಿ ಅವರು ಮಿಂಚಿದ್ದಾರೆ. ಈ ಫೋಟೋಗಳು ವೈರಲ್ ಆಗಿವೆ.
Updated on: Mar 11, 2022 | 8:20 AM

Samantha new photos with green gown for Critics Choice Film Awards

Samantha new photos with green gown for Critics Choice Film Awards

ಹಸಿರು ಬಣ್ಣದ ಈ ಗೌನ್ ಕಂಡು ಅಭಿಮಾನಿಗಳು ಮಾತ್ರವಲ್ಲದೇ ಸೆಲೆಬ್ರಿಟಿಗಳು ಕೂಡ ಫಿದಾ ಆಗಿದ್ದಾರೆ. ರಶ್ಮಿಕಾ ಮಂದಣ್ಣ, ರಾಶಿ ಖನ್ನಾ, ಹನ್ಸಿಕಾ ಮೊತ್ವಾನಿ, ಸಂಯುಕ್ತಾ ಹೆಗಡೆ ಮುಂತಾದವರು ಈ ಪೋಸ್ಟ್ಗೆ ಕಮೆಂಟ್ ಮಾಡಿದ್ದಾರೆ. ಅಪ್ಲೋಡ್ ಮಾಡಿದ ಕೆಲವೇ ಗಂಟೆಗಳಲ್ಲಿ ಈ ಫೋಟೋ ಸಮಂತಾ ಅಭಿಮಾನಿಗಳ ವಲಯದಲ್ಲಿ ವೈರಲ್ ಆಗಿದೆ.

ಚಿತ್ರರಂಗದಲ್ಲಿ ಸಮಂತಾ ಈಗ ಸಖತ್ ಬ್ಯುಸಿ ಆಗಿದ್ದಾರೆ. ಹೊಸ ಹೊಸ ಸಿನಿಮಾಗಳನ್ನು ಒಪ್ಪಿಕೊಂಡು ಅವರು ಕಾರ್ಯಮಗ್ನರಾಗಿದ್ದಾರೆ. ಅಭಿಮಾನಿಗಳ ಜೊತೆ ಸಂಪರ್ಕದಲ್ಲಿ ಇರಲು ಸೋಶಿಯಲ್ ಮೀಡಿಯಾದಲ್ಲಿ ಅವರು ಆ್ಯಕ್ಟೀವ್ ಆಗಿರುತ್ತಾರೆ.

‘ಕಾದು ವಾಕುಲ ರೆಂಡು ಕಾದಲ್’, ‘ಶಾಕುಂತಲಂ’ ಮುಂತಾದ ಸಿನಿಮಾಗಳಲ್ಲಿ ಸಮಂತಾ ನಟಿಸಿದ್ದು, ಅವುಗಳ ಬಿಡುಗಡೆಗಾಗಿ ಫ್ಯಾನ್ಸ್ ಕಾಯುತ್ತಿದ್ದಾರೆ. ‘ಅರೇಂಜ್ಮೆಂಟ್ಸ್ ಆಫ್ ಲವ್’ ಇಂಗ್ಲಿಷ್ ಸಿನಿಮಾದಲ್ಲೂ ಅವರು ಅವಕಾಶ ಪಡೆದಿದ್ದು, ಈ ಚಿತ್ರ ನಿರೀಕ್ಷೆ ಮೂಡಿಸಿದೆ.




