ನಾಗಚೈತನ್ಯ ಜೊತೆಗಿನ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿ, ವಿಚ್ಛೇದನ ಪಡೆದ ಬಳಿಕ ನಟಿ ಸಮಂತಾ ವೃತ್ತಿಬದುಕಿಗೆ ಹೊಸ ವೇಗ ಸಿಕ್ಕಿತು ಎಂದರೆ ತಪ್ಪಿಲ್ಲ. ಹೊಸ ಹೊಸ ಅವಕಾಶಗಳನ್ನು ಪಡೆಯುತ್ತ ಅವರು ಮುನ್ನುಗ್ಗುತ್ತಿದ್ದಾರೆ. ಈಗ ಹೊಸ ಫೋಟೋಶೂಟ್ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.
1 / 5
ಇತ್ತೀಚೆಗೆ ಮುಂಬೈನಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮವೊಂದರಲ್ಲಿ ಸಮಂತಾ ಭಾಗವಹಿಸಿದರು. ಅದಕ್ಕಾಗಿ ಅವರು ಈ ರೀತಿ ಅಲಂಕಾರ ಮಾಡಿಕೊಂಡಿದ್ದರು. ಆ ಸಂದರ್ಭದ ಕೆಲವು ಫೋಟೋಗಳನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಅವುಗಳಿಗೆ ಅಭಿಮಾನಿಗಳಿಂದ ಲಕ್ಷಾಂತರ ಲೈಕ್ಸ್ ಸಿಕ್ಕಿದೆ.
2 / 5
ಹಸಿರು ಬಣ್ಣದ ಈ ಗೌನ್ ಕಂಡು ಅಭಿಮಾನಿಗಳು ಮಾತ್ರವಲ್ಲದೇ ಸೆಲೆಬ್ರಿಟಿಗಳು ಕೂಡ ಫಿದಾ ಆಗಿದ್ದಾರೆ. ರಶ್ಮಿಕಾ ಮಂದಣ್ಣ, ರಾಶಿ ಖನ್ನಾ, ಹನ್ಸಿಕಾ ಮೊತ್ವಾನಿ, ಸಂಯುಕ್ತಾ ಹೆಗಡೆ ಮುಂತಾದವರು ಈ ಪೋಸ್ಟ್ಗೆ ಕಮೆಂಟ್ ಮಾಡಿದ್ದಾರೆ. ಅಪ್ಲೋಡ್ ಮಾಡಿದ ಕೆಲವೇ ಗಂಟೆಗಳಲ್ಲಿ ಈ ಫೋಟೋ ಸಮಂತಾ ಅಭಿಮಾನಿಗಳ ವಲಯದಲ್ಲಿ ವೈರಲ್ ಆಗಿದೆ.
3 / 5
ಚಿತ್ರರಂಗದಲ್ಲಿ ಸಮಂತಾ ಈಗ ಸಖತ್ ಬ್ಯುಸಿ ಆಗಿದ್ದಾರೆ. ಹೊಸ ಹೊಸ ಸಿನಿಮಾಗಳನ್ನು ಒಪ್ಪಿಕೊಂಡು ಅವರು ಕಾರ್ಯಮಗ್ನರಾಗಿದ್ದಾರೆ. ಅಭಿಮಾನಿಗಳ ಜೊತೆ ಸಂಪರ್ಕದಲ್ಲಿ ಇರಲು ಸೋಶಿಯಲ್ ಮೀಡಿಯಾದಲ್ಲಿ ಅವರು ಆ್ಯಕ್ಟೀವ್ ಆಗಿರುತ್ತಾರೆ.
4 / 5
‘ಕಾದು ವಾಕುಲ ರೆಂಡು ಕಾದಲ್’, ‘ಶಾಕುಂತಲಂ’ ಮುಂತಾದ ಸಿನಿಮಾಗಳಲ್ಲಿ ಸಮಂತಾ ನಟಿಸಿದ್ದು, ಅವುಗಳ ಬಿಡುಗಡೆಗಾಗಿ ಫ್ಯಾನ್ಸ್ ಕಾಯುತ್ತಿದ್ದಾರೆ. ‘ಅರೇಂಜ್ಮೆಂಟ್ಸ್ ಆಫ್ ಲವ್’ ಇಂಗ್ಲಿಷ್ ಸಿನಿಮಾದಲ್ಲೂ ಅವರು ಅವಕಾಶ ಪಡೆದಿದ್ದು, ಈ ಚಿತ್ರ ನಿರೀಕ್ಷೆ ಮೂಡಿಸಿದೆ.