ಮಗುವನ್ನು ಎದೆಗವಚಿಕೊಂಡು ಓಡಿದ ರಾಮ್ ಚರಣ; ಅಭಿಮಾನಿಗಳ ಹುಚ್ಚಾಟಕ್ಕೆ ನಲುಗಿಹೋದ ನಟ

ನಟ ರಾಮ್ ಚರಣ್ ಹಾಗೂ ಪತ್ನಿ ಉಪಾಸನಾ ದಂಪತಿಗೆ ಅವಳಿ ಮಕ್ಕಳಾಗಿದ್ದಾರೆ. ಈ ಮಧ್ಯೆ, ಮೊದಲ ಮಗಳು ಕ್ಲಿನ್ ಕಾರಾಳನ್ನು ಆಸ್ಪತ್ರೆಗೆ ಕರೆತರುವಾಗ ಆತಂಕಕಾರಿ ಘಟನೆ ನಡೆದಿದೆ. ಅಭಿಮಾನಿಗಳು ಆಸ್ಪತ್ರೆ ಬಳಿ ಮುತ್ತಿಗೆ ಹಾಕಿ ರಾಮ್ ಚರಣ್ ಮುಖದಲ್ಲಿ ಭಯ ಸ್ಪಷ್ಟವಾಗಿ ಕಾಣಿಸಿದೆ. ಮಗುವಿನ ಸುರಕ್ಷತೆಯ ಬಗ್ಗೆ ತೀವ್ರ ಕಳವಳ ವ್ಯಕ್ತವಾಗಿದೆ.

ಮಗುವನ್ನು ಎದೆಗವಚಿಕೊಂಡು ಓಡಿದ ರಾಮ್ ಚರಣ; ಅಭಿಮಾನಿಗಳ ಹುಚ್ಚಾಟಕ್ಕೆ ನಲುಗಿಹೋದ ನಟ
ರಾಮ್ ಚರಣ್-ಉಪಾಸನಾ

Updated on: Feb 02, 2026 | 11:44 AM

ರಾಮ್ ಚರಣ್ (Ram Charan) ಅವರ ಮನೆಯಲ್ಲಿ ಈಗ ಹಬ್ಬದ ವಾತಾವರಣ ನಿರ್ಮಾಣ ಆಗಿದೆ. ರಾಮ್ ಹಾಗೂ ಅವರ ಪತ್ನಿ ಉಪಾಸನಾ ಅವಳಿ ಮಕ್ಕಳಿಗೆ ಪಾಲಕರಾಗಿದ್ದಾರೆ. ಈ ಮಧ್ಯೆ ಅವರು ನಲುಗಿ ಹೋಗುವ ಘಟನೆ ನಡೆದಿದೆ. ರಾಮ್ ಚರಣ್ ಅವರು ತಮ್ಮ ಮೊದಲ ಮಗು ಕ್ಲಿನ್​ಕಾರಾಳನ್ನು ಆಸ್ಪತ್ರೆಗೆ ಕರೆದು ತರುತ್ತಿದ್ದರು. ಈ ವೇಳೆ ಅಭಿಮಾನಿಗಳು ಮುತ್ತಿಕೊಂಡಿದ್ದಾರೆ. ಈ ಘಟನೆ ಶಾಕಿಂಗ್ ಎನಿಸಿದೆ. ಇದಕ್ಕೆ ಸಾಕಷ್ಟು ಆಕ್ರೋಶ ವ್ಯಕ್ತವಾಗಿದೆ. ರಾಮ್ ಚರಣ್ ಮುಖದಲ್ಲಿ ಭಯ ಸ್ಪಷ್ಟವಾಗಿ ಕಾಣಿಸಿದೆ.

ರಾಮ್ ಚರಣ್ ಅವರು ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಅವರ ಅಭಿಮಾನಿ ಬಳಗ ತುಂಬಾನೇ ದೊಡ್ಡದಾಗಿದೆ. ಅವರು ಎಲ್ಲೇ ಹೋದರೂ ಫ್ಯಾನ್ಸ್ ಹಾಜರಿರುತ್ತಾರೆ. ಅವರನ್ನು ನೋಡಬೇಕು, ಭೇಟಿ ಮಾಡಬೇಕು ಎಂದು ಫ್ಯಾನ್ಸ್ ಪ್ರಯತ್ನಿಸುತ್ತಾರೆ. ಅದೇ ರೀತಿ ಉಪಾಸನಾ ಅಡ್ಮಿಟ್ ಆಗಿರೋ ಆಸ್ಪತ್ರೆಯ ಎದುರು ದೊಡ್ಡ ಸಂಖ್ಯೆಯಲ್ಲಿ ಫ್ಯಾನ್ಸ್ ನೆರೆದಿದ್ದರು.

ರಾಮ್ ಚರಣ್ ಅವರು ಮನೆಯಿಂದ ಆಸ್ಪತ್ರೆಗೆ ಬಂದಿದ್ದಾರೆ. ಈ ವೇಳೆ ಅವರ ಕೈಯಲ್ಲಿ ಎರಡು ವರ್ಷದ ಮಗಳು ಕೂಡ ಇದ್ದರು. ಆಸ್ಪತ್ರೆ ಬಳಿ ಸಾವಿರಾರು ಸಂಖ್ಯೆಯಲ್ಲಿ ಜನರು ಸೇರಿದ್ದರು. ಇದನ್ನು ನೋಡಿ ರಾಮ್ ಚರಣ್ ಶಾಕ್ ಆಗಿದ್ದಾರೆ. ರಾಮ್ ಚರಣ್ ಅವರ ಭದ್ರತಾ ಸಿಬ್ಬಂದಿ, ಪೊಲೀಸರು ಎಷ್ಟೇ ಪ್ರಯತ್ನಿಸಿದರೂ ಅಭಿಮಾನಿಗಳನ್ನು ದೂರಕ್ಕೆ ತಳ್ಳೋಕೆ ಸಾಧ್ಯವಾಗಿಲ್ಲ.

ಅಭಿಮಾನಿಗಳ ಕಿರುಚಾಟ, ಕೂಗಾಟ, ತಳ್ಳಾಟದ ಮಧ್ಯೆಯೇ ಅವರು ಆಸ್ಪತ್ರೆಗೆ ಒಳಗೆ ಬಂದಿದ್ದಾರೆ. ರಾಮ್ ಚರಣ್ ಒಬ್ಬರೇ ಇದ್ದಿದ್ದರೆ ಇದನ್ನು ಹೇಗೋ ಮ್ಯಾನೇಜ್ ಮಾಡುತ್ತಿದ್ದರು. ಆದರೆ, ಅವರ ಬಳಿ ಮಗು ಇತ್ತು. ಇದನ್ನು ಕರೆದುಕೊಂಡು ಸೇಫ್ ಆಗಿ ಆಸ್ಪತ್ರೆ ಸೇರೋದು ದೊಡ್ಡ ಸವಾಲಾಗಿತ್ತು. ಮಗುವನ್ನು ಕರೆದುಕೊಂಡು ಒಳ ಹೋಗುವ ವೇಳೆಗೆ ಅವರು ಸುಸ್ತಾಗಿ ಹೋಗಿದ್ದಾರೆ.

ಇದನ್ನೂ ಓದಿ: ರಾಮ್ ಚರಣ್ ಅನ್ನು ಮುತ್ತಿಕೊಂಡ ಅಭಿಮಾನಿಗಳು: ವಿಡಿಯೋ

ಸದ್ಯ ಈ ವಿಡಿಯೋ ಚರ್ಚೆ ಆಗುತ್ತಿದೆ. ಮಗು ಎಷ್ಟು ಗಾಬರಿ ಆಗಿದ್ದಿರಬಹುದು ಎಂದು ಅನೇಕರು ಊಹಿಸಿದ್ದಾರೆ. ಇನ್ನೂ ಕೆಲವರು ರಾಮ್ ಚರಣ್ ಅಭಿಮಾನಿಗಳು ಅನಾಗರೀಕರ ರೀತಿ ನಡೆದುಕೊಂಡಿದ್ದಾರೆ ಎಂದು ಅನೇಕರು ಹೇಳಿದ್ದಾರೆ. ಇದು ಚರ್ಚೆಯ ವಿಷಯವಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.