AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಪೆದ್ದಿ’ ಟೀಸರ್ ರಿಲೀಸ್: ಕ್ರಿಕೆಟರ್ ಬಳಿಕ ಪೈಲ್ವಾನ್ ಆದ ರಾಮ್ ಚರಣ್

Peddi movie: ‘ಆರ್​​ಆರ್​​ಆರ್’ ಸಿನಿಮಾದ ಬಳಿಕ ‘ಆಚಾರ್ಯ’ ಮತ್ತು ‘ಗೇಮ್ ಚೇಂಜರ್’ ಸಿನಿಮಾಗಳಲ್ಲಿ ರಾಮ್ ಚರಣ್ ನಟಿಸಿದ್ದು, ಎರಡೂ ಸಿನಿಮಾಗಳು ದೊಡ್ಡ ಹಿಟ್ ಆಗಿವೆ. ಇದೀಗ ಅವರು ‘ಪೆದ್ದಿ’ ಸಿನಿಮಾನಲ್ಲಿ ನಟಿಸಿದ್ದು, ಸಿನಿಮಾದ ಟೀಸರ್ ಇಂದು (ಮಾರ್ಚ್ 27)ಕ್ಕೆ ಬಿಡುಗಡೆ ಆಗಿದೆ. ಸಿನಿಮಾದ ಈ ಹಿಂದಿನ ಕೆಲ ಟೀಸರ್​​ಗಳಲ್ಲಿ ಕ್ರಿಕೆಟರ್ ಆಗಿದ್ದ ರಾಮ್ ಚರಣ್ ಈಗ ಪೈಲ್ವಾನ್ ಆಗಿದ್ದಾರೆ.

‘ಪೆದ್ದಿ’ ಟೀಸರ್ ರಿಲೀಸ್: ಕ್ರಿಕೆಟರ್ ಬಳಿಕ ಪೈಲ್ವಾನ್ ಆದ ರಾಮ್ ಚರಣ್
Ram Charan
ಮಂಜುನಾಥ ಸಿ.
|

Updated on:Mar 27, 2026 | 1:20 PM

Share

ಸ್ಟಾರ್ ಟಾಲಿವುಡ್ ನಟ ರಾಮ್ ಚರಣ್ (Ram Charan) ಅವರ 41ನೇ ಹುಟ್ಟುಹಬ್ಬ ಇಂದು. ‘ಆರ್​​ಆರ್​​ಆರ್’ ಸಿನಿಮಾದ ಬಳಿಕ ಅವರ ಯಾವ ಸಿನಿಮಾವೂ ಹಿಟ್ ಆಗಿಲ್ಲ. ‘ಆರ್​​ಆರ್​​ಆರ್’ ಸಿನಿಮಾದ ಬಳಿಕ ‘ಆಚಾರ್ಯ’ ಮತ್ತು ‘ಗೇಮ್ ಚೇಂಜರ್’ ಸಿನಿಮಾಗಳಲ್ಲಿ ರಾಮ್ ಚರಣ್ ನಟಿಸಿದ್ದು, ಎರಡೂ ಸಿನಿಮಾಗಳು ದೊಡ್ಡ ಹಿಟ್ ಆಗಿವೆ. ಇದೀಗ ಅವರು ‘ಪೆದ್ದಿ’ ಸಿನಿಮಾನಲ್ಲಿ ನಟಿಸಿದ್ದು, ಸಿನಿಮಾದ ಟೀಸರ್ ಇಂದು (ಮಾರ್ಚ್ 27)ಕ್ಕೆ ಬಿಡುಗಡೆ ಆಗಿದೆ. ಸಿನಿಮಾದ ಈ ಹಿಂದಿನ ಕೆಲ ಟೀಸರ್​​ಗಳಲ್ಲಿ ಕ್ರಿಕೆಟರ್ ಆಗಿದ್ದ ರಾಮ್ ಚರಣ್ ಈಗ ಪೈಲ್ವಾನ್ ಆಗಿದ್ದಾರೆ.

ಈಗ ಬಿಡುಗಡೆ ಆಗಿರುವ ‘ಪೆದ್ದಿ’ಯ ಟೀಸರ್​​ನಲ್ಲಿ ರಾಮ್ ಚರಣ್ ‘ಪೆದ್ದಿ ಪೆಹಲ್ವಾನ್’ ಆಗಿ ಕಾಣಿಸಿಕೊಂಡಿದ್ದಾರೆ. ಪೈಲ್ವಾನ್ ರೀತಿ ಹುರಿಗಟ್ಟಿದ ದೇಹಹೊಂದಿ ಸಖತ್ ರಗಡ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಟೀಸರ್‌ನಲ್ಲಿ ಅವರು ಧಾನ್ಯದ ಚೀಲಗಳನ್ನು ಎತ್ತಿ ಬಿಸಾಡುತ್ತಾ ದೈಹಿಕ ಶಕ್ತಿ ಪ್ರದರ್ಶಿಸುತ್ತಿದ್ದಾರೆ. ಕುಸ್ತಿ ಅಖಾಡದಲ್ಲೂ ಮಿಂಚಿದ್ದಾರೆ. ಆಂಜನೇಯನ ಗದೆಯಂಥಹಾ ವಸ್ತುವನ್ನು ತಿರುಗಿಸುತ್ತಾ ತಮ್ಮ ಭುಜಬಲ ಸಹ ಪ್ರದರ್ಶಿಸಿದ್ದಾರೆ. ಅಖಾಡದಲ್ಲಿ ಕುಸ್ತಿ ಸಹ ಮಾಡಿದ್ದಾರೆ. ಸಿನಿಮಾದ ಕನ್ನಡ ಟೀಸರ್​​ನಲ್ಲಿ ಶಿವಣ್ಣ ಧ್ವನಿ ಹಿನ್ನೆಲೆಯಲ್ಲಿದೆ.

ಈ ಹಿಂದೆ ಬಿಡುಗಡೆ ಆಗಿದ್ದ ‘ಪೆದ್ದಿ’ ಸಿನಿಮಾದ ಕೆಲವು ಟೀಸರ್, ಹಾಡುಗಳಲ್ಲಿ ರಾಮ್ ಚರಣ್ ಪಾತ್ರವನ್ನು ಹಳ್ಳಿಯ ಕ್ರಿಕೆಟರ್ ಪಾತ್ರವನ್ನಾಗಿ ತೋರಿಸಲಾಗಿತ್ತು. ಸದಾ ಬ್ಯಾಟು ಹಿಡಿದುಕೊಂಡೆ ಓಡಾಡುವ ಯುವಕನ ರೀತಿ ತೋರಿಸಲಾಗಿತ್ತು. ಆದರೆ ಈಗ ಪೈಲ್ವಾನ್ ರೀತಿ ತೋರಿಸಲಾಗಿದೆ. ಇದು ಅಭಿಮಾನಿಗಳ ಅನುಮಾನಕ್ಕೆ ಕಾರಣವಾಗಿದ್ದು, ‘ಪೆದ್ದಿ’ ಸಿನಿಮಾನಲ್ಲಿ ರಾಮ್ ಚರಣ್ ಅವರದ್ದು ದ್ವಿಪಾತ್ರವಾ? ಅಥವಾ ತಂದೆ-ಮಗನ ಪಾತ್ರವನ್ನು ರಾಮ್ ಚರಣ್ ನಿಭಾಯಿಸಿದ್ದಾರಾ ಎಂಬ ಅನುಮಾನ ಮೂಡುತ್ತಿದೆ.

ಇದನ್ನೂ ಓದಿ:ರಾಮ್ ಚರಣ್ ವರ್ಷದ ಆದಾಯದಲ್ಲಿ ಬಿಗ್ ಬಜೆಟ್ ಸಿನಿಮಾ ಮಾಡಬಹುದು

ಈ ಚಿತ್ರದಲ್ಲಿ ಜಾನ್ವಿ ಕಪೂರ್ ನಾಯಕಿ ಆಗಿದ್ದು ಅಚ್ಚಿಯಮ್ಮ ಎಂಬ ಪಾತ್ರದಲ್ಲಿ ನಟಿಸಿದ್ದಾರೆ. ಕನ್ನಡದ ಕರುನಾಡ ಚಕ್ರವರ್ತಿ ಶಿವರಾಜ್‌ಕುಮಾರ್ ಮುಖ್ಯವಾದ ಪಾತ್ರದಲ್ಲಿ ನಟಿಸಿದ್ದಾರೆ. ಜೊತೆಗೆ ದಿವ್ಯೇಂದು ಶರ್ಮಾ, ಜಗಪತಿ ಬಾಬು ಮತ್ತು ಬೋಮನ್ ಇರಾನಿ ಸಹ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಬುಚ್ಚಿ ಬಾಬು ಸನಾ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಈ ಹಿಂದೆ ಅವರು ‘ಉಪ್ಪೆನ’ ಹೆಸರಿನ ಸಿನಿಮಾ ನಿರ್ದೇಶಿಸಿ ಯಶಸ್ಸು ಕಂಡಿದ್ದರು. ಆಸ್ಕರ್ ವಿಜೇತ ಎಆರ್ ರೆಹಮಾನ್ ಅವರು ಈ ಸಿನಿಮಾಕ್ಕೆ ಸಂಗೀತ ನೀಡಿದ್ದಾರೆ. ಮೈತ್ರಿ ಮೂವಿ ಮೇಕರ್ಸ್ ಮತ್ತು ವೃದ್ಧಿ ಸಿನಿಮಾಸ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿವೆ. ಈ ಚಿತ್ರವು ಏಪ್ರಿಲ್ 30, 2026 ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:37 am, Fri, 27 March 26

Follow Us