AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿರ್ದೇಶಕ ರಾಜಮೌಳಿಗೆ ‘ನಾವ್ ರೆಡಿ ಸಾರ್’ ಎಂದ RRR ಹೀರೋಗಳು

Ram Charan and Jr NTR: ಉಕ್ರೇನ್​ನಲ್ಲಿ ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವ RRR ಚಿತ್ರತಂಡದ ಚಿತ್ರೀಕರಣದ ಸಂದರ್ಭದ ದೃಶ್ಯವನ್ನು ನಟ ರಾಮ್ ಚರಣ್ ಹಂಚಿಕೊಂಡಿದ್ದಾರೆ.

ನಿರ್ದೇಶಕ ರಾಜಮೌಳಿಗೆ ‘ನಾವ್ ರೆಡಿ ಸಾರ್’ ಎಂದ RRR ಹೀರೋಗಳು
ಸಾಂದರ್ಭಿಕ ಚಿತ್ರ
TV9 Web
| Edited By: |

Updated on: Aug 08, 2021 | 4:37 PM

Share

RRR ಚಿತ್ರ ಈಗಾಗಲೇ ತನ್ನ ವೈವಿಧ್ಯಪೂರ್ಣ ತಾರಾಗಣದಿಂದಾಗಿ ಎಲ್ಲರ ಗಮನ ಸೆಳೆದಿದೆ. ಹಿಂದಿ ಚಿತ್ರರಂಗ ಹಾಗೂ ದಕ್ಷಿಣ ಭಾರತೀಯ ಚಿತ್ರರಂಗದ ಶ್ರೇಷ್ಠ ನಟರ ಸಂಗಮವಾಗಿರುವ ಈ ಚಿತ್ರ ಬಹಳ ಅದ್ದೂರಿಯಿಂದ ಚಿತ್ರೀಕರಣವಾಗುತ್ತಿದ್ದು, ಸದ್ಯ ಚಿತ್ರತಂಡ ಉಕ್ರೇನ್​ನಲ್ಲಿ ಬೀಡುಬಿಟ್ಟಿದೆ. ಇತ್ತೀಚೆಗಷ್ಟೇ ಸೆಟ್​ನಲ್ಲಿ ಮೊದಲ ಬಾರಿಗೆ ಐಡಿ ಕಾರ್ಡ್ ಹಾಕಿಕೊಳ್ಳಬೇಕಾಗಿ ಬಂದಿದ್ದ ಸಂದರ್ಭವನ್ನು ಚಿತ್ರ ಸಮೇತ ಹಂಚಿಕೊಂಡಿದ್ದ ಜೂನಿಯರ್ ಎನ್​ಟಿಆರ್, ಚಿತ್ರದ ಕೊನೆಯ ಭಾಗದ ಕೆಲಸಗಳು ಲಗುಬಗೆಯಿಂದ ನಡೆಯುತ್ತಿವೆ ಎಂದು ಹೇಳಿದ್ದರು. ಈಗ ಚಿತ್ರದ ಮತ್ತೊಬ್ಬ ಹೀರೋ ರಾಮ್​ಚರಣ್ ಚಿತ್ರೀಕರಣದ ಸಂದರ್ಭದ ವಿಡಿಯೊವೊಂದನ್ನು ಹಂಚಿಕೊಂಡಿದ್ದು ಅದಕ್ಕೆ ಅವರು ನೀಡಿರುವ ಅಡಿಬರಹ(ಕ್ಯಾಪ್ಶನ್) ಎಲ್ಲರ ಗಮನ ಸೆಳೆದಿದೆ.

ಇನ್ಸ್ಟಾಗ್ರಾಂನಲ್ಲಿ ಹಂಚಿಕೊಳ್ಳಲಾಗಿರುವ ವಿಡಿಯೊದಲ್ಲಿ ಜೂನಿಯರ್ ಎನ್​ಟಿಆರ್ ಮತ್ತು ರಾಮ್​ಚರಣ್ ಒಟ್ಟಿಗೇ ಕುಳಿತಿದ್ದು, ರಾಜಮೌಳಿ ಕ್ಯಾಮೆರಾ ಹಿಡಿದುಕೊಂಡಿದ್ದಾರೆ. ನಿಧಾನಕ್ಕೆ ಹಿಂದೆ ಬರುವ ಕ್ಯಾಮೆರಾವು, ರಾಜಮೌಳಿಯವರನ್ನೂ, ಅವರು ಹಿಡಿದುಕೊಂಡಿರುವ ಹಳೆಯ ಮಾದರಿಯ ಕ್ಯಾಮೆರಾವನ್ನು ತೋರಿಸುತ್ತದೆ. ಈ ಚಿತ್ರದಲ್ಲಿ ನಟರೀರ್ವರೂ ಐಡಿ ಕಾರ್ಡ್ ಹಾಕಿಕೊಂಡಿದ್ದು, ನಗುತ್ತಾ ಪೋಸ್ ನೀಡಿದ್ದಾರೆ. ವಿಡಿಯೊವನ್ನು ಹಂಚಿಕೊಂಡಿರುವ ರಾಮ್​ಚರಣ್ ಅದಕ್ಕೆ ರಾಜಮೌಳಿಯವರನ್ನು ಟ್ಯಾಗ್ ಮಾಡಿ, ‘ಆಯ್ತು ಸಾರ್, ನಾವು ರೆಡಿ’ ಎಂದು ಕ್ಯಾಪ್ಶನ್ ನೀಡಿದ್ದಾರೆ.

ರಾಮ್​ಚರಣ್ ಹಂಚಿಕೊಂಡಿರುವ ವಿಡಿಯೊ: 

RRR ಚಿತ್ರತಂಡ ಉಕ್ರೇನ್​ನಲ್ಲಿ ಚಿತ್ರದ ಮುಖ್ಯ ಭಾಗಗಳನ್ನು ಚಿತ್ರೀಕರಿಸಲು ಸಿದ್ಧತೆ ನಡೆಸಿದೆ. ಉಕ್ರೇನ್​ಗೆ ವಿಮಾನ ಲ್ಯಾಂಡ್ ಆಗುವ ಸಂದರ್ಭವನ್ನೂ ಚಿತ್ರತಂಡ ಈ ಮೊದಲು ಹಂಚಿಕೊಂಡಿತ್ತು. ಸುಮಾರು 450ಕೋಟಿ ಬಜೆಟ್​ನಲ್ಲಿ ತಯಾರಾಗುತ್ತಿರುವ ಈ ಚಿತ್ರವನ್ನು ಅಕ್ಟೋಬರ್ 13ರಂದು ಬಿಡುಗಡೆ ಮಾಡುವುದಾಗಿ ಚಿತ್ರತಂಡ ಹೇಳಿದೆ.​ ಚಿತ್ರದಲ್ಲಿ ಜ್ಯೂ. ಎನ್​ಟಿಆರ್​, ರಾಮ್​ ಚರಣ್​, ಆಲಿಯಾ ಭಟ್, ಅಜಯ್​ ದೇವಗನ್​ ​ಸೇರಿದಂತೆ ದೊಡ್ಡ ತಾರಾಗಣವಿದೆ. ಕೊಮರಾಮ್​ ಭೀಮ್​ ಪಾತ್ರದಲ್ಲಿ ಜ್ಯೂ. ಎನ್​ಟಿಆರ್​ ಕಾಣಿಸಿಕೊಳ್ಳುತ್ತಿದ್ದು, ಅಲ್ಲುರಿ ಸೀತಾರಾಮ ರಾಜು ಪಾತ್ರಕ್ಕೆ ರಾಮ್​ ಚರಣ್​ ಬಣ್ಣ ಹಚ್ಚುತ್ತಿದ್ದಾರೆ. ಆಲಿಯಾ ಭಟ್​ ಸೀತಾ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದಲ್ಲಿನ ವಿಶೇಷ ಹಾಡಿಗಾಗಿ ಚಿತ್ರತಂಡ ಉಕ್ರೇನ್​ಗೆ ತೆರಳಿದೆ.

ಇದನ್ನೂ ಓದಿ:

Junior NTR: ಅಬ್ಬಾ, RRR​ ಚಿತ್ರದಲ್ಲಿ ಹೀರೋಗೂ ಇದೆ ಐಡಿ ಕಾರ್ಡ್; ಅದಕ್ಕೆ ರಾಜಮೌಳಿ ರಿಯಾಕ್ಷನ್ ಏನು?

Salaga: ಸಖತ್ ಸೌಂಡ್ ಮಾಡ್ತಿದೆ ‘ಟಿಣಿಂಗಾ ಮಿಣಿಂಗಾ ಟಿಶ್ಶಾ’; ಈ ಹಾಡಿಗಿದೆ ವಿಶೇಷ ಹಿನ್ನೆಲೆ!

(Ram Chran Shares a special BTS from the movie RRR)

Follow Us
ಪ್ರಿಯಕರನಿಗೆ ಬೆಂಕಿ ಇಟ್ಟ ಪ್ರೇಯಸಿ: ಸ್ಫೋಟಕ ಅಂಶ ಬಿಚ್ಚಿಟ್ಟ ಎಸ್ಪಿ
ಪ್ರಿಯಕರನಿಗೆ ಬೆಂಕಿ ಇಟ್ಟ ಪ್ರೇಯಸಿ: ಸ್ಫೋಟಕ ಅಂಶ ಬಿಚ್ಚಿಟ್ಟ ಎಸ್ಪಿ
ಸೈಕಲ್ ಸವಾರನಿಂದಲ್ಲೂ 25 ರೂ. ಟೋಲ್ ವಸೂಲಿ ಮಾಡಿದ ಸಿಬ್ಬಂದಿ
ಸೈಕಲ್ ಸವಾರನಿಂದಲ್ಲೂ 25 ರೂ. ಟೋಲ್ ವಸೂಲಿ ಮಾಡಿದ ಸಿಬ್ಬಂದಿ
ಕೋಲಾರ: ಇಟ್ಟಿಗೆ ಫ್ಯಾಕ್ಟರಿಯಲ್ಲಿ ಜೀತಕ್ಕಿದ್ದ 10 ಕಾರ್ಮಿಕರ ರಕ್ಷಣೆ
ಕೋಲಾರ: ಇಟ್ಟಿಗೆ ಫ್ಯಾಕ್ಟರಿಯಲ್ಲಿ ಜೀತಕ್ಕಿದ್ದ 10 ಕಾರ್ಮಿಕರ ರಕ್ಷಣೆ
ದಾವಣಗೆರೆ ಉಪಚುನಾವಣೆ ಫಲಿತಾಂಶ ಬಂದ್ಮೇಲೆ ಜಮೀರ್ ಭವಿಷ್ಯ ನಿರ್ಧಾರ?
ದಾವಣಗೆರೆ ಉಪಚುನಾವಣೆ ಫಲಿತಾಂಶ ಬಂದ್ಮೇಲೆ ಜಮೀರ್ ಭವಿಷ್ಯ ನಿರ್ಧಾರ?
ಈ ಆವೃತ್ತಿಯ 3ನೇ ಅರ್ಧಶತಕ ಚಚ್ಚಿದ ಅಭಿಷೇಕ್
ಈ ಆವೃತ್ತಿಯ 3ನೇ ಅರ್ಧಶತಕ ಚಚ್ಚಿದ ಅಭಿಷೇಕ್
ಸಿಎಂಗೆ ಕಾಂಪ್ರಾಮೈಸ್ ಪಾಲಿಟಿಕ್ಸ್ ಅನಿವಾರ್ಯ: ಜಾರಕಿಹೊಳಿ ಅಚ್ಚರಿ ಹೇಳಿಕೆ!
ಸಿಎಂಗೆ ಕಾಂಪ್ರಾಮೈಸ್ ಪಾಲಿಟಿಕ್ಸ್ ಅನಿವಾರ್ಯ: ಜಾರಕಿಹೊಳಿ ಅಚ್ಚರಿ ಹೇಳಿಕೆ!
ಪಹಲ್ಗಾಮ್ ಅಟ್ಯಾಕ್ ನಲ್ಲಿ ಪ್ರಾಣ ಬಿಟ್ಟಿದ್ದ ಭರತ್ ನೆನೆದು ಪೋಷಕರು ಕಣ್ಣೀರು
ಪಹಲ್ಗಾಮ್ ಅಟ್ಯಾಕ್ ನಲ್ಲಿ ಪ್ರಾಣ ಬಿಟ್ಟಿದ್ದ ಭರತ್ ನೆನೆದು ಪೋಷಕರು ಕಣ್ಣೀರು
ವರುಣ್ ಧವನ್ ಜೊತೆಗೆ ಕುಣಿದು-ಕುಪ್ಪಳಿಸಿದ ಮೃಣಾಲ್ ಠಾಕೂರ್: ವಿಡಿಯೋ
ವರುಣ್ ಧವನ್ ಜೊತೆಗೆ ಕುಣಿದು-ಕುಪ್ಪಳಿಸಿದ ಮೃಣಾಲ್ ಠಾಕೂರ್: ವಿಡಿಯೋ
ಎರಡು ಭಿನ್ನ ಆರ್ಕೆಸ್ಟ್ರಾ, ‘ರಾಮಾಯಣ’ಕ್ಕಾಗಿ ರೆಹಮಾನ್ ಸಾಹಸ ನೋಡಿ
ಎರಡು ಭಿನ್ನ ಆರ್ಕೆಸ್ಟ್ರಾ, ‘ರಾಮಾಯಣ’ಕ್ಕಾಗಿ ರೆಹಮಾನ್ ಸಾಹಸ ನೋಡಿ
ಶಾಸಕ ಎನ್.ಎ. ಹ್ಯಾರಿಸ್ ನಿವಾಸದಲ್ಲಿ 37 ಲಕ್ಷ ನಗದು ಪತ್ತೆ!
ಶಾಸಕ ಎನ್.ಎ. ಹ್ಯಾರಿಸ್ ನಿವಾಸದಲ್ಲಿ 37 ಲಕ್ಷ ನಗದು ಪತ್ತೆ!