ರಾಮನ ಪಾತ್ರಧಾರಿ, ಬಿಜೆಪಿ ಅಭ್ಯರ್ಥಿ ಅರುಣ್ ಗೋವಿಲ್ ಜಯಭೇರಿ; ಸಿಕ್ಕ ಮತ ಎಷ್ಟು?
‘ರಾಮಾಯಣ’ ಸೀರಿಯಲ್ನಲ್ಲಿ ಅರುಣ್ ಗೋವಿಲ್ ಅವರು ರಾಮನ ಪಾತ್ರ ನಿಭಾಯಿಸುವ ಮೂಲಕ ಮನೆಮಾತಾಗಿದ್ದರು. 2021ರಲ್ಲಿ ಅವರು ಬಿಜೆಪಿಗೆ ಸೇರ್ಪಡೆ ಆಗಿದ್ದರು. ಈ ಬಾರಿ ಅವರಿಗೆ ಮೊದಲ ಸಲ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶ ಸಿಕ್ಕಿತು. ಮೀರತ್ ಕ್ಷೇತ್ರದಿಂದ ಕಣಕ್ಕೆ ಇಳಿದಿದ್ದ ಅವರು ಗೆಲುವು ಪಡೆದಿದ್ದಾರೆ.
ಎಂದಿನಂತೆ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ (Lok Sabha Election) ಹಲವು ಸೆಲೆಬ್ರಿಟಿಗಳು ತಮ್ಮ ಅದೃಷ್ಟ ಪರೀಕ್ಷೆ ಮಾಡಿಕೊಂಡರು. ಆ ಪೈಕಿ ಕಂಗನಾ ರಣಾವತ್, ಅರುಣ್ ಗೋವಿಲ್, ಹೇಮಾ ಮಾಲಿನಿ ಮುಂತಾದವರಿಗೆ ಜಯ ಸಿಕ್ಕಿದೆ. ಉತ್ತರ ಪ್ರದೇಶದ ಮೀರತ್ ಕ್ಷೇತ್ರದಿಂದ ಜನಪ್ರಿಯ ನಟ ಅರುಣ್ ಗೋವಿಲ್ ಅವರು ಬಿಜೆಪಿ (BJP) ಅಭ್ಯರ್ಥಿಯಾಗಿ ಚುನಾವಣೆಯ ಕಣಕ್ಕೆ ಇಳಿದಿದ್ದರು. ಇದು ಅವರ ಮೊದಲ ಚುನಾವಣೆ. ಚೊಚ್ಚಲ ಪ್ರಯತ್ನದಲ್ಲೇ ಅರುಣ್ ಗೋವಿಲ್ (Arun Govil) ಅವರು ಜಯಭೇರಿ ಬಾರಿಸಿದ್ದಾರೆ. 10,585 ಮತಗಳ ಅಂತರದಿಂದ ಅವರು ಗೆಲುವು ಸಾಧಿಸಿದ್ದಾರೆ.
1987ರಲ್ಲಿ ದೂರದರ್ಶನದಲ್ಲಿ ಪ್ರಸಾರವಾದ ‘ರಾಮಾಯಣ’ ಧಾರಾವಾಹಿಯಲ್ಲಿ ಅರುಣ್ ಗೋವಿಲ್ ಅವರು ರಾಮನ ಪಾತ್ರ ಮಾಡುವ ಮೂಲಕ ಮನೆಮಾತಾಗಿದ್ದರು. 2021ರಲ್ಲಿ ಅವರು ಬಿಜೆಪಿಗೆ ಸೇರ್ಪಡೆ ಆಗಿದ್ದರು. ಈ ಬಾರಿ ಅವರಿಗೆ ಮೊದಲ ಸಲ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶ ಸಿಕ್ಕಿತು. ಒಟ್ಟು 5,46,469 ಮತಗಳನ್ನು ಪಡೆಯುವ ಮೂಲಕ ಅವರು ಗೆದ್ದಿದ್ದಾರೆ.
ಇದನ್ನೂ ಓದಿ: ‘ಆತನ ಅಹಂಕಾರ ಮುರಿದಿದ್ದಕ್ಕೆ ಧನ್ಯವಾದ’: ಚಾರ್ ಸೌ ಪಾರ್ ಬಗ್ಗೆ ಪ್ರಕಾಶ್ ರಾಜ್ ಪ್ರತಿಕ್ರಿಯೆ
ಅರುಣ್ ಗೋವಿಲ್ ವಿರುದ್ಧ ಸಮಾಜವಾದಿ ಪಾರ್ಟಿಯ ಸುನೀತಾ ವರ್ಮಾ ಅವರು 5,35,884 ಮತಗಳನ್ನು ಪಡೆದಿದ್ದಾರೆ. ಅವರಿಗಿಂತಲೂ 10,585 ಹೆಚ್ಚು ಮತಗಳನ್ನು ಪಡೆಯುವ ಮೂಲಕ ಅರುಣ್ ಗೋವಿಲ್ ಅವರು ಗೆಲುವು ಕಂಡಿದ್ದಾರೆ. ಈಗ ಅವರಿಗೆ 66 ವರ್ಷ ವಯಸ್ಸು. ಸಂಸದನಾಗಿರುವ ಅವರಿಗೆ ಅಭಿಮಾನಿಗಳು ಅಭಿನಂದನೆ ಸಲ್ಲಿಸುತ್ತಿದ್ದಾರೆ.
मेरठ हापुड़ लोकसभा क्षेत्र के सभी मतदाताओं, कार्यकर्ताओं और शीर्ष नेतृत्व का हार्दिक आभार। आप सबने मुझ पर अपना विश्वास जताया मैं इसके लिये हृदय की गहराइयों से आपका धन्यवाद करता हूँ। आपके इस विश्वास की कसौटी पर मैं संपूर्ण रूप से खरा उतरने का प्रयास करूँगा… जय श्री राम🙏 pic.twitter.com/NxAghGaHv4
— Arun Govil (@arungovil12) June 4, 2024
ಸಿನಿಮಾದಲ್ಲಿ ಮೋದಿ ಪಾತ್ರ:
ಅರುಣ್ ಗೋವಿಲ್ ಅವರು ‘ರಾಮಾಯಣ’ ಧಾರಾವಾಹಿಯಲ್ಲಿ ರಾಮನ ಪಾತ್ರ ಮಾಡಿ ಜನರ ಮನ ಗೆದ್ದಿದ್ದರು. ಕೊವಿಡ್ ಲಾಕ್ಡೌನ್ ಸಮಯದಲ್ಲಿ ಈ ಸೀರಿಯಲ್ ಮರುಪ್ರಸಾರ ಕಂಡಿತ್ತು. ಆಗಲೂ ಅದನ್ನು ಜನರು ಅಷ್ಟೇ ಆಸಕ್ತಿಯಿಂದ ವೀಕ್ಷಿಸಿದ್ದರು. ಈ ವರ್ಷ ಫೆಬ್ರವರಿಯಲ್ಲಿ ಬಿಡುಗಡೆಯಾದ ‘ಆರ್ಟಿಕಲ್ 370’ ಸಿನಿಮಾದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಪಾತ್ರವನ್ನು ಅರುಣ್ ಗೋವಿಲ್ ನಿಭಾಯಿಸಿದ್ದರು. ಆ ಸಿನಿಮಾ ಯಶಸ್ಸು ಕಂಡ ಬೆನ್ನಲ್ಲೇ ಅವರಿಗೆ ಮೀರತ್ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಸಿಕ್ಕಿತು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.