ಫುಟ್​​ಬಾಲ್ ವಿಶ್ವಕಪ್​​ನಲ್ಲೂ ‘ರಾಮಾಯಣ’, ಇದು ಸಾಮಾನ್ಯ ಸಾಹಸ ಅಲ್ಲ

Ramayana movie: ಈ ಬಾರಿಯ ಫೀಫಾ 2026 ಪಂದ್ಯಾವಳಿಯ ಪಂದ್ಯಗಳ ನಡುವೆ ಭಾರತದ ಸಿನಿಮಾ ‘ರಾಮಾಯಣ’ದ ಗ್ಲಿಂಪ್ಸ್ ಪ್ರಸಾರ ಆಗಲಿದೆ. ಆ ಮೂಲಕ ‘ರಾಮಾಯಣ’ ಚಿತ್ರತಂಡ ಹಿಂದೆಂದೂ ಯಾವ ಭಾರತೀಯ ಸಿನಿಮಾ ಮಾಡಿರದ ಪ್ರಚಾರ ಸಾಹಸವನ್ನು ಮಾಡಲು ಮುಂದಾಗಿದೆ. ಕೆಲ ವಾರಗಳ ಹಿಂದಷ್ಟೆ ಅಮೆರಿಕದ ಪ್ರತಿಷ್ಟಿತ ಕಾಮಿಕಾನ್​​ನಲ್ಲಿ ‘ರಾಮಾಯಣ’ದ ಅದ್ಧೂರಿ ಪ್ರಚಾರ ಮಾಡಲಾಗಿತ್ತು. ಈಗ ನೇರವಾಗಿ ವಿಶ್ವದ ಅತ್ಯಂತ ದುಬಾರಿ, ಅತಿ ಹೆಚ್ಚು ಜನರು ನೋಡುವ ಇವೆಂಟ್​​ ನಲ್ಲಿ ಪ್ರಚಾರ ಮಾಡಲು ಮುಂದಾಗಿದೆ.

ಫುಟ್​​ಬಾಲ್ ವಿಶ್ವಕಪ್​​ನಲ್ಲೂ ‘ರಾಮಾಯಣ’, ಇದು ಸಾಮಾನ್ಯ ಸಾಹಸ ಅಲ್ಲ
Ramayana Fifa 2026

Updated on: Jun 05, 2026 | 10:34 PM

ಪುಟ್ಬಾಲ್ (Footbal world cup) ವಿಶ್ವಕಪ್, ಇಡೀ ವಿಶ್ವದಲ್ಲಿ ಅತಿ ಹೆಚ್ಚು ಜನ ಒಂದೇ ಬಾರಿಗೆ ನೋಡುವ ಕ್ರೀಡಾಕೂಟ. ಇತ್ತೀಚೆಗೆ ಮುಕ್ತಾಯವಾಗಿ ಐಪಿಎಲ್ ಅನ್ನು ಒಂದು ಬಾರಿ ಹಾಟ್​​ಸ್ಟಾರ್​​ನಲ್ಲಿ ಸುಮಾರು 55 ಕೋಟಿ ಜನ ವೀಕ್ಷಿಸಿದ್ದು, ಅದು ಈ ವರೆಗಿನ ದಾಖಲೆ ಎಂದಾಗಿತ್ತು. ಆದರೆ ಫುಟ್​​ಬಾಲ್​​ನ ಒಂದು ಮ್ಯಾಚನ್ನು ಒಂದೇ ಬಾರಿಗೆ ಸುಮಾರು 100 ಕೋಟಿಗೂ ಹೆಚ್ಚು ಜನ ವೀಕ್ಷಿಸುತ್ತಾರೆ. ಐಪಿಎಲ್​​ ಕ್ರೀಡಾಕೂಟದ ಒಟ್ಟು ಖರ್ಚು, ಆಟಗಾರರ ಸಂಬಳವನ್ನೂ ಸೇರಿಸಿ ಗರಿಷ್ಠ ಎಂದರೆ 5000 ಕೋಟಿ ಆಗಿರಬಹದು. ಫಿಫಾ 2026ರ ಒಟ್ಟು ಖರ್ಚು 35 ಸಾವಿರ ಕೋಟಿಗೂ ಹೆಚ್ಚು ಎನ್ನಲಾಗುತ್ತದೆ. ಇಂಥಹಾ ವಿಶ್ವ ಜನಪ್ರಿಯ ಕ್ರೀಡಾಕೂಟದ ನಡುವಲ್ಲಿ ಭಾರತದ ಸಿನಿಮಾ ‘ರಾಮಾಯಣ’ದ ಗ್ಲಿಂಪ್ಸ್ ಪ್ರದರ್ಶನ ಆಗಲಿದೆ.

ಹೌದು, ಈ ಬಾರಿಯ ಫೀಫಾ 2026 ಪಂದ್ಯಾವಳಿಯ ಪಂದ್ಯಗಳ ನಡುವೆ ಭಾರತದ ಸಿನಿಮಾ ‘ರಾಮಾಯಣ’ದ ಗ್ಲಿಂಪ್ಸ್ ಪ್ರಸಾರ ಆಗಲಿದೆ. ಆ ಮೂಲಕ ‘ರಾಮಾಯಣ’ ಚಿತ್ರತಂಡ ಹಿಂದೆಂದೂ ಯಾವ ಭಾರತೀಯ ಸಿನಿಮಾ ಮಾಡಿರದ ಪ್ರಚಾರ ಸಾಹಸವನ್ನು ಮಾಡಲು ಮುಂದಾಗಿದೆ. ಕೆಲ ವಾರಗಳ ಹಿಂದಷ್ಟೆ ಅಮೆರಿಕದ ಪ್ರತಿಷ್ಟಿತ ಕಾಮಿಕಾನ್​​ನಲ್ಲಿ ‘ರಾಮಾಯಣ’ದ ಅದ್ಧೂರಿ ಪ್ರಚಾರ ಮಾಡಲಾಗಿತ್ತು. ಈಗ ನೇರವಾಗಿ ವಿಶ್ವದ ಅತ್ಯಂತ ದುಬಾರಿ, ಅತಿ ಹೆಚ್ಚು ಜನರು ನೋಡುವ ಇವೆಂಟ್​​ ನಲ್ಲಿ ಪ್ರಚಾರ ಮಾಡಲು ಮುಂದಾಗಿದೆ.

ಫುಟ್​​ಬಾಲ್ ವಿಶ್ವಕಪ್ ಅತ್ಯಂತ ದುಬಾರಿ ಕ್ರೀಡಾಕೂಟ ಆಗಿರುವ ಕಾರಣ ಇಲ್ಲಿ ಜಾಹೀರಾತಿಗೆ ಅವಕಾಶ ಪಡೆಯಲು ಸಹ ಭಾರಿ ಮೊತ್ತದ ಹಣವನ್ನೇ ಖರ್ಚು ಮಾಡಬೇಕಾಗುತ್ತದೆ. ಹಾಗಿದ್ದಲ್ಲಿಯೂ ‘ರಾಮಾಯಣ’ ಚಿತ್ರತಂಡ ಫುಟ್​​ಬಾಲ್ ಪಂದ್ಯದ ನಡುವೆ ಸಿನಿಮಾದ 20 ರಿಂದ 30 ಸೆಕೆಂಡುಗಳ ದೃಶ್ಯವನ್ನು ಪ್ರದರ್ಶಿಸಲು ಮುಂದಾಗಿದೆ. ಇದು ದೊಡ್ಡ ಖರ್ಚಿನ ಬಾಬತ್ತಾಗಲಿದೆ.

ಇದನ್ನೂ ಓದಿ:ಮ್ಯಾಂಗೋ ಪಚ್ಚ ಸಿನಿಮಾದಲ್ಲಿ ಮಿಂಚಿದ ಕಾಜಲ್ ಕುಂದರ್

‘ರಾಮಾಯಣ’ ಸಿನಿಮಾವನ್ನು ನಮಿತ್ ಮಲ್ಹೋತ್ರಾ ಮತ್ತು ಯಶ್ ಅವರು ಜಂಟಿಯಾಗಿ ನಿರ್ಮಾಣ ಮಾಡಿದ್ದಾರೆ. ಸಿನಿಮಾನಲ್ಲಿ ರಾಮನ ಪಾತ್ರದಲ್ಲಿ ರಣ್​​ಬೀರ್ ಕಪೂರ್ ನಟಿಸಿದ್ದಾರೆ. ಸೀತೆಯ ಪಾತ್ರದಲ್ಲಿ ಸಾಯಿ ಪಲ್ಲವಿ ನಟಿಸಿದ್ದಾರೆ. ರಾವಣನ ಪಾತ್ರದಲ್ಲಿ ಯಶ್ ಅವರು ನಟಿಸಿದ್ದಾರೆ. ಸಿನಿಮಾವನ್ನು ‘ದಂಗಲ್’ ಖ್ಯಾತಿಯ ನಿತೀಶ್ ತಿವಾರಿ ನಿರ್ದೇಶನ ಮಾಡಿದ್ದಾರೆ. ಸಿನಿಮಾ ಇದೇ ವರ್ಷ ದೀಪಾವಳಿಗೆ ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:12 pm, Fri, 5 June 26

Manjunatha C

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Follow Us