AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಟಾಕ್ಸಿಕ್’ ಸಿನಿಮಾ ಟಿಕೆಟ್ ಬೆಲೆ ಬಗ್ಗೆ ಅಭಿಮಾನಿಗಳಿಗೆ ಶುರುವಾಗಿದೆ ಭಯ

ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಾಣದ ‘ಜನ ನಾಯಗನ್’ ಚಿತ್ರದ ಸಾವಿರ ರೂಪಾಯಿ ಟಿಕೆಟ್ ಬೆಲೆ ನೋಡಿ ಅಭಿಮಾನಿಗಳು ಶಾಕ್ ಆಗಿದ್ದಾರೆ. ಈಗ ರಾಕಿಂಗ್ ಸ್ಟಾರ್ ಯಶ್ ಅಭಿನಯದ, 500 ಕೋಟಿ ಬಜೆಟ್‌ನ ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾದ ಟಿಕೆಟ್ ದರವೂ ಗಗನಕ್ಕೇರಬಹುದೇ ಎಂಬ ಭೀತಿ ಎದುರಾಗಿದೆ. ಹಾಗಾಗದಿರಲಿ ಎಂಬುದು ಅಭಿಮಾನಿಗಳ ಕೋರಿಕೆ.

‘ಟಾಕ್ಸಿಕ್’ ಸಿನಿಮಾ ಟಿಕೆಟ್ ಬೆಲೆ ಬಗ್ಗೆ ಅಭಿಮಾನಿಗಳಿಗೆ ಶುರುವಾಗಿದೆ ಭಯ
ಜನ ನಾಯಗನ್-ಟಾಕ್ಸಿಕ್
ರಾಜೇಶ್ ದುಗ್ಗುಮನೆ
|

Updated on:Jul 22, 2026 | 12:22 PM

Share

ಮುಖ್ಯಾಂಶಗಳು

  • ‘ಜನ ನಾಯಗನ್’ ಶಾಕ್
  • ಸಿಂಗಲ್ ಸ್ಕ್ರೀನ್‌ನಲ್ಲೇ 1000 ಟಿಕೆಟ್ ಬೆಲೆಗೆ ಫ್ಯಾನ್ಸ್ ಕಂಗಾಲು
  • 500 ಕೋಟಿ ಬಜೆಟ್ ಕಲೆಕ್ಷನ್ ಟಾರ್ಗೆಟ್

ಕೆವಿಎನ್ ಪ್ರೊಡಕ್ಷನ್​ ನಿರ್ಮಾಣದ ‘ಜನ ನಾಯಗನ್’ ಸಿನಿಮಾ (Jana Nayagan) ರಿಲೀಸ್​​ಗೆ ರೆಡಿ ಇದೆ. ಈ ಚಿತ್ರದ ಟಿಕೆಟ್ ಬೆಲೆ ಈಗಾಗಲೇ ಗಗನಕ್ಕೇರಿದೆ. ಏಕಪರದೆ ಚಿತ್ರಮಂದಿರಗಳಲ್ಲೇ ಈ ಚಿತ್ರದ ಟಿಕೆಟ್ ಬೆಲೆ ಬರೋಬ್ಬರಿ ಸಾವಿರ ರೂಪಾಯಿ ತಲುಪಿದೆ. ಈ ಬಗ್ಗೆ ಸೋಶಿಯಲ್ ಮೀಡಿಯಾ ಹಾಗೂ ಗಾಂಧಿನಗರದಲ್ಲಿ ಈಗಾಗಲೇ ದೊಡ್ಡ ಮಟ್ಟದ ಚರ್ಚೆ ಮತ್ತು ಆಕ್ರೋಶಗಳು ವ್ಯಕ್ತವಾಗುತ್ತಿವೆ. ಇದೇ ಹೊತ್ತಲ್ಲಿ, ಇದೇ ಕೆವಿಎನ್ ಸಂಸ್ಥೆ ನಿರ್ಮಾಣ ಮಾಡಿರೋ, ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಟಾಕ್ಸಿಕ್’ ಚಿತ್ರ ಆಗಸ್ಟ್ 26ರಂದು ವಿಶ್ವಾದ್ಯಂತ ಬಿಡುಗಡೆಯಾಗುತ್ತಿದೆ. ‘ಜನ ನಾಯಗನ್’ ಚಿತ್ರದ ಟಿಕೆಟ್ ದರ ನೋಡಿ ಬೆಚ್ಚಿಬಿದ್ದಿರುವ ಅಭಿಮಾನಿಗಳಿಗೆ, ಈಗ ‘ಟಾಕ್ಸಿಕ್’ ಸಿನಿಮಾದ ಟಿಕೆಟ್ ಬೆಲೆ ಏನಾಗಬಹುದು ಎಂಬ ಆತಂಕ ಹಾಗೂ ಭಯ ಈಗಾಗಲೇ ಶುರುವಾಗಿದೆ.

‘ಟಾಕ್ಸಿಕ್’ ಚಿತ್ರದಲ್ಲಿ ಯಶ್ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ನಯನತಾರಾ, ರುಕ್ಮಿಣಿ ವಸಂತ್ ಮೊದಲಾದವರು ನಟಿಸಿದ್ದಾರೆ. ಈ ಸಿನಿಮಾ ಬಗ್ಗೆ ಅಭಿಮಾನಿಗಳಿಗೆ ನಿರೀಕ್ಷೆ ಇದೆ. ಇದೇ ನಿರೀಕ್ಷೆಯನ್ನೇ ಬಂಡವಾಳ ಮಾಡಿಕೊಳ್ಳಲು ನಿರ್ಮಾಣ ಸಂಸ್ಥೆ ಮುಂದಾದರೆ ಹೇಗೆ ಎಂದು ಅಭಿಮಾನಿಗಳು ಆತಂಕದಲ್ಲಿದ್ದಾರೆ. ‘ಟಾಕ್ಸಿಕ್’ ಟಿಕೆಟ್ ದರ ಹೆಚ್ಚಲು ಕಾರಣವಾಗಬಹುದಾದ ಅಂಶಗಳು ಈ ಕೆಳಗಿನಂತಿವೆ.

ಬಿಗ್ ಬಜೆಟ್ ಸಿನಿಮಾ: ‘ಟಾಕ್ಸಿಕ್’ ಅತಿ ದೊಡ್ಡ ಬಜೆಟ್‌ನಲ್ಲಿ ಅದ್ದೂರಿಯಾಗಿ ನಿರ್ಮಾಣವಾಗುತ್ತಿರುವ ಚಿತ್ರ. ಪ್ಯಾನ್-ಇಂಡಿಯಾ ಮಟ್ಟದಲ್ಲಿ ಮೂಡಿಬರುತ್ತಿರುವ ಕಾರಣ ನಿರ್ಮಾಣ ವೆಚ್ಚ 500 ಕೋಟಿ ರೂಪಾಯಿ ದಾಟಿದೆ. ಈ ಭಾರಿ ವೆಚ್ಚವನ್ನು ಸರಿದೂಗಿಸಲು ಟಿಕೆಟ್ ದರ ಹೆಚ್ಚಾಗುವ ಸಾಧ್ಯತೆ ದಟ್ಟವಾಗಿದೆ.

ಹೆಚ್ಚು ಕಮಾಯಿ ಮಾಡುವ ಉದ್ದೇಶ: ಇತ್ತೀಚಿನ ದಿನಗಳಲ್ಲಿ ದೊಡ್ಡ ಸಿನಿಮಾಗಳು ಮೊದಲ ವಾರದಲ್ಲೇ ಗರಿಷ್ಠ ಕಲೆಕ್ಷನ್ ಮಾಡುವ ಗುರಿ ಹೊಂದಿರುತ್ತವೆ. ಆರಂಭದ ದಿನಗಳ ಕ್ರೇಜ್ ಬಳಸಿಕೊಂಡು ಬಾಕ್ಸ್ ಆಫೀಸ್‌ನಲ್ಲಿ ದಾಖಲೆ ಬರೆಯಲು ನಿರ್ಮಾಪಕರು ಮತ್ತು ವಿತರಕರು ಟಿಕೆಟ್ ದರವನ್ನು ಹೆಚ್ಚಿಸಲು ಮುಂದಾಗುತ್ತಾರೆ.

ಬಹುನಿರೀಕ್ಷಿತ ಸಿನಿಮಾ: ‘ಕೆಜಿಎಫ್ 2’ ನಂತರ ತೆರೆಗೆ ಬರುತ್ತಿರುವ ಯಶ್ ಚಿತ್ರ ಇದಾಗಿರುವುದರಿಂದ ಚಿತ್ರದ ಮೇಲಿನ ನಿರೀಕ್ಷೆ ಬೆಟ್ಟದಷ್ಟಿದೆ. ಇಂತಹ ಹೈ-ಹೈಪ್ ಇರುವ ಬಹುನಿರೀಕ್ಷಿತ ಸಿನಿಮಾಗಳನ್ನು ನೋಡಲು ಅಭಿಮಾನಿಗಳು ಮುಗಿಬೀಳುತ್ತಾರೆ ಎಂಬ ನಂಬಿಕೆಯಿಂದ ಸಹಜವಾಗಿಯೇ ಟಿಕೆಟ್ ದರ ದುಬಾರಿಯಾಗುವ ಆತಂಕ ಎದುರಾಗಿದೆ.

ಇದನ್ನೂ ಓದಿ: ಸೆನ್ಸಾರ್ ಕಟ್ ಇಲ್ಲದೆ ಜನ ನಾಯಗನ್ ಸಿನಿಮಾ ನೋಡಲು ವಿಜಯ್ ಅಭಿಮಾನಿಗಳಿಗೆ ಸುವರ್ಣಾವಕಾಶ

ಒಟ್ಟಿನಲ್ಲಿ ‘ಜನ ನಾಯಗನ್’ ಹಾದಿಯಲ್ಲೇ ‘ಟಾಕ್ಸಿಕ್’ ಸಿನಿಮಾ ಕೂಡ ಸಾಗಿದರೆ, ಸಾಮಾನ್ಯ ಪ್ರೇಕ್ಷಕರು ಚಿತ್ರಮಂದಿರಕ್ಕೆ ಬರುವುದು ಕಷ್ಟ ಎಂಬ ಮಾತುಗಳು ಕೇಳಿಬರುತ್ತಿವೆ. ಯಶ್ ಕೂಡ ಈ ಚಿತ್ರದ ಸಹನಿರ್ಮಾಪಕರು. ಅವರು ಅಭಿಮಾನಿಗಳಿಗಾಗಿ ಟಿಕೆಟ್ ಬೆಲೆ ಕಡಿಮೆ ಇಡೋ ನಿರ್ಧಾರ ತೆಗೆದುಕೊಳ್ಳಬೇಕು ಎಂಬುದು ಅನೇಕರ ಒತ್ತಾಯ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 10:48 am, Tue, 21 July 26

Follow Us
ರಾಜೇಶ್ ದುಗ್ಗುಮನೆ
ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
ಅಲೆಮಾರಿ ಕುಟುಂಬಗಳ ಮಕ್ಕಳಿಗಾಗಿ ಗುಡಿಸಲಿನಲ್ಲಿ ಗ್ರಂಥಾಲಯ
ಅಲೆಮಾರಿ ಕುಟುಂಬಗಳ ಮಕ್ಕಳಿಗಾಗಿ ಗುಡಿಸಲಿನಲ್ಲಿ ಗ್ರಂಥಾಲಯ
ಕೊನೆಗೂ ಪೆನ್​ಡ್ರೈವ್​ನಲ್ಲಿ ಏನಿದೆ ಎಂಬ ಗುಟ್ಟು ಬಿಚ್ಚಿಟ್ಟ ಕುಮಾರಸ್ವಾಮಿ
ಕೊನೆಗೂ ಪೆನ್​ಡ್ರೈವ್​ನಲ್ಲಿ ಏನಿದೆ ಎಂಬ ಗುಟ್ಟು ಬಿಚ್ಚಿಟ್ಟ ಕುಮಾರಸ್ವಾಮಿ
ಹಾಸನ ಡಿಸಿ ಮತ್ತು ಜಿಲ್ಲಾ ಸಚಿವರ ಸಂಘರ್ಷ ಶುರುವಾಗಿದೆ ಎಂದು ಹೆಚ್​​ಡಿಕೆ
ಹಾಸನ ಡಿಸಿ ಮತ್ತು ಜಿಲ್ಲಾ ಸಚಿವರ ಸಂಘರ್ಷ ಶುರುವಾಗಿದೆ ಎಂದು ಹೆಚ್​​ಡಿಕೆ
ಸಿಜೆಪಿ ಪ್ರತಿಭಟನೆ ವಿರುದ್ಧ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ವಾಗ್ದಾಳಿ
ಸಿಜೆಪಿ ಪ್ರತಿಭಟನೆ ವಿರುದ್ಧ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ವಾಗ್ದಾಳಿ
‘ಪ್ರೇಮದ ಊರಲಿ’ ಚಿತ್ರಕ್ಕಾಗಿ ನನ್ನ ಸಿನಿಮಾ ರಿಲೀಸ್ ಮುಂದಕ್ಕೆ ಹಾಕಿದ್ದೀನಿ’
‘ಪ್ರೇಮದ ಊರಲಿ’ ಚಿತ್ರಕ್ಕಾಗಿ ನನ್ನ ಸಿನಿಮಾ ರಿಲೀಸ್ ಮುಂದಕ್ಕೆ ಹಾಕಿದ್ದೀನಿ’
ಬಳ್ಳಾರಿ ಸರ್ಕಾರಿ ಆಸ್ಪತ್ರೆಯಲ್ಲಿ ಕರೆಂಟ್ ಕಟ್: ತನಿಖೆ ಮಾಡುತ್ತೇವೆ, ಖಾದರ್
ಬಳ್ಳಾರಿ ಸರ್ಕಾರಿ ಆಸ್ಪತ್ರೆಯಲ್ಲಿ ಕರೆಂಟ್ ಕಟ್: ತನಿಖೆ ಮಾಡುತ್ತೇವೆ, ಖಾದರ್
ಕನ್​​ಫೆಷನ್ ರೂಮಿನಲ್ಲಿ ಬಿಕ್ಕಿ-ಬಿಕ್ಕಿ ಅತ್ತ ಮಂಜ: ವಿಡಿಯೋ ನೋಡಿ
ಕನ್​​ಫೆಷನ್ ರೂಮಿನಲ್ಲಿ ಬಿಕ್ಕಿ-ಬಿಕ್ಕಿ ಅತ್ತ ಮಂಜ: ವಿಡಿಯೋ ನೋಡಿ
ಪ್ರತಿಭಟನೆ ವೇಳೆ ದೆಹಲಿಯಲ್ಲಿ ಮಾಜಿ ಸಿಎಂ ಮಮತಾ ಬ್ಯಾನರ್ಜಿ ಪೊಲೀಸ್ ವಶಕ್ಕೆ
ಪ್ರತಿಭಟನೆ ವೇಳೆ ದೆಹಲಿಯಲ್ಲಿ ಮಾಜಿ ಸಿಎಂ ಮಮತಾ ಬ್ಯಾನರ್ಜಿ ಪೊಲೀಸ್ ವಶಕ್ಕೆ
ಮಂಗಳೂರಿನಲ್ಲಿ ಚಲಿಸುತ್ತಿದ್ದ ಬಸ್ಸಿಗೆ ರಭಸವಾಗಿ ಬಡಿದ ಗಿಡುಗ
ಮಂಗಳೂರಿನಲ್ಲಿ ಚಲಿಸುತ್ತಿದ್ದ ಬಸ್ಸಿಗೆ ರಭಸವಾಗಿ ಬಡಿದ ಗಿಡುಗ
ರಂಗನಾಥಸ್ವಾಮಿ ದೇಗುಲದಲ್ಲಿ ಎಚ್.ಡಿ. ಕುಮಾರಸ್ವಾಮಿ,ರೇವಣ್ಣ ವಿಶೇಷ ಪೂಜೆ
ರಂಗನಾಥಸ್ವಾಮಿ ದೇಗುಲದಲ್ಲಿ ಎಚ್.ಡಿ. ಕುಮಾರಸ್ವಾಮಿ,ರೇವಣ್ಣ ವಿಶೇಷ ಪೂಜೆ