‘ರಾಮಾಯಣ’ ಫಸ್ಟ್​ ಲುಕ್ ಪವರ್; ನಿರ್ಮಾಣ ಸಂಸ್ಥೆಗೆ ಸಾವಿರ ಕೋಟಿ ಲಾಭ

ರಣಬೀರ್ ಕಪೂರ್ ಮತ್ತು ಯಶ್ ಅಭಿನಯದ ‘ರಾಮಾಯಣ’ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದೆ. 1600 ಕೋಟಿ ರೂಪಾಯಿ ಬಜೆಟ್‌ನೊಂದಿಗೆ ದೊಡ್ಡ ಪ್ರಮಾಣದ ನಿರೀಕ್ಷೆಯನ್ನು ಹುಟ್ಟುಹಾಕಿದೆ. ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾದ ನಂತರ ಪ್ರೈಮ್ ಫೋಕಸ್ ಕಂಪನಿಯ ಷೇರು ಬೆಲೆಯಲ್ಲಿ ಗಣನೀಯ ಏರಿಕೆಯಾಗಿದೆ.

‘ರಾಮಾಯಣ’ ಫಸ್ಟ್​ ಲುಕ್ ಪವರ್; ನಿರ್ಮಾಣ ಸಂಸ್ಥೆಗೆ ಸಾವಿರ ಕೋಟಿ ಲಾಭ
ರಾಮಾಯಣ
Updated By: ರಾಜೇಶ್ ದುಗ್ಗುಮನೆ

Updated on: Jul 09, 2025 | 10:30 AM

ರಣಬೀರ್ ಕಪೂರ್ (Ranbir Kapoor) ರಾಮನಾಗಿ, ಯಶ್ ರಾವಣನಾಗಿ ಆಗಿ ದೊಡ್ಡ ಪರದೆಯ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ಅವರ ‘ರಾಮಾಯಣ’ ಚಿತ್ರದ ಫಸ್ಟ್ ಲುಕ್ ಬಹಿರಂಗವಾಗಿದೆ. ಅಂದಿನಿಂದ ಚಿತ್ರ ಸುದ್ದಿಯಲ್ಲಿದೆ. ಯಶ್ ಮತ್ತು ರಣಬೀರ್ ಕಪೂರ್ ಅವರ ಲುಕ್ ಅಭಿಮಾನಿಗಳನ್ನು ಸಂತೋಷಪಡಿಸಿದೆ. ವಾಸ್ತವವಾಗಿ, ‘ರಾಮಾಯಣ‘ದ ಎರಡೂ ಭಾಗಗಳ ಬಜೆಟ್ 1600 ಕೋಟಿ ರೂ. ಮೊದಲ ಭಾಗಕ್ಕೆ 835 ಕೋಟಿ ರೂ. ಎರಡನೇ ಭಾಗಕ್ಕೆ 700 ಕೋಟಿ ರೂಪಾಯಿ. 2026 ರ ದೀಪಾವಳಿಯಂದು ಬಿಡುಗಡೆಯಾಗುತ್ತಿರುವ ಈ ಚಿತ್ರವು ಈಗಾಗಲೇ 1000 ಕೋಟಿ ರೂ. ವ್ಯವಹಾರ ಮಾಡಿದೆ. ಈ ಪವಾಡವು ಫಸ್ಟ್ ಲುಕ್ ವಿಡಿಯೋ ಮೂಲಕ ಸಾಧ್ಯವಾಗಿದೆ ಎಂದರೆ ನಂಬಲೇಬೇಕು.

ರಣಬೀರ್ ಕಪೂರ್ ಅವರ ’ರಾಮಾಯಣ’ ಚಿತ್ರವನ್ನು ಪ್ರೈಮ್ ಫೋಕಸ್ ಕಂಪನಿಯ ಮೂಲಕ ನಮಿತ್ ಮಲ್ಹೋತ್ರಾ ನಿರ್ಮಿಸುತ್ತಿದ್ದಾರೆ. ಈ ಕಂಪನಿಯು 2006 ರಿಂದ ಭಾರತೀಯ ಷೇರು ವಿನಿಮಯ ಕೇಂದ್ರದಲ್ಲಿ ಪಟ್ಟಿಮಾಡಲ್ಪಟ್ಟಿದೆ. ಈಗ, ಕೆಲವು ದಿನಗಳ ಹಿಂದೆ ‘ರಾಮಾಯಣ’ದ ಮೊದಲ ನೋಟ ರಿಲೀಸ್ ಆಯಿತು, ಕಂಪನಿಯ ಷೇರು ಬೆಲೆ ಶೇಕಡಾ 30ರಷ್ಟು ಹೆಚ್ಚಾಗಿದೆ.

‘ರಾಮಾಯಣ’ ಚಿತ್ರಕ್ಕೆ ನೀರಿನಂತೆ ಹಣವನ್ನು ಖರ್ಚು ಮಾಡಲಾಗಿದೆ. ಈಗ ಈ ಚಿತ್ರ ದೊಡ್ಡ ಮಟ್ಟದಲ್ಲಿ ನಿರ್ಮಾಣವಾಗುತ್ತಿರುವುದರಿಂದ, ಈ ಬಗ್ಗೆಯೂ ಚರ್ಚೆ ಜೋರಾಗಿದೆ. ಇತ್ತೀಚೆಗೆ ಬಾಕ್ಸ್ ಆಫೀಸ್ ವರ್ಲ್ಡ್‌ವೈಡ್‌ನಲ್ಲಿ ಒಂದು ವರದಿ ಪ್ರಕಟವಾಗಿತ್ತು. ಜೂನ್ 25 ರಿಂದ ಜುಲೈ 1 ರ ನಡುವೆ… ನಮಿತ್ ಮಲ್ಹೋತ್ರಾ ಅವರ ‘ಪ್ರೈಮ್ ಫೋಕಸ್’ ಚಿತ್ರದ ಪಾಲು ಶೇ. 30 ರಷ್ಟು ಏರಿಕೆಯಾಗಿದೆ. 113.47 ರೂಪಾಯಿ ಇದ್ದ ಶೇರು. 149.69 ಕ್ಕೆ ಏರಿತು.

ಇದನ್ನೂ ಓದಿ
‘ನಾನು ಗೌರಿಯನ್ನು ಮದುವೆಯಾಗಿ ಆಗಿದೆ..’; ಶಾಕಿಂಗ್ ಅಪ್​ಡೇಟ್ ಕೊಟ್ಟ ಆಮಿರ್
ನಿರ್ದೇಶಕನ ಜೊತೆಗಿನ ಪ್ರೀತಿ ವಿಚಾರವನ್ನು ಖಚಿತಪಡಿಸಿದ ಸಮಂತಾ; ಕ್ಯೂಟ್ ಫೋಟೋ
ಆಂಧ್ರ ಪ್ರದೇಶದಲ್ಲಿ ಗಾಂಜಾ ಕಡಿಮೆ ಮಾಡಿದ ನಟ ಪವನ್ ಕಲ್ಯಾಣ್
‘ನಿವೇದಿತಾಳನ್ನು ಈಗಲೂ ಮಿಸ್ ಮಾಡಿ ಕೊಳ್ತೀನಿ’; ಚಂದನ್ ಶೆಟ್ಟಿ

ಇದನ್ನೂ ಓದಿ: ರಾಮನ ಪಾತ್ರ ಮಾಡಿದ್ದ ಕಲಾವಿದನಿಗೆ ಹೊಸ ‘ರಾಮಾಯಣ’ದಲ್ಲಿ ದಶರಥನ ಪಾತ್ರ; ಮೂಡಿತು ಅಸಮಾಧಾನ

ಜುಲೈ 3 ರಂದು ಪ್ರೈಮ್ ಫೋಕಸ್‌ನ ಷೇರು 176 ರೂ.ಗೆ ಏರಿತು. ಜುಲೈ 1 ರಂದು ಕಂಪನಿಯ ಬಂಡವಾಳ 4,638 ಕೋಟಿ ರೂ.ಗಳಾಗಿದ್ದರೆ, ಕೇವಲ 48 ಗಂಟೆಗಳಲ್ಲಿ 5,641 ಕೋಟಿ ರೂ.ಗಳಿಗೆ ಏರಿತು. ಅಂದರೆ ಕೇವಲ ಎರಡು ದಿನಗಳಲ್ಲಿ 1000 ಕೋಟಿ ರೂ.ಗಳಿಗಿಂತ ಹೆಚ್ಚು ಲಾಭ ಗಳಿಸಿದೆ. ಆದಾಗ್ಯೂ, ಮಾರುಕಟ್ಟೆ ಮುಗಿಯುವ ಹೊತ್ತಿಗೆ ಪ್ರೈಮ್ ಫೋಕಸ್‌ನ ಷೇರು ಸ್ವಲ್ಪ ಕಡಿಮೆಯಾಗಿತ್ತು.

ರಣಬೀರ್ ಕಪೂರ್ 20 ಕೋಟಿ ಹೂಡಿಕೆ ಮಾಡಿದ್ದಾರಾ?

ಹೊಸ ವರದಿಯ ಪ್ರಕಾರ, ರಣಬೀರ್ ಕಪೂರ್ ಪ್ರೈಮ್ ಫೋಕಸ್‌ನಲ್ಲಿ 20 ಕೋಟಿ ರೂಪಾಯಿ ಹೂಡಿಕೆ ಮಾಡಿದ್ದಾರೆ. ಆದಾಗ್ಯೂ, ಅವರು ಪಡೆದಿರುವ ಷೇರುಗಳು ಪ್ರವರ್ತಕೇತರ ವರ್ಗಕ್ಕೆ ಸೇರಿವೆ. ಅಂದರೆ ಅವರು ಹೂಡಿಕೆದಾರರಾಗಿ ಮಾತ್ರ ಸಂಬಂಧ ಹೊಂದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.