ರಾಮನ ಪಾತ್ರ ಮಾಡಿದ್ದ ಕಲಾವಿದನಿಗೆ ಹೊಸ ‘ರಾಮಾಯಣ’ದಲ್ಲಿ ದಶರಥನ ಪಾತ್ರ; ಮೂಡಿತು ಅಸಮಾಧಾನ
ಅರುಣ್ ಗೋವಿಲ್ ಅವರು 1987ರ ಟಿವಿ ರಾಮಾಯಣದಲ್ಲಿ ರಾಮನ ಪಾತ್ರ ನಿರ್ವಹಿಸಿದ್ದರು. ನಿತೇಶ್ ತಿವಾರಿ ನಿರ್ದೇಶನದ ಹೊಸ ರಾಮಾಯಣದಲ್ಲಿ ಅವರು ದಶರಥನ ಪಾತ್ರದಲ್ಲಿದ್ದಾರೆ. ಈ ಬಗ್ಗೆ ದೀಪಿಕಾ ಚಿಖ್ಲಿಯಾ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅರುಣ್ ಗೋವಿಲ್ ರಾಮನಾಗಿ ಅವರಲ್ಲಿ ಉಳಿದಿರುವ ಚಿತ್ರಣವನ್ನು ಬದಲಿಸುವುದು ಕಷ್ಟ ಎಂದು ಅವರು ಹೇಳಿದ್ದಾರೆ.

ನಿತೇಶ್ ತಿವಾರಿ ನಿರ್ದೇಶನದ ‘ರಾಮಾಯಣ’ (Ramayana) ಸಿನಿಮಾ ಸಾಕಷ್ಟು ಸುದ್ದಿ ಆಗುತ್ತಿದೆ. ರಾಮನಾಗಿ ರಣಬೀರ್ ಕಪೂರ್, ರಾವಣನಾಗಿ ಯಶ್ ಕಾಣಿಸಿಕೊಂಡಿದ್ದಾರೆ. ಇವರ ಫಸ್ಟ್ ಲುಕ್ ಇತ್ತೀಚೆಗೆ ಬಿಡುಗಡೆ ಕಂಡಿದೆ. 2026ರ ದೀಪಾವಳಿಗೆ ಈ ಸಿನಿಮಾ ರಿಲೀಸ್ ಆಗಲಿದೆ. ಈ ಸಿನಿಮಾದಲ್ಲಿ ಅರುಣ್ ಗೋವಿಲ್ ಅವರು ದಶರಥನ ಪಾತ್ರ ಮಾಡಿದ್ದಾರೆ. ಈ ವಿಚಾರದ ಬಗ್ಗೆ ಸಾಕಷ್ಟು ಚರ್ಚೆ ನಡೆದಿದೆ. ಕಿರುತೆರೆ ‘ರಾಮಾಯಣ’ದಲ್ಲಿ ಅವರು ರಾಮನ ಪಾತ್ರ ಮಾಡಿದ್ದರು. ಈಗ ಅವರು ದಶರಥನಾಗಿದ್ದು ಎಷ್ಟು ಸರಿ ಎನ್ನುವ ಪ್ರಶ್ನೆ ಮೂಡಿದೆ.
1987ರಲ್ಲಿ ಪ್ರಸಾರ ಕಂಡ ‘ರಾಮಾಯಣ’ ಧಾರಾವಾಹಿಯಲ್ಲಿ ಅರುಣ್ ಗೋವಿಲ್ ರಾಮನಾದರೆ, ದೀಪಿಕಾ ಚಿಖಿಲಾ ಅವರು ಸೀತೆ ಪಾತ್ರ ಮಾಡಿದ್ದರು. ಈಗ ಹಲವು ವರ್ಷಗಳ ಬಳಿಕ ಮತ್ತೆ ರಾಮಾಯಣ ಹಿರಿತೆರೆಯಲ್ಲಿ ಅದ್ದೂರಿಯಾಗಿ ಮೂಡಿ ಬರುತ್ತಿದೆ. ಇಲ್ಲಿ ಚರ್ಚೆಗೆ ಕಾರಣ ಆಗಿದ್ದು ಅರುಣ್ ಅವರು ದಶರಥನಾಗಿ ಒಪ್ಪಲು ನಟಿಸಿದ್ದು. ಈ ಬಗ್ಗೆ ದೀಪಿಕಾ ಚಿಖಿಲಾ ಮಾತನಾಡಿದ್ದಾರೆ.
‘ನಾನು ಅರುಣ್ ಅವರನ್ನು ರಾಮನಾಗಿ ನೋಡಿದ್ದೇನೆ. ನನ್ನನ್ನು ನಾನು ಸೀತಾ ಆಗಿ ನೋಡಿದ್ದೇನೆ. ಆದರೆ, ಈಗ ಅವರನ್ನು ದಶರಥನ ಅವತಾರದಲ್ಲಿ ನೋಡಲು ಕಷ್ಟ ಎನಿಸುತ್ತದೆ. ಇದು ಅವರ ನಿರ್ಧಾರ. ನೀವು ರಾಮನಾಗಿ ಕಾಣಿಸಿಕೊಂಡಿದ್ದರೆ ನೀವು ಯಾವಾಗಲೂ ರಾಮನೇ. ಈ ಇಮೇಜ್ನ ಬ್ರೇಕ್ ಮಾಡೋದು ಕಷ್ಟ’ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ‘ರಾಮಾಯಣ’ ವಿಚಾರದಲ್ಲಿ ಯಶ್ ಅಭಿಮಾನಿಗಳಿಗೆ ಬ್ಯಾಡ್ ನ್ಯೂಸ್
ರಾಮಾಯಣದಲ್ಲಿ ನೀವು ಯಾವುದಾದರೂ ಪಾತ್ರ ಮಾಡ ಬಲ್ಲಿರೇ ಎಂದು ಅವರಿಗೆ ಕೇಳಲಾಗಿದೆ. ಇದಕ್ಕೆ ಅವರು ಇಲ್ಲ ಎನ್ನುವ ಉತ್ತರ ನೀಡಿದ್ದಾರೆ. ‘ನಾನು ಸೀತಾ ಆಗಿ ಕಾಣಿಸಿಕೊಂಡೆ ಎಂದರೆ ನಾನು ರಾಮಾಯಣದಲ್ಲಿ ಮತ್ಯಾವ ಪಾತ್ರ ಮಾಡಲು ನನ್ನಿಂದ ಸಾಧ್ಯ ಎನಿಸೋದಿಲ್ಲ. ನಾನು ಮಹಾಭಾರತವೋ ಅಥವಾ ಶಿವ ಪುರಾಣವೋ ಮಾಡುವುದಾದರೆ ಯೋಚಿಸಬಹುದು. ಆದರೆ, ರಾಮಾಯಣದಲ್ಲೇ ಬೇರೆ ಪಾತ್ರ ಮಾಡಬೇಕು ಎಂದರೆ ಅಸು ಅಸಾಧ್ಯ’ ಎಂದಿದ್ದಾರೆ ಅವರು. ಇನ್ನು ಅವರಿಗೆ ಯಾವುದೇ ಪಾತ್ರವನ್ನು ಮಾಡಲು ಯಾರೂ ಅಪ್ರೋಚ್ ಮಾಡಿಲ್ಲವಂತೆ. ಮಾಡಿದರೂ ಅವರು ನೋ ಎನ್ನುತ್ತಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.








