ರಜನಿಕಾಂತೇ ಬಂದು ರಮೇಶ್ ಅರವಿಂದ್​ಗೆ ಬಂದು ಪರಿಚಯ ಹೇಳಿದಾಗ

ರಮೇಶ್ ಅರವಿಂದ್ ಅವರು "ಭರ್ಜರಿ ಬ್ಯಾಚುಲರ್ಸ್" ಕಾರ್ಯಕ್ರಮದಲ್ಲಿ ರಜನಿಕಾಂತ್ ಅವರನ್ನು ಭೇಟಿಯಾದ ಅನುಭವವನ್ನು ಹಂಚಿಕೊಂಡಿದ್ದಾರೆ. ಚಿತ್ರೀಕರಣದ ವೇಳೆ ರಜನಿಕಾಂತ್ ಅವರೇ ಸ್ವಯಂ ಪರಿಚಯಿಸಿಕೊಂಡಿದ್ದು, ಅವರಿಗೆ ಅಪಾರ ಸಂತೋಷ ತಂದಿತು ಎಂದು ಅವರು ಹೇಳಿದ್ದಾರೆ. ರವಿಚಂದ್ರನ್ ಅವರೊಂದಿಗಿನ ಗೆಳೆತನ ಮತ್ತು ಶಾಂತಿ ಕ್ರಾಂತಿ ಚಿತ್ರದಲ್ಲಿನ ಅವರ ಅನುಭವವನ್ನು ಅವರು ನೆನಪಿಸಿಕೊಂಡರು.

ರಜನಿಕಾಂತೇ ಬಂದು ರಮೇಶ್ ಅರವಿಂದ್​ಗೆ ಬಂದು ಪರಿಚಯ ಹೇಳಿದಾಗ
ರಜಿನಿಕಾಂತ್
Updated By: ರಾಜೇಶ್ ದುಗ್ಗುಮನೆ

Updated on: Jul 25, 2025 | 7:59 AM

ರಜನಿಕಾಂತ್ ಅವರನ್ನು ಯಾರಿಗೆ ತಾನೇ ಭೇಟಿ ಮಾಡಲು ಆಸೆ ಇರೋದಿಲ್ಲ ಹೇಳಿ. ಜನಸಾಮಾನ್ಯರಿಂದ ಹಿಡಿದು ಸೆಲೆಬ್ರಿಟಿಗಳವರೆಗೆ ಅವರನ್ನು ನೋಡಬೇಕು ಎನ್ನುವ ಆಸೆ ಇದ್ದೇ ಇರುತ್ತದೆ. ರಮೇಶ್ ಅರವಿದ್ (Ramesh Aravind) ಅವರು ಚಿತ್ರರಂಗಕ್ಕೆ ಬಂದಾಗ ಇದೇ ಆಸೆಯನ್ನು ಇಟ್ಟುಕೊಂಡಿದ್ದರು. ಅವರು ರಜನಿಕಾಂತ್​ನ ಭೇಟಿ ಮಾಡಲು ಉತ್ಸಾಹದಿಂದ ಕಾದಿದ್ದರು. ಆಗ ರಜನಿಕಾಂತ್ ಅವರೇ ಬಂದು ಮಾತನಾಡಿಸಿದ್ದರು ಅನ್ನೋದು ವಿಶೇಷ. ಈ ಬಗ್ಗೆ ಅವರು ಹೇಳಿಕೊಂಡಿದ್ದಾರೆ.

‘ಭರ್ಜರಿ ಬ್ಯಾಚುಲರ್ಸ್ ಸೀಸನ್ 2’ ವೇದಿಕೆ ಮೇಲೆ ರಮೇಶ್ ಆಗಮಿಸಿದ್ದರು. ಈ ವೇಳೆ ಜಡ್ಜ್ ಆಗಿದ್ದ ರವಿಚಂದ್ರನ್ ಅವರು ಹಳೆಯ ಘಟನೆಯನ್ನು ನನೆಪಿಸಿಕೊಂಡರು. ಇಬ್ಬರ ಗೆಳೆತನ ಶುರುವಾಗಿದ್ದು ಹೇಗೆ ಎಂದು ನೆನಪಿಸಿಕೊಂಡರು. ಈ ಘಟನೆಯನ್ನು ಹೇಳುವಾಗ ರಮೇಶ್ ಅವರು ರಜನಿಕಾಂತ್ ಜೊತೆಗಿನ ಪರಿಚಯದ ಬಗ್ಗೆಯೂ ವಿವರಿಸಿದರು.

ಇದನ್ನೂ ಓದಿ
ಪ್ರೀತಿ-ಪ್ರೇಮಗಳಿಂದ ಮನಸ್ಸು ಒಡೆದು ಪಾಠ ಕಲಿತಿದ್ದೇ ಹೆಚ್ಚು ನಿತ್ಯಾ ಮೆನನ್
‘ಹರಿ ಹರ ವೀರ ಮಲ್ಲು’ ಕಲೆಕ್ಷನ್;  ಮೊದಲ ದಿನವೇ ಬಾಕ್ಸ್ ಆಫೀಸ್ ಉಡೀಸ್
Exclusive: ಅಳಿಯ ಚಂದು ಚಿತ್ರಕ್ಕೆ ವಿಲನ್ ಆದ ದರ್ಶನ್; ದಿನಕರ್ ನಿರ್ದೇಶನ
ದರ್ಶನ್​ಗೆ​ ಜಾಮೀನು ಕೊಟ್ಟ ಹೈಕೋರ್ಟ್ ಬಗ್ಗೆ ಅಸಮಾಧಾನ ಹೊರಹಾಕಿದ ಸುಪ್ರೀಂ

‘ರಮೇಶ್ ಹಾಗೂ ನಾನು ಸಂಗ್ರಾಮ ಚಿತ್ರದಿಂದ ಗೆಳೆಯರು. ನಾನು ಹಾಗೂ ಇವನು ಕಂಠೀರವ ಸ್ಟುಡಿಯೋ ಪಾರ್ಕ್​ನಲ್ಲಿ ಭೇಟಿ ಮಾಡಿದೆವು. ನಾನೇ ಅವನನ್ನು ಕರೆರಸಿ ಸಂಗ್ರಾಮದಲ್ಲಿ ಶೂಟ್ ಮಾಡಿಸಿದೆ. ಆಮೇಲೆ ಶಾಂತಿ ಕ್ರಾಂತಿಯಲ್ಲಿ ಒಟ್ಟಾಗಿ ಮಾಡಿದೆವು. ನಾನು ಶಿವರಾಜ್​ಕುಮಾರ್ ಕಾಣಿಸಿಕೊಂಡಷ್ಟು ನಾನು-ಇವನು ಕಾಣಿಸಿಕೊಳ್ಳಲ್ಲ. ನಮ್ಮದು ಹಿಡನ್ ಫ್ರೆಂಡ್​ಶಿಪ್’ ಎಂದರು ಕ್ರೇಜಿಸ್ಟಾರ್ ರವಿಚಂದ್ರನ್.

ಜೀ ಕನ್ನಡ ಪೋಸ್ಟ್

‘ಶಾಂತಿ ಕ್ರಾಂತಿಗೆ ರವಿ ಸರ್ ನಿರ್ದೇಶನ ಮಾಡ್ತಾ ಇದ್ದರು. ನಾನು ಆಗ ತಾನೇ ಚಿತ್ರರಂಗಕ್ಕೆ ಬಂದಿದ್ದೆ. ರಜನಿಕಾಂತ್​ ಅವರು ಸೆಟ್​ನಲ್ಲಿ ಇದ್ದರು. ಎಲ್ಲರೂ ಸಿನಿಮಾ ಮಾಡೋದ್ರಲ್ಲಿ ಬ್ಯುಸಿ ಇದ್ದರು. ಅಲ್ಲಿ ರಜನಿಕಾಂತ್ ಕೂತಿದ್ದರು. ನನ್ನನ್ನು ಯಾರಾದರೂ ಪರಿಚಯ ಮಾಡ್ತಾರೆ ಎಂದು ಕಾಯ್ತಾ ಇದ್ದೆ. ಆದರೆ, ಯಾರೂ ಬರಲೇ ಇಲ್ಲ. ಆಗ ರಜನಿಕಾಂತ್​ಗೆ ಗೊತ್ತಾಯ್ತು ಅನಿಸುತ್ತದೆ. ಅವರು ಬಂದು, ನಾನು ರಜನಿಕಾಂತ್ ಎಂದು ತಮ್ಮನ್ನು ತಾವು ಪರಿಚಯಿಸಿಕೊಂಡರು’ ಎಂದು ವಿವರಿಸಿದ್ದಾರೆ.  ಅವರಿಗೆ ಆ ಕ್ಷಣ ಸಾಕಷ್ಟು ಖುಷಿ ನೀಡಿತ್ತು.

ಇದನ್ನೂ ಓದಿ: ‘ಎಡಗೈಯೇ ಅಪಘಾತಕ್ಕೆ ಕಾರಣ’ ಸಿನಿಮಾಗೆ ರಮೇಶ್ ಅರವಿಂದ್ ಮೆಚ್ಚುಗೆ

ರಮೇಶ್ ಅರವಿಂದ್ ಅವರು ಇತ್ತೀಚೆಗೆ ಸಿನಿಮಾ ಆಯ್ಕೆಯಲ್ಲಿ ಚ್ಯೂಸಿ ಆಗಿದ್ದಾರೆ. ಅಲ್ಲೊಂದು ಇಲ್ಲೊಂದು ಸಿನಿಮಾಗಳನ್ನು ಅವರು ಮಾಡುತ್ತಿದ್ದಾರೆ. ಅವರು ಸದ್ಯ ‘ದೈಜಿ’ ಹೆಸರಿನ ಸಿನಿಮಾ ಮಾಡುತ್ತಿದ್ದಾರೆ. ಇದು ಸಸ್ಪೆನ್ಸ್ ಶೈಲಿಯಲ್ಲಿ ಮೂಡಿ ಬರುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

Published On - 7:56 am, Fri, 25 July 25