ರಾನಾ ದಗ್ಗುಬಾಟಿ ಎದುರಿಸಿದ ಆರೋಗ್ಯ ಸಮಸ್ಯೆ ಒಂದೆರಡಲ್ಲ

ರಾನಾ ದಗ್ಗುಬಾಟಿ ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಅವರು ‘ಬಾಹುಬಲಿ’ ಸರಣಿಯಲ್ಲಿ ಪ್ರಮುಖ ವಿಲನ್ ಪಾತ್ರ ಮಾಡಿ ಗಮನ ಸೆಳೆದಿದ್ದರು. ಅವರು ವೆಬ್ ಸೀರಿಸ್​ನಲ್ಲಿ ನಟಿಸಿಯೂ ಫೇಮಸ್ ಆಗಿದ್ದಾರೆ. ಅವರದ್ದೇ ಆದ ಟಾಕ್ ಶೋ ಕೂಡ ಬರುತ್ತಿದೆ. ಅವರು ಬಳಲಿದ ಅನಾರೋಗ್ಯದ ಸಮಸ್ಯೆಗಳು ಒಂದೆರಡಲ್ಲ. ಆ ಬಗ್ಗೆ ಇಲ್ಲಿದೆ ವಿವರ.

ರಾನಾ ದಗ್ಗುಬಾಟಿ ಎದುರಿಸಿದ ಆರೋಗ್ಯ ಸಮಸ್ಯೆ ಒಂದೆರಡಲ್ಲ
ರಾನಾ
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on: Dec 15, 2024 | 6:30 AM

ನಟ ಹಾಗೂ ನಿರ್ಮಾಪಕ ರಾನಾ ದಗ್ಗುಬಾಟಿ ಅವರಿಗೆ ಸಾಕಷ್ಟು ಜನಪ್ರಿಯತೆ ಇದೆ. ಆದರೆ, ಅವರಿಗೆ ಖುಷಿ ಇಲ್ಲ. ಅವರು ಇತ್ತೀಚೆಗೆ ಜನ್ಮದಿನ ಆಚರಿಸಿಕೊಳ್ಳಬೇಕಿತ್ತು. ಅವರ ಸಂಬಂಧಿ ಅಲ್ಲು ಅರ್ಜುನ್ ಬಂಧನಕ್ಕೆ ಒಳಗಾಗಿರುವುದರಿಂದ ಟೆನ್ಷನ್​ನಲ್ಲಿ ಇದ್ದರು. ಅವರು ಬರ್ತ್​ಡೇ ಆಚರಿಸಿಕೊಳ್ಳುವ ಯಾವುದೇ ಮೂಡ್​ನಲ್ಲಿ ಇಲ್ಲ. ಅವರು ಹಲವು ಆರೋಗ್ಯ ಸಮಸ್ಯೆಗಳನ್ನು ಎದುರಿಸಿದ್ದರು. ಅವರ ಈ ಬಗ್ಗೆ ಓಪನ್ ಆಗಿ ಮಾತನಾಡಿದ್ದು ಕಡಿಮೆ.

ರಾನಾ ದಗ್ಗುಬಾಟಿ ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಅವರು ‘ಬಾಹುಬಲಿ’ ಸರಣಿಯಲ್ಲಿ ಪ್ರಮುಖ ವಿಲನ್ ಪಾತ್ರ ಮಾಡಿ ಗಮನ ಸೆಳೆದಿದ್ದರು. ಅವರು ವೆಬ್ ಸೀರಿಸ್​ನಲ್ಲಿ ನಟಿಸಿಯೂ ಫೇಮಸ್ ಆಗಿದ್ದಾರೆ. ಅವರದ್ದೇ ಆದ ಟಾಕ್ ಶೋ ಕೂಡ ಬರುತ್ತಿದೆ. ಅವರು ಬಳಲಿದ ಅನಾರೋಗ್ಯದ ಸಮಸ್ಯೆಗಳು ಒಂದೆರಡಲ್ಲ. ಆ ಬಗ್ಗೆ ಇಲ್ಲಿದೆ ವಿವರ.

ಈ ಮೊದಲು ರಾನಾ ಅವರು ಕಿಡ್ನಿ ಟ್ರಾನ್ಸ್​ಪ್ಲಾಂಟ್ ಮಾಡಿಕೊಂಡಿದ್ದರು. ಅಲ್ಲದೆ, ಕಾರ್ನಿಯಾ ಟ್ರಾನ್ಸ್​ಪ್ಲಾಂಟ್ ಕೂಡ ಆಗಿದೆ. ಇನ್ನು, ಅವರಿಗೆ ಹೃದಯ ಸಮಸ್ಯೆ ಕೂಡ ಇದೆ. ಈ ಬಗ್ಗೆ ಅವರು ಈ ಮೊದಲು ಮಾತನಾಡಿದ್ದರು. ‘ನಾನು ಮಾಯೋದಲ್ಲಿ (ಅಮೆರಿಕದಲ್ಲಿರುವ ಆಸ್ಪತ್ರೆ) ಇದ್ದೆ. ನನಗೆ ಏನಾಗಿದೆ ಎಂಬುದನ್ನು ಪತ್ತೆ ಹಚ್ಚಿದ ಏಕೈಕ ಆಸ್ಪತ್ರೆ. ನೀವು ತೊಂದರೆಗೆ ಸಿಲುಕಿದಾಗ ಜೀವನವನ್ನು ಬೇರೆ ರೀತಿಯಲ್ಲಿ ನೋಡುತ್ತೀರಿ’ ಎಂದಿದ್ದರು ಅವರು.

‘ಎಲ್ಲರೂ ನನ್ನನ್ನು ಬಾಹುಬಲಿ ಚಿತ್ರದಲ್ಲಿ ದೊಡ್ಡದಾಗಿ ನೋಡಿದ್ದಾರೆ. ಹಾಗಾಗಿ, ಎಲ್ಲರೂ ನನಗೆ ಅನಾರೋಗ್ಯವಿದೆಯೇ ಎಂದು ಕೇಳಿದ್ದರು. ನಾನು ಅವರಿಗೆ ಉತ್ತರಿಸಲು ಹೋಗಿಲ್ಲ. ನಗರದಲ್ಲಿ ಜನರೊಂದಿಗೆ ವಾಸಿಸಲು ನನಗೆ ಕಷ್ಟವಾಯಿತು. ಜನರು ನನ್ನ ಆರೋಗ್ಯದ ಬಗ್ಗೆ ಕೇಳಿದರೆ ಸಿಟ್ಟು ಬರುತ್ತಿತ್ತು. ನೀವು ಕಿಡ್ನಿ ಅಥವಾ ಕಣ್ಣನ್ನು ದಾನ ಮಾಡಲು ರೆಡಿ ಇಲ್ಲ ಎಂದರೆ ಆ ಬಗ್ಗೆ ಮಾತನಾಡಬೇಡಿ ಎನ್ನುತ್ತಿದ್ದೆ’ ಎಂಬುದಾಗಿ ಅವರು ಹೇಳಿದ್ದಾರೆ.

ಇದನ್ನೂ ಓದಿ:  ‘ಇದೆಲ್ಲ ನಮ್ಮ ತಲೆಯಲ್ಲಿ ಇರೋದು’; ಇಂಡಸ್ಟ್ರಿ ಬಗ್ಗೆ ಅಪಸ್ವರ ತೆಗೆದಿದ್ದ ರಾನಾ ದಗ್ಗುಬಾಟಿ

‘ಕಾದನ್’ ಸಿನಿಮಾದಲ್ಲಿ ರಾನಾ ನಟಿಸಿದ್ದರು. ಈ ಚಿತ್ರದ ಶೂಟ್​ಗಾಗಿ ಅವರು ಕಾಡಿನಲ್ಲಿ ಇರಬೇಕಾಯಿತು. ಇದು ಅವರಿಗೆ ಸಾಕಷ್ಟು ಖುಷಿ ನೀಡಿತ್ತಂತೆ. ಕಾಡಿನಲ್ಲಿ ಯಾರೊಬ್ಬರೂ ನನ್ನ ಜಡ್ಜ್ ಮಾಡುವುದಿಲ್ಲ ಎಂಬ ಖುಷಿ ಇದೆ ಎಂದು ಅವರು ಹೇಳಿಕೊಂಡಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

45 ವರ್ಷಗಳ ನಂತರ ತೆರೆದ ಸಂಭಾಲ್‌ನ ದೇವಾಲಯ; ವಿಡಿಯೋ ವೈರಲ್
45 ವರ್ಷಗಳ ನಂತರ ತೆರೆದ ಸಂಭಾಲ್‌ನ ದೇವಾಲಯ; ವಿಡಿಯೋ ವೈರಲ್
ಭಾರತವನ್ನು ವಿಶ್ವವು ಪ್ರಜಾಪ್ರಭುತ್ವದ ತಾಯಿಯೆಂದು ಆದರಿಸುತ್ತದೆ: ಪ್ರಧಾನಿ
ಭಾರತವನ್ನು ವಿಶ್ವವು ಪ್ರಜಾಪ್ರಭುತ್ವದ ತಾಯಿಯೆಂದು ಆದರಿಸುತ್ತದೆ: ಪ್ರಧಾನಿ
ಬ್ರ್ಯಾಂಡ್ ಬೆಂಗಳೂರು ಸಿಗುತ್ತಿಲ್ಲ, ರಸ್ತೆಗುಂಡಿಗಳಲ್ಲಿ ದಫನ್ ಆಯಿತೇ?
ಬ್ರ್ಯಾಂಡ್ ಬೆಂಗಳೂರು ಸಿಗುತ್ತಿಲ್ಲ, ರಸ್ತೆಗುಂಡಿಗಳಲ್ಲಿ ದಫನ್ ಆಯಿತೇ?
ಒಂದು ದೇಶ ಒಂದು ಚುನಾವಣೆ ಮಸೂದೆ ಪ್ರಜಾಪ್ರಭುತ್ವ ವ್ಯವಸ್ಥೆಗೆ ವಿರುದ್ಧ:ಶಾಸಕ
ಒಂದು ದೇಶ ಒಂದು ಚುನಾವಣೆ ಮಸೂದೆ ಪ್ರಜಾಪ್ರಭುತ್ವ ವ್ಯವಸ್ಥೆಗೆ ವಿರುದ್ಧ:ಶಾಸಕ
ಪರಭಾಷಾ ಚಿತ್ರಗಳ ಹಾವಳಿ ಹೆಚ್ಚುತ್ತಿದೆ, ಕಡಿಮೆಯಾಗುತ್ತಿಲ್ಲ: ಗೋವಿಂದು
ಪರಭಾಷಾ ಚಿತ್ರಗಳ ಹಾವಳಿ ಹೆಚ್ಚುತ್ತಿದೆ, ಕಡಿಮೆಯಾಗುತ್ತಿಲ್ಲ: ಗೋವಿಂದು
ಧರಣಿಯಲ್ಲಿ ಪಾಲ್ಗೊಂಡ ಸಚಿವೆಯನ್ನು ಸಿಎಂ ಸಸ್ಪೆಂಡ್ ಮಾಡಲಿ: ಸ್ವಾಮೀಜಿ
ಧರಣಿಯಲ್ಲಿ ಪಾಲ್ಗೊಂಡ ಸಚಿವೆಯನ್ನು ಸಿಎಂ ಸಸ್ಪೆಂಡ್ ಮಾಡಲಿ: ಸ್ವಾಮೀಜಿ
ಗುರಿ ಕಳೆದುಕೊಂಡವರಿಗೆ, ಹಾದಿ ತಪ್ಪಿದವರಿಗೆ ಕಿಚ್ಚ ತೋರಲಿದ್ದಾರೆ ದಾರಿ
ಗುರಿ ಕಳೆದುಕೊಂಡವರಿಗೆ, ಹಾದಿ ತಪ್ಪಿದವರಿಗೆ ಕಿಚ್ಚ ತೋರಲಿದ್ದಾರೆ ದಾರಿ
ನಮ್ಮ ಹೋರಾಟಗಳನ್ನು ನಿಲ್ಲಿಸುವ ವ್ಯರ್ಥ ಪ್ರಯತ್ನ ಸರ್ಕಾರ ಮಾಡ್ತಿದೆ: ಅಶೋಕ
ನಮ್ಮ ಹೋರಾಟಗಳನ್ನು ನಿಲ್ಲಿಸುವ ವ್ಯರ್ಥ ಪ್ರಯತ್ನ ಸರ್ಕಾರ ಮಾಡ್ತಿದೆ: ಅಶೋಕ
ಅಲ್ಲು ಅರ್ಜುನ್ ಬಂಧನದ ಬಗ್ಗೆ ಹೆಚ್ಚು ಮಾಹಿತಿ ಇಲ್ಲ: ಗುಂಡೂರಾವ್
ಅಲ್ಲು ಅರ್ಜುನ್ ಬಂಧನದ ಬಗ್ಗೆ ಹೆಚ್ಚು ಮಾಹಿತಿ ಇಲ್ಲ: ಗುಂಡೂರಾವ್
ಶಿಕ್ಷೆ ಕೊಡಿಸಲು ಜೈಲಿಂದ ತಪ್ಪಿಸಿಕೊಂಡ ಚೈತ್ರಾ-ತ್ರಿವಿಕ್ರಂ
ಶಿಕ್ಷೆ ಕೊಡಿಸಲು ಜೈಲಿಂದ ತಪ್ಪಿಸಿಕೊಂಡ ಚೈತ್ರಾ-ತ್ರಿವಿಕ್ರಂ