AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಜನೀಕಾಂತ್ ಹೊಸ ಸಿನಿಮಾದಲ್ಲಿ ಹಲವು ತಾರೆಯರು, ಈ ಬಾರಿ ಯುವಕರಿಗೆ ಮಣೆ

Rajinikanth: ರಜನೀಕಾಂತ್​ರ 'ಜೈಲರ್' ಸಿನಿಮಾದಲ್ಲಿ ಬಂದ ಅತಿಥಿ ಪಾತ್ರಗಳು ಸಖತ್ ಹಿಟ್ ಆಗಿವೆ. ರಜನೀಕಾಂತ್​ರ ಮುಂದಿನ ಸಿನಿಮಾದಲ್ಲಿಯೂ ವಿವಿಧ ಚಿತ್ರರಂಗಗಳ ಸ್ಟಾರ್ ನಟರು ಇರಲಿದ್ದಾರೆ. ಈ ಬಾರಿ ತುಸು ಯುವನಟರಿಗೆ ಮಣೆ ಹಾಕಲಾಗಿದೆ.

ರಜನೀಕಾಂತ್ ಹೊಸ ಸಿನಿಮಾದಲ್ಲಿ ಹಲವು ತಾರೆಯರು, ಈ ಬಾರಿ ಯುವಕರಿಗೆ ಮಣೆ
ರಜನಿಕಾಂತ್
Follow us
ಮಂಜುನಾಥ ಸಿ.
|

Updated on: Sep 05, 2023 | 4:00 PM

ರಜನೀಕಾಂತ್ (Rajinikanth) ನಟನೆಯ ‘ಜೈಲರ್‘ (Jailer) ಸಿನಿಮಾ ಬ್ಲಾಕ್ ಬಸ್ಟರ್ ಆಗಿದೆ. ಬಿಡುಗಡೆ ಆದ ಕೆಲವೇ ದಿನಗಳಲ್ಲಿ 650 ಕೋಟಿಗೂ ಹೆಚ್ಚು ಹಣ ಗಳಿಸಿದೆ. ತಮಿಳಿನ ಇತ್ತೀಚೆಗಿನ ಬಾಕ್ಸ್ ಆಫೀಸ್ ದಾಖಲೆಗಳನ್ನು ಚಿಂದಿ ಉಡಾಯಿಸಿರುವ ರಜನೀಕಾಂತ್, ತಾವೇ ಕಾಲಿವುಡ್ ಬಾಕ್ಸ್ ಆಫೀಸ್ ದೊರೆ ಎಂಬುದನ್ನು ಮತ್ತೆ ಸಾಬೀತು ಮಾಡಿದ್ದಾರೆ. ‘ಜೈಲರ್’ ಸಿನಿಮಾದ ಅಬ್ಬರ ಇನ್ನೂ ನಡೆಯುತ್ತಿರುವಾಗಲೇ ರಜನೀಕಾಂತ್​ರ ಮುಂದಿನ ಸಿನಿಮಾದ ಕಡೆಗೆ ಅಭಿಮಾನಿಗಳ ಗಮನ ಹರಿದಿದೆ. ‘ಜೈಲರ್’ ಮಾದರಿಯಲ್ಲಿಯೇ ರಜನೀ ಅವರ ಮುಂದಿನ ಸಿನಿಮಾದಲ್ಲಿಯೂ ಹಲವು ತಾರಾ ನಟರಿರಲಿದ್ದಾರೆ ಆದರೆ ಈ ಬಾರಿ ತುಸು ಯುವ ನಟರಿಗೆ ಮಣೆ ಹಾಕಲಾಗಿದೆ.

‘ಜೈಲರ್’ ಸಿನಿಮಾದಲ್ಲಿ ರಜನೀಕಾಂತ್ ಜೊತೆಗೆ ಶಿವರಾಜ್ ಕುಮಾರ್, ಮಲಯಾಳಂನ ಸ್ಟಾರ್ ನಟ ಮೋಹನ್​ಲಾಲ್, ಹಿಂದಿಯ ಸ್ಟಾರ್ ನಟ ಜಾಕಿ ಶ್ರಾಫ್, ಸುನಿಲ್, ಚಿರಂಜೀವಿ ಸಹೋದರ ನಾಗೇಂದ್ರ ಬಾಬು ಅವರುಗಳು ಅತಿಥಿ ಪಾತ್ರದಲ್ಲಿ ನಟಿಸಿದ್ದರು. ಅತಿಥಿ ಪಾತ್ರಗಳ ಎಂಟ್ರಿ ಸಖತ್ ಕ್ಲಿಕ್ ಆಗಿತ್ತು. ಇದೀಗ ರಜನೀಕಾಂತ್​ರ 170ನೇ ಸಿನಿಮಾಕ್ಕೂ ಇದೇ ತಂತ್ರದ ಮೊರೆ ಹೋಗಲಿದ್ದು, ಆದರೆ ಈ ಬಾರಿ ತುಸು ಯುವ ನಟರಿಗೆ ಅವಕಾಶ ನೀಡಲಾಗಿದೆ.

ರಜನೀಕಾಂತ್​ರ 170ನೇ ಸಿನಿಮಾದಲ್ಲಿ ಅಮಿತಾಬ್ ಬಚ್ಚನ್ ನಟಿಸುವುದು ಖಾತ್ರಿ ಆಗಿತ್ತು. ಆ ನಂತರ ಸಿನಿಮಾದ ವಿಲನ್ ಆಗಿ ಫಹಾದ್ ಫಾಸಿಲ್ ನಟಿಸಲಿರುವ ಸುದ್ದಿ ಹೊರಬಿದ್ದಿತ್ತು. ಜೊತೆಗೆ ನಟಿ ಮಂಜು ವಾರಿಯರ್ ಸಹ ಸಿನಿಮಾದಲ್ಲಿರಲಿದ್ದಾರೆ ಎನ್ನಲಾಗಿತ್ತು. ಇದೀಗ ಈ ತಾರಾ ನಟರ ಪಟ್ಟಿಗೆ ಹೊಸ ಸೇರ್ಪಡೆ ಪ್ಯಾನ್ ಇಂಡಿಯಾ ನಟ ರಾಣಾ ದಗ್ಗುಬಾಟಿ. ಸಿನಿಮಾದ ಒಂದು ಪ್ರಮುಖ ಪಾತ್ರಕ್ಕೆ ರಾಣಾ ದಗ್ಗುಬಾಟಿಯನ್ನು ನಿರ್ದೇಶಕರು ಆಯ್ಕೆ ಮಾಡಿಕೊಂಡಿದ್ದಾರೆ. ಭಾರಿ ಬಜೆಟ್​ನಲ್ಲಿ ನಿರ್ಮಾಣವಾಗುತ್ತಿರುವ ಪ್ಯಾನ್ ಇಂಡಿಯಾ ಸಿನಿಮಾ ಇದಾಗಿದ್ದು, ಅದೇ ಕಾರಣಕ್ಕೆ ಬೇರೆ ಬೇರೆ ಚಿತ್ರರಂಗಗಳಿಂದ ಹೆಸರಾಂತ ನಟರನ್ನು ಸಿನಿಮಾಕ್ಕೆ ಆಯ್ಕೆ ಮಾಡಿಕೊಳ್ಳಲಾಗುತ್ತಿದೆ. ಕನ್ನಡದ ನಟರೊಬ್ಬರನ್ನು ಸಹ ಈ ಸಿನಿಮಾಕ್ಕೆ ಆಯ್ಕೆ ಮಾಡುವ ಸಾಧ್ಯತೆ ಇದೆ.

ಇದನ್ನೂ ಓದಿ:25 ವರ್ಷದ ಹಿಂದೆ ಒಂದೇ ರಾತ್ರಿ 1.30 ಕೋಟಿ ಹಂಚಿದ್ದ ರಜನೀಕಾಂತ್

ರಜನೀಕಾಂತ್​ರ 170ನೇ ಸಿನಿಮಾವನ್ನು ಟಿಜೆ ಜ್ಞಾನವೇಲು ನಿರ್ದೇಶನ ಮಾಡುತ್ತಿದ್ದಾರೆ. ಈ ಹಿಂದೆ ಸೂರ್ಯ ನಟಿಸಿದ್ದ ‘ಜೈ ಭೀಮ್’ ಸಿನಿಮಾವನ್ನು ಜ್ಞಾನವೇಲು ನಿರ್ದೇಶಿಸಿದ್ದರು. ಈಗ ರಜನೀಕಾಂತ್​ರ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾವನ್ನು ಲೈಕಾ ನಿರ್ಮಾಣ ಮಾಡುತ್ತಿದ್ದು, ಇದೇ ತಿಂಗಳಾಂತ್ಯಕ್ಕೆ ಚಿತ್ರೀಕರಣ ಪ್ರಾರಂಭವಾಗಲಿದೆ. ಸಿನಿಮಾದ ಇನ್ನಿತರೆ ತಂತ್ರಜ್ಞರು, ನಟ-ನಟಿಯರ ಆಯ್ಕೆ ಇನ್ನಷ್ಟೆ ನಡೆಯಬೇಕಿದೆ. ಇನ್ನುಳಿದಂತೆ ರಜನೀಕಾಂತ್ ಪುತ್ರಿ ‘ಲಾಲ್ ಸಲಾಂ’ ಹೆಸರಿನ ಸಿನಿಮಾ ನಿರ್ದೇಶಿಸುತ್ತಿದ್ದು, ಆ ಸಿನಿಮಾದಲ್ಲಿಯೂ ರಜನೀಕಾಂತ್ ಸಣ್ಣ ಪಾತ್ರವೊಂದರಲ್ಲಿ ನಟಿಸಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

ಬಿಜೆಪಿ ನಾಯಕರೆಲ್ಲ ಜೊತೆಗಿದ್ದೇವೆ, ನಮ್ಮ ಹೋರಾಟ ನಿಲ್ಲಲ್ಲ: ಚಲವಾದಿ
ಬಿಜೆಪಿ ನಾಯಕರೆಲ್ಲ ಜೊತೆಗಿದ್ದೇವೆ, ನಮ್ಮ ಹೋರಾಟ ನಿಲ್ಲಲ್ಲ: ಚಲವಾದಿ
ಗುಜರಾತ್​ನ ದಾಹೋದ್​ನಲ್ಲಿ 32 ವರ್ಷಗಳ ಬಳಿಕ ಹುಲಿ ಪ್ರತ್ಯಕ್ಷ
ಗುಜರಾತ್​ನ ದಾಹೋದ್​ನಲ್ಲಿ 32 ವರ್ಷಗಳ ಬಳಿಕ ಹುಲಿ ಪ್ರತ್ಯಕ್ಷ
ಗುತ್ತಿಗೆದಾರರಿಗೆ ಹಣ ಪಾವತಿಯಾಗದ ಕಾರಣ ಸಾಯಿ ಲೇಔಟ್​ನಲ್ಲಿ ಸಮಸ್ಯೆ: ನಿಖಿಲ್
ಗುತ್ತಿಗೆದಾರರಿಗೆ ಹಣ ಪಾವತಿಯಾಗದ ಕಾರಣ ಸಾಯಿ ಲೇಔಟ್​ನಲ್ಲಿ ಸಮಸ್ಯೆ: ನಿಖಿಲ್
ಕೇಂದ್ರಕ್ಕೆ ಪವರ್ ಇಲ್ಲ...ರಾಮನಗರ ಹೆಸರು ಬದಲಾವಣೆ ಬಗ್ಗೆ ಡಿಕೆಶಿ ಸ್ಪಷ್ಟನೆ
ಕೇಂದ್ರಕ್ಕೆ ಪವರ್ ಇಲ್ಲ...ರಾಮನಗರ ಹೆಸರು ಬದಲಾವಣೆ ಬಗ್ಗೆ ಡಿಕೆಶಿ ಸ್ಪಷ್ಟನೆ
ಬಿಡಿಎನಲ್ಲಿ ಬಾಕಿಯುಳಿಸಿಕೊಂಡಿರುವ ಸಂಸ್ಥೆಗಳ ಬಡ್ಡಿ ಒಮ್ಮೆ ಮನ್ನಾ: ಡಿಕೆಶಿ
ಬಿಡಿಎನಲ್ಲಿ ಬಾಕಿಯುಳಿಸಿಕೊಂಡಿರುವ ಸಂಸ್ಥೆಗಳ ಬಡ್ಡಿ ಒಮ್ಮೆ ಮನ್ನಾ: ಡಿಕೆಶಿ
ಖರ್ಗೆ ಬಾಯಲ್ಲಿ ಪಾಪಿ ಪಾಕಿಸ್ತಾನದ ಹೆಸರು ಬರಬಾರದು: ವಿ ಸೋಮಣ್ಣ
ಖರ್ಗೆ ಬಾಯಲ್ಲಿ ಪಾಪಿ ಪಾಕಿಸ್ತಾನದ ಹೆಸರು ಬರಬಾರದು: ವಿ ಸೋಮಣ್ಣ
ಅರವಿಂದ ಲಿಂಬಾವಳಿ ಮತ್ತು ಜಿಎಂ ಸಿದ್ದೇಶ್ವರ ಸಭೆಗೆ ಗೈರು
ಅರವಿಂದ ಲಿಂಬಾವಳಿ ಮತ್ತು ಜಿಎಂ ಸಿದ್ದೇಶ್ವರ ಸಭೆಗೆ ಗೈರು
ಮುನಿರತ್ನ ಮೇಲಿರೋದು ಆರೋಪಗಳಲ್ಲ, ಎಫ್​ಐಅರ್ ಆಗಿದೆ: ಖರ್ಗೆ
ಮುನಿರತ್ನ ಮೇಲಿರೋದು ಆರೋಪಗಳಲ್ಲ, ಎಫ್​ಐಅರ್ ಆಗಿದೆ: ಖರ್ಗೆ
ಪರೀಕ್ಷೆ ಬರೆಯುವ ಆಸೆಗೆ ಪೋಷಕ ಮತ್ತು ಪತಿ ಮನೆಯವರಿಂದ ಆಕ್ಷೇಪಣೆ ಇಲ್ಲ
ಪರೀಕ್ಷೆ ಬರೆಯುವ ಆಸೆಗೆ ಪೋಷಕ ಮತ್ತು ಪತಿ ಮನೆಯವರಿಂದ ಆಕ್ಷೇಪಣೆ ಇಲ್ಲ
ತಾಳಿ ಕಟ್ಟಿದ ಮರುಕ್ಷಣವೇ ಪರೀಕ್ಷೆಗೆ ಹಾಜರಾದ ನವವಧು: ವಿಡಿಯೋ ನೋಡಿ
ತಾಳಿ ಕಟ್ಟಿದ ಮರುಕ್ಷಣವೇ ಪರೀಕ್ಷೆಗೆ ಹಾಜರಾದ ನವವಧು: ವಿಡಿಯೋ ನೋಡಿ