ನಟ ರಣಬೀರ್ ಕಪೂರ್ ಸದ್ಯ ‘ಬ್ರಹ್ಮಾಸ್ತ್ರ’ ಸಿನಿಮಾದ ಶೂಟಿಂಗ್ನಲ್ಲಿ ಬ್ಯುಸಿ ಇದ್ದಾರೆ. ಈ ಸಿನಿಮಾದಲ್ಲಿ ಪ್ರೇಯಸಿ ಆಲಿಯಾ ಭಟ್ ಜತೆ ರಣಬೀರ್ ತೆರೆ ಹಂಚಿಕೊಳ್ಳುತ್ತಿದ್ದಾರೆ. ಇವರ ಕಾಂಬಿನೇಷನ್ ನೋಡೋಕೆ ಅಭಿಮಾನಿಗಳು ತುದಿಗಾಲಿನಲ್ಲಿದ್ದಾರೆ. ಈ ಮಧ್ಯೆ ರಣಬೀರ್ ಫ್ಯಾನ್ಸ್ಗೆ ಕಹಿ ಸುದ್ದಿಯೊಂದು ಸಿಕ್ಕಿದೆ. 2019ರಲ್ಲಿ ಘೋಷಣೆ ಆದ ‘ಬೈಜು ಬವ್ರಾ’ ಸಿನಿಮಾದಿಂದ ರಣಬೀರ್ ಹಿಂದೆ ಸರಿದಿದ್ದಾರಂತೆ. ಈ ಮೂಲಕ ಸಂಜಯ್ ಲೀಲಾ ಬನ್ಸಾಲಿ ಸಿನಿಮಾಗೆ ರಣಬೀರ್ ಗುಡ್ಬೈ ಹೇಳಿದ್ದಾರೆ ಎನ್ನುವ ಮಾತು ಹರಿದಾಡಿದೆ.
ರಾಜ್ಕುಮಾರ್ ಹಿರಾನಿ ನಿರ್ದೇಶನದ ‘ಸಂಜು’ ಸಿನಿಮಾದಲ್ಲಿ ನಟಿಸಿದ್ದರು ರಣಬೀರ್ ಕಪೂರ್. 2018ರಲ್ಲಿ ತೆರೆಗೆ ಬಂದ ಈ ಚಿತ್ರದಲ್ಲಿ ನಟ ಸಂಜಯ್ ದತ್ ಪಾತ್ರದಲ್ಲಿ ರಣಬೀರ್ ಕಾಣಿಸಿಕೊಂಡಿದ್ದರು. ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಹಿಟ್ ಆಗಿತ್ತು. ಈ ಕಾರಣಕ್ಕೆ ರಣಬೀರ್ ಸಿನಿಮಾ ಆಯ್ಕೆಯಲ್ಲಿ ತುಂಬಾನೇ ಎಚ್ಚರಿಕೆ ವಹಿಸುತ್ತಿದ್ದಾರೆ.
ಯಂಗ್ ಮ್ಯೂಸೀಷಿಯನ್ ಬೈಜು ಬವ್ರಾ ಅವರ ಬಯೋಪಿಕ್ಗೆ ‘ಬೈಜು ಬವ್ರಾ’ ಎಂದು ಹೆಸರಿಡಲಾಗದೆ. ಈ ಚಿತ್ರದಲ್ಲಿ ರಣಬೀರ್ ಹಾಗೂ ಸಂಜಯ್ ದತ್ ಒಟ್ಟಾಗಿ ಕೆಲಸ ಮಾಡಬೇಕಿತ್ತು. ಆದರೆ, ಸಿನಿಮಾದ ಸ್ಕ್ರಿಪ್ಟ್ ರಣಬೀರ್ಗೆ ಇಷ್ಟವಾಗಿಲ್ಲ. ಈ ಕಾರಣಕ್ಕೆ ಅವರು ಸಿನಿಮಾದಿಂದ ಹೊರಗುಳಿದಿದ್ದಾರೆ ಎನ್ನಲಾಗುತ್ತಿದೆ.
‘ರಣಬೀರ್ ಕಪೂರ್ ಅವರು ಸಂಜಯ್ ಲೀಲಾ ಬನ್ಸಾಲಿ ಹಾಗೂ ಅವರ ಟೀಮ್ ಬಗ್ಗೆ ಸಾಕಷ್ಟು ಕನ್ಫ್ಯೂಷನ್ ಹೊಂದಿದ್ದಾರೆ. ಇದು ಪರಿಹಾರವಾಗದ ಕಾರಣ ಸಿನಿಮಾದಿಂದ ಹಿಂದೆ ಸರಿಯುವ ನಿರ್ಧಾರವನ್ನು ರಣಬೀರ್ ತೆಗೆದುಕೊಂಡಿದ್ದಾರೆ ಎನ್ನುತ್ತಿವೆ ಮೂಲಗಳು.
ರಣಬೀರ್ ಕಪೂರ್ ಮೊದಲ ಸಿನಿಮಾ ‘ಸಾವರಿಯಾ’ಗೆ ಬನ್ಸಾಲಿ ನಿರ್ದೇಶನ ಮಾಡಿದ್ದರು. ಈ ಸಿನಿಮಾ ಹೇಳಿಕೊಳ್ಳುವಂತಹ ಹೆಸರು ಮಾಡಿರಲಿಲ್ಲ. ಈಗ ಮತ್ತೊಮ್ಮೆ ಇಬ್ಬರೂ ಒಂದಾಗಲಿದ್ದಾರೆ ಎನ್ನಲಾಗಿತ್ತು. ಆದರೆ, ಅದು ಸಾಧ್ಯವಾಗಿಲ್ಲ.
ಇನ್ನು, ಈ ಚಿತ್ರಕ್ಕೆ ನಟ ಕಾರ್ತಿಕ್ ಆರ್ಯನ್ ಅವರು ಆಯ್ಕೆಯಾಗಿದ್ದಾರೆ ಎನ್ನಲಾಗುತ್ತಿದೆ. ಇತ್ತೀಚೆಗೆ ಬನ್ಸಾಲಿ ಆಫೀಸ್ಗೆ ಕಾರ್ತಿಕ್ ಆರ್ಯನ್ ಭೇಟಿ ಮಾಡಿದ್ದರು. ಇದು ಈ ವದಂತಿಗೆ ಮತ್ತಷ್ಟು ಪುಷ್ಟಿ ನೀಡಿದೆ. ಸದ್ಯ, ಈ ಬಗ್ಗೆ ಅಧಿಕೃತ ಘೋಷಣೆ ಬಾಕಿ ಇದೆ ಎನ್ನಲಾಗಿದೆ.
ಇದನ್ನೂ ಓದಿ: Sourav Ganguly Biopic: ಬಯೋಪಿಕ್ಗೆ ಅನುಮತಿ ನೀಡಿದ ಸೌರವ್ ಗಂಗೂಲಿ; ದಾದಾ ಪಾತ್ರಕ್ಕೆ ರಣಬೀರ್ ಕಪೂರ್?
ರಣಬೀರ್- ಆಲಿಯಾ ಡಿವೋರ್ಸ್?; ಮದುವೆ ಮುನ್ನವೇ ಶಾಕಿಂಗ್ ಭವಿಷ್ಯ ನುಡಿದ ಕಮಾಲ್ ಆರ್ ಖಾನ್