‘ಯಾವ ಸಮಯ್?’; ಟೀಕಿಸಿದ ಸಮಯ್ ರೈನಾಗೆ ರಣವೀರ್ ಅಲಹಾಬಾದಿಯಾ ಖಡಕ್ ಉತ್ತರ

ಸಮಯ್ ರೈನಾ ತಮ್ಮ 'ಸ್ಟಿಲ್ ಅಲೈವ್' ಶೋನಲ್ಲಿ ರಣವೀರ್ ಅಲಹಾಬಾದಿಯಾ ಬಗ್ಗೆ ಟೀಕೆ ಮಾಡಿದ ನಂತರ ವಿವಾದ ಭುಗಿಲೆದ್ದಿದೆ. 'ಇಂಡಿಯಾಸ್ ಗಾಟ್ ಲೇಟೆಂಟ್' ಘಟನೆಯಲ್ಲಿ ರಣವೀರ್ ಕೆಟ್ಟ ಪದಗಳನ್ನು ಬಳಸಿದ್ದರು ಎಂದು ಸಮಯ್ ಹೇಳಿದ್ದರು. ಇದಕ್ಕೆ ಪ್ರತಿಕ್ರಿಯೆಯಾಗಿ ರಣವೀರ್, 'ಯಾವ ಸಮಯ್?' ಎಂದು ಪ್ರಶ್ನಿಸುವ ಮೂಲಕ ಚರ್ಚೆ ಹುಟ್ಟುಹಾಕಿದ್ದಾರೆ.

‘ಯಾವ ಸಮಯ್?’; ಟೀಕಿಸಿದ ಸಮಯ್ ರೈನಾಗೆ ರಣವೀರ್ ಅಲಹಾಬಾದಿಯಾ ಖಡಕ್ ಉತ್ತರ
ಸಮಯ್-ರಣವೀರ್

Updated on: Apr 13, 2026 | 9:59 AM

ರಣವೀರ್ ಅಲಹಾಬಾದಿಯಾ ಅವರು ಸಮಯ್ ರೈನಾ ಅವರ ‘ಇಂಡಿಯಾಸ್ ಗಾಟ್ ಲೇಟೆಂಟ್’ ಶೋಗೆ ಬಂದು ವಿವಾದ ಮಾಡಿಕೊಂಡರು. ಆ ಬಳಿಕ ಸಮಯ್ ಹಾಗೂ ರಣವೀರ್ ಮುಖಾಮುಖಿ ಆಗಿಲ್ಲ. ಇತ್ತೀಚೆಗೆ ಸಮಯ್ ರೈನಾ ಅವರ ‘ಸ್ಟಿಲ್ ಅಲೈವ್’ ಶೋನಲ್ಲಿ ಅವರು ರಣವೀರ್ ಬಗ್ಗೆ ಸಾಕಷ್ಟು ಟೀಕೆಗಳನ್ನು ಮಾಡಿದ್ದರು. ಇದಾದ ಬಳಿಕ ಸಮಯ್ ಯಾರು ಎಂಬ ಪ್ರಶ್ನೆಯನ್ನು ರಣವೀರ್ ಅಲಹಾಬಾದಿಯಾ ಕೇಳಿದ್ದಾರೆ. ಇದು ಚರ್ಚೆಗೆ ಕಾರಣ ಆಗಿದೆ.

ರಣವೀರ್ ಅವರು ಪಾಡ್​​ಕಾಸ್ಟ್ ಮೂಲಕ ಗಮನ ಸೆಳೆದವರು. ಅವರು ಅಧ್ಯಾತ್ಮದ ಬಗ್ಗೆ ಹೆಚ್ಚು ಚರ್ಚೆ ಮಾಡುತ್ತಾರೆ. ಸೆಲೆಬ್ರಿಟಿಗಳ ಬಳಿ ಅವರು, ‘ಸಾವಿನ ಬಗ್ಗೆ ಏನು ಯೋಚಿಸುತ್ತೀರಿ’ ಎಂಬಿತ್ಯಾದಿ ಪ್ರಶ್ನೆಗನ್ನು ನೇರವಾಗಿ ಕೇಳುತ್ತಾರೆ. ಆದರೆ, ‘ಇಂಡಿಯಾಸ್ ಗಾಟ್ ಲೇಟೆಂಟ್ ಶೋ’ಗೆ ಬಂದು ಅವರು ಮಾಡಿಕೊಂಡ ವಿವಾದ ಚರ್ಚೆ ಹುಟ್ಟುಹಾಕಿತ್ತು. ಈ ವಿವಾದದ ಬಗ್ಗೆ ಸಮಯ್ ಇತ್ತೀಚೆಗೆ ಮಾತನಾಡಿದ್ದರು. ರಣವೀರ್ ಶೋನಲ್ಲಿ ಸಾಕಷ್ಟು ಕೆಟ್ಟ ಪದಗಳನ್ನು ಆಡಿದ್ದರು ಎಂದು ಸಮಯ್ ಹೇಳಿಕೊಂಡಿದ್ದರು. ಈ ವಿಷಯ ರಣವೀರ್​​ಗೆ ಬೇಸರ ಮೂಡಿಸಿತೇ ಎನ್ನುವ ಪ್ರಶ್ನೆ ಮೂಡಿದೆ.

ಶೈಲೇಶ್ ಪಾಂಡೆ ಹೆಸರಿನ ಪಾಪರಾಜಿ ಜೊತೆ ರಣವೀರ್ ಪೋಸ್ ಕೊಟ್ಟಿದ್ದಾರೆ. ‘ಈಗ ನಮ್ಮಿಬ್ಬರ ಸಮಯ’ ಎಂದರು ಶೈಲೇಶ್. ಇದಕ್ಕೆ ಉತ್ತರಿಸಿದ ರಣವೀರ್, ‘ಸಮಯ್? ಯಾವ ಸಮಯ್? ಎಂದು ಕೇಳಿದರು. ಆಗ ಶೈಲೇಶ್, ‘ಸಮಯ್ ಎಂದರೆ ಟೈಮ್’ ಎಂದರು. ಆಗ ರಣವೀರ್, ‘ಓಹ್ ಸಮಯ. ಈಗ ಅರ್ಥವಾಯಿತು’ ಎಂದರು. ಈ ವಿಡಿಯೋ ಚರ್ಚೆಗೆ ಕಾರಣ ಆಗಿದೆ.

ಇದನ್ನೂ ಓದಿ: ‘ಇಂಡಿಯಾ ಗಾಟ್ ಲೇಟೆಂಟ್’: ಮತ್ತೆ ಬರಲಿದ್ದಾರೆ ಸಮಯ್ ರೈನಾ

ಸಮಯ್ ರೈನಾ ಹಂಚಿಕೊಂಡ ‘ಸ್ಟಿಲ್ ಅಲೈವ್’ ಕೋಟಿ ಕೋಟಿ ವೀಕ್ಷಣೆ ಕಂಡಿದೆ. ಇಂಡಿಯಾಸ್ ಗಾಟ್ ಲೇಟೆಂಟ್​​ನ ಕೊನೆಯ ಎಪಿಸೋಡ್​​ ಅಲ್ಲಿ ಏನಾಗಿತ್ತು ಎಂಬುದರ ಸಂಪೂರ್ಣ ವಿವರವನ್ನು ಸಮಯ್ ನೀಡಿದರು. ‘ಸದಾ ಕೆಟ್ಟದ್ದನ್ನೇ ಮಾತನಾಡುವ ವ್ಯಕ್ತಿ ಕೆಟ್ಟದನ್ನೇ ಮಾತನಾಡಿದರೆ ಯಾರೂ ಏನು ತಲೆಕೆಡಿಸಿಕೊಳ್ಳುವುದಿಲ್ಲ. ಆದರೆ, ಒಳ್ಳೆಯದನ್ನು ಮಾತನಾಡುವ ವ್ಯಕ್ತಿ ಕೆಟ್ಟದನ್ನು ಮಾತನಾಡಿದರೆ ಅದನ್ನು ಯಾರೂ ಸಹಿದಲ್ಲ’ ಎಂದಿದ್ದರು ಸಮಯ್.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us