ಮಗಳ ಜೊತೆ ಬೆಂಗಳೂರಲ್ಲಿ ಹಬ್ಬ ಆಚರಿಸಿದ ರಣವೀರ್-ದೀಪಿಕಾ

ಬಾಲಿವುಡ್ ಜೋಡಿ ರಣ್‌ವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ತಮ್ಮ ಮಗಳು ದೇವಿಯ ಮೊದಲ ದೀಪಾವಳಿಯನ್ನು ಬೆಂಗಳೂರಿನಲ್ಲಿ ಆಚರಿಸಿದ್ದಾರೆ. ಹಬ್ಬದ ಸಂಭ್ರಮದ ಬೆನ್ನಲ್ಲೇ ರಣ್‌ವೀರ್ ಅವರ ಅಜ್ಜ ನಿಧನರಾಗಿರುವುದು ಕುಟುಂಬದಲ್ಲಿ ದುಃಖ ತಂದಿದೆ. ಸದ್ಯ ಈ ದಂಪತಿಯ ಹಬ್ಬದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

ಮಗಳ ಜೊತೆ ಬೆಂಗಳೂರಲ್ಲಿ ಹಬ್ಬ ಆಚರಿಸಿದ ರಣವೀರ್-ದೀಪಿಕಾ
ರಣವೀರ್​-ದೀಪಿಕಾ
Edited By:

Updated on: Nov 12, 2026 | 8:09 AM

ಬಾಲಿವುಡ್‌ ಸ್ಟಾರ್ ದಂಪತಿ ರಣ್‌ವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ತಮ್ಮ ಮುದ್ದು ಮಗಳು ದೇವಿಯ ಮೊದಲ ದೀಪಾವಳಿಯನ್ನು ಬೆಂಗಳೂರಿನಲ್ಲಿರುವ ತಮ್ಮ ಕುಟುಂಬದ ಮನೆಯಲ್ಲಿ ಬಹಳ ಸಂಭ್ರಮದಿಂದ ಆಚರಿಸಿದ್ದಾರೆ. ಈ ಸುಂದರ ಸಂದರ್ಭದಲ್ಲಿ ಕುಟುಂಬದ ಜೊತೆ ತೆಗೆಸಿಕೊಂಡ ಅಪರೂಪದ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದು, ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ. ಕಳೆದ ಸೆಪ್ಟೆಂಬರ್‌ನಲ್ಲಿ ಜನಿಸಿದ ತಮ್ಮ ಹೆಣ್ಣುಮಗುವಿನ ಜೊತೆ ಈ ಜೋಡಿ ಮೊದಲ ಹಬ್ಬವನ್ನು ಆಚರಿಸುತ್ತಿರುವುದು ವಿಶೇಷವಾಗಿದೆ.

ಈ ಹಬ್ಬದ ಆಚರಣೆಯ ಕೌಟುಂಬಿಕ ಚಿತ್ರದಲ್ಲಿ ರಣ್‌ವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಅವರು ದೀಪಿಕಾ ತಂದೆ ಪ್ರಕಾಶ್ ಪಡುಕೋಣೆ ಹಾಗೂ ತಾಯಿ ಉಜ್ವಲಾ ಪಡುಕೋಣೆ ಜೊತೆ ಕಾಣಿಸಿಕೊಂಡಿದ್ದಾರೆ. ಇದರೊಂದಿಗೆ ದೀಪಿಕಾ ಸಹೋದರಿ ಅನಿಶಾ ಪಡುಕೋಣೆ ಮತ್ತು ಕೆಲವೇ ಕೆಲವು ಆಪ್ತ ಸ್ನೇಹಿತರು ಈ ಸಂಭ್ರಮದಲ್ಲಿ ಭಾಗಿಯಾಗಿದ್ದಾರೆ. ಹಬ್ಬದ ವಿಶೇಷ ಉಡುಗೆಯಲ್ಲಿ ಕಂಗೊಳಿಸಿರುವ ಈ ಜೋಡಿ ಎಲ್ಲರ ಗಮನ ಸೆಳೆದಿದೆ. ರಣ್‌ವೀರ್ ನೇರಳೆ ಬಣ್ಣದ ಕುರ್ತಾ ಹಾಗೂ ವೇಸ್ಟ್‌ಕೋಟ್ ಧರಿಸಿದ್ದರೆ, ದೀಪಿಕಾ ಸಾಂಪ್ರದಾಯಿಕ ಹಳದಿ ಬಣ್ಣದ ಸೂಟ್‌ನಲ್ಲಿ ಮಿಂಚಿದ್ದಾರೆ.

Loading...

ಸಂಭ್ರಮದ ದೀಪಾವಳಿ ಹಬ್ಬದ ನಡುವೆಯೂ ರಣ್‌ವೀರ್ ಸಿಂಗ್ ಕುಟುಂಬದಲ್ಲಿ ಒಂದು ಕಡೆ ಖುಷಿಯಾದರೆ ಮತ್ತೊಂದು ಕಡೆ ಖೇದದಾಯಕ ಘಟನೆಯೂ ನಡೆದಿದೆ. ರಣ್‌ವೀರ್ ಸಿಂಗ್ ಅವರ ತಾಯಿಯ ಕಡೆಯ ಅಜ್ಜ ಡಾ. ರಾಮ್ ಹಿಂಗೊರಾಣಿ ಅವರು ತಮ್ಮ 96ನೇ ವಯಸ್ಸಿನಲ್ಲಿ ಇಹಲೋಕತ್ಯಜಿಸಿದ್ದಾರೆ. ಲಕ್ಷ್ಮಿ ಪೂಜೆಯ ಪವಿತ್ರ ಹಾಗೂ ಗೋಲ್ಡನ್ ಅವರ್ ಸಮಯದಲ್ಲಿ ಅವರು ಕೊನೆಯುಸಿರೆಳೆದಿರುವುದು ಕುಟುಂಬಕ್ಕೆ ಆಘಾತ ತಂದಿದೆ. ಆದರೆ ಅವರದ್ದು ತುಂಬು ಜೀವನವಾಗಿದ್ದು, ಅಜ್ಜನ ನೆನಪುಗಳನ್ನು ಕುಟುಂಬದವರು ಪ್ರೀತಿಯಿಂದ ಸ್ಮರಿಸಿದ್ದಾರೆ.

ರಣ್‌ವೀರ್ ಅವರ ಸಂಬಂಧಿ ಸೌಮ್ಯ ಹಿಂಗೊರಾಣಿ ಅವರು ಸಾಮಾಜಿಕ ಜಾಲತಾಣದಲ್ಲಿ ಅಜ್ಜನ ಜೊತೆಗಿನ ಸುಂದರ ನೆನಪುಗಳನ್ನು ಹಂಚಿಕೊಂಡಿದ್ದಾರೆ. ಡಾ. ರಾಮ್ ಅವರು ತಮ್ಮ ಅಜ್ಜಿಯ ಬಳಿಗೆ ನೆಮ್ಮದಿಯಿಂದ ತೆರಳಿದ್ದಾರೆ ಎಂದು ಭಾವುಕವಾಗಿ ಬರೆದುಕೊಂಡಿದ್ದಾರೆ. 96 ವರ್ಷಗಳ ಸುದೀರ್ಘ ಬದುಕು ನಮ್ಮೆಲ್ಲರಿಗೂ ಸ್ಫೂರ್ತಿ ಎಂದು ತಿಳಿಸಿದ್ದಾರೆ. ರಣ್‌ವೀರ್ ಸಿಂಗ್ ಸದ್ಯ ಈ ದುಃಖದ ಸಂಗತಿಯ ಬಗ್ಗೆ ಸಾರ್ವಜನಿಕವಾಗಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಇದನ್ನೂ ಓದಿ: ರಣ್​ವೀರ್ ಸಿಂಗ್ ಜೊತೆ ನಟಿಸಲಿದ್ದಾರೆ ತಮನ್ನಾ ಭಾಟಿಯಾ, ನಾಯಕಿಯಾಗಿ ಅಲ್ಲ

ವೃತ್ತಿಜೀವನದ ವಿಚಾರಕ್ಕೆ ಬಂದರೆ ರಣ್‌ವೀರ್ ಸಿಂಗ್ ಮುಂಬರುವ ಯೋಜನೆಗಳಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚೆಗೆ ‘ಧುರಂಧರ್’ ಫ್ರಾಂಚೈಸಿ ಮೂಲಕ ಬಾಕ್ಸ್‌ಆಫೀಸ್‌ನಲ್ಲಿ ಬರೋಬ್ಬರಿ 3000 ಕೋಟಿ ರೂ. ಗಳಿಸಿ ಭರ್ಜರಿ ಯಶಸ್ಸು ಕಂಡಿದ್ದಾರೆ. ಸದ್ಯ ಅವರು ಜೈ ಮೆಹ್ತಾ ನಿರ್ದೇಶನದಲ್ಲಿ ಮೂಡಿಬರುತ್ತಿರುವ ‘ಪ್ರಳಯ’ ಸಿನಿಮಾದಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ರಣ್‌ವೀರ್ ಜೊತೆಗೆ ಕಲ್ಯಾಣಿ ಪ್ರಿಯದರ್ಶನ್ ಕೂಡ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಶ್ರೀಲಕ್ಷ್ಮೀ ಎಚ್

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More
Loading...
Unable to load recommendations.
Follow Us