
ಬಾಲಿವುಡ್ ಸ್ಟಾರ್ ನಟ ರಣವೀರ್ ಸಿಂಗ್ ತಮ್ಮ ಕಾರು ಸಂಗ್ರಹಕ್ಕೆ ಮತ್ತೊಂದು ಹೊಸ ಐಷಾರಾಮಿ ವಾಹನವನ್ನು ಸೇರ್ಪಡೆ ಮಾಡಿದ್ದಾರೆ. ಬಿಎಂಡಬ್ಲ್ಯೂ ಕಂಪನಿಯ ಬ್ರ್ಯಾಂಡ್ ಅಂಬಾಸಿಡರ್ ಆಗಿರುವ ಅವರು, ಈಗ ಅದೇ ಕಂಪನಿಯ ಅತ್ಯಾಧುನಿಕ ಐ7 ಎಲೆಕ್ಟ್ರಿಕ್ ಕಾರನ್ನು ಖರೀದಿಸಿದ್ದಾರೆ. ಮುಂಬೈ ರಸ್ತೆಗಳಲ್ಲಿ ಈ ನೂತನ ಕಾರನ್ನು ಸ್ವತಃ ನಟನೇ ಚಲಾಯಿಸಿಕೊಂಡು ಹೋಗಿದ್ದಾರೆ.
ರಣವೀರ್ ಸಿಂಗ್ ಅವರು ತುಂಬಾನೇ ಶ್ರೀಮಂತ ನಟ. ಇದರ ಜೊತೆಗೆ ಅವರಿಗೆ ಕಾರಿನ ಕ್ರೇಜ್ ಕೂಡ ಇದೆ. ಹೀಗಾಗಿ, ತಮ್ಮಿಷ್ಟದ ಹೊಸ ಹೊಸ ಕಾರನ್ನು ಅವರು ಖರೀದಿ ಮಾಡುತ್ತಾರೆ. ಈಗ ಅವರು ಖರೀದಿ ಮಾಡಿರುವ ಐ7 ಕಾರಿನ ಮೌಲ್ಯ ಸುಮಾರು ಎರಡು ಕೋಟಿ ರೂಪಾಯಿಗೂ ಅಧಿಕವಾಗಿದೆ. ಮುಂಬೈನ ಶೋರೂಮ್‌ನಿಂದ ನಟ ಕಾರನ್ನು ಪಡೆದಿದ್ದಾರೆ.
ಈ ಐಷಾರಾಮಿ ಕಾರನ್ನು ರಣವೀರ್ ಸ್ವತಃ ಡ್ರೈವ್ ಮಾಡಿಕೊಂಡು ತೆರಳಿದ್ದಾರೆ. ಕಾರು ಕಪ್ಪು ಬಣ್ಣ ಹೊಂದಿದ್ದು, ಇದರ ಜೊತೆಗೆ ಅವರು ಕಪ್ಪು ಬಣ್ಣದ ಉಡುಪಿನಲ್ಲಿ ಮಿಂಚಿದರು. ಬಿಎಂಡಬ್ಲ್ಯೂ ಸಂಸ್ಥೆಯು ಇತ್ತೀಚೆಗೆ ಅವರನ್ನು ಬ್ರ್ಯಾಂಡ್ ಅಂಬಾಸಿಡರ್ ಆಗಿ ನೇಮಿಸಿತ್ತು. ಆದರೆ ಇದು ಅವರ ವೈಯಕ್ತಿಕ ಖರೀದಿಯಾಗಿದೆ ಎಂದು ವರದಿಯಾಗಿದೆ.
Ranveer Singh looking stunningly handsome at the BMW store picking up his new car 🔥… #Pralay https://t.co/zvTYzNxKep
— khanna (@cozybambii) October 9, 2026
ರಣವೀರ್ ಬಳಿ ಈಗಾಗಲೇ ಹಮ್ಮರ್ ಇವಿ ಎಲೆಕ್ಟ್ರಿಕ್ ಕಾರಿದೆ. ಇದು ಅವರ ಸಂಗ್ರಹದ ಎರಡನೇ ಎಲೆಕ್ಟ್ರಿಕ್ ಕಾರಾಗಿದೆ. ಇವರ ಬಳಿ ಲಂಬೋರ್ಘಿನಿ ಮತ್ತು ಮರ್ಸಿಡಿಸ್ ಕಾರುಗಳಿವೆ. ರೇಂಜ್ ರೋವರ್ ಹಾಗೂ ಆಸ್ಟನ್ ಮಾರ್ಟಿನ್ ಕಾರುಗಳೂ ಅವರ ಗ್ಯಾರೇಜ್‌ನಲ್ಲಿವೆ. ಇತ್ತೀಚೆಗೆ ಅವರು ಎಲೆಕ್ಟ್ರಿಕ್ ಕಾರಿನ ಮೇಲೆ ಸಾಕಷ್ಟು ಆಸಕ್ತಿ
ರಣವೀರ್ ಸಿಂಗ್ ಇತ್ತೀಚೆಗೆ ಎರಡನೇ ಬಾರಿಗೆ ತಂದೆ ಆಗಿದ್ದಾರೆ. ಅವರಿಗೆ ಎರಡನೇ ಬಾರಿಗೆ ಹೆಣ್ಣು ಮಗು ಜನಿಸಿದೆ. ದೀಪಿಕಾ ಪಡುಕೋಣೆ ಮತ್ತು ರಣವೀರ್ ದಂಪತಿ ಖುಷಿಯಲ್ಲಿದ್ದಾರೆ. ಇದರ ಜೊತೆಗೆ ರಣವೀರ್ ‘ಪ್ರಳಯ್’ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಮುಂಬೈನಲ್ಲಿ ಈ ಚಿತ್ರದ ಚಿತ್ರೀಕರಣ ಭರಾಟೆಯಿಂದ ಸಾಗುತ್ತಿದೆ
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.