AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಕಾಗೆ ಬಂಗಾರ’ದ ಜೊತೆ ಬಂದ ಸೂರಿ; ವಿಲನ್ ಆದ ನಟೇಶ್ ಹೆಗಡೆ

ಖ್ಯಾತ ನಿರ್ದೇಶಕ ಸೂರಿ ಅವರ ಸಾರಥ್ಯದಲ್ಲಿ ಮೂಡಿಬರುತ್ತಿರುವ ಬಹುನಿರೀಕ್ಷಿತ ‘ಕೆಂಡ ಸಂಪಿಗೆ’ ಚಿತ್ರದ ಸೀಕ್ವೆಲ್ ಆಗಿ ‘ಕಾಗೆ ಬಂಗಾರ’ ಸಿನಿಮಾ ಮೂಡಿಬರುತ್ತಿದೆ. ಈ ಚಿತ್ರದಲ್ಲಿ ಪ್ರತಿಭಾವಂತ ನಟ ಹಾಗೂ ನಿರ್ದೇಶಕ ನಟೇಶ್ ಹೆಗಡೆ ಅವರು ಖಳನಾಯಕನಾಗಿ ಅಭಿನಯಿಸುತ್ತಿದ್ದಾರೆ. ಈ ವಿಭಿನ್ನ ಪಾತ್ರವು ಸಿನಿಪ್ರಿಯರಲ್ಲಿ ಭಾರೀ ಕುತೂಹಲ ಮೂಡಿಸಿದೆ.

‘ಕಾಗೆ ಬಂಗಾರ’ದ ಜೊತೆ ಬಂದ ಸೂರಿ; ವಿಲನ್ ಆದ ನಟೇಶ್ ಹೆಗಡೆ
ಕಾಗೆ ಬಂಗಾರ
ರಾಜೇಶ್ ದುಗ್ಗುಮನೆ
|

Updated on:Oct 12, 2026 | 11:03 AM

Share

ಮುಖ್ಯಾಂಶಗಳು

  • ‘ಕೆಂಡ ಸಂಪಿಗೆ’ ಸೀಕ್ವೆಲ್
  • ಹೊಚ್ಚ ಹೊಸ ನಿರೀಕ್ಷೆಗಳೊಂದಿಗೆ ‘ಕಾಗೆ ಬಂಗಾರ’
  • ವಿಲನ್ ಅವತಾರದಲ್ಲಿ ನಟೇಶ್ ಹೆಗಡೆ

2015ರಲ್ಲಿ ರಿಲೀಸ್ ಆಗಿ ಸೂಪರ್ ಹಿಟ್ ಆಗಿದ್ದ ಸಿನಿಮಾ ಎಂದರೆ ಅದು ‘ಕೆಂಡ ಸಂಪಿಗೆ’. ಈ ಸಿನಿಮಾ ಸೀಕ್ವೆಲ್​ಗೆ ‘ಕಾಗೆ ಬಂಗಾರ’ ಎಂದು ಟೈಟಲ್ ಇಡಲಾಗಿತ್ತು. ಈ ಸಿನಿಮಾ ಸೆಟ್ಟೇರಲು ಬಹಳ ಸಮಯ ತೆಗೆದುಕೊಂಡಿದೆ. ನಿರ್ದೇಶಕ ಸೂರಿ ಅವರು ಲೇಟ್ ಆದರೂ ಲೇಟೆಸ್ಟ್​ ಆಗಿ ಎಂಟ್ರಿ ಕೊಡುತ್ತಿದ್ದಾರೆ. ಈ ಚಿತ್ರದಲ್ಲಿ ಪ್ರಖ್ಯಾತ್ ಸೂರ್ಯ, ರಿಥನ್ಯಾ ವಿಜಯ್​ಕುಮಾರ್ ಮುಖ್ಯಭೂಮಿಕೆಯಲ್ಲಿದ್ದಾರೆ. ನಟೇಶ್​ ಹೆಗಡೆ ಅವರು ರೂಬಿ ಹೆಸರಿನ ವಿಲನ್ ಪಾತ್ರ ಮಾಡುತ್ತಿದ್ದಾರೆ ಅನ್ನೋದು ವಿಶೇಷ.

ನಟೇಶ್ ಹೆಗಡೆ ಅವರು ನಿರ್ದೇಶನ ಹಾಗೂ ನಟನೆ ಎರಡರಲ್ಲೂ ಬ್ಯುಸಿ ಇದ್ದಾರೆ. ‘ಪೆದ್ರೊ’, ‘ವಾಘಚಿಪಾಣಿ’ ಸಿನಿಮಾಗಳನ್ನು ನಿರ್ದೇಶಿಸಿ, ನಟಿಸಿದ್ದಾರೆ. ಇನ್ನು ‘ಬಂದರ್’ ಹಾಗೂ ‘ರೈಫಲ್ ಕ್ಲಬ್’ ಸಿನಿಮಾಗಳಲ್ಲಿ ಅವರು ಅತಿಥಿ ಪಾತ್ರ ಮಾಡಿದ್ದರು. ಈಗ ‘ಕಾಗೆ ಬಂಗಾರ’ ಸಿನಿಮಾಗೆ ಅವರು ವಿಲನ್ ಆಗಿದ್ದಾರೆ.

‘ಕಾಗೆ ಬಂಗಾರ’ ಕನ್ನಡದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದು. ಈ ಚಿತ್ರ ಸೆಟ್ಟೇರಿದೆ ಎನ್ನುವ ವಿಷಯ ಸಿನಿಪ್ರಿಯರಲ್ಲಿ ಖುಷಿ ಮೂಡಿಸಿದೆ.ಈ ಸಿನಿಮಾದಲ್ಲಿ ನಟೇಶ್ ಜೊತೆ ಪ್ರಶಾಂತ್ ಸಿದ್ಧಿ, ಪ್ರಖ್ಯಾತ್ ಸೂರ್ಯ, ರಿಥನ್ಯಾ, ನಂದ ಕಿಶೋರ್ ಮೊದಲಾದವರುನಟಿಸಿದ್ದಾರೆ. ಈ ಚಿತ್ರಕ್ಕೆ ಚರಣ್ ರಾಜ್ ಸಂಗೀತ ಇದೆ. ಎಚ್​​ಆರ್​ಜಿ ಪ್ರೊಡಕ್ಷನ್ ಅಡಿಯಲ್ಲಿ ಈ ಸಿನಿಮಾ ಮೂಡಿಬರುತ್ತಿದೆ.

ಇದನ್ನೂ ಓದಿ: ಕೊನೆಗೂ ನಿಗದಿಯಾಯ್ತು ‘ಕಾಗೆ ಬಂಗಾರ’ಕ್ಕೆ ಮುಹೂರ್ತ, ನಾಯಕ ಯಾರು?

ನಟೇಶ್ ಅವರು ನಿರ್ದೇಶನದ ಜೊತೆಗೆ ನಟನೆಯಲ್ಲೂ ತೊಡಗಿಕೊಂಡಿದ್ದಾರೆ. ಅನುರಾಗ್ ಕಶ್ಯಪ್ ಜೊತೆ ಅವರು ಒಳ್ಳೆಯ ಒಡನಾಟ ಹೊಂದಿದ್ದಾರೆ. ಅನುರಾಗ್ ಅವರು ರಾ ಶೈಲಿಯ ಸಿನಿಮಾಗನ್ನು ತೆಗೆಯೋದ್ರಲ್ಲಿ ಸ್ಪೆಷಲಿಸ್ಟ್. ಸೂರಿ ಕೂಡ ಇದೇ ರೀತಿಯ ಸಿನಿಮಾ ಮಾಡುತ್ತಾರೆ. ಈ ಕಾರಣದಿಂದ ನಟೇಶ್ ಪಾತ್ರದ ಮೇಲೆ ನಿರೀಕ್ಷೆ ಹೆಚ್ಚಿದೆ.

ಗಣೇಶ್ ಹೆಗಡೆ ನಿರ್ದೇಶನದ ‘ಕುರ್ಕ’ ಸಿನಿಮಾದಲ್ಲಿ ನಟೇಶ್ ಹೆಗಡೆ ಅಭಿನಯಿಸಿದ್ದಾರೆ. ಈ ಚಿತ್ರವನ್ನು ಇದೇ ವರ್ಷ ತೆರೆಗೆ ತರುವ ಪ್ಲ್ಯಾನ್ ತಂಡ ಹೊಂದಿದೆ. ಶೀಘ್ರದಲ್ಲೇ ತಂಡ ಟ್ರೇಲರ್ ರಿಲೀಸ್ ಮಾಡಲು ಪ್ಲ್ಯಾನ್ ರೂಪಿಸಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 10:57 am, Mon, 12 October 26

Follow Us
ರಾಜೇಶ್ ದುಗ್ಗುಮನೆ
ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More