ಅಕ್ಕ-ತಂಗಿ ಅಂದು, ಇಂದು; ರಶ್ಮಿಕಾ-ಶಿಮನ್ ಕ್ಯೂಟ್ ಫೋಟೋ ವೈರಲ್

ರಶ್ಮಿಕಾ ಮಂದಣ್ಣ ಅವರ ವೈರಲ್ ಮದುವೆ ಫೋಟೋಗಳು ಮತ್ತು ಸಹೋದರಿ ಶಿಮನ್ ಜೊತೆಗಿನ ಚಿತ್ರಗಳು ಗಮನ ಸೆಳೆದಿವೆ. ಉದಯಪುರದಲ್ಲಿ ನಡೆದ ಅದ್ದೂರಿ ವಿವಾಹ ಕಾರ್ಯಕ್ರಮದಲ್ಲಿ ಶಿಮನ್ ಕುಣಿದು ಕುಪ್ಪಳಿಸಿದ್ದಾಳೆ. 16 ವರ್ಷಗಳ ವಯಸ್ಸಿನ ಅಂತರದಿಂದಾಗಿ, ಶಿಮನ್ ರಶ್ಮಿಕಾಗೆ ಮಗಳಂತೆ ಭಾಸವಾಗುತ್ತಾಳಂತೆ. ಇಬ್ಬರ ಹಿಂದಿನ ಹಾಗೂ ಇತ್ತೀಚಿನ ಕೊಲ್ಯಾಜ್ ಫೋಟೋಗಳು ಅಭಿಮಾನಿಗಳನ್ನು ಖುಷಿಪಡಿಸಿವೆ.

ಅಕ್ಕ-ತಂಗಿ ಅಂದು, ಇಂದು; ರಶ್ಮಿಕಾ-ಶಿಮನ್ ಕ್ಯೂಟ್ ಫೋಟೋ ವೈರಲ್
ರಶ್ಮಿಕಾ-ಶಿಮನ್

Updated on: Mar 11, 2026 | 10:46 AM

ರಶ್ಮಿಕಾ ಮಂದಣ್ಣ (Rashmika Mandanna) ಅವರು ಇತ್ತೀಚೆಗೆ ಸುದ್ದಿಯಲ್ಲಿದ್ದಾರೆ. ಅವರ ವಿವಾಹದ ಫೋಟೋಗಳು ವೈರಲ್ ಆಗಿವೆ. ವಿವಾಹ ಪೂರ್ವ ಕಾರ್ಯಕ್ರಮ, ವಿವಾಹ ಶಾಸ್ತ್ರಗಳು ರಾಜಸ್ಥಾನದ ಉದಯಪುರದಲ್ಲಿ ಅದ್ದೂರಿಯಾಗಿ ನಡೆದವು. ಹೀಗಿರುವಾಗಲೇ ರಶ್ಮಿಕಾ ಮಂದಣ್ಣ ಹಾಗೂ ಅವರ ಸಹೋದರಿಯ ಕ್ಯೂಟ್ ಫೋಟೋಗಳು ವೈರಲ್ ಆಗಿವೆ. ಅಂದು ಹೇಗಿದ್ದರು ಹಾಗೂ ಈಗ ಹೇಗಿದ್ದಾರೆ ಎಂಬ ಕೊಲ್ಯಾಜ್ ಗಮನ ಸೆಳೆಯುವ ರೀತಿಯಲ್ಲಿ ಇದೆ.

ರಶ್ಮಿಕಾ ಮಂದಣ್ಣ ಸಹೋದರಿ ಹೆಸರು ಶಿಮನ್. ಇಬ್ಬರ ಮಧ್ಯೆ ಸುಮಾರು 16 ವರ್ಷಗಳ ವಯಸ್ಸಿನ ಅಂತರ ಇದೆ. ರಶ್ಮಿಕಾ ಜನಿಸಿದ್ದು, 1996ರ ಏಪ್ರಿಲ್ 5ರಂದು. ಅವರಿಗೆ ಈ ಏಪ್ರಿಲ್​​ಗೆ 30 ವರ್ಷ ತುಂಬಲಿದೆ. ಶಿಮನ್​​ಗೆ ಈಗಿನ್ನೂ 14 ವರ್ಷ. ಅವಳು ಅಕ್ಕನ ಮದುವೆಯಲ್ಲಿ ಕುಣಿದು ಕುಪ್ಪಳಿಸಿದ್ದಾಳೆ.

ಈ ದೊಡ್ಡ ವಯಸ್ಸಿನ ಅಂತರದಿಂದಾಗಿ,ರಶ್ಮಿಕಾಗೆ ಶಿಮನ್‌ ಮಗಳಂತೆ ಭಾಸವಾಗುತ್ತಾಳಂತೆ. ಅವರ ಬಿಡುವಿಲ್ಲದ ವೃತ್ತಿಜೀವನದಿಂದಾಗಿ ಶಿಮನ್ ಬೆಳೆಯುವುದನ್ನು ನೋಡುವ ಅವಕಾಶವನ್ನು ಕಳೆದುಕೊಳ್ಳುತ್ತಿರುವುದಕ್ಕೆ ರಶ್ಮಿಕಾಗೆ ಬೇಸರ ಇದೆ.

ರಶ್ಮಿಕಾ ಅವರು ತಂಗಿಯ ಜೊತೆ ಫೋಟೋ ಹಂಚಿಕೊಂಡಿದ್ದು ಕಡಿಮೆ. ಅವಳ ಖಾಸಗಿತನಕ್ಕೆ ದಕ್ಕೆ ಬರಬಾರದು ಎಂಬ ಕಾರಣಕ್ಕೆ ತಂಗಿ ಜೊತೆ ರಶ್ಮಿಕಾ ಫೋಟೋಗಳನ್ನು ಹಂಚಿಕೊಳ್ಳುತ್ತಾ ಇರಲಿಲ್ಲ. ಆದರೆ, ಮದುವೆ ಸಂದರ್ಭದಲ್ಲಿ ಕ್ಲಿಕ್ಕಿಸಿಕೊಂಡ ಫೋಟೋಗಳನ್ನು ರಶ್ಮಿಕಾ ಹಂಚಿಕೊಳ್ಳದೆ ಇರಲು ಸಾಧ್ಯವಾಗಿಲ್ಲ.

ಇದನ್ನೂ ಓದಿ: ಮದುವೆಯ ಹೊಸ ಫೋಟೋ ಶೇರ್ ಮಾಡಿದ ರಶ್ಮಿಕಾ-ವಿಜಯ್; ಸಖತ್ ಕಲರ್​​ಫುಲ್

ಮೊದಲ ಫೋಟೋ 2020ರಲ್ಲಿ ತೆಗೆದಿದ್ದು ಎನ್ನಲಾಗಿದೆ. ಅಂದರೆ, ಆಗ ಶಿಮನ್​​ಗೆ 8 ವರ್ಷ. ಈಗ ಆಕೆಗೆ 14 ವರ್ಷ. ಈ ಎರಡೂ ಫೋಟೋಗಳನ್ನು ನೋಡಿ ಅಭಿಮಾನಿಗಳು ಖುಷಿಪಟ್ಟಿದ್ದಾರೆ. ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ಸದ್ಯ ಸಿನಿಮಾಗಳಿಂದ ಬ್ರೇಕ್ ಪಡೆದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಾಜೇಶ್ ದುಗ್ಗುಮನೆ

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More
Follow Us