Rashmika Mandanna: ಇನ್ನು 3 ವರ್ಷಗಳಲ್ಲಿ ರಶ್ಮಿಕಾ ಮಂದಣ್ಣ ಮನೆ ಏನಾಗಬಹುದು? ಈಗಲೇ ಭವಿಷ್ಯ ನುಡಿದ ನಟಿ

Rashmika Mandanna Pets: ರಶ್ಮಿಕಾ ಮಂದಣ್ಣ ಅವರು ತಮ್ಮ ದಿನಚರಿಯ ಬಗ್ಗೆ ಅಭಿಮಾನಿಗಳಿಗೆ ಆಗಾಗ ಅಪ್​ಡೇಟ್​ ನೀಡುತ್ತಲೇ ಇರುತ್ತಾರೆ. ಈಗ ಅವರು ಕಿರು ವಿಡಿಯೋ ಮೂಲಕ ಹೊಸ ಸುದ್ದಿ ತಿಳಿಸಿದ್ದಾರೆ.

Rashmika Mandanna: ಇನ್ನು 3 ವರ್ಷಗಳಲ್ಲಿ ರಶ್ಮಿಕಾ ಮಂದಣ್ಣ ಮನೆ ಏನಾಗಬಹುದು? ಈಗಲೇ ಭವಿಷ್ಯ ನುಡಿದ ನಟಿ
ರಶ್ಮಿಕಾ ಮಂದಣ್ಣ
Edited By:

Updated on: Jul 13, 2022 | 8:10 AM

ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರಿಗೆ ಹಲವು ಆಫರ್​ಗಳು ಹರಿದುಬರುತ್ತಿವೆ. ಎಲ್ಲ ಭಾಷೆಯಲ್ಲೂ ಅವರು ಮಿಂಚುತ್ತಿದ್ದಾರೆ. ಜಾಹೀರಾತುಗಳಲ್ಲೂ ನಟಿಸುವ ಮೂಲಕ ಅವರು ಕೋಟ್ಯಂತರ ರೂಪಾಯಿ ಸಂಭಾವನೆ ಪಡೆಯುತ್ತಾರೆ. ತಮ್ಮ ಭವಿಷ್ಯದ ಬಗ್ಗೆ ರಶ್ಮಿಕಾ ಹಲವು ಕನಸುಗಳನ್ನು ಕಟ್ಟಿಕೊಂಡಿದ್ದಾರೆ. ವಿಶೇಷ ಎಂದರೆ ಅವರು ಪ್ರಾಣಿಪ್ರಿಯೆ. ಈಗಾಗಲೇ ಅವರ ಮನೆಯಲ್ಲಿ ಔರಾ ಎಂಬ ನಾಯಿ (Rashmika Mandanna Dog) ಇದೆ. ಆ ಶ್ವಾನವನ್ನು ಕಂಡರೆ ರಶ್ಮಿಕಾಗೆ ಎಲ್ಲಿಲ್ಲದಷ್ಟು ಪ್ರೀತಿ. ಆಗಾಗ ಅವರು ತಮ್ಮ ನಾಯಿಯ ಫೋಟೋ ಮತ್ತು ವಿಡಿಯೋಗಳನ್ನು ಶೇರ್​ ಮಾಡಿಕೊಳ್ಳುತ್ತಲೇ ಇರುತ್ತಾರೆ. ಈಗ ರಶ್ಮಿಕಾ ಮಂದಣ್ಣ ಮನೆಗೆ (Rashmika Mandanna Home) ಹೊಸ ಅತಿಥಿಯ ಆಗಮನ ಆಗಿದೆ. ಆ ಬಗ್ಗೆ ಅವರು ಮಾಹಿತಿ ನೀಡಿದ್ದಾರೆ. ಯಾರು ಈ ಅತಿಥಿ? ಸ್ನೋ ಎಂಬ ಹೊಸ ಬೆಕ್ಕು!

ಶೂಟಿಂಗ್​ ಸಲುವಾಗಿ ರಶ್ಮಿಕಾ ಮಂದಣ್ಣ ಅವರು ಈಗ ಹೆಚ್ಚಾಗಿ ಹೈದರಾಬಾದ್​​ನಲ್ಲೇ ಕಾಲ ಕಳೆಯುತ್ತಾರೆ. ಅಲ್ಲಿ ಅವರು ಮನೆ ಹೊಂದಿದ್ದಾರೆ. ಆ ಮನೆಯಲ್ಲಿ ನಾಯಿ ಸಾಕಿರುವ ಅವರು ಈಗ ಹೊಸ ಬೆಕ್ಕನ್ನು ತಂದಿದ್ದಾರೆ. ಆ ಬೆಕ್ಕಿಗೆ ‘ಸ್ನೋ’ ಎಂದು ಹೆಸರು ಇಡಲಾಗಿದೆ. ಅದರ ಫೋಟೋವನ್ನು ಅವರು ಮೊದಲ ಬಾರಿಗೆ ಹಂಚಿಕೊಂಡಿದ್ದಾರೆ. ಮನೆಗೆ ಬಂದಿರುವ ಹೊಸ ಅತಿಥಿಯನ್ನು ಸೋಶಿಯಲ್​ ಮೀಡಿಯಾ ಮೂಲಕ ಅಭಿಮಾನಿಗಳಿಗೆ ಪರಿಚಯ ಮಾಡಿಕೊಟ್ಟಿದ್ದಾರೆ.

ಇದನ್ನೂ ಓದಿ
Pushpa 2: ರಶ್ಮಿಕಾ ಮಂದಣ್ಣ ಪಾತ್ರ ಸಾಯುತ್ತೆ ಅನ್ನೋದು ನಿಜವೇ? ‘ಪುಷ್ಪ 2’ ನಿರ್ಮಾಪಕರು​ ನೀಡಿದ ಪ್ರತಿಕ್ರಿಯೆ ಇಲ್ಲಿದೆ..
Rashmika Mandanna: ರಶ್ಮಿಕಾ ಮಂದಣ್ಣ ಗುಟ್ಟಾಗಿ ‘777 ಚಾರ್ಲಿ’ ನೋಡಿದ್ರಾ? ಜನರ ಅನುಮಾನಕ್ಕೆ ಕಾರಣ ಆಗಿದೆ ಈ ವಿಡಿಯೋ
ಅತಿ ಹೆಚ್ಚು ಸಂಬಳ ಪಡೆಯುವ ದಕ್ಷಿಣ ಭಾರತದ ಟಾಪ್​ 10 ನಟಿಯರು ಇವರು; ರಶ್ಮಿಕಾ, ಸಮಂತಾ ಸಂಭಾವನೆ ಎಷ್ಟು?
ರಶ್ಮಿಕಾ ಮಂದಣ್ಣ ಹೊಸ ವಿಡಿಯೋ ವೈರಲ್​; ಎನರ್ಜಿ ಕಂಡು ವಾವ್​ ಎಂದ ಅಭಿಮಾನಿಗಳು

‘ಎಲ್ಲರಿಗೂ ಸ್ನೋ ಪರಿಚಯಿಸುತ್ತಿದ್ದೇನೆ.. ಇನ್ನು 3 ವರ್ಷ ಕಳೆಯುವುದರೊಳಗೆ ನನ್ನ ಮನೆ ಒಂದು ಸಣ್ಣ ಕಾಡಿನ ರೀತಿ ಆಗಲಿದೆ ಎನಿಸುತ್ತದೆ’ ಎಂದು ರಶ್ಮಿಕಾ ಮಂದಣ್ಣ ಬರೆದುಕೊಂಡಿದ್ದಾರೆ. ಸ್ನೋ ನೋಡಿ ಅನೇಕರು ಖುಷಿ ವ್ಯಕ್ತಪಡಿಸಿದ್ದಾರೆ. ರಶ್ಮಿಕಾ ಹಂಚಿಕೊಂಡಿರುವ ಈ ವಿಡಿಯೋ ಕೆಲವೇ ಗಂಟೆಗಳಲ್ಲಿ 10 ಲಕ್ಷಕ್ಕೂ ಅಧಿಕ ಬಾರಿ ವೀಕ್ಷಣೆ ಕಂಡಿದೆ.

ಔರಾ ಬಗ್ಗೆ ಕೇಳಿಬಂದಿತ್ತು ಗಾಸಿಪ್​:

ನಟಿಯರ ಬಗ್ಗೆ ಗಾಸಿಪ್​ ಹಬ್ಬುವುದು ಸಹಜ. ಆದರೆ ಇತ್ತೀಚೆಗೆ ರಶ್ಮಿಕಾ ಮಂದಣ್ಣ ಅವರ ನಾಯಿ ಬಗ್ಗೆಯೂ ಒಂದು ಗಾಸಿಪ್​ ಕೇಳಿಬಂದಿತ್ತು. ಶೂಟಿಂಗ್​ಗೆ ಬರುವಾಗ ರಶ್ಮಿಕಾ ಅವರ ನಾಯಿಗೂ ನಿರ್ಮಾಪಕರು ವಿಮಾನದಲ್ಲಿ ಟಿಕೆಟ್​ ಖರೀದಿಸಬೇಕು. ಇದರಿಂದ ನಿರ್ಮಾಪಕರಿಗೆ ಅನಗತ್ಯ ಹೊರೆ ಆಗುತ್ತದೆ ಎಂದು ಗಾಳಿಸುದ್ದಿ ಹಬ್ಬಿಸಲಾಗಿತ್ತು. ಅದನ್ನು ರಶ್ಮಿಕಾ ತಳ್ಳಿಹಾಕಿದ್ದರು. ತಮ್ಮ ನಾಯಿ ಹೈದರಾಬಾದ್​ ಬಿಟ್ಟು ಎಲ್ಲಿಗೂ ಬರುವುದಿಲ್ಲ ಎಂದು ಅವರು ಹೇಳಿದ್ದರು.

 

Published On - 8:10 am, Wed, 13 July 22