‘ಇದುವೇ ಕರ್ಮ?’; ಬಾಲಿವುಡ್​ ಕಡೆ ಒಲವು ತೋರಿಸಿದ ರಶ್ಮಿಕಾ ಮಂದಣ್ಣಗೆ ಉಂಟಾಯ್ತು ಹಿನ್ನಡೆ

ರಶ್ಮಿಕಾ ಮಂದಣ್ಣ ಅವರು ‘ಭೀಷ್ಮ’ ಚಿತ್ರದಲ್ಲಿ ನಟಿಸಿದ್ದರು. ಈ ಚಿತ್ರದಲ್ಲಿ ನಿತಿನ್ ಹೀರೋ ಆಗಿ ಕಾಣಿಸಿಕೊಂಡರೆ, ವೆಂಕಿ ಕುಡುಮುಲ ನಿರ್ದೇಶನ ಮಾಡಿದ್ದರು. ಹೊಸ ಚಿತ್ರ ಒಂದಕ್ಕೆ ಈ ಮೂವರು ಮತ್ತೆ ಒಂದಾಗಿದ್ದರು. ಇದರ ಪ್ರೋಮೋ ಕೂಡ ರಿಲೀಸ್ ಆಗಿತ್ತು. ಆದರೆ, ಚಿತ್ರದಿಂದ ಅವರು ಹೊರ ಬಂದರು.

‘ಇದುವೇ ಕರ್ಮ?’; ಬಾಲಿವುಡ್​ ಕಡೆ ಒಲವು ತೋರಿಸಿದ ರಶ್ಮಿಕಾ ಮಂದಣ್ಣಗೆ ಉಂಟಾಯ್ತು ಹಿನ್ನಡೆ
ರಶ್ಮಿಕಾ

Updated on: Sep 01, 2023 | 7:45 AM

ರಶ್ಮಿಕಾ ಮಂದಣ್ಣ (Rashmika Mandanna) ಸಾಲು ಸಾಲು ಸಿನಿಮಾ ಒಪ್ಪಿಕೊಂಡು ನಟಿಸುತ್ತಿದ್ದಾರೆ. ಕನ್ನಡ ಚಿತ್ರರಂಗದಿಂದ ಬಣ್ಣದ ಬದುಕು ಆರಂಭಿಸಿದ ಅವರು ಈಗ ಇತ್ತ ಮುಖ ಮಾಡುತ್ತಿಲ್ಲ. ಟಾಲಿವುಡ್, ಕಾಲಿವುಡ್​, ಬಾಲಿವುಡ್​ನಲ್ಲಿ ಅವರು ಸಿನಿಮಾ ಮಾಡುತ್ತಿದ್ದಾರೆ. ಈಗ ಒಂದು ವಿಚಾರದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಚರ್ಚೆ ಆಗುತ್ತಿದೆ. ಬಾಲಿವುಡ್ ಸಿನಿಮಾ ಒಪ್ಪಿಕೊಳ್ಳುವ ಕಾರಣಕ್ಕೆ ರಶ್ಮಿಕಾ ತೆಲುಗು ಆಫರ್​ ಬಿಟ್ಟಿದ್ದರು. ಈಗ ಬಜೆಟ್ ವಿಚಾರದಲ್ಲಿ ಹೊಂದಾಣಿಕೆ ಆಗದ ಕಾರಣ ಆ ಬಾಲಿವುಡ್ ಸಿನಿಮಾ ಅರ್ಧಕ್ಕೆ ನಿಂತಿದೆ. ಈಗ ರಶ್ಮಿಕಾಗೆ ಅತ್ತಲೂ ಇಲ್ಲ, ಇತ್ತಲೂ ಇಲ್ಲ ಎಂಬಂತಾಗಿದೆ.

ರಶ್ಮಿಕಾ ಮಂದಣ್ಣ ಅವರು ‘ಭೀಷ್ಮ’ ಚಿತ್ರದಲ್ಲಿ ನಟಿಸಿದ್ದರು. ಈ ಚಿತ್ರದಲ್ಲಿ ನಿತಿನ್ ಹೀರೋ ಆಗಿ ಕಾಣಿಸಿಕೊಂಡರೆ, ವೆಂಕಿ ಕುಡುಮುಲ ನಿರ್ದೇಶನ ಮಾಡಿದ್ದರು. ಹೊಸ ಚಿತ್ರ ಒಂದಕ್ಕೆ ಈ ಮೂವರು ಮತ್ತೆ ಒಂದಾಗಿದ್ದರು. ಇದರ ಪ್ರೋಮೋ ಕೂಡ ರಿಲೀಸ್ ಆಗಿತ್ತು. ಆದರೆ, ಡೇಟ್ಸ್ ಹೊಂದಾಣಿಕೆ ಆಗುವುದಿಲ್ಲ ಎನ್ನುವ ಕಾರಣ ನೀಡಿ ರಶ್ಮಿಕಾ ಮಂದಣ್ಣ ಚಿತ್ರದಿಂದ ಹೊರ ಬಂದರು. ಅಲ್ಲಿ ಆಗಿದ್ದೇ ಬೇರೆ ಎನ್ನುತ್ತಿವೆ ಮೂಲಗಳು.

ಬಾಲಿವುಡ್ ಆಫರ್ ಸಿಕ್ಕರೆ ಉಳಿದ ಆಫರ್​ಗಳನ್ನು ಯೋಚಿಸದೇ ಬಿಡುವ ಅನೇಕರಿದ್ದಾರೆ. ರಶ್ಮಿಕಾ ಮಂದಣ್ಣಗೂ ಹಿಂದಿ ಚಿತ್ರರಂಗದಿಂದ ಆಫರ್ ಬಂದಿತ್ತು. ಅದೂ ಶಾಹಿದ್ ಕಪೂರ್ ಜೊತೆ ನಟಿಸಲು. ಈ ಕಾರಣದಿಂದ ನಿತಿನ್ ಸಿನಿಮಾದಿಂದ ಹೊರ ಬಂದ ರಶ್ಮಿಕಾ, ಶಾಹಿದ್ ಚಿತ್ರಕ್ಕೆ ಡೇಟ್ಸ್ ನೀಡಿದರು. ಆದರೆ, ಆ ಚಿತ್ರ ಈಗ ಅರ್ಧಕ್ಕೆ ನಿಂತಿದೆ!

ಇದನ್ನೂ ಓದಿ: Animal Release Date: ‘ಅನಿಮಲ್​’ ಆಗಮನಕ್ಕೆ ಹೊಸ ದಿನಾಂಕ ನಿಗದಿ: ಡಿ.1ಕ್ಕೆ ಬರಲಿದೆ ರಶ್ಮಿಕಾ-ರಣಬೀರ್​ ಜೋಡಿಯ ಚಿತ್ರ

ಬಜೆಟ್ ವಿಚಾರದಲ್ಲಿ ಹೊಂದಾಣಿಕೆ ಆಗಿಲ್ಲ. ಹೀಗಾಗಿ, ನಿರ್ಮಾಪಕರು ಸಿನಿಮಾನ ಕೈಬಿಡುತ್ತಿದ್ದಾರೆ. ಈb ವಿಚಾರವನ್ನು ಇಟ್ಟುಕೊಂಡು ರಶ್ಮಿಕಾ ಅವರನ್ನು ಟ್ರೋಲ್ ಮಾಡಲಾಗುತ್ತಿದೆ. ‘ಕರ್ಮ ಎಂದರೆ ಇದೇ ಅಲ್ಲವೇ’ ಎಂದು ಅನೇಕರು ಪ್ರಶ್ನೆ ಮಾಡಿದ್ದಾರೆ. ಆದರೆ, ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.

ಸದ್ಯ ಹಿಂದಿಯಲ್ಲಿ ‘ಅನಿಮಲ್’ ಚಿತ್ರದ ರಿಲೀಸ್​ಗಾಗಿ ರಶ್ಮಿಕಾ ಮಂದಣ್ಣ ಕಾಯುತ್ತಿದ್ದಾರೆ. ‘ಪುಷ್ಪ 2’ ಚಿತ್ರದ ಶೂಟಿಂಗ್ ಕೂಡ ಭರದಿಂದ ಸಾಗುತ್ತಿದೆ. ಇನ್ನು, ‘ರೇನ್​ ಬೋ’ ಹೆಸರಿನ ಚಿತ್ರದಲ್ಲೂ ರಶ್ಮಿಕಾ ನಟಿಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us