‘ಪುಷ್ಪ 2’ ಚಿತ್ರದ ಕಥೆ ಲೀಕ್? ಆರಂಭದಲ್ಲೇ ಕೊನೆಯಾಗಲಿದೆಯಾ ರಶ್ಮಿಕಾ ಮಂದಣ್ಣ ಪಾತ್ರ?

| Updated By: ರಾಜೇಶ್ ದುಗ್ಗುಮನೆ

Updated on: Jun 19, 2022 | 6:08 PM

ಎರಡನೇ ಪಾರ್ಟ್​​​ನಲ್ಲಿ ಭನ್ವರ್ ಹಾಗೂ ಪುಷ್ಪ ನಡುವಿನ ಹಗೆತನದ ಕಥೆ ಹೈಲೈಟ್ ಆಗಲಿದೆ ಎನ್ನಲಾಗುತ್ತಿದೆ. ಇದರ ಜತೆ ಈ ಚಿತ್ರದ ಕಥೆ ಲೀಕ್ ಆದ ಬಗ್ಗೆ ವದಂತಿ ಹಬ್ಬಿದೆ.

‘ಪುಷ್ಪ 2’ ಚಿತ್ರದ ಕಥೆ ಲೀಕ್? ಆರಂಭದಲ್ಲೇ ಕೊನೆಯಾಗಲಿದೆಯಾ ರಶ್ಮಿಕಾ ಮಂದಣ್ಣ ಪಾತ್ರ?
ರಶ್ಮಿಕಾ
Follow us on

ನಟಿ ರಶ್ಮಿಕಾ ಮಂದಣ್ಣ ಅವರು (Rashmika Mandanna) ‘ಪುಷ್ಪ’ ಚಿತ್ರದಿಂದ ಸಾಕಷ್ಟು ಜನಪ್ರಿಯತೆ ಗಳಿಸಿಕೊಂಡಿದ್ದಾರೆ. ಅವರು ಮಾಡಿದ ಶ್ರೀವಲ್ಲಿ ಪಾತ್ರಕ್ಕೆ ಅನೇಕರು ಫಿದಾ ಆಗಿದ್ದಾರೆ. ಈ ಚಿತ್ರ ಹಿಂದಿಗೂ ಡಬ್​ ಆಗಿ ತೆರೆಕಂಡಿದ್ದರಿಂದ ಬಾಲಿವುಡ್​ನಲ್ಲೂ (Bollywood) ರಶ್ಮಿಕಾ ಸಾಕಷ್ಟು ಜನಪ್ರಿಯತೆ ಪಡೆದುಕೊಂಡರು. ಈಗ ‘ಪುಷ್ಪ 2’ ಚಿತ್ರಕ್ಕಾಗಿ ಫ್ಯಾನ್ಸ್ ಕಾದಿದ್ದಾರೆ. ಈ ಮಧ್ಯೆ ಫ್ಯಾನ್ಸ್​ಗೆ ಬೇಸರವಾಗುವಂತಹ ವದಂತಿ ಒಂದು ಹುಟ್ಟಿಕೊಂಡಿದೆ. ಆರಂಭದಲ್ಲೇ ಶ್ರೀವಲ್ಲಿ ಪಾತ್ರ ಕೊನೆಯಾಗಲಿದೆ ಎನ್ನುವ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

ಪುಷ್ಪ ರಾಜ್ (ಅಲ್ಲು ಅರ್ಜುನ್​) ಈಗ ದೊಡ್ಡ ಡಾನ್​ ಆಗಿದ್ದಾನೆ.  ಆತ ಭನ್ವರ್ ಸಿಂಗ್ ಶೇಖಾವತ್​ (ಫಹಾದ್ ಫಾಸಿಲ್​) ಜತೆ ಹಗೆ ಕಟ್ಟಿಕೊಂಡಿದ್ದಾನೆ. ಈ ಮಧ್ಯೆ ಪುಷ್ಪ ಹಾಗೂ ಶ್ರೀವಲ್ಲಿ ಮದುವೆ ಆಗಿದೆ. ಎರಡನೇ ಪಾರ್ಟ್​​​ನಲ್ಲಿ ಭನ್ವರ್ ಹಾಗೂ ಪುಷ್ಪ ನಡುವಿನ ಹಗೆತನದ ಕಥೆ ಹೈಲೈಟ್ ಆಗಲಿದೆ ಎನ್ನಲಾಗುತ್ತಿದೆ. ಇದರ ಜತೆ ಈ ಚಿತ್ರದ ಕಥೆ ಲೀಕ್ ಆದ ಬಗ್ಗೆ ವದಂತಿ ಹಬ್ಬಿದೆ.

ಲೀಕ್ ಆಗಿದೆ ಎನ್ನಲಾದ ಕಥೆಯ ಪ್ರಕಾರ ಶ್ರೀವಲ್ಲಿಯನ್ನು ಭನ್ವರ್ ಆರಂಭದಲ್ಲೇ ಹತ್ಯೆ ಮಾಡುತ್ತಾನೆ. ಇದರಿಂದ ಪುಷ್ಪ ಸಾಕಷ್ಟು ಕುಪಿತಗೊಳ್ಳುತ್ತಾನೆ. ಇಬ್ಬರ ನಡುವೆ ಇರುವ ಹಗೆತನ ಮತ್ತಷ್ಟು ಉಗ್ರ ಸ್ವರೂಪ ಪಡೆದುಕೊಳ್ಳುತ್ತದೆ. ಹೀಗೆ ಕಥೆ ಸಾಗುತ್ತದೆ ಎನ್ನಲಾಗುತ್ತಿದೆ. ಈ ವದಂತಿಯನ್ನು ನಂಬುವುದು ಬಿಡುವುದು ಅಭಿಮಾನಿಗಳ ಪಾಲಿಗೆ ಬಿಟ್ಟ ವಿಚಾರ.

ಇದನ್ನೂ ಓದಿ
ಫ್ಯಾನ್ ಮೇಲೆ ಬಾಡಿಗಾರ್ಡ್​ ರೇಗಾಡಿದ್ದನ್ನು ನೋಡಿ ಸಿಟ್ಟಾದ ರಶ್ಮಿಕಾ ಮಂದಣ್ಣ; ಇಲ್ಲಿದೆ ವಿಡಿಯೋ
ರಣಬೀರ್ ಮಾತ್ರ ಹಾಗೆ ಕರೆಯುತ್ತಾರೆ, ಅದು ನನಗೆ ಕೊಂಚವೂ ಇಷ್ಟವಿಲ್ಲ ಎಂದ ರಶ್ಮಿಕಾ ಮಂದಣ್ಣ
ತೃಪ್ತಿ ಆಗುವಂತೆ ಬೆವರು ಹರಿಸಿ ವರ್ಕೌಟ್​ ಮಾಡಿದ ಬಳಿಕ ಫೋಟೋ ಹಂಚಿಕೊಂಡ ರಶ್ಮಿಕಾ ಮಂದಣ್ಣ
ರಶ್ಮಿಕಾ ಮಂದಣ್ಣಗೆ ಖಂಡಿತಾ ಇಷ್ಟ ಆಗಲಿದೆ ರಕ್ಷಿತ್​ ಶೆಟ್ಟಿಯ ‘777 ಚಾರ್ಲಿ’ ಸಿನಿಮಾ; ಕಾರಣ ಏನು?

ಹೀರೋಯಿನ್ ಹತ್ಯೆ ಮಾಡುವುದು ಅಥವಾ ಹೀರೋಯಿನ್ ಕಿಡ್ನಾಪ್ ಮಾಡೋದು ಭಾರತೀಯ ಸಿನಿಮಾಗಳಲ್ಲಿ ಈ ಮೊದಲಿನಿಂದಲೂ ಬಳಕೆ ಆಗುತ್ತಿರುವ ತಂತ್ರ. ‘ಕೆಜಿಎಫ್ 2’ ಸಿನಿಮಾದಲ್ಲಿ ಇದೇ ರೀತಿಯ ಕಥೆ ಇದೆ. ಈಗ ‘ಪುಷ್ಪ 2’ ಚಿತ್ರದಲ್ಲೂ ಇದೇ ತಂತ್ರ ಬಳಕೆ ಆಗಲಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ: ರಣಬೀರ್ ಮಾತ್ರ ಹಾಗೆ ಕರೆಯುತ್ತಾರೆ, ಅದು ನನಗೆ ಕೊಂಚವೂ ಇಷ್ಟವಿಲ್ಲ ಎಂದ ರಶ್ಮಿಕಾ ಮಂದಣ್ಣ

‘ಪುಷ್ಪ’ ತೆರೆಗೆ ಬಂದಿದ್ದು 2021ರ ಡಿಸೆಂಬರ್​ನಲ್ಲಿ. ಎರಡನೇ ಪಾರ್ಟ್ ​ಅನ್ನು 2022ರಲ್ಲಿ ತೆರೆಗೆ ತರಲು ಆಲೋಚನೆ ಮಾಡಲಾಗಿತ್ತು. ಆದರೆ, ಸ್ಕ್ರಿಪ್ಟ್​ನಲ್ಲಿ ನಿರ್ದೇಶಕ ಸುಕುಮಾರ್ ಅವರು ಕೆಲ ಬದಲಾವಣೆ ಮಾಡಿಕೊಂಡಿದ್ದಾರೆ. ಹೀಗಾಗಿ, ಚಿತ್ರದ ಕೆಲಸಗಳು ಆರಂಭಗೊಳ್ಳೋದು ವಿಳಂಬವಾಗಿದೆ. ಈ ಚಿತ್ರದ ಶೂಟಿಂಗ್ ಜುಲೈನಿಂದ ಆರಂಭಗೊಳ್ಳಲಿದೆ. ಈ ಕಾರಣಕ್ಕೆ 2023ರ ಬೇಸಿಗೆಗೆ ಈ ಚಿತ್ರ ತೆರೆಗೆ ಬರುವ ನಿರೀಕ್ಷೆ ಇದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.