ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರು ಮುಟ್ಟಿದ್ದೆಲ್ಲವೂ ಚಿನ್ನ ಆಗುತ್ತಿದೆ. ಎಷ್ಟೋ ಜನರ ಪಾಲಿಗೆ ಅವರು ಲಕ್ಕಿ ಹೀರೋಯಿನ್ ಆಗಿದ್ದಾರೆ. ಅವರು ನಟಿಸಿದ ಬಹುತೇಕ ಸಿನಿಮಾಗಳು ಸೂಪರ್ ಹಿಟ್ ಆಗಿವೆ. ಮುಂಬರುವ ಚಿತ್ರಗಳ ಬಗ್ಗೆಯೂ ಪಾಸಿಟಿವ್ ಮಾತುಗಳು ಕೇಳಿಬರುತ್ತಿವೆ. ಪ್ರಸ್ತುತ ಅವರು ಅನೇಕ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಆ ಪೈಕಿ ದಳಪತಿ ವಿಜಯ್ ಜೊತೆಗಿನ ‘ವಾರಿಸು’ ಸಿನಿಮಾ (Varisu) ಹೆಚ್ಚು ಕೌತುಕ ಮೂಡಿಸಿದೆ. ಸದ್ಯಕ್ಕೆ ಈ ಚಿತ್ರಕ್ಕಿನ್ನೂ ಶೂಟಿಂಗ್ ನಡೆಯುತ್ತಿದೆ. ಅಷ್ಟರಲ್ಲಾಗಲೇ ಬರೋಬ್ಬರಿ 120 ಕೋಟಿ ರೂಪಾಯಿ ಬಿಸ್ನೆಸ್ ಮಾಡಿದೆ ಎಂದು ಹೇಳಲಾಗುತ್ತಿದೆ. ಈ ಸುದ್ದಿ ಕೇಳಿ ರಶ್ಮಿಕಾ ಮಂದಣ್ಣ ಮತ್ತು ದಳಪತಿ ವಿಜಯ್ (Thalapathy Vijay) ಫ್ಯಾನ್ಸ್ ಹಿರಿಹಿರಿ ಹಿಗ್ಗುತ್ತಿದ್ದಾರೆ.
‘ವಾರಿಸು’ ಸಿನಿಮಾದ ವಿತರಣೆ ಹಕ್ಕುಗಳನ್ನು ಹೊರತುಪಡಿಸಿ ಒಟಿಟಿ, ಟಿವಿ ಹಾಗೂ ಆಡಿಯೋ ಹಕ್ಕುಗಳನ್ನು ಮಾರಾಟ ಮಾಡಲಾಗಿದೆ ಎಂಬ ಸುದ್ದಿ ಕೇಳಿಬಂದಿದೆ. ಅಮೇಜಾನ್ ಪ್ರೈಂ ವಿಡಿಯೋ ಸಂಸ್ಥೆಯು ಒಟಿಟಿ ಹಕ್ಕುಗಳನ್ನು ಬರೋಬ್ಬರಿ 60 ಕೋಟಿ ರೂಪಾಯಿ ನೀಡಿ ಕೊಂಡುಕೊಂಡಿದೆ. ಟಿವಿ ಪ್ರಸಾರ ಹಕ್ಕುಗಳನ್ನು ಸನ್ ನೆಟ್ವರ್ಕ್ ಸಂಸ್ಥೆಯು 50 ಕೋಟಿ ರೂಪಾಯಿ ನೀಡಿ ಪಡೆದುಕೊಂಡಿದೆ. ಆಡಿಯೋ ಹಕ್ಕುಗಳು 10 ಕೋಟಿ ರೂಪಾಯಿಗೆ ಮಾರಾಟ ಆಗಿದೆ ಎಂದು ವರದಿ ಆಗಿದೆ. ಈ ಬಗ್ಗೆ ಚಿತ್ರತಂಡದಿಂದ ಇನ್ನಷ್ಟೇ ಅಧಿಕೃತ ಮಾಹಿತಿ ಹೊರಬೀಳಬೇಕಿದೆ.
ದಳಪತಿ ವಿಜಯ್ ಜೊತೆ ನಟಿಸಬೇಕು ಎಂಬುದು ರಶ್ಮಿಕಾ ಮಂದಣ್ಣ ಅವರ ಆಸೆ ಆಗಿತ್ತು. ಅದು ‘ವಾರಿಸು’ ಚಿತ್ರದ ಮೂಲಕ ನೆರವೇರುತ್ತಿದೆ. ಅದ್ದೂರಿ ಬಜೆಟ್ನಲ್ಲಿ ಮೂಡಿಬರುತ್ತಿರುವ ಈ ಚಿತ್ರಕ್ಕೆ ಅಕ್ಟೋಬರ್ ತಿಂಗಳಲ್ಲಿ ಶೂಟಿಂಗ್ ಮುಗಿಯುವ ನಿರೀಕ್ಷೆ ಇದೆ. ಚಿತ್ರೀಕರಣ ಪೂರ್ಣಗೊಳ್ಳುವುದಕ್ಕೂ ಮೊದಲೇ ಈ ಪರಿ ಬಿಸ್ನೆಸ್ ಮಾಡುತ್ತಿರುವುದು ‘ವಾರಿಸು’ ಸಿನಿಮಾದ ಹೆಚ್ಚುಗಾರಿಕೆ.
ರಶ್ಮಿಕಾ ಮಂದಣ್ಣ ಅವರಿಗೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬೇಡಿಕೆ. ದಕ್ಷಿಣ ಭಾರತದಲ್ಲಿ ಅವರು ಸಿಕ್ಕಾಪಟ್ಟೆ ಜನಪ್ರಿಯತೆ ಪಡೆದುಕೊಂಡಿದ್ದಾರೆ. ಅವರು ನಟಿಸಿದ ‘ಸೀತಾ ರಾಮಂ’ ಸಿನಿಮಾ ಇತ್ತೀಚೆಗೆ ರಿಲೀಸ್ ಆಗಿ ಸೂಪರ್ ಹಿಟ್ ಆಯಿತು. ಚಿತ್ರಮಂದಿರದಲ್ಲಿ ಬಹುಕೋಟಿ ರೂಪಾಯಿ ಕಮಾಯಿ ಮಾಡಿದ ಬಳಿಕ ಒಟಿಟಿಯಲ್ಲೂ ‘ಸೀತಾ ರಾಮಂ’ ಚಿತ್ರ ಧೂಳೆಬ್ಬಿಸುತ್ತಿದೆ.
ಈ ಎಲ್ಲ ಕಾರಣಗಳಿಂದಾಗಿ ರಶ್ಮಿಕಾ ಲಕ್ಕಿ ಹೀರೋಯಿನ್ ಆಗಿದ್ದಾರೆ. ಬಾಲಿವುಡ್ನಲ್ಲಿ ಅವರು ಅಮಿತಾಭ್ ಬಚ್ಚನ್ ಜೊತೆ ನಟಿಸಿದ ‘ಗುಡ್ಬೈ’ ಸಿನಿಮಾ ಅಕ್ಟೋಬರ್ 7ರಂದು ರಿಲೀಸ್ ಆಗಲಿದೆ. ಸಿದ್ಧಾರ್ಥ್ ಮಲ್ಹೋತ್ರಾ ಜತೆ ಅವರು ‘ಮಿಷನ್ ಮಜ್ನು’ ಶೂಟಿಂಗ್ ಮುಗಿಸಿದ್ದಾರೆ. ರಣಬೀರ್ ಕಪೂರ್ ನಟನೆಯ ‘ಅನಿಮಲ್’ ಚಿತ್ರಕ್ಕೆ ರಶ್ಮಿಕಾ ನಾಯಕಿಯಾಗಿ ಆಯ್ಕೆ ಆಗಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 12:25 pm, Mon, 12 September 22