‘ಬೆಸ್ಟ್​ ಕನ್ನಡ ಡೈರೆಕ್ಟರ್​ ಅನ್ನೋದು ಬೇಡ’: ಹೊಸ ಸಲಹೆ ನೀಡಿದ ‘ಕಾಶ್ಮೀರ್​ ಫೈಲ್ಸ್​’ ನಿರ್ದೇಶಕ

Vivek Agnihotri | SIIMA Awards 2022: ವಿವೇಕ್​ ಅಗ್ನಿಹೋತ್ರಿ ಅವರ ಈ ಮಾತುಗಳಿಗೆ ನೆಟ್ಟಿಗರು ಸಹಮತ ಸೂಚಿಸಿದ್ದಾರೆ. ಸೋಶಿಯಲ್​ ಮೀಡಿಯಾದಲ್ಲಿ ಅವರು ಹಂಚಿಕೊಂಡ ವಿಡಿಯೋ ವೈರಲ್​ ಆಗಿದೆ.

‘ಬೆಸ್ಟ್​ ಕನ್ನಡ ಡೈರೆಕ್ಟರ್​ ಅನ್ನೋದು ಬೇಡ’: ಹೊಸ ಸಲಹೆ ನೀಡಿದ ‘ಕಾಶ್ಮೀರ್​ ಫೈಲ್ಸ್​’ ನಿರ್ದೇಶಕ
ವಿವೇಕ್ ಅಗ್ನಿಹೋತ್ರಿ
Follow us
TV9 Web
| Updated By: ಮದನ್​ ಕುಮಾರ್​

Updated on:Sep 12, 2022 | 9:31 AM

ಇತ್ತೀಚಿನ ವರ್ಷಗಳಲ್ಲಿ ಭಾರತೀಯ ಚಿತ್ರರಂಗದ ಸ್ವರೂಪ ಬದಲಾಗಿದೆ. ಹಿಂದಿ ಭಾಷೆಯ ಸಿನಿಮಾಗಳೇ ರಾರಾಜಿಸುತ್ತಿದ್ದ ಒಂದು ಕಾಲ ಇತ್ತು. ಆದರೆ ಈಗ ಎಲ್ಲ ಭಾಷೆಯ ಚಿತ್ರಗಳು ಕೂಡ ಸಖತ್​ ಸೌಂಡು ಮಾಡುತ್ತಿವೆ. ಬೇರೆ ಬೇರೆ ಭಾಷೆಯ ಚಿತ್ರರಂಗಗಳ ನಡುವೆ ಅಂತರವೇ ಉಳಿದುಕೊಂಡಿಲ್ಲ. ಪ್ಯಾನ್​ ಇಂಡಿಯಾ ಸಿನಿಮಾಗಳ ಸಂಖ್ಯೆ ಹೆಚ್ಚುತ್ತಿದೆ. ಹಾಗಾಗಿ ‘ದಿ ಕಾಶ್ಮೀರ್​ ಫೈಲ್ಸ್​’ ಚಿತ್ರದ ನಿರ್ದೇಶಕ ವಿವೇಕ್​ ಅಗ್ನಿಹೋತ್ರಿ (Vivek Agnihotri) ಅವರು ಒಂದು ಹೊಸ ಸಲಹೆ ನೀಡಿದ್ದಾರೆ. ಆಯಾ ಭಾಷೆಯ ನಿರ್ದೇಶಕ ಎಂದು ಯಾರನ್ನಾದರೂ ಗುರುತಿಸುವ ಬದಲು, ಭಾರತೀಯ ನಿರ್ದೇಶಕ ಅಂತ ಗುರುತಿಸಬೇಕು ಎಂದು ವಿವೇಕ್​ ಹೇಳಿದ್ದಾರೆ. ಬೆಂಗಳೂರಿನಲ್ಲಿ ನಡೆದ ‘ಸೈಮಾ’ ಪ್ರಶಸ್ತಿ (SIIMA Awards 2022) ಪ್ರದಾನ ಸಮಾರಂಭದಲ್ಲಿ ಭಾಗವಹಿಸಿದ ಬಳಿಕ ಅವರು ಈ ವಿಚಾರ ಹಂಚಿಕೊಂಡಿದ್ದಾರೆ.

2021ರಲ್ಲಿ ತೆರೆಕಂಡ ದಕ್ಷಿಣ ಭಾರತದ ಸಿನಿಮಾಗಳಿಗೆ, ತಂತ್ರಜ್ಞರಿಗೆ ಹಾಗೂ ಕಲಾವಿದರಿಗೆ ಪ್ರಶಸ್ತಿ ನೀಡಲಾಗಿದೆ. ‘ಅತ್ಯುತ್ತಮ ಹೊಸ ನಿರ್ದೇಶಕ’ ಪ್ರಶಸ್ತಿಯನ್ನು ‘ಬಡವ ರಾಸ್ಕಲ್​’ ಚಿತ್ರಕ್ಕಾಗಿ ಶಂಕರ್​ಗುರು ಪಡೆದುಕೊಂಡಿದ್ದಾರೆ. ವೇದಿಕೆ ಮೇಲೆ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದ್ದು ವಿವೇಕ್​ ಅಗ್ನಿಹೋತ್ರಿ. ಈ ವೇಳೆ ಅವರು ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ
Image
Ranveer Singh: ಸೈಮಾದಲ್ಲಿ ರಣವೀರ್​ ಸಿಂಗ್​ ಝಗಮಗ ಡ್ಯಾನ್ಸ್​; ಹೇಗಿತ್ತು ನೋಡಿ ಜೋಶ್​
Image
SIIMA Awards: ಸೈಮಾ ಸಂಭ್ರಮದಲ್ಲಿ ತಾರೆಯರ ಸಂಗಮ; ಅದ್ದೂರಿ ಸಮಾರಂಭದ ವಿಡಿಯೋ ನೋಡಿ..
Image
ಸೈಮಾ-2022 ಅವಾರ್ಡ್: ಪುನೀತ್​ ರಾಜ್​ಕುಮಾರ್​​ಗೆ ಅತ್ಯುತ್ತಮ ನಟ ಪ್ರಶಸ್ತಿ; ಪೂರ್ತಿ ವಿವರ ಇಲ್ಲಿದೆ

‘ಸೈಮಾ ಸಮಾರಂಭದಲ್ಲಿ ನಿರ್ದೇಶಕ ಶಂಕರ್​ ಗುರು ಅವರಿಗೆ ಈ ಪ್ರಶಸ್ತಿ ನೀಡಲು ಖುಷಿ ಎನಿಸಿತು. ಬೆಸ್ಟ್​ ಕನ್ನಡ ನಿರ್ದೇಶಕ ಎಂದು ಕರೆಯುವ ಬದಲು, ಕನ್ನಡದ ಬೆಸ್ಟ್​ ಭಾರತೀಯ ನಿರ್ದೇಶಕ ಎಂದು ಕರೆಯೋಣ. ಅದನ್ನೇ ನಾನು ನಂಬಿದ್ದೇನೆ’ ಎಂದು ವಿವೇಕ್​ ಅಗ್ನಿಹೋತ್ರಿ ಅವರು ಟ್ವೀಟ್​ ಮಾಡಿದ್ದಾರೆ. ಇದೇ ಮಾತನ್ನು ವೇದಿಕೆ ಮೇಲೆ ಅವರು ಹೇಳಿದ್ದು, ಅದರ ವಿಡಿಯೋವನ್ನು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ವೈರಲ್​ ಆಗಿದೆ. ವಿವೇಕ್​ ಅಗ್ನಿಹೋತ್ರಿ ಅವರ ಈ ಮಾತುಗಳಿಗೆ ನೆಟ್ಟಿಗರು ಸಹಮತ ಸೂಚಿಸಿದ್ದಾರೆ.

10ನೇ ವರ್ಷದ ಸೈಮಾ ಸಮಾರಂಭ ನಡೆದಿದೆ. ಈ ಬಾರಿ ಬೆಂಗಳೂರಿನಲ್ಲಿ ಈ ಕಾರ್ಯಕ್ರಮ ಜರುಗಿದ್ದು ವಿಶೇಷ. ಪುನೀತ್​ ರಾಜ್​ಕುಮಾರ್​ ಅವರಿಗೆ ವಿಶೇಷ ಗೌರವ ಸಲ್ಲಿಸಲಾಗಿದೆ. ದಕ್ಷಿಣ ಭಾರತದ ಭಾಷೆಗಳ ಸ್ಟಾರ್​ ಕಲಾವಿದರಾದ ಶಿವರಾಜ್​ಕುಮಾರ್​, ಯಶ್​, ಕಮಲ್​ ಹಾಸನ್​, ಅಲ್ಲು ಅರ್ಜುನ್​, ವಿಜಯ್​ ದೇವರಕೊಂಡ ಮುಂತಾದವರು ಇದರಲ್ಲಿ ಭಾಗಿ ಆಗಿದ್ದಾರೆ. ಬಾಲಿವುಡ್​ ನಟ ರಣವೀರ್​ ಸಿಂಗ್​, ನಿರ್ದೇಶಕ ವಿವೇಕ್​ ಅಗ್ನಿಹೋತ್ರಿ ಮುಂತಾದವರು ಆಗಮಿಸಿ ಕಾರ್ಯಕ್ರಮದ ಮೆರುಗು ಹೆಚ್ಚಿಸಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 9:31 am, Mon, 12 September 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ