AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾಫಿ ನಾಡು ಚಂದು ಇನ್​ಸ್ಟಾಗ್ರಾಮ್​ ಖಾತೆ ಮೇಲೆ ಹ್ಯಾಕರ್ಸ್​ ಕಣ್ಣು; ಆದ ಎಡವಟ್ಟು ಏನು?

Coffee Nadu Chandu: ಹ್ಯಾಕರ್​ಗಳಿಂದ ಅನೇಕರು ತೊಂದರೆ ಅನುಭವಿಸಿದ ಉದಾಹರಣೆ ಇದೆ. ಈಗ ಕಾಫಿ ನಾಡು ಚಂದು ಇನ್​ಸ್ಟಾಗ್ರಾಮ್​ ಖಾತೆ ಮೇಲೆ ಸೈಬರ್​ ಖದೀಮರ ಕಣ್ಣು ಬಿದ್ದಂತಿದೆ.

ಕಾಫಿ ನಾಡು ಚಂದು ಇನ್​ಸ್ಟಾಗ್ರಾಮ್​ ಖಾತೆ ಮೇಲೆ ಹ್ಯಾಕರ್ಸ್​ ಕಣ್ಣು; ಆದ ಎಡವಟ್ಟು ಏನು?
ಕಾಫಿ ನಾಡು ಚಂದು
TV9 Web
| Edited By: |

Updated on:Sep 12, 2022 | 7:35 AM

Share

ವೈರಲ್​ ರೀಲ್ಸ್​ ಮೂಲಕ ಕಾಫಿ ನಾಡು ಚಂದು (Coffee Nadu Chandu) ಫೇಮಸ್​ ಆಗಿದ್ದಾರೆ. ಸೋಶಿಯಲ್​ ಮೀಡಿಯಾದಲ್ಲಿ ಅವರನ್ನು ಲಕ್ಷಾಂತರ ಮಂದಿ ಫಾಲೋ ಮಾಡುತ್ತಾರೆ. ದಿನದಿಂದ ದಿನಕ್ಕೆ ಅವರ ಫಾಲೋವರ್ಸ್​ ಸಂಖ್ಯೆ ಹೆಚ್ಚುತ್ತಲೇ ಇದೆ. ಇನ್​ಸ್ಟಾಗ್ರಾಮ್​ನಲ್ಲಿ ಪ್ರಸ್ತುತ ಅವರು 4 ಲಕ್ಷ ಫಾಲೋವರ್ಸ್​ ಹೊಂದಿದ್ದಾರೆ. ಇಷ್ಟು ಜನರ ಅಭಿಮಾನವನ್ನು ಸಂಪಾದಿಸುವುದು ಸುಲಭವಲ್ಲ. ಆದರೆ ಈಗ ಅವರ ಅಕೌಂಟ್​ ಮೇಲೆ ಹ್ಯಾಕರ್​ಗಳ (Hacker) ಕಣ್ಣು ಬಿದ್ದಂತಿದೆ. ಅವರ ಇನ್​ಸ್ಟಾಗ್ರಾಮ್​ (Coffee Nadu Chandu Instagram) ಸ್ಟೋರಿಯಲ್ಲಿ ಕೆಲವು ಅಸಂಬದ್ಧ ಲಿಂಕ್​ಗಳನ್ನು ಹಂಚಿಕೊಳ್ಳಲಾಗಿದೆ. ಇದರಿಂದ ಕಾಫಿ ನಾಡು ಚಂದು ಇಮೇಜ್​ಗೆ ತೊಂದರೆ ಆಗಬಹುದು.

ಹೆಸರೇ ಸೂಚಿಸುತ್ತಿರುವಂತೆ ಕಾಫಿ ನಾಡು ಚಂದು ಅವರು ಚಿಕ್ಕಮಗಳೂರಿನವರು. ಪ್ರತಿ ದಿನ ಒಂದಿಲ್ಲೊಂದು ವಿಡಿಯೋ ಅಪ್​ಲೋಡ್​ ಮಾಡುವ ಮೂಲಕ ಅವರು ಜನರನ್ನು ರಂಜಿಸುತ್ತಾರೆ. ಎಲ್ಲರಿಗೂ ಅವರು ಬರ್ತ್​ಡೇ ವಿಶ್​ ಮಾಡುವ ಶೈಲಿ ಸಖತ್​ ಟ್ರೆಂಡ್​ ಆಗಿದೆ. ಆರಂಭದಲ್ಲಿ ಅವರನ್ನು ಕೆಲವೇ ಕೆಲವು ಜನರು ಮಾತ್ರ ಫಾಲೋ ಮಾಡುತ್ತಿದ್ದಾರೆ. ಆದರೆ ಈಗ ಬರೋಬ್ಬರಿ 4 ಲಕ್ಷ ಮಂದಿ ಫಾಲೋ ಮಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ಅವರ ಇನ್​ಸ್ಟಾಗ್ರಾಮ್​ ಖಾತೆಗೆ ಹ್ಯಾಕರ್​ಗಳು ಕೈ ಹಾಕಿದ್ದಾರೆ ಎಂಬ ಅನುಮಾನ ಮೂಡಿದೆ.

ಹಲವರಿಗೆ ಕಾಫಿ ನಾಡು ಚಂದು ಇನ್​ಸ್ಟಾಗ್ರಾಮ್​ ಖಾತೆ ಕಾಣಿಸಿಲ್ಲ. ಕೆಲವರಿಗೆ ಕಾಣಿಸಿದರೂ ಸ್ಟೋರಿಯಲ್ಲಿ ಪೋಸ್ಟ್​ ಆಗಿರುವ ಅಸಂಬದ್ಧ ಲಿಂಕ್​ಗಳನ್ನು ನೋಡಿ ಅಚ್ಚರಿ ಆಗಿದೆ. ಇದೆಲ್ಲ ಹ್ಯಾಕರ್​ಗಳ ಕೈವಾಡದಿಂದ ಆಗಿರುವ ಎಡವಟ್ಟು ಎನ್ನಲಾಗುತ್ತಿದೆ. ಈ ಬಗ್ಗೆ ಚಂದು ಇನ್ನಷ್ಟೇ ಪ್ರತಿಕ್ರಿಯೆ ನೀಡಬೇಕಿದೆ.

ಇದನ್ನೂ ಓದಿ
Image
‘ಬಿಗ್ ಬಾಸ್ ಕನ್ನಡ ಸೀಸನ್​ 9’ರ ಪ್ರೋಮೋ ರಿಲೀಸ್; ಅಲ್ಲಿಯೂ ಕಾಫಿ ನಾಡು ಚಂದು ಫ್ಯಾನ್ಸ್ ಹಾವಳಿ 
Image
Coffee Nadu Chandu: ರಾಜಕೀಯಕ್ಕೆ ಸೇರಿ ಅಂತ ಬಿಟ್ಟಿ ಸಲಹೆ ಕೊಟ್ಟವರಿಗೆ ಖಡಕ್​ ತಿರುಗೇಟು ನೀಡಿದ ಕಾಫಿ ನಾಡು ಚಂದು
Image
Coffee Nadu Chandu: ಕಾಫಿ ನಾಡು ಚಂದುಗೆ ಅನುಶ್ರೀ ಪ್ರೀತಿಯ ಗಿಫ್ಟ್​; ಶಿವಣ್ಣನ ಎದುರು ಎಮೋಷನಲ್​ ಆದ ರೀಲ್ಸ್​ ಹೀರೋ
Image
‘ಇಂಥ ಅಭಿಮಾನಿ ಪಡೆಯಲು ಪುಣ್ಯ ಮಾಡಿರಬೇಕು’: ಕಾಫಿ ನಾಡು ಚಂದು ಬಗ್ಗೆ ಶಿವಣ್ಣನ ಮಾತು

‘ನಾನು ಶಿವಣ್ಣ, ಪುನೀತಣ್ಣ ಅಭಿಮಾನಿ’ ಎಂದು ಹೇಳಿಕೊಂಡು ಎಲ್ಲರ ಗಮನ ಸೆಳೆದ ಕಾಫಿ ನಾಡು ಚಂದು ಕೆಲವೇ ದಿನಗಳ ಹಿಂದೆ ಜೀ ಕನ್ನಡ ವಾಹಿನಿಯ ‘ಡ್ಯಾನ್ಸ್​ ಕರ್ನಾಟಕ ಡ್ಯಾನ್ಸ್​’ ವೇದಿಕೆಗೆ ಬಂದಿದ್ದರು. ಅಲ್ಲಿ ಶಿವರಾಜ್​ಕುಮಾರ್​ ಅವರನ್ನು ಭೇಟಿ ಮಾಡಿ ಖುಷಿಪಟ್ಟಿದ್ದಾರೆ. ‘ಇಂಥ ಅಭಿಮಾನಿ ಪಡೆಯೋಕೆ ಪುಣ್ಯ ಮಾಡಿರಬೇಕು’ ಎಂದು ಶಿವಣ್ಣ ಹೇಳಿದ್ದು ಕೂಡ ವೈರಲ್​ ಆಗಿತ್ತು.

ಕಾಫಿ ನಾಡು ಚಂದು ಅವರ ಜನಪ್ರಿಯತೆ ಕಂಡು ನಿರೂಪಕಿ ಅನುಶ್ರೀ ಕೂಡ ಫಿದಾ ಆಗಿರುವುದು ನಿಜ. ಚಂದು ಸ್ಟೈಲ್​ನಲ್ಲೇ ಅವರು ರೀಲ್ಸ್​ ಮಾಡಿದ್ದರು. ಡಿಕೆಡಿ ಶೋ ವೇಳೆ ಭೇಟಿಯಾದ ಚಂದುಗೆ ಅವರು ದುಬಾರಿ ವಾಚ್​ ಗಿಫ್ಟ್​ ನೀಡಿದ್ದರು. ‘ಚೆನ್ನಾಗಿ ಹಾಡಿ. ಇನ್ನೂ ನಾಲ್ಕೈದು ಜನರಿಗೆ ನೀವು ಸಹಾಯ ಮಾಡಬೇಕು’ ಎಂದು ಅನುಶ್ರೀ ಕಿವಿಮಾತು ಹೇಳಿದ್ದರು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 7:35 am, Mon, 12 September 22

ಸೇತುವೆಯಿಂದ ಕೆಳಗೆ ಬಿದ್ದರೂ ಯುವಕನ ಜೀವ ಉಳಿಸಿತು ಲೈಟ್ ಕಂಬ!
ಸೇತುವೆಯಿಂದ ಕೆಳಗೆ ಬಿದ್ದರೂ ಯುವಕನ ಜೀವ ಉಳಿಸಿತು ಲೈಟ್ ಕಂಬ!
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ
ಇಂಗ್ಲೆಂಡ್ ತಂಡವನ್ನು ಬಹಿರಂಗವಾಗಿ ಅಣಕಿಸಿದ ರೋಹಿತ್ ಶರ್ಮಾ
ಇಂಗ್ಲೆಂಡ್ ತಂಡವನ್ನು ಬಹಿರಂಗವಾಗಿ ಅಣಕಿಸಿದ ರೋಹಿತ್ ಶರ್ಮಾ
ಜಾತಿ ರಾಕ್ಷಸರಿಗೆ ಶಿಕ್ಷೆ ಆಗಲೇಬೇಕು
ಜಾತಿ ರಾಕ್ಷಸರಿಗೆ ಶಿಕ್ಷೆ ಆಗಲೇಬೇಕು
ಡಿಕೆ ಶಿವಕುಮಾರ್ ಸಿಎಂ ಆಗ್ತಾರೆ: ದಿನಾಂಕವನ್ನೂ ಹೇಳಿದ ಖ್ಯಾತ ಜ್ಯೋತಿಷಿ!
ಡಿಕೆ ಶಿವಕುಮಾರ್ ಸಿಎಂ ಆಗ್ತಾರೆ: ದಿನಾಂಕವನ್ನೂ ಹೇಳಿದ ಖ್ಯಾತ ಜ್ಯೋತಿಷಿ!