AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Coffee Nadu Chandu: ಕಾಫಿ ನಾಡು ಚಂದುಗೆ ಅನುಶ್ರೀ ಪ್ರೀತಿಯ ಗಿಫ್ಟ್​; ಶಿವಣ್ಣನ ಎದುರು ಎಮೋಷನಲ್​ ಆದ ರೀಲ್ಸ್​ ಹೀರೋ

Coffee Nadu Chandu Video: ‘ಡಿಕೆಡಿ’ ವೇದಿಕೆಗೆ ಬಂದ ಕಾಫಿ ನಾಡು ಚಂದುಗೆ ಎಲ್ಲರೂ ಪ್ರೀತಿಯ ಸ್ವಾಗತ ಕೋರಿದ್ದಾರೆ. ಅವರ ಜೊತೆ ನಿರೂಪಕಿ ಅನುಶ್ರೀ ತುಂಬ ಆತ್ಮೀಯವಾಗಿ ನಡೆದುಕೊಂಡಿದ್ದಾರೆ.

Coffee Nadu Chandu: ಕಾಫಿ ನಾಡು ಚಂದುಗೆ ಅನುಶ್ರೀ ಪ್ರೀತಿಯ ಗಿಫ್ಟ್​; ಶಿವಣ್ಣನ ಎದುರು ಎಮೋಷನಲ್​ ಆದ ರೀಲ್ಸ್​ ಹೀರೋ
ಕಾಫಿ ನಾಡು ಚಂದು, ನಿರೂಪಕಿ ಅನುಶ್ರೀ
TV9 Web
| Edited By: |

Updated on:Aug 28, 2022 | 4:01 PM

Share

ತಮ್ಮದೇ ಶೈಲಿಯಲ್ಲಿ ರೀಲ್ಸ್​ ಮಾಡಿ ಫೇಮಸ್​ ಆದ ಕಾಫಿ ನಾಡು ಚಂದು (Coffee Nadu Chandu) ಈಗ ನಿರೂಪಕಿ ಅನುಶ್ರೀ ಅವರನ್ನು ಭೇಟಿ ಮಾಡಿದ್ದಾರೆ. ಜೀ ಕನ್ನಡದ ‘ಡ್ಯಾನ್ಸ್​ ಕರ್ನಾಟಕ ಡ್ಯಾನ್ಸ್​’ ಕಾರ್ಯಕ್ರಮಕ್ಕೆ ಚಂದು ಅತಿಥಿಯಾಗಿ ಬಂದಿದ್ದಾರೆ. ಈ ವೇಳೆ ಅವರನ್ನು ನಟ ಶಿವರಾಜ್​ಕುಮಾರ್​ (Shivarajkumar) ಭೇಟಿ ಮಾಡಿದ್ದಾರೆ. ಈ ಭೇಟಿಯಲ್ಲಿ ಚಂದುಗೆ ಅನುಶ್ರೀ (Anchor Anushree) ಕಡೆಯಿಂದ ವಿಶೇಷ ಗಿಫ್ಟ್​ ಸಿಕ್ಕಿದೆ. ನಿರೂಪಕಿಯಿಂದ ವಾಚ್​ ಪಡೆದಿರುವ ಚಂದು ಫುಲ್​ ಖುಷಿ ಆಗಿದ್ದಾರೆ. ಆ ವಿಡಿಯೋವನ್ನು ಅವರು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡು ಸಂಭ್ರಮಿಸಿದ್ದಾರೆ. ಚಂದುಗೆ ಎಲ್ಲ ಅಭಿಮಾನಿಗಳು ಅಭಿನಂದನೆ ತಿಳಿಸುತ್ತಿದ್ದಾರೆ. ‘ಡ್ಯಾನ್ಸ್​ ಕರ್ನಾಟಕ ಡ್ಯಾನ್ಸ್​’ ವೇದಿಕೆಯಲ್ಲಿ ಏನು ನಡೆಯಿತು ಎಂಬುದರ ಝಲಕ್​ ತೋರಿಸುವ ಪ್ರೋವೋವನ್ನು ಕೂಡ ಕಾಫಿ ನಾಡು ಚಂದು ಶೇರ್​ ಮಾಡಿಕೊಂಡಿದ್ದಾರೆ.

ಜೀ ಕನ್ನಡಕ್ಕೆ ಬಂದ ಕಾಫಿ ನಾಡು ಚಂದುಗೆ ಎಲ್ಲರೂ ಪ್ರೀತಿಯ ಸ್ವಾಗತ ಕೋರಿದ್ದಾರೆ. ಅವರ ಜೊತೆ ನಿರೂಪಕಿ ಅನುಶ್ರೀ ತುಂಬ ಆತ್ಮೀಯವಾಗಿ ನಡೆದುಕೊಂಡಿದ್ದಾರೆ. ಚಂದುಗೆ ಗಿಫ್ಟ್​ ನೀಡುವಾಗ, ‘ಚೆನ್ನಾಗಿ ಹಾಡಿ. ಇನ್ನೂ ನಾಲ್ಕೈದು ಜನರಿಗೆ ನೀವು ಸಹಾಯ ಮಾಡಬೇಕು’ ಎಂದು ಅನುಶ್ರೀ ಕಿವಿಮಾತು ಹೇಳಿದ್ದಾರೆ. ಇನ್ನು, ‘ಡ್ಯಾನ್ಸ್​ ಕರ್ನಾಟಕ ಡ್ಯಾನ್ಸ್​’ ವೇದಿಕೆಯಲ್ಲಿ ಚಂದು ಬಗ್ಗೆ ಅವರು ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ.

ಇದನ್ನೂ ಓದಿ
Image
Coffee Nadu Chandu: ಈಡೇರಿತು ಕಾಫಿ ನಾಡು ಚಂದು ಆಸೆ; ಶಿವಣ್ಣನ ಭೇಟಿ ಮಾಡಿದ ವೈರಲ್​ ಸ್ಟಾರ್​ಗೆ ಅನುಶ್ರೀ ಸಾಥ್​
Image
‘ಕಾಫಿ ನಾಡು ಚಂದು ಬಿಗ್ ಬಾಸ್‌ಗೆ ಹೋಗಬೇಕು’ ಅಭಿಯಾನ ಶುರು; ಸ್ವತಃ ಬೆಂಬಲ ನೀಡಿದ ವೈರಲ್ ಸಿಂಗರ್!
Image
Coffee Nadu Chandu: ‘ಅನುಶ್ರೀ ಅಕ್ಕ.. ಅನುಶ್ರೀ ಅಕ್ಕ’ ಅಂತ ವಿಶೇಷ ಬೇಡಿಕೆ ಇಟ್ಟ ಕಾಫಿ ನಾಡು ಚಂದು; ಇದನ್ನು ಶಿವಣ್ಣ ಈಡೇರಿಸ್ತಾರಾ?
Image
Coffee Nadu Chandu: ‘ಕಾಫಿ ನಾಡು ಚಂದು ಬಿಗ್​ ಬಾಸ್​ಗೆ ಬರಲಿ’: ಪರಮೇಶ್ವರ್​ ಗುಂಡ್ಕಲ್​ ಬಳಿ ಬೇಡಿಕೆ ಇಟ್ಟ ಫ್ಯಾನ್ಸ್​

‘ನಮ್ಮ ಡಿಕೆಡಿ ವೇದಿಕೆಗೆ ಕಾಫಿ ನಾಡು ಚಂದು ಯಾಕೆ ಬಂದಿದ್ದಾರೆ ಎಂಬುದು ಇಡೀ ಕರ್ನಾಟಕಕ್ಕೆ ಹೊತ್ತು. ಆ ರೀತಿಯಲ್ಲಿ ಅವರು ರಿಕ್ವೆಸ್ಟ್​ ಮಾಡಿದ್ದರು’ ಎಂದು ಅನುಶ್ರೀ ಹೇಳಿದ್ದಾರೆ. ಶಿವರಾಜ್​ಕುಮಾರ್ ಅವರನ್ನು ಭೇಟಿ ಆಗಬೇಕು ಎಂಬುದು ಚಂದು ಅವರ ಬಹುದಿನಗಳ ಕನಸಾಗಿತ್ತು. ಅದು ಈ ಶೋ ಮೂಲಕ ಈಡೇರಿದೆ. ಭಾನುವಾರ (ಆಗಸ್ಟ್​ 28) ಸಂಜೆ 7 ಗಂಟೆಗೆ ಈ ಶೋ ಪ್ರಸಾರ ಆಗಲಿದೆ.

ನೆಚ್ಚಿನ ಹೀರೋ ಶಿವಣ್ಣನನ್ನು​ ಭೇಟಿ ಮಾಡಬೇಕು ಎಂದು ಚಂದು ಅವರು ಎಲ್ಲಿಲ್ಲದ ಸರ್ಕಸ್​ ಮಾಡಿದ್ದರು. ಅನೇಕ ಮಕ್ಕಳಿಂದ ಆ ಬಗ್ಗೆ ಸಾಂಗ್​ ಮಾಡಿಸಿ ಪೋಸ್ಟ್​ ಮಾಡಿದ್ದರು. ಒಂದು ರೀಲ್ಸ್​ ಮೂಲಕ ನಿರೂಪಕಿ ಅನುಶ್ರೀ ಬಳಿಯೂ ರಿಕ್ವೆಸ್ಟ್​ ಮಾಡಿಕೊಂಡಿದ್ದರು. ಕಡೆಗೂ ಅವರ ಆಸೆ ಈಡೇರಿದೆ. ಶಿವಣ್ಣನ ಆಶೀರ್ವಾದ ಪಡೆದ ಚಂದುಗೆ ಸಖತ್​ ಖುಷಿ ಆಗಿದೆ. ಈ ವೇಳೆ ಅವರು ಎಮೋಷನಲ್​ ಆಗಿದ್ದಾರೆ. ‘ಇಂಥ ಅಭಿಯಾನಿಯನ್ನು ಪಡೆಯೋಕೆ ಬಹಳ ಪುಣ್ಯ ಮಾಡಿರಬೇಕು’ ಎಂದು ‘ಹ್ಯಾಟ್ರಿಕ್​ ಹೀರೋ’ ಹೇಳಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 4:01 pm, Sun, 28 August 22

ಮಸ್ಕತ್​​ನಲ್ಲಿ ಭಾರತೀಯರಿಂದ ಪ್ರಧಾನಿ ಮೋದಿಗೆ ಯಕ್ಷಗಾನ, ನೃತ್ಯದ ಸ್ವಾಗತ
ಮಸ್ಕತ್​​ನಲ್ಲಿ ಭಾರತೀಯರಿಂದ ಪ್ರಧಾನಿ ಮೋದಿಗೆ ಯಕ್ಷಗಾನ, ನೃತ್ಯದ ಸ್ವಾಗತ
3 ರಾಷ್ಟ್ರಗಳ ಪ್ರವಾಸದ ಕೊನೆಯ ಹಂತವಾಗಿ ಒಮನ್​ಗೆ ತೆರಳಿದ ಪ್ರಧಾನಿ ಮೋದಿ
3 ರಾಷ್ಟ್ರಗಳ ಪ್ರವಾಸದ ಕೊನೆಯ ಹಂತವಾಗಿ ಒಮನ್​ಗೆ ತೆರಳಿದ ಪ್ರಧಾನಿ ಮೋದಿ
ಮೈಲಾರಿಗೆ 14 ನ್ಯಾಯಾಂಗ ಬಂಧನ: ಜೈಲಿಗೆ ಹೋಗುವ ಮುನ್ನ ಸಿಂಗರ್ ಹೇಳಿದ್ದೇನು?
ಮೈಲಾರಿಗೆ 14 ನ್ಯಾಯಾಂಗ ಬಂಧನ: ಜೈಲಿಗೆ ಹೋಗುವ ಮುನ್ನ ಸಿಂಗರ್ ಹೇಳಿದ್ದೇನು?
ಬೆಂಗಳೂರಿನಲ್ಲಿ ಐಪಿಎಲ್ ಉದ್ಘಾಟನಾ ಪಂದ್ಯ ನಡೆಸಲು ಬಿಸಿಸಿಐ ಗ್ರೀನ್ ಸಿಗ್ನಲ್
ಬೆಂಗಳೂರಿನಲ್ಲಿ ಐಪಿಎಲ್ ಉದ್ಘಾಟನಾ ಪಂದ್ಯ ನಡೆಸಲು ಬಿಸಿಸಿಐ ಗ್ರೀನ್ ಸಿಗ್ನಲ್
ತನ್ನ ಪತ್ನಿ ಜತೆ ಸಹೋದರ ಲವ್ವಿಡವ್ವಿ: ತಮ್ಮನನ್ನು ಕೊಂದ ಅಣ್ಣ,
ತನ್ನ ಪತ್ನಿ ಜತೆ ಸಹೋದರ ಲವ್ವಿಡವ್ವಿ: ತಮ್ಮನನ್ನು ಕೊಂದ ಅಣ್ಣ,
ಯಾರು ಗೆಲ್ಲಬಹುದು, ಯಾರು ಚೆನ್ನಾಗಿ ಆಡ್ತಿದ್ದಾರೆ: ವಿನಯ್ ಹೇಳಿದ್ದೇನು?
ಯಾರು ಗೆಲ್ಲಬಹುದು, ಯಾರು ಚೆನ್ನಾಗಿ ಆಡ್ತಿದ್ದಾರೆ: ವಿನಯ್ ಹೇಳಿದ್ದೇನು?
ಸಚಿವ ನಿತಿನ್ ಗಡ್ಕರಿ ಕಿವಿಯಲ್ಲಿ ಟಿಎಂಸಿ ಸಂಸದ ಗುಟ್ಟಾಗಿ ಹೇಳಿದ್ದೇನು?
ಸಚಿವ ನಿತಿನ್ ಗಡ್ಕರಿ ಕಿವಿಯಲ್ಲಿ ಟಿಎಂಸಿ ಸಂಸದ ಗುಟ್ಟಾಗಿ ಹೇಳಿದ್ದೇನು?
ತಮ್ಮದೇ ಕಾರಿನಲ್ಲಿ ಮೋದಿಯನ್ನು ಬೀಳ್ಕೊಟ್ಟ ಇಥಿಯೋಪಿಯನ್ ಪ್ರಧಾನಿ
ತಮ್ಮದೇ ಕಾರಿನಲ್ಲಿ ಮೋದಿಯನ್ನು ಬೀಳ್ಕೊಟ್ಟ ಇಥಿಯೋಪಿಯನ್ ಪ್ರಧಾನಿ
ತನ್ನ ಪ್ರಾಣವನ್ನೂ ಲೆಕ್ಕಿಸದೆ ಸೈಕಲ್​ನಿಂದ ಬಿದ್ದ ತಮ್ಮನನ್ನು ಕಾಪಾಡಿದ ಅಣ್ಣ
ತನ್ನ ಪ್ರಾಣವನ್ನೂ ಲೆಕ್ಕಿಸದೆ ಸೈಕಲ್​ನಿಂದ ಬಿದ್ದ ತಮ್ಮನನ್ನು ಕಾಪಾಡಿದ ಅಣ್ಣ
ಚೈತ್ರಾಗೆ ಕೀ ಕೊಟ್ಟ ಗಿಲ್ಲಿ: ನಕ್ಕು ಸುಸ್ತಾದ ರಜತ್-ರಘು
ಚೈತ್ರಾಗೆ ಕೀ ಕೊಟ್ಟ ಗಿಲ್ಲಿ: ನಕ್ಕು ಸುಸ್ತಾದ ರಜತ್-ರಘು