ರಶ್ಮಿಕಾ ಮಂದಣ್ಣ ಪೂರ್ಣ ಹೆಸರೇನು ಗೊತ್ತಾ? ಈಗೀರೋದಲ್ಲ

ರಶ್ಮಿಕಾ ಮಂದಣ್ಣ ಅವರು ಇತ್ತೀಚೆಗೆ ತಮ್ಮ ಪೂರ್ಣ ಹೆಸರನ್ನು ಬಹಿರಂಗಪಡಿಸಿದ್ದಾರೆ. 'ಛಾವ' ಚಿತ್ರದ ಭರ್ಜರಿ ಯಶಸ್ಸಿನ ನಂತರ, ಅವರು ಹಲವಾರು ಹೊಸ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ, ಅವುಗಳಲ್ಲಿ 'ಸಿಖಂದರ್', 'ಕುಬೇರ', 'ದಿ ಗರ್ಲ್ಫ್ರೆಂಡ್' ಮೊದಲಾದವು ಸೇರಿವೆ. ಅವರ ಭವಿಷ್ಯದ ಯೋಜನೆಗಳು ಮತ್ತು ಯಶಸ್ಸಿನ ಬಗ್ಗೆ ಈ ಲೇಖನ ವಿವರಿಸುತ್ತದೆ.

ರಶ್ಮಿಕಾ ಮಂದಣ್ಣ ಪೂರ್ಣ ಹೆಸರೇನು ಗೊತ್ತಾ? ಈಗೀರೋದಲ್ಲ
ರಶ್ಮಿಕಾ
Edited By:

Updated on: Mar 03, 2025 | 7:46 AM

ರಶ್ಮಿಕಾ ಮಂದಣ್ಣ ಅವರ ಹೆಸರು ಎಲ್ಲ ಕಡೆಗಳಲ್ಲಿ ಚರ್ಚೆಯಲ್ಲಿ ಇದೆ. ಅವರ ಹೆಸರು ಹೇಳಿದರೆ ಸಣ್ಣವರಿಂದ ಹಿಡಿದು ವಯಸ್ಸಾದ ವ್ಯಕ್ತಿಗಳವರೆಗೆ ಎಲ್ಲರಿಗೂ ಗೊತ್ತಾಗಿ ಬಿಡುತ್ತದೆ. ಈಗ ರಶ್ಮಿಕಾ ಮಂದಣ್ಣ ಅವರು ‘ಛಾವ’ ಬಳಿಕ ದೊಡ್ಡ ಗೆಲುವು ಕಂಡಿದ್ದಾರೆ. ಈಗ ಅವರು ಸಂದರ್ಶನಗಳಲ್ಲಿ ಹಲವು ವಿಚಾರಗಳನ್ನು ಹೇಳಿಕೊಂಡಿದ್ದಾರೆ. ಇದರಲ್ಲಿ ರಶ್ಮಿಕಾ ಮಂದಣ್ಣ ಅವರು ತಮ್ಮ ಪೂರ್ಣ ಹೆಸರನ್ನು ರಿವೀಲ್ ಮಾಡಿದ್ದಾರೆ. ವಿಚಾರ ಅನೇಕರಿಗೆ ಗೊತ್ತಿಲ್ಲ.

‘ಛಾವ’ ಚಿತ್ರವು ವಿಶ್ವದಾದ್ಯಂತ ಯಶಸ್ಸು ಕಂಡು ಮುನ್ನುಗ್ಗುತ್ತಿದೆ. ಛತ್ರಪತಿ ಶಿವಾಜಿ ಅವರ ಮಗ ಛತ್ರಪತಿ ಸಾಂಭಾಜಿ ಮಹರಾಜ್ ಪಾತ್ರದಲ್ಲಿ ವಿಕ್ಕಿ ಕೌಶಲ್ ಕಾಣಿಸಿಕೊಂಡರೆ ಅವರ ಪತ್ನಿ ಯೇಸುಬಾಯಿ ಪಾತ್ರದಲ್ಲಿ ರಶ್ಮಿಕಾ ಕಾಣಿಸಿಕೊಂಡಿದ್ದಾರೆ. ರಶ್ಮಿಕಾ ಮಂದಣ್ಣ ಅವರು ಈ ಚಿತ್ರಕ್ಕಾಗಿ ಭರ್ಜರಿ ಪ್ರಚಾರ ಮಾಡಿದ್ದಾರೆ. ಕಾಲು ಪೆಟ್ಟು ಮಾಡಿಕೊಂಡರೂ ಅವರು ಪ್ರಚಾರ ಬಿಟ್ಟಿಲ್ಲ.

ಇದನ್ನೂ ಓದಿ
ರಶ್ಮಿಕಾ ಮಂದಣ್ಣ ಹಿಂಗೆಲ್ಲ ಮಾಡಿದರೂ ಕ್ಯೂಟ್ ಅಂತಾರೆ ಅಭಿಮಾನಿಗಳು
ಅಬ್ಬರಿಸುತ್ತ ಬಂದ ಸಿಕಂದರ್ ಟೀಸರ್; ಖುಷಿಯಾದ ಸಲ್ಮಾನ್ ಖಾನ್ ಫ್ಯಾನ್ಸ್
ಮುಂಜಾನೆ ನಾಲ್ಕು ಗಂಟೆಗೆ ರಶ್ಮಿಕಾ ತಿನ್ನೋ ಸ್ನ್ಯಾಕ್ಸ್ ಏನು? ಫೋಟೋ ವೈರಲ್
ರಶ್ಮಿಕಾ ಮಂದಣ್ಣಗೆ ಗುಲಾಬಿ ಹೂವು ನೀಡಿದ ಪ್ರೇಮಿ: ಆ ವ್ಯಕ್ತಿ ಮೇಲೆ ಅನುಮಾನ

ಈಗ ರಶ್ಮಿಕಾ ಮಂದಣ್ಣ ಅವರು ಒಂದು ವಿಚಾರವನ್ನು ಹೇಳಿದ್ದಾರೆ. ಅವರು ಈ ವಿಚಾರವನ್ನು ಎಲ್ಲ ಕಡೆಗಳಲ್ಲೂ ರಿವೀಲ್ ಮಾಡಿರಲಿಲ್ಲ. ಅದೇನೆಂದರೆ ಅವರ ಪೂರ್ಣ ಹೆಸರು. ಎಂ ರಶ್ಮಿಕಾ ಮಂದಣ್ಣ ಎಂದು. ಅಂದರೆ ಮುಂಡಚಾಡೀರ ರಶ್ಮಿಕಾ ಮಂದಣ್ಣ. ಸಂದರ್ಶನ ಒಂದರಲ್ಲಿ ರಶ್ಮಿಕಾ ಮಂದಣ್ಣ ಅವರು ಈ ವಿಚಾರದ ಬಗ್ಗೆ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ‘ನಾನು ಹೈದರಾಬಾದ್​ನವಳು’ ಎಂದ ರಶ್ಮಿಕಾ ಮಂದಣ್ಣಗೆ ಕರವೇ ನಾರಾಯಣ ಗೌಡ ಕ್ಲಾಸ್

ರಶ್ಮಿಕಾ ಮಂದಣ್ಣ ಅವರು ಕಳೆದ ವರ್ಷ ‘ಪುಷ್ಪ 2’ ಚಿತ್ರದ ಮೂಲಕ ಗೆದ್ದು ಬೀಗಿದರು. ಈ ವರ್ಷದ ಆರಂಭದಲ್ಲೇ ದೊಡ್ಡ ಗೆಲುವು ಕಂಡಿದ್ದಾರೆ. ‘ಛಾವ’ ಸಿನಿಮಾ ರಿಲೀಸ್ ಆಗಿ ಗೆಲುವು ಕಂಡಿದೆ. ಈ ಚಿತ್ರ 500+ ಕೋಟಿ ರೂಪಾಯಿ ಗಳಿಕೆ ಮಾಡಿದೆ. ಈ ವರ್ಷ ಅವರಿಗೆ ಮತ್ತೂ ಹಲವು ಗೆಲುವು ಸಿಗಲಿದೆ. ಅವರು ಸಲ್ಮಾನ್ ಖಾನ್ ಜೊತೆ ನಟಿಸಿರೋ ‘ಸಿಖಂದರ್’ ಸಿನಿಮಾ ಬಗ್ಗೆ ನಿರೀಕ್ಷೆ ಇದೆ. ಅದೇ ರೀತಿ ‘ಕುಬೇರ’ ಚಿತ್ರ ಕೂಡ ಗೆಲ್ಲುವ ನಿರೀಕ್ಷೆ ಇದೆ. ಇದು ತಮಿಳು ಸಿನಿಮಾ ಆಗಿದ್ದು, ಧನುಷ್ ಜೊತೆ ತೆರೆ ಹಂಚಿಕೊಂಡಿದ್ದಾರೆ. ‘ದಿ ಗರ್ಲ್​​ಫ್ರೆಂಡ್’ ಹಾಗೂ ‘ಥಮ’ ಚಿತ್ರಗಳ ಶೂಟಿಂಗ್ ಸಾಗುತ್ತಿದೆ. ಅವರು ಸದ್ಯಕ್ಕೆ ಕನ್ನಡ ಸಿನಿಮಾ ಮಾಡೋದು ಅನುಮಾನ ಎನ್ನಲಾಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.