ವಿಜಯ್ ದೇವಕರೊಂಡ ಅವರಲ್ಲಿ ತಮಗೆ ಇಷ್ಟವಾಗುವ ಯಾವುದೆಂದು ಹೇಳಿದ ರಶ್ಮಿಕಾ

ವಿಜಯ್ ಅವರು ರಶ್ಮಿಕಾ ಜೊತೆ ನಡೆದುಕೊಂಡ ರೀತಿಯ ಬಗ್ಗೆ ಟೀಕೆ ವ್ಯಕ್ತವಾಗಿತ್ತು. ಅದು ಎಷ್ಟರಮಟ್ಟಿಗೆ ಹೋಯಿತೆಂದರೆ, ಇಬ್ಬರೂ ನಟರು ಇನ್‌ಸ್ಟಾಗ್ರಾಮ್‌ನಲ್ಲಿ ಹೇಳಿಕೆಯೊಂದನ್ನು ಪ್ರಕಟಿಸಬೇಕಾಯಿತು. ಸೈಬರ್ ಪೊಲೀಸರಿಗೆ ದೂರು ಸಹ ದಾಖಲಾಯ್ತು. ಇದೆಲ್ಲದರ ಬಳಿಕ ಇದೀಗ ನಟಿ ರಮ್ಯಾ, ವಿಜಯ್ ದೇವರಕೊಂಡ ಬಗ್ಗೆ ಮಾತನಾಡಿದ್ದು, ಅವರಲ್ಲಿ ತಮಗೆ ಇಷ್ಟವಾಗುವ ವಿಷಯ ಯಾವುದೆಂದು ಹೇಳಿಕೊಂಡಿದ್ದಾರೆ.

ವಿಜಯ್ ದೇವಕರೊಂಡ ಅವರಲ್ಲಿ ತಮಗೆ ಇಷ್ಟವಾಗುವ ಯಾವುದೆಂದು ಹೇಳಿದ ರಶ್ಮಿಕಾ
Rashmika Vijay

Updated on: Nov 21, 2026 | 7:57 PM

ಮುಖ್ಯಾಂಶಗಳು

  • ಪತಿ ವಿಜಯ್ ಬಗ್ಗೆ ರಶ್ಮಿಕಾ ಮಾತು
  • ವಿಜಯ್ ಅವರ ಯಾವ ಗುಣ ಇಷ್ಟವೆಂದು ತಿಳಿಸಿದ ನಟಿ
  • ರಶ್ಮಿಕಾ ಮಂದಣ್ಣ ಹೇಳಿದ್ದೇನು?

ನಟಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಇತ್ತೀಚೆಗಷ್ಟೆ ‘ಕಾಫಿ ವಿತ್ ಕರಣ್’ ಶೋನಲ್ಲಿ ಭಾಗವಹಿಸಿದ್ದರು. ಅವರ ಎಪಿಸೋಡ್ ಬಳಿಕ ಸಾಕಷ್ಟು ಟ್ರೋಲಿಂಗ್ ಟೀಕೆ ವ್ಯಕ್ತವಾಗಿತ್ತು. ವಿಶೇಷವಾಗಿ ವಿಜಯ್ ಅವರು ರಶ್ಮಿಕಾ ಜೊತೆ ನಡೆದುಕೊಂಡ ರೀತಿಯ ಬಗ್ಗೆ ಟೀಕೆ ವ್ಯಕ್ತವಾಗಿತ್ತು. ಅದು ಎಷ್ಟರಮಟ್ಟಿಗೆ ಹೋಯಿತೆಂದರೆ, ಇಬ್ಬರೂ ನಟರು ಇನ್‌ಸ್ಟಾಗ್ರಾಮ್‌ನಲ್ಲಿ ಹೇಳಿಕೆಯೊಂದನ್ನು ಪ್ರಕಟಿಸಬೇಕಾಯಿತು. ಸೈಬರ್ ಪೊಲೀಸರಿಗೆ ದೂರು ಸಹ ದಾಖಲಾಯ್ತು. ಇದೆಲ್ಲದರ ಬಳಿಕ ಇದೀಗ ನಟಿ ರಮ್ಯಾ, ವಿಜಯ್ ದೇವರಕೊಂಡ ಬಗ್ಗೆ ಮಾತನಾಡಿದ್ದು, ಅವರಲ್ಲಿ ತಮಗೆ ಇಷ್ಟವಾಗುವ ವಿಷಯ ಯಾವುದೆಂದು ಹೇಳಿಕೊಂಡಿದ್ದಾರೆ.

ಯೂಟ್ಯೂಬ್ ಚಾನೆಲ್ ಒಂದಕ್ಕೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ರಶ್ಮಿಕಾಗೆ, ನಿಮಗೆ ಪತಿ, ವಿಜಯ್ ದೇವರಕೊಂಡ ಅವರಲ್ಲಿ ಹೆಚ್ಚು ಇಷ್ಟವಾಗುವ ವಿಷಯ ಯಾವುದೆಂದು ಕೇಳಿದ್ದಾರೆ. ಅದಕ್ಕೆ ರಶ್ಮಿಕಾ, ‘ಸಾಮಾನ್ಯವಾಗಿ ನನಗೆ ವಿಜಯ್ ಅವರಲ್ಲಿ ಇಷ್ಟವಾಗದ ಒಂದು ಗುಣ ಯಾವುದು ಎಂಬ ಪ್ರಶ್ನೆಗಳೇ ಎದುರಾಗುತ್ತವೆ. ಸಮಸ್ಯೆ ಏನೆಂದರೆ ಆ ವ್ಯಕ್ತಿಯಲ್ಲಿ ನನಗೆ ಇಷ್ಟವಾಗುವ ವಿಷಯಗಳು ತುಂಬಾ ಇವೆ. ಅದರಲ್ಲಿ ಒಂದು ವಿಷಯವೆಂದರೆ, ಆ ಆಳವಾದ ಪ್ರೀತಿ. ಅನೇಕ ಬಾರಿ ಅವರು ಅದನ್ನು ಹೇಳಬೇಕಾಗಿಲ್ಲ. ನನಗೇ ಅದು ಸ್ಪಷ್ಟವಾಗಿ ಕಾಣುತ್ತದೆ’ ಎಂದಿದ್ದಾರೆ.

Loading...

ಸಂಬಂಧದಲ್ಲಿ ಅತ್ಯಂತ ಮುಖ್ಯವಾದದ್ದು ಯಾವುದು ಎಂಬ ಪ್ರಶ್ನೆಗೆ, ಉತ್ತರಿಸುತ್ತಾ ‘ಒಂದು ಸಂಬಂಧವನ್ನು ರೂಪಿಸುವುದು ಪರಸ್ಪರ ಹೊಂದಾಣಿಕೆ, ನೀವು ಪರಸ್ಪರ ಎಷ್ಟು ಅರ್ಥಮಾಡಿಕೊಳ್ಳುತ್ತೀರಿ ಎಂಬುದು ಬಹಳ ಮುಖ್ಯ. ನೀವು ಒಂದೇ ಕನಸು, ಮನೆ ಮತ್ತು ಎಲ್ಲವನ್ನೂ ಹಂಚಿಕೊಳ್ಳುತ್ತೀರಿ. ನೀವು ಪರಸ್ಪರ ಅರ್ಥಮಾಡಿಕೊಳ್ಳಬೇಕು ಮದುವೆಯ ಸಮಯದ ವೇಳೆಗೆ ಅದು ಅರ್ಥವಾಗಿರುತ್ತದೆ ಮತ್ತು ಅದನ್ನು ಬಾಯಿಬಿಟ್ಟು ಹೇಳಬೇಕಾಗಿಲ್ಲ’ ಎಂದಿದ್ದಾರೆ.

ಇದನ್ನೂ ಓದಿ:ರೈತನ ಮೆಣಸಿನಕಾಯಿ ಹೊಲಕ್ಕೆ ರಚಿತಾ ರಾಮ್‌, ರಶ್ಮಿಕಾ ಮಂದಣ್ಣ ಕಣ್ಗಾವಲು

‘ಕಾಫಿ ವಿತ್ ಕರಣ್’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾಗ ತಾವು ಮದುವೆಯಾಗುವ ಬಗ್ಗೆ ಯೋಚಿಸುವುದಕ್ಕೂ ಮುನ್ನ ಒಂದು ವರ್ಷದ ಅವಧಿಯಲ್ಲಿ ರಶ್ಮಿಕಾ ತಮಗೆ 100 ಬಾರಿ ಪ್ರಪೋಸ್ ಮಾಡಿದ್ದರು ಎಂದು ವಿಜಯ್ ಹೇಳಿಕೊಂಡಿದ್ದರು. ತಾವು ಅವರಿಗೆ ನೀಡಿದ್ದ ಉಂಗುರವನ್ನೂ ತೋರಿಸಿ, ಮದುವೆಗೆ ಪೂರ್ವದ ಸಂಭ್ರಮದ ವೇಳೆಯಷ್ಟೇ ತಾವು ಮಂಡಿಯೂರಿ ಪ್ರಪೋಸ್ ಮಾಡಿದ್ದಾಗಿ ತಿಳಿಸಿದ್ದರು. ರಶ್ಮಿಕಾ ಧರಿಸಿದ್ದ ಮತ್ತೊಂದು ಉಂಗುರ ‘ತಮ್ಮ ಶೈಲಿಯದಲ್ಲದ’ ಕಾರಣ ಅದು ನಿಶ್ಚಿತಾರ್ಥದ ಉಂಗುರ ಎಂಬುದನ್ನು ಹಲವರು ನಂಬಿದ್ದರು; ಇದರಿಂದ ತಮಗೆ ಅವಮಾನವಾದಂತೆ ಅನಿಸಿತು ಎಂದು ಅವರು ಹೇಳಿದ್ದರು. ಅವರ ಈ ಹೇಳಿಕೆಗಳು ಸೋಶಿಯಲ್ ಮೀಡಿಯಾದಲ್ಲಿ ಟೀಕೆಗೆ ಗುರಿಯಾಗಿದ್ದವು.

ಇದೀಗ ನಟಿ ರಶ್ಮಿಕಾ ‘ಮೈಸಾ’ ಸಿನಿಮಾನಲ್ಲಿ ನಟನೆ ಮಾಡಿದ್ದಾರೆ. ಸಿನಿಮಾನಲ್ಲಿ ಅವರು ಭರ್ಜರಿ ಆಕ್ಷನ್ ದೃಶ್ಯಗಳಲ್ಲಿ ಸಹ ಕಾಣಿಸಿಕೊಂಡಿದ್ದಾರೆ. ಸಿನಿಮಾ ನವೆಂಬರ್ 27ಕ್ಕೆ ರಿಲೀಸ್ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Loading...
Unable to load recommendations.
Follow Us