
‘ನಾ ಡ್ರೈವರ, ನನ ಲವ್ವರ’ ಮಾಳು ನಿಪ್ಪಾಳ (Malu Nippala) ಹಾಡಿರುವ ಈ ಹಾಡು ಇತ್ತೀಚೆಗಿನ ಬಲು ಜನಪ್ರಿಯ ಕನ್ನಡ ಹಾಡುಗಳಲ್ಲಿ ಒಂದು. ಈ ಹಾಡೊಂದರ ಕಾರಣಕ್ಕೆ ಗಾಯಕ ಮಾಳು ನಿಪನಾಳಗೆ ಹಲವು ಅವಕಾಶಗಳು ಅರಸಿ ಬಂದವು. ಬಿಗ್ಬಾಸ್ ಶೋಗೂ ಸಹ ಬರುವಂತಾಯ್ತು. ಈ ಜವಾರಿ ಹಾಡು ಇಷ್ಟುದಿನ ಶ್ರಮಿಕರ, ಕಾಲೇಜು ಯುವಕ-ಯುವತಿಯರ ಬಾಯಲ್ಲಿ ನಲಿದಾಡುತ್ತಿತ್ತು, ಆದರೆ ಈಗ ‘ನಾ ಡ್ರೈವರ’ ಹಾಡಯ ಆರ್ಸಿಬಿ ಕ್ಯಾಂಪನ್ನೂ ಸಹ ತಲುಪಿದೆ.
ಹೌದು, ಇದೀಗ ಮಹಿಳಾ ಐಪಿಎಲ್ ಚಾಲ್ತಿಯಲ್ಲಿದ್ದು, ಆರ್ಸಿಬಿ ತಂಡ ಅದ್ಭುತ ಪ್ರದರ್ಶನ ತೋರಿ ಫೈನಲ್ ಪ್ರವೇಶಿಸಿದೆ. ಆರ್ಸಿಬಿ ತಂಡ ಮೊದಲಿನಿಂದಲೂ ಕ್ರಿಕೆಟ್ನ ಜೊತೆಗೆ ತನ್ನ ಸೋಷಿಯಲ್ ಮೀಡಿಯಾ ಕಂಟೆಂಟ್ ಗೇಮ್ನಲ್ಲೂ ಬಹಳ ಮುಂದಿದೆ. ಅದ್ಭುತ ಕಂಟೆಂಟ್ ಅನ್ನು ಅಭಿಮಾನಿಗಳಿಗೆ, ಜನರಿಗೆ ನೀಡುತ್ತಾ ಬಂದಿದೆ. ಆರ್ಸಿಬಿ ತಂಡದ ಭಾಗವೇ ಆಗಿರುವ ದಾನಿಷ್ ಸೇಠ್ ನಡೆಸಿಕೊಡುವ ಆರ್ಸಿಬಿ ಇನ್ಡೈಡರ್ ಶೋ ವಿಶ್ವಪ್ರಸಿದ್ಧ. ಇದೀಗ ಆರ್ಸಿಬಿ ಇನ್ಸೈಡರ್ನಲ್ಲಿ ಮಾಳುವಿನ ‘ನಾ ಡ್ರೈವರ’ ಹಾಡಿಗೆ ಆರ್ಸಿಬಿ ಆಟಗಾರ್ತಿ ಸಖತ್ ಸ್ಟೆಪ್ಪು ಹಾಕಿದ್ದಾರೆ.
ದಾನಿಷ್ ಸೇಠ್, ‘ಆರ್ಸಿಬಿ ಇನ್ಡೈಡರ್ ಶೋ’ಗಾಗಿ ಆರ್ಸಿಬಿಯ ಆಲ್ರೌಂಡ್ ಆಟಗಾರ್ತಿ, ಕನ್ನಡತಿಯೂ ಆಗಿರುವ ಶ್ರೆಯಾಂಕಾ ಪಾಟೀಲ್ ಅವರನ್ನು ಸಂದರ್ಶನ ಮಾಡಿದ್ದಾರೆ. ಶ್ರೆಯಾಂಕಾ ಅವರೊಟ್ಟಿಗೆ ಹಾಸ್ಯಮಯ ಸಂದರ್ಶನ ಮಾಡಿರುವ ದಾನಿಷ್, ಸಂದರ್ಶನದ ಕೊನೆಯಲ್ಲಿ ಇಬ್ಬರೂ ಕ್ರೀಡಾಂಗಣದಲ್ಲಿ ಪಿಚ್ ರೋಲ್ ಮಾಡುವ ವಾಹನದ ಮೇಲೆ ಕೂತು ‘ನಾ ಡ್ರೈವರ’ ಹಾಡಿಗೆ ಡ್ಯಾನ್ಸ್ ಮಾಡಿದ್ದಾರೆ.
ಇದನ್ನೂ ಓದಿ:ವೇದಿಕೆ ಏರಿದ ಮಾಳು ವಿರುದ್ಧ ಸೇಡು ತೀರಿಸಿಕೊಂಡ ಗಿಲ್ಲಿ ಫ್ಯಾನ್ಸ್; ಭಾರೀ ಮುಜುಗರ
ಇನ್ಸ್ಟಾಗ್ರಾಂನಲ್ಲಿ ಸಖತ್ ಸಕ್ರಿಯವಾಗಿರುವ, ಡ್ಯಾನ್ಸ್ ರೀಲ್ಸ್ಗಳನ್ನು ಮಾಡಿ ಅನುಭವ ಇರುವ ಶ್ರೆಯಾಂಕಾ ಪಾಟೀಲ್ ‘ನಾ ಡ್ರೈವರ’ ಹಾಡಿಗೆ ಸಖತ್ತಾಗಿ ಸ್ಟೆಪ್ಪುಗಳನ್ನು ಹಾಕಿದ್ದಾರೆ. ಮೂಲ ಹಾಡಿನಲ್ಲಿ ಮಾಳು ಮಾಡಿರುವ ಸ್ಟೆಪ್ಪುಗಳನ್ನು ಅನುಕರಣೆ ಸಹ ಮಾಡಿದ್ದಾರೆ. ಶ್ರೆಯಾಂಕಾ ಹಾಗೂ ದಾನಿಷ್ ಅವರ ಡ್ಯಾನ್ಸ್ ನೋಡಿ ಆರ್ಸಿಬಿ ಮಹಿಳಾ ತಂಡದ ನಾಯಕಿ ಸ್ಮೃತಿ ಮಂದಾನ ಆಶ್ಚರ್ಯ ಪಟ್ಟಿದ್ದಾರೆ.
Naa Driver haa Goes to international 🤙🔥#RCB pic.twitter.com/uI2mwKmB6x
— ರಾಜಾ ಹುಲಿ (@kkp_King007) January 29, 2026
ಶ್ರೆಯಾಂಕಾ ಮತ್ತು ದಾನಿಷ್ ಅವರುಗಳು ‘ನಾ ಡ್ರೈವರ’ ಹಾಡಿಗೆ ಹಾಕಿರುವ ಸ್ಟೆಪ್ಪುಗಳ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿವೆ. ಜವಾರಿ ಹಾಡಾದ ‘ನಾ ಡ್ರೈವರ’ ಆರ್ಸಿಬಿ ಮೂಲಕ ಅಂತರಾಷ್ಟ್ರೀಯ ಮಟ್ಟಕ್ಕೇರಿದೆ ಎಂದು ಕಮೆಂಟುಗಳನ್ನು ಹಾಕುತ್ತಿದ್ದಾರೆ ನೆಟ್ಟಿಗರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:01 pm, Fri, 30 January 26