ಭರ್ಜರಿ ಟಿಆರ್ಪಿ ಪಡೆದ ‘ಬಿಗ್ ಬಾಸ್ ಫಿನಾಲೆ’ ಎಪಿಸೋಡ್; ಕಲರ್ಸ್ ನಂಬರ್ 1
ಬಿಗ್ ಬಾಸ್ ಕನ್ನಡ ಸೀಸನ್ 12 ಫಿನಾಲೆ ಭರ್ಜರಿ 16.8 ಟಿವಿಆರ್ ಗಳಿಸಿ ಹೊಸ ದಾಖಲೆ ಬರೆದಿದೆ. ಈ ಅಭೂತಪೂರ್ವ ಯಶಸ್ಸಿನಿಂದ ಕಲರ್ಸ್ ಕನ್ನಡ ವಾಹಿನಿ ಜೀ ಕನ್ನಡವನ್ನು ಹಿಂದಿಕ್ಕಿ ನಂಬರ್ 1 ಸ್ಥಾನಕ್ಕೇರಿದೆ. ಫಿನಾಲೆಗೆ 'ಗಿಲ್ಲಿ ನಟ'ರ ಗೆಲುವು ಪ್ರಮುಖ ಆಕರ್ಷಣೆಯಾಗಿತ್ತು. 'ಲಕ್ಷ್ಮೀ ನಿವಾಸ' ಧಾರಾವಾಹಿ ಪ್ರಥಮ ಸ್ಥಾನದಲ್ಲಿದೆ.

‘ಬಿಗ್ ಬಾಸ್ ಕನ್ನಡ ಸೀಸನ್ 12’ರ (BBK 12) ಫಿನಾಲೆ ನಡೆದು ಕೆಲವು ದಿನಗಳು ಕಳೆದಿವೆ. ಆದರೆ, ಶೋನ ಬಗೆಗಿನ ಚರ್ಚೆಗಳು ಮಾತ್ರ ನಿಂತಿಲ್ಲ. ಈಗ ಬಿಗ್ ಬಾಸ್ ಫಿನಾಲೆಯ ಟಿಆರ್ಪಿ ಹೊರ ಬಿದ್ದಿದೆ. ಫಿನಾಲೆ ಎಪಿಸೋಡ್ಗೆ 16.8 ಟಿವಿಆರ್ ಸಿಕ್ಕಿದೆ. ವಾರಾಂತ್ಯಗಳಲ್ಲಿ ಬಿಗ್ ಬಾಸ್ ಎಪಿಸೋಡ್ಗೆ 10-12 ಟಿವಿಆರ್ ಸಿಗುತ್ತಿತ್ತು. ಆದರೆ, ಫಿನಾಲೆ ಎಪಿಸೋಡ್ ಮಾತ್ರ ಭರ್ಜರಿ ಟಿಆರ್ಪಿ ಪಡೆದುಕೊಂಡು ಗಮನ ಸೆಳೆದಿದೆ.
‘ಬಿಗ್ ಬಾಸ್ ಕನ್ನಡ ಸೀಸನ್ 12’ ಕಳೆದ ವರ್ಷ ಸೆಪ್ಟೆಂಬರ್ 28ರಂದು ಆರಂಭ ಆಯಿತು. ಜನವರಿ 18ರಂದು ಫಿನಾಲೆ ನಡೆದಿದೆ. ಈ ಎಪಿಸೋಡ್ನ ಜನರು ಹೆಚ್ಚಿನ ಸಂಖ್ಯೆಯಲ್ಲಿ ವೀಕ್ಷಣೆ ಮಾಡಿದ್ದಾರೆ. ಇದಕ್ಕೆ ಕಾರಣ ಗಿಲ್ಲಿ ನಟ ಎಂದರೂ ತಪ್ಪಾಗಲಾರದು. ಗಿಲ್ಲಿ ನಟ ಕಪ್ ಎತ್ತೋದನ್ನು ನೋಡಲು ಎಲ್ಲರೂ ಕಾದು ಕುಳಿತಿದ್ದರು. ಹೀಗಾಗಿ, ಒಳ್ಳೆಯ ಟಿಆರ್ಪಿ ಸಿಕ್ಕಿದೆ.
ಇನ್ನು, ಕಲರ್ಸ್ ಕನ್ನಡ ವಾಹಿನಿ ಜೀ ಕನ್ನಡ ವಾಹಿನಿಯನ್ನು ಹಿಂದಿಕ್ಕಿ ನಂಬರ್ 1 ಸ್ಥಾನ ಪಡೆದುಕೊಂಡಿದೆ. ಇದಕ್ಕೆ ಕಾರಣವೂ ಇದೆ. ಶನಿವಾರ (ಜನವರಿ 17) ಬಿಗ್ ಬಾಸ್ ಪ್ರೀ ಫಿನಾಲೆ ಹಾಗೂ ಭಾನುವಾರ ಫಿನಾಲೆಯನ್ನು ಜನರು ಸಾಕಷ್ಟು ಶ್ರದ್ಧೆಯಿಂದ ವೀಕ್ಷಿಸಿದ್ದಾರೆ. ಇದು ಸಹಕಾರಿ ಆಗಿದೆ.
ಇದನ್ನೂ ಓದಿ: ಕುಡಿದ ನಶೆಯಲ್ಲಿ ಗಿಲ್ಲಿ ಬಿಗ್ ಬಾಸ್ ಗೆಲ್ಲಲ್ಲ ಎಂದಿದ್ದೆ ಅಷ್ಟೇ; ಸ್ಪಷ್ಟನೆ ಕೊಟ್ಟ ಸತೀಶ್
ಧಾರಾವಾಹಿಗಳ ಟಿಆರ್ಪಿ ನೋಡೋದಾದರೆ, ‘ಲಕ್ಷ್ಮೀ ನಿವಾಸ’ ಧಾರಾವಾಹಿ ಮೊದಲ ಸ್ಥಾನದಲ್ಲಿ ಇದೆ. ‘ಕರ್ಣ’ ಧಾರಾವಾಹಿ ಎರಡನೇ ಸ್ಥಾನದಲ್ಲಿ ಇದೆ. ‘ಅಣ್ಣಯ್ಯ’ ಧಾರಾವಾಹಿಗೆ ಮೂರನೇ ಸ್ಥಾನ ಸಿಕ್ಕಿದೆ. ನಾಲ್ಕನೇ ಸ್ಥಾನದಲ್ಲಿ ‘ಅಮೃತಧಾರೆ’ ಧಾರಾವಾಹಿ ಇದೆ. ‘ನಂದ ಗೋಕುಲ’ ಧಾರಾವಾಹಿಗೆ ಐದನೇ ಸ್ಥಾನ ಸಿಕ್ಕಿದೆ. ಆರನೇ ಸ್ಥಾನದಲ್ಲಿ ‘ಮುದ್ದು ಸೊಸೆ’ ಧಾರಾವಾಹಿ, ಏಳನೇ ಸ್ಥಾನದಲ್ಲಿ ‘ಆದಿ ಲಕ್ಷ್ಮೀ ಪುರಾಣ’ ಧಾರಾವಾಹಿ ಇದೆ. 8ನೇ ಸ್ಥಾನದಲ್ಲಿ ‘ಭಾರ್ಗವಿ ಎಲ್ಎಲ್ಬಿ’ ಇದೆ ಎಂಬುದು ವಿಶೇಷ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




